- Home
- Entertainment
- TV Talk
- Bigg Boss: ಸೀರಿಯಲ್ ಕಲಾವಿದ್ರು ನಿಂಗೆ ಅದ್ರಲ್ಲೇ ಹೊಡೀತಾರೆ- ರಕ್ಷಿತಾಗೆ Ashwini Gowda ಆವಾಜ್; ಏನಿದು ಗಲಾಟೆ?
Bigg Boss: ಸೀರಿಯಲ್ ಕಲಾವಿದ್ರು ನಿಂಗೆ ಅದ್ರಲ್ಲೇ ಹೊಡೀತಾರೆ- ರಕ್ಷಿತಾಗೆ Ashwini Gowda ಆವಾಜ್; ಏನಿದು ಗಲಾಟೆ?
ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರ ಜಗಳಗಳು ನಿರಂತರ ಚರ್ಚೆಗೆ ಕಾರಣವಾಗಿವೆ. 'ಧಾರಾವಾಹಿ ಥರ ಮಾಡಬೇಡಿ' ಎಂಬ ರಕ್ಷಿತಾ ಶೆಟ್ಟಿ ಅವರ ಮಾತಿನಿಂದ ಕೆರಳಿದ ಅಶ್ವಿನಿ, ಕಲಾವಿದರ ಬಗ್ಗೆ ಮಾತನಾಡಿದರೆ 'ಅದರಿಂದ' ಹೊಡೆಯುತ್ತಾರೆ ಎಂದು ಬೆದರಿಕೆ ಹಾಕಿದ್ದು, ಇದು ಹೊಸ ವಿವಾದಕ್ಕೆ ಕಾರಣವಾಗಿದೆ.

ಬಿಗ್ಬಾಸ್ನಲ್ಲಿ ಬಿಸಿಬಿಸಿ ವಾತಾವರಣ
ಬಿಗ್ಬಾಸ್ನಲ್ಲಿ (Bigg Boss 12) ಅಶ್ವಿನಿ ಗೌಡ ಅವರ ಗಲಾಟೆ ಮೊದಲಿನಿಂದಲೂ ಭಾರಿ ಚರ್ಚೆಗೆ ಗ್ರಾಸವಾಗುತ್ತಲೇ ಬಂದಿದೆ. ಇದಾಗಲೇ ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿ ಅವರಿಗೆ ತೀರಾ ವೈಯಕ್ತಿಕ ಎನ್ನುವ ರೀತಿಯಲ್ಲಿ ಮಾತನಾಡಿದ್ದಕ್ಕೆ ಅವರ ಮೇಲೆ ಕೇಸ್ ಕೂಡ ಆಗಿದೆ.
ಅಶ್ವಿನಿ ಮೇಲೆ ಕೋಪ
ಬಿಗ್‌ಬಾಸ್ ಅಂದ ಮೇಲೆ ಅಶ್ವಿನಿ ಗೌಡ (Ashwini Gowda) ಅವರಂಥ ಸ್ಪರ್ಧಿಗಳು ಇದ್ದರೇನೇ ಟಿಆರ್ಪಿ ಹೆಚ್ಚು ಎನ್ನುವುದು ಬಿಗ್ಬಾಸ್ಗೂ ಗೊತ್ತಿದೆ. ಆದ ಕಾರಣ, ನೆಟ್ಟಿಗರು, ವೀಕ್ಷಕರು ಅವರನ್ನು ಹೊರಗೆ ಕಳುಹಿಸಿ ಎಂದು ಎಷ್ಟೇ ಗೋಗರೆದರೂ ಅದು ಸದ್ಯ ಸಾಧ್ಯವಿಲ್ಲ ಎನ್ನುವ ಮಾತೂ ಕೂಡ ಇದೆ. ಜಗಳವೇ ಇಲ್ಲ ಎಂದ ಮೇಲೆ ಬಿಗ್ಬಾಸ್ಗೆ ಎಲ್ಲಿಯ ಬೆಲೆ ಎನ್ನೋದು ಕೆಲವರು ಮಾತು.
