ಈ ದಿಕ್ಕಿನಲ್ಲಿ ಇದೇ ದಿನ ತುಳಸಿ ಗಿಡ ನೆಟ್ಟರೆ ಹಣದ ತಿಜೋರಿ ತುಂಬಿರುತ್ತೆ, ಆಹಾರದ ಕೊರತೆಯೇ ಇರಲ್ಲ
ನೀವು ಕೂಡ ಮನೆಗೆ ಲಕ್ಷ್ಮಿ ದೇವಿಯ ಆಗಮನವನ್ನು ಬಯಸಿದರೆ ಈ ಸಸ್ಯವನ್ನು ಯಾವ ದಿಕ್ಕಿನಲ್ಲಿ ನೆಟ್ಟರೆ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ನೋಡೋಣ ಬನ್ನಿ..

ಲಕ್ಷ್ಮಿ ದೇವಿಯ ಆಗಮನ
ಧಾರ್ಮಿಕ ನಂಬಿಕೆಯ ಪ್ರಕಾರ, ಪ್ರತಿ ದಿನ ತುಳಸಿ ಪೂಜಿಸುವುದರಿಂದ ಭಕ್ತರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಇದರ ಜೊತೆಗೆ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಿರುತ್ತದೆ. ಈ ಸಸ್ಯವನ್ನು ಸ್ವಚ್ಛವಾದ ಸ್ಥಳದಲ್ಲಿ ಮತ್ತು ಉತ್ತಮ ದಿಕ್ಕಿನಲ್ಲಿ ನೆಡಬೇಕು. ತುಳಸಿಯನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ನಂಬಲಾಗಿದೆ. ನೀವು ಕೂಡ ಮನೆಗೆ ಲಕ್ಷ್ಮಿ ದೇವಿಯ ಆಗಮನವನ್ನು ಬಯಸಿದರೆ ಈ ಸಸ್ಯವನ್ನು ಯಾವ ದಿಕ್ಕಿನಲ್ಲಿ ನೆಟ್ಟರೆ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ನೋಡೋಣ ಬನ್ನಿ..
ಈ ದಿಕ್ಕಿನಲ್ಲಿ ನೆಡಿ
ತುಳಸಿ ಗಿಡ ನೆಡುವ ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ವಿವರವಾಗಿ ವಿವರಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ತುಳಸಿ ಗಿಡ ನೆಡುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ತುಳಸಿ ಗಿಡ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಹಾಗೂ ಲಕ್ಷ್ಮಿ ದೇವಿಯ ಆಶೀರ್ವಾದವು ಕುಟುಂಬ ಸದಸ್ಯರ ಮೇಲೆ ಇರುತ್ತದೆ ಎಂದು ನಂಬಲಾಗಿದೆ.
ಈ ದಿನ ನೆಡಿ
ವಾಸ್ತು ಶಾಸ್ತ್ರದ ಪ್ರಕಾರ, ಗುರುವಾರ ಮತ್ತು ಶುಕ್ರವಾರ ಮನೆಯಲ್ಲಿ ತುಳಸಿ ಗಿಡ ನೆಡಲು ಶುಭ ದಿನವೆಂದು ಪರಿಗಣಿಸಲಾಗಿದೆ. ಇನ್ನು ತಿಂಗಳ ಬಗ್ಗೆ ಮಾತನಾಡುವುದಾದರೆ ಕಾರ್ತಿಕ ಮತ್ತು ಚೈತ್ರ ತಿಂಗಳುಗಳು ತುಳಸಿ ನೆಡಲು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡ ನೆಡುವ ನಿಯಮಗಳನ್ನು ಪಾಲಿಸಿದ್ದೇ ಆದಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯು ಮನೆಯಲ್ಲಿ ವಾಸಿಸುತ್ತಾಳೆ ಮತ್ತು ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಹಾಗೂ ತಿಜೋರಿ ಯಾವಾಗಲೂ ಹಣದಿಂದ ತುಂಬಿರುತ್ತದೆ.
ಈ ವಿಷಯಗಳನ್ನ ನೆನಪಿಡಿ...
ನೀವು ತುಳಸಿ ಗಿಡವನ್ನು ನೆಡುವ ಸ್ಥಳದ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಏಕೆಂದರೆ ಲಕ್ಷ್ಮಿ ದೇವಿಯು ಶುದ್ಧ ಸ್ಥಳಗಳಲ್ಲಿ ಮಾತ್ರ ವಾಸಿಸುತ್ತಾಳೆ. ಇದಲ್ಲದೆ, ಕೊಳಕು ಪಾತ್ರೆಗಳನ್ನು ಗಿಡದ ಬಳಿ ಇಡಬಾರದು. ಅಂತಹ ತಪ್ಪು ಮಾಡುವುದರಿಂದ ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗಬಹುದು.
ತುಳಸಿಗೆ ಸಂಬಂಧಿಸಿದ ನಿಯಮಗಳು
ತುಳಸಿ ಗಿಡದ ಬಳಿ ಪ್ರತಿದಿನ ದೀಪ ಹಚ್ಚಿ ಪೂಜಿಸಬೇಕು ಮತ್ತು ತುಳಸಿ ಎಲೆಗಳನ್ನು ನೈವೇದ್ಯದಲ್ಲಿ ಸೇರಿಸಬೇಕು. ಆದರೆ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಏಕಾದಶಿ ಮತ್ತು ಭಾನುವಾರದಂದು ತುಳಸಿಗೆ ನೀರನ್ನು ಅರ್ಪಿಸಬಾರದು. ಧಾರ್ಮಿಕ ನಂಬಿಕೆಯ ಪ್ರಕಾರ, ಏಕಾದಶಿ ಮಾತೆಯ ಉಪವಾಸವನ್ನು ತುