- Home
- Entertainment
- TV Talk
- Amruthadhaare Serial: ಶಕುಂತಲಾ-ಜಯದೇವ್ ಅಂತ್ಯಕ್ಕೆ ಮುಹೂರ್ತ ಇಟ್ಟ ಭೂಮಿಕಾ! ಇನ್ಮುಂದಿದೆ ಮಾರಿಹಬ್ಬ!
Amruthadhaare Serial: ಶಕುಂತಲಾ-ಜಯದೇವ್ ಅಂತ್ಯಕ್ಕೆ ಮುಹೂರ್ತ ಇಟ್ಟ ಭೂಮಿಕಾ! ಇನ್ಮುಂದಿದೆ ಮಾರಿಹಬ್ಬ!
Amruthadhaare Kannada Serial Today Update: ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ, ಜಯದೇವ್ ಫೋನ್ ಮಾತುಕತೆಯ ಆಡಿಯೋವನ್ನು ಭೂಮಿ ತನ್ನ ಗಂಡನಿಗೆ ಕೇಳಿಸಿದ್ದಾಳೆ. ಇದರ ಪರಿಣಾಮ ಏನಾಗುವುದು?

ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Kannada Serial ) ತನ್ನ ಮಗುಗೆ, ತನಗೆ ಅಪಾಯ ಮಾಡೋಕೆ ಜಯದೇವ್, ಶಕುಂತಲಾ ರೆಡಿಯಾಗಿರೋದು ಭೂಮಿಗೆ ಗೊತ್ತಾಗಿದೆ. ಸೃಜನ್ ಸಹಾಯದಿಂದ ಅವಳು ಶಕುಂತಲಾ ಫೋನ್ ಟ್ರ್ಯಾಪ್ ಮಾಡಿದ್ದಳು. ಇದರ ಪರಿಣಾಮ ಅವರ ಮಾತುಕತೆ ಏನು ಅಂತ ಗೊತ್ತಾಗಿದೆ.
ಇನ್ನೊಂದು ಕಡೆ ಭೂಮಿ ಗೂಢಾಚಾರಿ ಕೆಲಸ ಮಾಡ್ತಿರೋದು ಭೂಮಿ, ಶಕುಂತಲಾಗೆ ಗೊತ್ತಾಗಿದೆ. ಇದಕ್ಕೆ ಅವರು ಏನು ಮಾಡ್ತಾರೆ ಎಂದು ಕಾದು ನೋಡಬೇಕಿದೆ. ಭೂಮಿ ಫೋನ್ ಟ್ರ್ಯಾಪ್ ಮಾಡಿರೋದು ಏನಾದರೂ ಶಕುಂತಲಾಗೆ ಗೊತ್ತಾಗಿದೆಯಾ ಎಂಬ ಅನುಮಾನ ಕೂಡ ಶುರುವಾಗಿದೆ.
ಶಕುಂತಲಾ ದುಷ್ಟೆ, ಅವಳು ಮೋಸಗಾತಿ ಅಂತ ಹೇಳಿದರೆ ಗೌತಮ್ ಮಾತ್ರ ನಂಬೋದಿಲ್ಲ. ಈ ಹಿಂದೆ ಅವಳ ಮೇಲೆ ಆರೋಪ ಮಾಡಿದ್ದಕ್ಕೆ ಭೂಮಿ ಬಳಿಯೇ ಅವನು ಕ್ಷಮೆ ಕೇಳಿಸಿದ್ದನು. ಈಗ ಅವನು ನಂಬಲು ತುಂಬ ಸಾಕ್ಷಿಗಳು ಬೇಕು. ಒಟ್ಟಿನಲ್ಲಿ ಭೂಮಿಗೆ ಇದು ಚಾಲೆಂಜಿಂಗ್ ಆಗಿದೆ.
ಈಗ ಜಯದೇವ್, ಶಕುಂತಲಾ ಮಾತನಾಡಿರೋ ಆಡಿಯೋವನ್ನು ಅವಳು ಗೌತಮ್‌ಗೆ ಕೇಳಿಸುತ್ತಾಳೆ. ಹೀಗಂತ ಪ್ರೋಮೋವೊಂದು ರಿಲೀಸ್ ಆಗಿದೆ. ಆದರೆ ನಿಜಕ್ಕೂ ಗೌತಮ್ ಆ ಆಡಿಯೋವನ್ನು ಕೇಳಿಸಿಕೊಳ್ತಾನಾ? ಆ ಆಡಿಯೋವನ್ನು ಶಕುಂತಲಾ ಬದಲಾಯಿಸ್ತಾಳಾ ಎಂದು ಕಾದು ನೋಡಬೇಕಿದೆ.
ಗೌತಮ್ ಮಗಳು ಬದುಕಿರೋದು ಕೂಡ ಶಕುಂತಲಾಗೆ ಗೊತ್ತಾಗಿದೆ. ಅನಾಥಾಶ್ರಮದಲ್ಲಿರೋ ಆ ಮಗುವನ್ನು ಮನೆಗೆ ಕರೆದುಕೊಂಡು ಬರಲು ಶಕುಂತಲಾ ಬಿಡ್ತಾಳಾ? ಇಲ್ಲವಾ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ಧಾರಾವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಕಾದಿವೆ.