- Home
- Entertainment
- TV Talk
- ಶ್ರಾವಣಿ ಸುಬ್ರಹ್ಮಣ್ಯ…. ಕೊನೆಗೂ ಒಂದಾಗಿಯೇ ಬಿಟ್ಟವು ಜೋಡಿ ಜೀವಗಳು… ಇಲ್ಲಿಗೆ ಮುಕ್ತಾಯವಾಗುತ್ತಾ ಕತೆ?
ಶ್ರಾವಣಿ ಸುಬ್ರಹ್ಮಣ್ಯ…. ಕೊನೆಗೂ ಒಂದಾಗಿಯೇ ಬಿಟ್ಟವು ಜೋಡಿ ಜೀವಗಳು… ಇಲ್ಲಿಗೆ ಮುಕ್ತಾಯವಾಗುತ್ತಾ ಕತೆ?
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಅಂತೂ ಇಂತೂ ಶ್ರಾವಣಿ ಮತ್ತು ಸುಬ್ರಹ್ಮಣ್ಯರ ವಿವಾಹ ಮನೆಮಂದೆ ಮುಂದೆ ಸುಸೂತ್ರವಾಗಿ ನಡೆದಿದೆ. ಹಾಗಿದ್ರೆ ಸೀರಿಯಲ್ ಇಲ್ಲಿಗೆ ಮುಕ್ತಾಯವಾಗುತ್ತಾ?

ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಧಾರಾವಾಹಿಯಲ್ಲಿ ಇದೀಗ ಕೊನೆಗೆ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಶ್ರಾವಣಿ ಮತ್ತು ಸುಬ್ರಹ್ಮಣ್ಯ ತಮ್ಮ ಕುಟುಂಬದ ಸಮ್ಮುಖದಲ್ಲಿ ಹಸೆಮನೆ ಏರಿದ್ದಾರೆ. ಸುಬ್ಬು ಶ್ರಾವಣಿಗೆ ತಾಳಿ ಕೂಡ ಕಟ್ಟಿಯಾಗಿದೆ.
ಹೌದು, ಜೀ ಕನ್ನಡ ವಾಹಿನಿಯ (Zee Kannada Channel) ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಭಾರಿ ಟ್ವಿಸ್ಟ್ ಸಿಕ್ಕಿದೆ. ಶ್ರಾವಣಿ ಮತ್ತು ಸುಬ್ರಹ್ಮಣ್ಯ ಮದುವೆ ಆಗಿಯೇ ಇಲ್ಲ ಅನ್ನೋದು ಗೊತ್ತಾದ ಮೇಲೆ ಶ್ರಾವಣಿಗಾಗಿ ಬೇರೆ ಹುಡುಗನನ್ನು ಹುಡುಕಲು ತಯಾರಿ ನಡೆಸಿದ್ದರು ಶ್ರಾವಣಿ ತಂದೆ.
ಕೊನೆಗೆ ಸುಬ್ಬುಗೂ ತನಗೂ ಶ್ರಾವಣಿ ಮೇಲೆ ಲವ್ ಆಗಿದೆ ಅನ್ನೋದು ಗೊತ್ತಾಗುತ್ತೆ, ಶ್ರಾವಣಿ ಮನೆಯವರು ಸಹ ಸುಬ್ಬುನೇ ಶ್ರಾವಣಿಗೆ ಸರಿಯಾದ ಜೋಡಿ ಎನ್ನುತ್ತಾ, ಇಬ್ಬರನ್ನು ಜೊತೆ ಸೇರಿಸಲು ಎಲ್ಲಾ ತಯಾರಿ ನಡೆಸುತ್ತಾರೆ. ಆದರೆ ಈ ಮದುವೆಗೆ ಶ್ರೀವಲ್ಲಿ ಅಡ್ಡಿಯಾಗುತ್ತಾಳೆ ಎನ್ನುವ ಆತಂಕ ಇತ್ತು, ಆದರೆ ಇದೀಗ ಆ ಆತಂಕವೂ ದೂರವಾಗಿದೆ.
