- Home
- Entertainment
- Amruthadhaare ಭರ್ಜರಿ ಟ್ವಿಸ್ಟ್: ಗೌತಮ್ ಕೈಸೇರಿದ ಹೆಣ್ಣುಪಾಪು! ಶಕುಂತಲಾ ಫೋನ್ ಟ್ರ್ಯಾಪ್?
Amruthadhaare ಭರ್ಜರಿ ಟ್ವಿಸ್ಟ್: ಗೌತಮ್ ಕೈಸೇರಿದ ಹೆಣ್ಣುಪಾಪು! ಶಕುಂತಲಾ ಫೋನ್ ಟ್ರ್ಯಾಪ್?
ಅಮೃತಧಾರೆ ಸೀರಿಯಲ್ಗೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ. ಕಾಡಿನಲ್ಲಿ ಕಳೆದು ಹೋದ ಮಗು ಗೌತಮ್ ಕೈಸೇರಿದೆ. ಅದೇ ಇನ್ನೊಂದೆಡೆ ಶಕುಂತಲಾ ಫೋನ್ ಟ್ರ್ಯಾಪ್ ಮಾಡುವ ಪ್ಲ್ಯಾನ್ ನಡೀತಿದೆ.

ಬಚಾವಾದ ಭೂಮಿಕಾ
ಅಮೃತಧಾರೆಯಲ್ಲಿ ಇನ್ನೇನು ಭೂಮಿಕಾ ಮತ್ತು ಮಗು ಸತ್ತೇ ಹೋಗುತ್ತಾರಾ ಎನ್ನುವ ಆತಂಕದಲ್ಲಿದ್ದರು ವೀಕ್ಷಕರು. ಆದರೆ ಪಾರ್ಥನ ದೆಸೆಯಿಂದ ಈ ಇಬ್ಬರೂ ಬಚಾವ್ ಆಗಿದ್ದಾರೆ. ಇವರನ್ನು ಅಪಘಾತ ಮಾಡಿ ಕೊಲ್ಲಲು ಶಕುಂತಲಾ ರೌಡಿಗಳನ್ನು ಬಿಟ್ಟಿದ್ದಳು. ಆದರೆ ಅವರ ಕಾರನ್ನು ಪಾರ್ಥ ಚಾಲನೆ ಮಾಡ್ತಿರೋದು ತಿಳಿಯುತ್ತಿದ್ದಂತೆಯೇ, ಅಪಘಾತವನ್ನು ನಿಲ್ಲಿಸಿದ್ದಳು. ಭೂಮಿಕಾ ಮಗುವಿನ ಜೊತೆ ಬರುತ್ತಲೇ ಪಾರ್ಥ ಎಲ್ಲಿ ಎಂದು ಕೇಳುವ ರೀತಿಯಲ್ಲಿಯೇ ಭೂಮಿಕಾಗೆ ಇದು ಇವಳದ್ದೇ ಕುತಂತ್ರ ಎಂದು ತಿಳಿದುಹೋಯಿತು.
ಶಕುಂತಲಾಳ ಗ್ರಹಚಾರ ಬಿಡಿಸಲು ಯೋಚನೆ
ಹೇಗಾದರೂ ಮಾಡಿ ಶಕುಂತಲಾಳ ಗ್ರಹಚಾರ ಬಿಡಿಸಲು ಯೋಚನೆ ಮಾಡ್ತಿದ್ದಾಳೆ ಭೂಮಿಕಾ. ಆದರೆ ಅದು ಹೇಗೆ ಎನ್ನುವುದೇ ತಿಳಿಯುತ್ತಿಲ್ಲ. ಇದೀಗ ಭೂಮಿಕಾಗೆ ಸಾಥ್ ಕೊಟ್ಟಿದ್ದಾರೆ ಸೃಜನ್. ಭೂಮಿಕಾ ಅವನ ಬಳಿ ಎಲ್ಲಾ ವಿಷಯ ಹೇಳಿದ್ದಾಳೆ. ಇಬ್ಬರೂ ಸೇರಿ ಶಕುಂತಲಾ ಕುತಂತ್ರ ಬಯಲು ಮಾಡುವುದು ಹೇಗೆ ಎಂದುಪ್ಲ್ಯಾನ್ ಮಾಡುತ್ತಿದ್ದಾರೆ.
