ಈ ದೇವಸ್ಥಾನಕ್ಕೆ ಬಂದ 48 ದಿನಗಳಲ್ಲಿ ಕಿಡ್ನಿ ಕಾಯಿಲೆ ಗುಣವಾಗುತ್ತಂತೆ!
ಸಾಮಾನ್ಯವಾಗಿ ಇಲ್ಲಿಗೆ ಭೇಟಿ ನೀಡಿ ದೇವರನ್ನು ಪೂಜಿಸುವುದರಿಂದ ವ್ಯಕ್ತಿಯ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳು ಗುಣವಾಗುತ್ತವೆ ಎಂದು ಹೇಳಲಾಗುತ್ತದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಜನರು ಸಾಮಾನ್ಯವಾಗಿ ಉತ್ತಮ ಆಹಾರ, ವ್ಯಾಯಾಮ ಅಥವಾ ವೈದ್ಯರ ಔಷಧಿಗಳನ್ನು ಅವಲಂಬಿಸಿರುತ್ತಾರೆ. ಕೆಲವೊಮ್ಮೆ ನಮಗೆ ತಿಳಿಯದಂತೆ ದೊಡ್ಡ ದೊಡ್ಡ ಕಾಯಿಲೆಗಳು ವಕ್ಕರಿಸುತ್ತವೆ. ಆಗ ಕೆಲವು ಜನರು ಮಾತ್ರ ಇದರಿಂದ ಮುಕ್ತಿ ಪಡೆಯಲು ದೇವರನ್ನು ಆಶ್ರಯಿಸುತ್ತಾರೆ. ಭಾರತದಲ್ಲಿ ಒಂದು ದೇವಾಲಯವಿದೆ. ಸಾಮಾನ್ಯವಾಗಿ ಇಲ್ಲಿಗೆ ಭೇಟಿ ನೀಡಿ ದೇವರನ್ನು ಪೂಜಿಸುವುದರಿಂದ ವ್ಯಕ್ತಿಯ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳು ಗುಣವಾಗುತ್ತವೆ ಎಂದು ಹೇಳಲಾಗುತ್ತದೆ.
ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿರುವ ಈ ದೇವಾಲಯದ ಹೆಸರು ಊತತುರ್ ಸುದ್ಧ ರತ್ನೇಶ್ವರರ್ ದೇವಸ್ಥಾನ(Oothathur suddha rathneswarar temple).ಈ ಪ್ರಾಚೀನ ಶಿವ ದೇವಾಲಯವು ಕಿಡ್ನಿ ಸ್ಟೋನ್ಸ್, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (Chronic kidney disease) ಮತ್ತು ಇತರ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆಗೆ ವಿಶೇಷವಾಗಿ ಪ್ರಸಿದ್ಧವಾಗಿದೆ. ಹಾಗಾದರೆ ಬನ್ನಿ ಈ ದೇವಾಲಯದ ವಿಶೇಷತೆ ಏನು ಎಂದು ತಿಳಿಯೋಣ.
ದೇವಾಲಯದ ವೈಶಿಷ್ಟ್ಯಗಳು
ಊತತುರ್ ಸುದ್ಧ ರತ್ನೇಶ್ವರರ್ ದೇವಸ್ಥಾನದಲ್ಲಿ ಭಕ್ತರು ಪೂಜೆ, ಅಭಿಷೇಕ ಮತ್ತು ವಿಶೇಷ ಆಚರಣೆ ನಡೆಸುವುದರಿಂದ ಮೂತ್ರಪಿಂಡದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎಂದು ನಂಬಲಾಗುತ್ತದೆ.
ದೇವಾಲಯಕ್ಕೆ ಬಂದವರಿಗೆ ಪವಾಡಸದೃಶ ರೀತಿಯಲ್ಲಿ ಮೂತ್ರಪಿಂಡದ ಕಾಯಿಲೆಗಳಿಗೆ ಪರಿಹಾರ ಸಿಗುತ್ತದೆಯಂತೆ. ದೇವಾಲಯದ ಬ್ರಹ್ಮ ತೀರ್ಥ೦ (ಪವಿತ್ರ ಬಾವಿ) ನೀರು ಮತ್ತು ನಟರಾಜನ ಪೂಜೆಯು ಮೂತ್ರಪಿಂಡದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ ಎಂದು ಭಕ್ತರು ನಂಬುತ್ತಾರೆ. ಈ ಬಾವಿಯ ನೀರಿನಲ್ಲಿ ಎಲ್ಲಾ ಪವಿತ್ರ ನದಿಗಳ ನೀರು ಇರುತ್ತದೆ ಮತ್ತು ಅನೇಕ ಔಷಧೀಯ ಗುಣಗಳಿವೆ ಎಂದು ನಂಬಲಾಗಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರು ಅಭಿಷೇಕ ಮಾಡಿದ ನಂತರ ಈ ನೀರನ್ನು ಕುಡಿಯುತ್ತಾರೆ. ಇಲ್ಲಿಗೆ ಭೇಟಿ ನೀಡುವ ಅನೇಕ ಭಕ್ತರು ಈ ನೀರನ್ನು 48 ದಿನಗಳ ಕಾಲ ಸೇವಿಸುವುದರಿಂದ ಮತ್ತು ನಿಯಮಿತವಾಗಿ ಪ್ರಾರ್ಥನೆ ಸಲ್ಲಿಸುವುದರಿಂದ ಕಿಡ್ನಿ ಸ್ಟೋನ್ ಮತ್ತು ಇತರ ಸಮಸ್ಯೆಗಳು ಸುಧಾರಿಸುತ್ತವೆ ಎಂದು ಹೇಳಿಕೊಳ್ಳುತ್ತಾರೆ.
ದೇವಾಲಯದಲ್ಲಿ ದರ್ಶನದ ಸಮಯ
ದೇವಾಲಯದಲ್ಲಿ ದರ್ಶನ ಸಮಯ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8 ರವರೆಗೆ.
ಇಲ್ಲಿದೆ ನೋಡಿ ವಿಡಿಯೋ
ದೇವಾಲಯವನ್ನು ತಲುಪುವುದು ಹೇಗೆ?
ಊತತುರ್ ಸುದ್ಧ ರತ್ನೇಶ್ವರರ್ ದೇವಸ್ಥಾನವು ತಿರುಚ್ಚಿಯಿಂದ 30 ಕಿ ಮೀ ಮತ್ತು ಪಡಲೂರಿನಿಂದ 5 ಕಿ.ಮೀ ದೂರದಲ್ಲಿದೆ. ಹತ್ತಿರದ ವಿಮಾನ ನಿಲ್ದಾಣ ತಿರುಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಸುಮಾರು 35 ಕಿ.ಮೀ) ಮತ್ತು ರೈಲು ನಿಲ್ದಾಣ ಲಾಲ್ಗುಡಿ ಅಥವಾ ತಿರುಚ್ಚಿ ಜಂಕ್ಷನ್. ನೀವು ರಸ್ತೆಯ ಮೂಲಕ ಬರುತ್ತಿದ್ದರೆ ತಿರುಚ್ಚಿ-ಚೆನ್ನೈ ಹೆದ್ದಾರಿಯಲ್ಲಿ ಬಸ್ ಅಥವಾ ಟ್ಯಾಕ್ಸಿ ಮೂಲಕ ಸುಲಭವಾಗಿ ತಲುಪಬಹುದು.
ವಿಶೇಷ ಸೂಚನೆ: ನಂಬಿಕೆಗೆ ತನ್ನದೇ ಆದ ಮಹತ್ವವಿದೆ. ಆದರೆ ಕೇವಲ ಪೂಜೆಯಿಂದ ಯಾವುದೇ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ. ಗಂಭೀರ ಕಾಯಿಲೆಗಳಿಗೆ ವೈದ್ಯಕೀಯ ಸಮಾಲೋಚನೆ, ಸರಿಯಾದ ಔಷಧಿಗಳು, ಸಮತೋಲಿತ ಆಹಾರ ಮತ್ತು ವ್ಯಾಯಾಮ ಕೂಡ ಅಷ್ಟೇ ಮುಖ್ಯ.