- Home
- Entertainment
- TV Talk
- Amruthadhaare Serial: ಜೈದೇವ್ ಹೆಣೆದಿರೋ ಬಲೆಗೆ ಸಿಕ್ಕಿಬೀಳ್ತಾಳಾ ಮಲ್ಲಿ? ಗೌತಮ್‌ಗೆ ಸಿಕ್ಕಿತು ಅಪಾಯದ ಸೂಚನೆ!
Amruthadhaare Serial: ಜೈದೇವ್ ಹೆಣೆದಿರೋ ಬಲೆಗೆ ಸಿಕ್ಕಿಬೀಳ್ತಾಳಾ ಮಲ್ಲಿ? ಗೌತಮ್‌ಗೆ ಸಿಕ್ಕಿತು ಅಪಾಯದ ಸೂಚನೆ!
ಆಸ್ತಿ ಮಾರಾಟ ಮಾಡಲು ಗೌತಮ್ ಮತ್ತು ಭೂಮಿಕಾ ಅವರ ಸಹಿ ಅಗತ್ಯವಿರುವುದರಿಂದ, ಜೈದೇವ್ ಅವರನ್ನು ಹುಡುಕಲು ರೌಡಿಗಳನ್ನು ಕಳುಹಿಸಿದ್ದಾನೆ. ಈ ವಿಷಯ ತಿಳಿದು ಮಲ್ಲಿ ಆಘಾತಕ್ಕೊಳಗಾಗಿದ್ದು, ಆನಂದ್ ಈ ಬಗ್ಗೆ ಗೌತಮ್‌ಗೆ ಎಚ್ಚರಿಕೆ ನೀಡಿದ್ದಾನೆ.

ಆಸ್ತಿ ಕೊಟ್ಟರೂ ನೆಮ್ಮದಿ ಇಲ್ಲ
ಇದ್ದಬಿದ್ದ ಆಸ್ತಿಯನ್ನೆಲ್ಲಾ ಬರೆದುಕೊಟ್ಟರೂ, ಜೈದೇವ್ ಮತ್ತು ಶಕುಂತಲಾಗೆ ನೆಮ್ಮದಿ ಇಲ್ಲ. ಅವರು ಅದನ್ನು ಮಾರಾಟ ಮಾಡಲು ಕಾನೂನಿನ ತೊಡಕು ಎದುರಾಗ್ತಿದೆ. ಇದೇ ಕಾರಣಕ್ಕೆ ಗೌತಮ್ ಮತ್ತು ಭೂಮಿಕಾ ಸಹಿ ಅವರಿಗೆ ಅಗತ್ಯವಿದೆ.
ರೌಡಿಗಳನ್ನು ಬಿಟ್ಟ ಜೈದೇವ್
ಈ ಕಾರಣದಿಂದಾಗಿ ಅವರನ್ನು ಹುಡುಕಲು ರೌಡಿಗಳನ್ನು ಬಿಟ್ಟಿದ್ದಾನೆ ಜೈದೇವ್. ಅಲ್ಲಿಯೇ ಎಲ್ಲಿಯೋ ವಾಸವಾಗಿರುವ ಬಗ್ಗೆ ತಿಳಿಯುತ್ತಲೇ ಅಲ್ಲಿ ಹುಡುಕಿಕೊಂಡು ಹೋಗಿದ್ದಾನೆ.
ಮಲ್ಲಿಗೆ ಶಾಕ್
ಮಲ್ಲಿ ಅತ್ತ ಬರುತ್ತಲೇ ಶಕುನಿ ಮಾಮಾ ಎಂದೇ ಫೇಮಸ್ ಆಗಿರೋ ಲಕ್ಷ್ಮೀಕಾಂತ, ಮಲ್ಲಿಗೆ ಎಚ್ಚರಿಸಲು ಓಡಿ ಬಂದರೂ, ಆತ ಬದಲಾಗಿರುವುದು ಮಲ್ಲಿಗೆ ಗೊತ್ತಿಲ್ಲವಲ್ಲ, ಆದ್ದರಿಂದ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾಳೆ. ಅತ್ತ ಜೈದೇವ್ ಮತ್ತು ಇತ್ತ ರೌಡಿಗಳು ತನ್ನನ್ನು ಹುಡುಕುತ್ತಾ ಇರುವುದು ಆಕೆಗೆ ತಿಳಿದು ಶಾಕ್ ಆಗಿದೆ.
ಆನಂದ್ ಎಚ್ಚರಿಕೆ
ಅದೇ ಇನ್ನೊಂದೆಡೆ, ಆನಂದ್ ಗೌತಮ್ ಮನೆಗೆ ಬಂದು ಜೈದೇವನ ಬಗ್ಗೆ ಎಚ್ಚರಿಸಿದ್ದಾನೆ. ಆತ ನಿನ್ನನ್ನು ಮತ್ತು ಅತ್ತಿಗೆಯನ್ನು ಹುಡುಕುತ್ತಿದ್ದಾನೆ ಎಂದಿದ್ದಾನೆ.
ಬದಲಾಗೋದು ನಂಬಲಾಗ್ತಿಲ್ಲ
ಇರೋ ಬರೋದನ್ನೆಲ್ಲಾ ಕೊಟ್ಟ ಮೇಲೆ ಮತ್ಯಾಕೆ ತನ್ನನ್ನು ಅವನು ಹುಡುಕಬೇಕು ಎನ್ನುವ ವಿಷ್ಯ ಗೌತಮ್‌ಗೆ ತಿಳಿಯಲಿಲ್ಲ. ಅದೇ ವೇಳೆ ಮಾಮಾ ಬದಲಾಗಿರುವುದೂ ಅವನಿಂದ ನಂಬಲು ಆಗ್ತಿಲ್ಲ.
ಅಪಾಯದ ಎಚ್ಚರಿಕೆ
ಒಟ್ಟಿನಲ್ಲಿ ಅಪಾಯ ಇರೋ ಬಗ್ಗೆ ತಿಳಿದಿದೆ. ಜೈದೇವನಿಂದ ಏನೂ ಮಾಡಲು ಆಗಲ್ಲ ಬಿಡು ಎನ್ನುತ್ತಲೇ ಎಚ್ಚರಿಕೆಯಿಂದ ಇದ್ದಾನೆ.
ಮುಂದೇನಾಗುತ್ತದೆ?
ಜೈದೇವನಿಗೆ ಇವರ ಇರುವಿಕೆ ತಿಳಿಯತ್ತಾ? ಮಲ್ಲಿ ಸಿಕ್ಕಿಹಾಕಿಕೊಳ್ತಾಳಾ ಎನ್ನುವುದು ಮುಂದಿರುವ ಪ್ರಶ್ನೆ.