ಇನ್ನೇನು ಎಲ್ಲಾ ತಯಾರಿ ನಡೆದು ಶ್ರಾವಣಿ ಸುಬ್ರಹ್ಮಣ್ಯ ಹಸೆಮಣೆ ಏರಬೇಕು ಎನ್ನುವಷ್ಟರಲ್ಲಿ, ಸುಬ್ಬು ಕಾಣೆಯಾಗಿರುತ್ತಾನೆ. ವಿಜಯಾಂಬಿಕಾ ಸುಬ್ಬುನನ್ನು ಕಿಡ್ನಾಪ್ ಮಾಡಿಸಿರುತ್ತಾಳೆ. ಆದರೆ ಶ್ರೀವಲ್ಲಿ ಅಲ್ಲಿಂದ ಆತನನ್ನು ಬಿಡಿಸಿ, ಮದುವೆಗೆ ಶುಭಾಶಯಗಳನ್ನು ನೀಡುತ್ತಾಳೆ. ರೌಡಿಗಳನ್ನು ಸದೆ ಬಡಿದು ಸುಬ್ಬು ಕೊನೆಗೂ ಮಂಟಪಕ್ಕೆ ಬಂತು, ಪ್ರೀತಿಸಿದ ಹುಡುಗಿಯ ಕುತ್ತಿಗೆ ಸಂಭ್ರಮದಿಂದ ತಾಳಿ ಕಟ್ಟುತ್ತಾನೆ.
ಸಮಸ್ಯೆಗಳೆಲ್ಲಾ ಮುಗಿದು, ಸುಬ್ಬು ಮತ್ತು ಶ್ರಾವಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮನೆಯವರೆಲ್ಲಾ ಸಂತೋಷದಿಂದ ಈ ಜೋಡಿಯನ್ನು ಹರಸಿದ್ದಾರೆ. ಹಾಗಾದ್ರೆ ಇಲ್ಲಿಗೆ ಮುಗಿಯುತ್ತಾ ಈ ಸೀರಿಯಲ್ ಅಂತ ಅಂದುಕೊಂಡರೆ ಖಂಡಿತಾ ಇಲ್ಲ. ಧಾರಾವಾಹಿಯಲ್ಲಿ ಕಥೆ ಇನ್ನೂ ಬಾಕಿ ಇದೆ.
ಮನೆಯವರೆಲ್ಲರ ಒಪ್ಪಿಗೆ ಪಡೆದು ಮದುವೆಯಾದ ಬಳಿಕ ಈ ಜೋಡಿ ಖಂಡಿತವಾಗಿಯೂ ಹಲವು ಸಮಸ್ಯೆಗಳನ್ನು ಎದುರಿಸಲೇಬೇಕಾಗಿ ಬರುತ್ತೆ. ಒಂದೆಡೆ ವಿಜಯಾಂಬಿಕಾ ಮತ್ತು ಮದನ್ ತೊಂದರೆ ಕೋಡೋದಕ್ಕೆ ರೆಡಿಯಾಗಿದ್ರೆ, ಮತ್ತೊಂದು ಕಡೆ ಶ್ರೀವಲ್ಲಿ. ಎಲ್ಲವನ್ನೂ ಮೀರಿ ಇನ್ನು ಮುಂದೆ ಶ್ರಾವಣಿ ಮತ್ತು ಸುಬ್ಬು ಏನು ಮಾಡ್ತಾರೆ ಅನ್ನೋದು ಮುಂದಿನ ಕಥೆ. ಇದರ ಜೊತೆಗೆ ಶ್ರಾವಣಿಯ ತಾಯಿಯ ಭೇಟಿಯ ಕತೆಯೂ ಬಾಕಿ ಇದೆ.