ಶಕುಂತಲಾಳ ಫೋನ್ ಟ್ರ್ಯಾಪ್ ಪ್ಲ್ಯಾನ್
ಆಗ ಸೃಜನ್ ಶಕುಂತಲಾಳ ಫೋನ್ ಟ್ರ್ಯಾಪ್ ಮಾಡುವ ಪ್ಲ್ಯಾನ್ ಮಾಡುತ್ತಾನೆ. ಆದರೆ ಇದು ಸರಿಯಲ್ಲ, ಇದು ಒಳ್ಳೆಯ ಮಾರ್ಗವಲ್ಲ. ಇಂಥ ಕೆಟ್ಟ ಯೋಚನೆ ಬೇಡ ಎನ್ನುತ್ತಾಳೆ ಭೂಮಿಕಾ. ಆದರೆ ಒಳ್ಳೆಯ ಕೆಲಸ ಮಾಡುವುದಿದ್ದರೆ, ಕೆಟ್ಟವರ ಬಣ್ಣ ಬಯಲು ಮಾಡುವುದಿದ್ದರೆ ಇಂಥ ಮಾರ್ಗ ಹಿಡಿಯಲೇಬೇಕು ಎನ್ನುವುದು ಸೃಜನ್ ಮಾತು. ಇದಕ್ಕೆ ಭೂಮಿಕಾ ಇನ್ನೂ ಅನುಮತಿ ಕೊಟ್ಟಿಲ್ಲ. ಆದರೆ ಅನುಮತಿ ಕೊಟ್ಟರೆ ಸೃಜನ್ ಏನು ಮಾಡುತ್ತಾನೆ, ಶಕುಂತಲಾ ಮಾತೆಲ್ಲಾ ಟ್ರ್ಯಾಪ್ ಆಗತ್ತಾ ಎನ್ನುವುದು ತಿಳಿಯುತ್ತದೆ. ಆದರೆ ಸ್ವಲ್ಪವೇ ಎಡವಟ್ಟಾದರೂ ಇಬ್ಬರಿಗೂ ಸಮಸ್ಯೆಯಂತೂ ಇದ್ದದ್ದೇ.
ಗೌತಮ್ ಕೈಸೇರಿದ ಮತ್ತೊಂದು ಮಗು
ಅದೇ ಇನ್ನೊಂದೆಡೆ, ಕಾಡಿನಲ್ಲಿ ಸಿಕ್ಕಿರೋ ಹೆಣ್ಣುಮಗು ಗೌತಮ್ ಕೈಸೇರಿದೆ. ಅನಾಥಾಶ್ರಮದಲ್ಲಿ ಇರುವ ಮಗುವನ್ನು ಗೌತಮ್ಗೆ ನೀಡಲಾಗಿದೆ. ಆದರೆ ಅದು ಆತನದ್ದೇ ಮಗು ಹೌದೋ ಅಲ್ಲವೋ ಎನ್ನುವ ಸಲುವಾಗಿ ಡಿಎನ್ಎ ಟೆಸ್ಟ್ಗೆ ವೈದ್ಯರನ್ನು ಕರೆಸಲಾಗಿದೆ. ಮಗು ಅವನದ್ದೇ ಆಗಿರಲಿ ಎಂದು ಸೀರಿಯಲ್ ಪ್ರೇಮಿಗಳು ಹಾರೈಸುತ್ತಿದ್ದಾರೆ.
