ರೋಚಕ ಘಟ್ಟದಲ್ಲಿಯೇ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಿಂದ ಹೊರ ಬಂದ ನಟಿ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಸುಬ್ಬು-ಶ್ರಾವಣಿ ಮದುವೆಯ ಸಂಭ್ರಮ ಮನೆಮಾಡಿದೆ. ಆದರೆ ಈ ಸಮಯದಲ್ಲಿಯೇ ಹಿರಿಯ ನಟಿಯೊಬ್ಬರು ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಶ್ರೀವಲ್ಲಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಸುಬ್ಬುವನ್ನು ಶ್ರಾವಣಿಗೆ ಒಪ್ಪಿಸಿದ್ದಾಳೆ.

ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್
ಜೀ ಕನ್ನಡ ವಾಹಿನಿಯ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ನಲ್ಲಿ ಎರಡನೇ ಬಾರಿ ಮದುವೆ ಸಂಭ್ರಮ ಮನೆಮಾಡಿದೆ. ಸಾವಿರಾರು ಅಡೆತಡೆಗಳ ನಡುವೆ ಶ್ರಾವಣಿ ಕೊರಳಿಗೆ ಸುಬ್ಬು ತಾಳಿ ಕಟ್ಟಿದ್ದಾನೆ. ಈ ಸಮಯದಲ್ಲಿಯೇ ಸೀರಿಯಲ್‌ನಿಂದ ಹಿರಿಯ ನಟಿಯೊಬ್ಬರು ಹೊರಗೆ ಬಂದಿದ್ದಾರೆ.
ವಂದನಾ ಪಾತ್ರ ಬದಲಾವಣೆ
ಸುರೇಂದ್ರನ ಪತ್ನಿ, ಪಿಂಕಿ ತಾಯಿ ವಂದನಾ ಪಾತ್ರದಲ್ಲಿ ಬದಲಾವಣೆಯಾಗಿದೆ. ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಹೊಸ ಕಲಾವಿದೆಯ ಆಗಮನವಾಗಿರೋದು ಖಚಿತವಾಗಿದೆ. ಈ ಹಿಂದೆ ಇಂದ್ರಮ್ಮ, ವರದಾ, ಧನಲಕ್ಷ್ಮೀ ಪಾತ್ರಗಳು ಬದಲಾಗಿದ್ದವು. ಶ್ರಾವಣಿ ತಾಯಿಯ ಪಾತ್ರ ತೆರೆ ಮೇಲೆ ಬರುವ ಮೊದಲೇ ಚೇಂಜ್ ಆಗಿತ್ತು. ಇದೀಗ ವಂದನಾ ಪಾತ್ರದ ಬದಲಾವಣೆಯಾಗಿದೆ.
ಪ್ರೀತಿಯನ್ನು ತ್ಯಾಗ ಮಾಡಿದ ಶ್ರೀವಲ್ಲಿ
ಸುಬ್ಬು ಎಂದಿಗೂ ನನ್ನವನೇ ಎಂದು ಹೇಳುತ್ತಿದ್ದ ಶ್ರೀವಲ್ಲಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿದ್ದಾಳೆ. ವಿಜಯಾಂಬಿಕೆ ಚೇಲಾಗಳ ಬಂಧನದಲ್ಲಿದ್ದ ಗೆಳೆಯ ಸುಬ್ಬನನ್ನು ಕಾಪಾಡಿ ಮದುವೆ ಮಂಟಪಕ್ಕೆ ಶ್ರೀವಲ್ಲಿ ಕಳುಹಿಸಿದ್ದಾಳೆ. ಇಲ್ಲಿಗೆ ಧಾರಾವಾಹಿಯ ಮತ್ತೊಂದು ನೆಗೆಟಿವ್ ಪಾತ್ರ ಬದಲಾಗಿದೆ.
ಇದನ್ನೂ ಓದಿ: ನೀಚರಿಗೆ ಶಿವು ತಂಗಿ ರಾಣಿಯ ಮಾಸ್ಟರ್ ಸ್ಟ್ರೋಕ್: ಇದು ಅತ್ತಿಗೆ ಪಾರು ಹೇಳಿ ಕೊಟ್ಟ ಪಾಠ
ಸೀರಿಯಲ್ ಮುಗಿಯುತ್ತಾ?
ಶ್ರಾವಣಿ-ಸುಬ್ರಹ್ಮಣ್ಯ ಸೀರಿಯಲ್‌ನಲ್ಲಿ ನಾಯಕ-ನಾಯಕಿಯ ಮದುವೆಯಾಗುತ್ತಿದ್ದಂತೆ ಧಾರಾವಾಹಿ ಮುಗಿಯುತ್ತಾ ಎಂಬ ಪ್ರಶ್ನೆಗಳು ಮುನ್ನಲೆಗೆ ಬಂದಿವೆ. ಆದರೆ ಶ್ರಾವಣಿ ತಾಯಿ ನಂದಿನಿ ಮುನ್ನಲೆಗೆ ಬರಬೇಕಿದೆ. ವಿಜಯಾಂಬಿಕಾ ಮತ್ತು ಆತನ ಮಗ ಮದನ್ ಮುಖವಾಡ ಕಳಚಬೇಕಿದೆ. ಹಾಗಾಗಿ ಸೀರಿಯಲ್ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆಗಳಿವೆ.
ಇದನ್ನೂ ಓದಿ: ತಲೆ ಮೇಲೆ ಕೈ ಹೊತ್ತು ಮಲಗಿದ ಬಿಗ್‌ಬಾಸ್ ಸ್ಪರ್ಧಿ; ಏನಮ್ಮಾ ನಿನ್ನ ಚಿಂತೆ ಎಂದ ಫ್ಯಾನ್ಸ್!
ಬದಲಾದ ಸಮಯ
ಈ ಹಿಂದೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದ್ದ ಶ್ರಾವಣಿ ಸುಬ್ರಹ್ಮಣ್ಯ ಪ್ರತಿದಿನ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. 9 ಗಂಟೆಗೆ ಶ್ರೀ ರಾಘವೇಂದ್ರ ಮಹಾತ್ಮೆ ಪ್ರಸಾರವಾಗುತ್ತಿದೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ಕಳೆದ ವಾರವಷ್ಟೇ ಮುಕ್ತಾಯಗೊಂಡಿತ್ತು.
ಇದನ್ನೂ ಓದಿ: ತನ್ನ ಐಷಾರಾಮಿ ಬಂಗಲೆ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ತಾನ್ಯಾ ಮಿತ್ತಲ್ ಹೇಳಿದ್ದೆಲ್ಲಾ ಬರಿ ಓಳು! ಸತ್ಯಾಂಶ ಬಯಲು