ಅಶ್ವಿನಿ ಗೌಡ ಹಾಟ್ ಟಾಪಿಕ್
ಅದೇನೇ ಇದ್ದರೂ, ಅಶ್ವಿನಿ ಗೌಡ (Bigg Boss Ashwini Gowda) ಮತ್ತು ಜಾನ್ವಿ ಸದ್ಯ ಹಾಟ್ ಟಾಪಿಕ್ ಆಗಿರೋದು ಅವರ ಮಾತುಗಳು ಮತ್ತು ನಡವಳಿಕೆಯಿಂದ. ಇದಾಗಲೇ ರಕ್ಷಿತಾ ಶೆಟ್ಟಿ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ್ದ ಅಶ್ವಿನಿ ಅವರು ತಮ್ಮ ಮಾತಿನ ಮೇಲೆ ಸ್ವಲ್ಪ ನಿಯಂತ್ರಣ ಇಟ್ಟುಕೊಂಡಿದ್ದರೂ, ಹುಟ್ಟುಗುಣ ಹೋಗುವುದಿಲ್ಲವಲ್ಲ!
ಧಾರಾವಾಹಿ ಮಾಡ್ಬೇಡಿ
ಇದೀಗ ಜಗಳ ಆಡುವ ಸಂದರ್ಭದಲ್ಲಿ ರಕ್ಷಿತಾ ಶೆಟ್ಟಿ (Rakshitha Shetty) ಧಾರಾವಾಹಿ ಥರ ಮಾಡಬೇಡಿ ಎಂದು ಕೂಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಶ್ವಿನಿ ಗೌಡ, ನೀನು ಕಲಾವಿದರ ಬಗ್ಗೆ ಮಾತನಾಡಬೇಡ. ಕಲಾವಿದರ ಬಗ್ಗೆ ಏಕೆ ಮಾತನಾಡುತ್ತಿ? ಹಾಗೆ ಮಾತನಾಡಿದ್ರೆ ಅವ್ರು ನಿನಗೆ ಅದರಿಂದ ಹೊಡೆಯುತ್ತಾರೆ ಎಂದಿದ್ದಾರೆ.
ಮಾತಿನ ಮೇಲೆ ನಿಯಂತ್ರಣ
ಮಾತಿನ ಮೇಲೆ ಸ್ವಲ್ಪ ನಿಯಂತ್ರಣ ಇಟ್ಟುಕೊಂಡು ಯಾವುದರಿಂದ ಎಂದು ಹೇಳಲಿಲ್ಲ. ಆದರೆ ಅದರಿಂದ ಅದರಿಂದ ಎಂದು ಪದೇ ಪದೇ ಹೇಳಿದ್ದಾರೆ.
ನಾನು ಹಾಗೆಯೇ ಹೇಳೋದು
ಅದಕ್ಕೆ ರಕ್ಷಿತಾ ನೀವು ನನಗೆ ಹಾಗೆ ಹೇಳಿದ್ದಕ್ಕೆ, ನಾನು ನಿಮಗೆ ಹೀಗೆ ಹೇಳ್ತಿರೋದು. ನಾನು ಹಾಗೆಯೇ ಹೇಳ್ತೇನೆ. ನೀವ್ಯಾಕೆ ಪದೇ ಪದೇ ಕೆಟ್ಟದ್ದನ್ನು ಮಾತನಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಟಿಆರ್ಪಿ ಹೆಚ್ಚಳ
ಒಟ್ಟಿನಲ್ಲಿ ಅಶ್ವಿನಿ ಗೌಡ ಅವರ ಜಗಳದಿಂದ ಬಿಗ್ಬಾಸ್ನ ಟಿಆರ್ಪಿ ಹೆಚ್ಚುತ್ತಿದ್ದರೆ, ರಕ್ಷಿತಾ ಕನ್ನಡ, ಗಿಲ್ಲಿ ನಟನ ಕಾಮಿಡಿಯಿಂದಲೂ ಬಿಗ್‌ಬಾಸ್ ಸದ್ಯ ಉತ್ತಮ ವೀಕ್ಷಣೆಯನ್ನು ಕಾಣುತ್ತಿದೆ.
ಡಿಯರ್ಬ್ರೋ ಇನ್ಸ್ಟಾದಲ್ಲಿ ಈ ಗಲಾಟೆಯನ್ನು ಶೇರ್ ಮಾಡಲಾಗಿದೆ.