ಸೀರಿಯಲ್ ರೋಚಕ ಹಂತ
ಈ ಮೂಲಕ ಸದ್ಯ ಸೀರಿಯಲ್ ರೋಚಕ ಹಂತ ತಲುಪಿದೆ. ಅಷ್ಟಕ್ಕೂ ಭಾಗ್ಯಮ್ಮನಿಂದ ಶಕುಂತಲಾ ವಿಷ್ಯ ಭೂಮಿಕಾಗೆ ತಿಳಿದಿದೆ. ಭಾಗ್ಯಮ್ಮ ಶಕುಂತಲಾ ವಿಷಯವನ್ನು ಚಿತ್ರ ಬಿಡಿಸುವ ಮೂಲಕ ತೋರಿಸಿದ್ದಾಳೆ. ಮಗುವಿಗೆ ಶಕುಂತಲಾ ತೊಂದರೆ ಮಾಡುತ್ತಿದ್ದಾಳೆ ಎನ್ನುವುದು ಭೂಮಿಕಾಗೆ ಈಗ ತಿಳಿದಿದೆ. ಭಾಗ್ಯಳಿಗೆ ವಿಷಯ ತಿಳಿಯುತ್ತಿದ್ದಂತೆಯೇ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯಕ್ಕೆ ಭೂಮಿಕಾ ತಡೆ ಒಡ್ಡಿದ್ದಳು. ಶಕುಂತಲಾ ಮಾತನ್ನು ಗೌತಮ್ ನಂಬಿಬಿಟ್ಟಿದ್ದ. ಆದರೆ ಅದನ್ನು ಭೂಮಿಕಾ ನಂಬದೇ ಭಾಗ್ಯಮ್ಮ ಪರವಾಗಿ ನಿಂತಿದ್ದಳು.
ಭಾಗ್ಯಮ್ಮನಿಂದ ಗುಟ್ಟು ರಟ್ಟು
ಕೊನೆಗೆ ಏನೋ ಎಡವಟ್ಟಾಗುತ್ತಿದೆ ಎಂದು ತಿಳಿಯುತ್ತಲೇ ಅವಳನ್ನು ತನ್ನ ತವರಿಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಚಿತ್ರಬಿಡಿಸುವ ಮೂಲಕ ಭಾಗ್ಯ ಶಕುಂತಲಾ ಗುಟ್ಟನ್ನು ರಟ್ಟು ಮಾಡಿದ್ದಾಳೆ. ಅದನ್ನು ಹೋಗಿ ಭೂಮಿಕಾ ಶಕುಂತಲಾಗೆ ಹೇಳಿದ್ದಾಳೆ. ಮೊದಲಿಗೆ ಇದನ್ನು ಶಕುಂತಲಾ ಒಪ್ಪದಿದ್ದರೂ ಕೊನೆಗೆ ಹೌದು ನಾನೇ ಎಲ್ಲಾ ಮಾಡ್ತಿರೋದು, ನಿನ್ನಿಂದ ಏನೂ ಮಾಡಲು ಆಗಲ್ಲ ಎಂದಿದ್ದಾಳೆ.
ಶಕುಂತಲಾ ಜೊತೆ ಚಾಲೆಂಜ್
ಈಗ ಅಸಲಿ ಆಟ ಶುರುವಾಯ್ತು, ನೋಡೋಣ ಎಂದು ಶಕುಂತಲಾಗೆ ಭೂಮಿಕಾ ಚಾಲೆಂಜ್ ಹಾಕಿದ್ದಾಳೆ. ಇಲ್ಲಿಯವರೆಗೆ ಅತ್ತೆಯ ಮೇಲೆ ಇದ್ದ ಸಂದೇಹವೆಲ್ಲವೂ ನಿಜವಾಗಿದೆ. ಇದರಿಂದ ಇದೀಗ ಸೀರಿಯಲ್ನಲ್ಲಿ ಮತ್ತಷ್ಟು ರೋಚಕ ಟ್ವಿಸ್ಟ್ ಸಿಗಲಿದೆ.