- Home
- Entertainment
- TV Talk
- Naa Ninna Bidalaare ಅಮ್ಮ-ಮಗಳ ಭಾವುಕ ನೃತ್ಯ: ಅವಾರ್ಡ್ ಫಂಕ್ಷನ್ನಲ್ಲಿ ಕಣ್ಣೀರಿಟ್ಟ ನಟಿಯರು
Naa Ninna Bidalaare ಅಮ್ಮ-ಮಗಳ ಭಾವುಕ ನೃತ್ಯ: ಅವಾರ್ಡ್ ಫಂಕ್ಷನ್ನಲ್ಲಿ ಕಣ್ಣೀರಿಟ್ಟ ನಟಿಯರು
ಜೀ ಕನ್ನಡದ 'ನಾನಿನ್ನ ಬಿಡಲಾರೆ' ಧಾರಾವಾಹಿಯ ಅಮ್ಮ-ಮಗಳಾದ ಅಂಬಿಕಾ ಮತ್ತು ಹಿತಾ, ಜೀ ಕುಟುಂಬ ಅವಾರ್ಡ್ಸ್ ವೇದಿಕೆಯಲ್ಲಿ ಭಾವುಕ ಪ್ರದರ್ಶನ ನೀಡಿದ್ದಾರೆ. ಈ ಅಮ್ಮ-ಮಗಳ ಬಾಂಧವ್ಯದ ಹಾಡಿಗೆ ವೇದಿಕೆಯಲ್ಲಿದ್ದ ಇತರೆ ನಟಿಯರೆಲ್ಲರೂ ಕಣ್ಣೀರು ಹಾಕಿದ್ದಾರೆ.

ಅಮ್ಮ-ಮಗಳ ಬಾಂಧವ್ಯ
ಅಮ್ಮ-ಮಗುವಿನ ಬಾಂಧವ್ಯವೇ ಹಾಗಲ್ಲವೆ? ಇದು ಶಬ್ದಗಳಿಗೆ ನಿಲುಕದ ಬಂಧ. ವರ್ಣಿಸಲು ಅಸಾಧ್ಯವಾಗಿರುವ ಸಂಬಂಧವಿದು. ಇದೇ ಕಾರಣಕ್ಕೆ ಅಮ್ಮ-ಮಕ್ಕಳ ಲಾಲಿ ಹಾಡು ಎಲ್ಲಿಯೇ ಕೇಳಿಬಂದರೂ ಎಷ್ಟೋ ಮಂದಿಗೆ ಅರಿವಿಲ್ಲದೆಯೇ ಕಣ್ಣಲ್ಲಿ ನೀರು ತೊಟ್ಟಿಕ್ಕುವುದು ಸಹಜವೇ. ಅದರಲ್ಲಿಯೂ ಅಮ್ಮನನ್ನು ಕಳೆದುಕೊಂಡವರಿಗೆ ಇಂಥ ಸಂಬಂಧದ ಹಾಡುಗಳ ಬಂದಾಗ ಆಗುವ ನೋವು ಕೂಡ ಕಣ್ಣೀರಿನ ರೂಪದಲ್ಲಿ ಹೊರಬರುವುದು ಇದೆ.
ನಾ ನಿನ್ನ ಬಿಡಲಾರೆ ಸೀರಿಯಲ್
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ನಾನಿನ್ನ ಬಿಡಲಾರೆ ಸೀರಿಯಲ್ (Naa Ninna Bidalaare Serial) ಕೂಡ ಅಮ್ಮ-ಮಗಳ ಕಥೆಯನ್ನೇ ಒಳಗೊಂಡಿದೆ. ಚಿಕ್ಕ ವಯಸ್ಸಿನಲ್ಲಿಯೇ ಅಮ್ಮನನ್ನು ಕಳೆದುಕೊಂಡು ಆಕೆಗಾಗಿ ಪರಿತಪಿಸುವ ಪಾತ್ರ ಪುಟಾಣಿ ಹಿತಾಳದ್ದು. ಈ ಪಾತ್ರಕ್ಕೆ ಬಾಲಕಿ ಮಹಿತಾ ಜೀವ ತುಂಬುತ್ತಿದ್ದಾಳೆ. ಅಮ್ಮನಿಗಾಗಿ ಹಂಬಲಿಸುವ ಆಕೆಯ ಪಾತ್ರಕ್ಕೆ ಬಹುಶಃ ಕಣ್ಣೀರು ಹಾಕದ ವೀಕ್ಷಕರೇ ಇಲ್ಲವೆನ್ನಬಹುದೇನೋ.
ಅಮ್ಮ-ಮಗಳ ಮಿಲನ
ಇದೀಗ ಜೀ ಕುಟುಂಬ ಅವಾರ್ಡ್ ಫಂಕ್ಷನ್ನಲ್ಲಿ ಅಮ್ಮ-ಮಗಳ ಮಿಲನವಾಗಿದೆ. ಅಮ್ಮ ಅಂಬಿಕಾ ಮತ್ತು ಹಿತಾ ಒಟ್ಟಾಗಿ ಲಾಲಿ ಲಾಲಿ ಹಾಡಿಗೆ ಒಟ್ಟಾಗಿ ಸ್ಟೆಪ್ ಹಾಕಿದ್ದಾರೆ. ಈ ಅಮ್ಮ-ಮಗಳ ಬಾಂಧವ್ಯ ನೋಡಿ ಅವಾರ್ಡ್ ಫಂಕ್ಷನ್ಗೆ ಬಂದಿರುವ ಬಹುತೇಕ ಎಲ್ಲ ನಟಿಯರೂ ಕಣ್ಣೀರಾಗಿದ್ದಾರೆ.
ಜೀ಼ ಕನ್ನಡ ಕುಟುಂಬ ಅವಾರ್ಡ್ಸ್
ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2025 Nomination Eventನಲ್ಲಿ ಈ ಒಂದು ಭಾವುಕ ಕ್ಷಣ ಕಂಡುಬಂದಿತು. ಬ್ರಹ್ಮಗಂಟು ಸೀರಿಯಲ್ ಕಾಂತಮ್ಮ, ಸಂಜನಾ ಪಾತ್ರಧಾರಿ, ಅಣ್ಣಯ್ಯ ಸೀರಿಯಲ್ ರಾಣಿ, ಅಮೃತಧಾರೆ ಭೂಮಿಕಾ, ಭಾಗ್ಯಾ ಪಾತ್ರಧಾರಿ ಸೇರಿದಂತೆ ಎಲ್ಲಾ ನಟಿಯರು ಭಾವುಕರಾಗಿ ಕಣ್ಣಿನಲ್ಲಿ ನೀರು ತುಂಬಿಕೊಂಡಿರುವುದನ್ನು ನೋಡಬಹುದು.
ಮಹಿತಾ ಕುರಿತು...
ಮಹಿತಾ, ಈ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಮಹಿತಾ, ನಂತರ ಚುಕ್ಕಿತಾರೆ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಳು. ಸದಾ ನಟನೆಯಲ್ಲಿ ಮಿಂಚುತ್ತಿರುವ ಮಹಿತಾ ಒಳ್ಳೆಯ ಸಿಂಗರ್ ಕೂಡ. ಈಕೆ ಇನ್ಸ್ಟಾಗ್ರಾಮ್ ಪುಟ ಹೊಂದಿದ್ದು ಅದರಲ್ಲಿ, ನಾನಿನ್ನ ಬಿಡಲಾರೆ ಸೀರಿಯಲ್ನ ಟೈಟಲ್ ಸಾಂಗ್ ಅನ್ನು ಅದ್ಭುತವಾಗಿ ಹಾಡಿರುವುದನ್ನು ನೋಡಬಹುದು.
ವೀಕ್ಷಕರ ಕಣ್ಣೀರು ತರಿಸಿದ ನೀತಾ ಅಶೋಕ್ ಹಿನ್ನೆಲೆ
ಇನ್ನು ನಟಿ ನೀತಾ ಅಶೋಕ್ ಕುರಿತು ಹೇಳುವುದಾದರೆ, ಇವರು ಅನೂಪ್ ಭಂಡಾರಿ (Anoop Bandhari) ನಿರ್ದೇಶನದ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರು ಅಪರ್ಣಾ ಬಲ್ಲಾಳ್ (ಪನ್ನಾ) ಪಾತ್ರದಲ್ಲಿ ನಟಿಸಿದ್ದಾರೆ. ನೀತಾ ನಟಿಸಿರುವುದು ಒಂದೇ ಸಿನಿಮಾದಲ್ಲಿ ಆದರೂ ಅವರ ಫ್ಯಾನ್ಸ್ ಸಂಖ್ಯೆ ಹೆಚ್ಚಿನ ಮಟ್ಟದಲ್ಲಿ ಇದೆ. ವಿಕ್ರಾಂತ್ ರೋಣದಲ್ಲಿ ನಟಿಸುವ ಮುನ್ನ ಅಂದರೆ 2019ರಲ್ಲಿ ತುಳು ಚಲನಚಿತ್ರ ಜಬರ್ದಸ್ತ್ ಶಂಕರದಲ್ಲಿ ನೀತಾ ನಟಿಸಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಯಶೋದಾ' ಧಾರಾವಾಹಿಯ ಮೂಲಕವು ಹೆಸರು ಮಾಡಿದ್ದಾರೆ ನೀತಾ ಅಶೋಕ್. ಇದರಲ್ಲದೇ ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ದೂರದರ್ಶನದಲ್ಲಿ ಹಿಂದಿ ಧಾರಾವಾಹಿಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದಾರೆ.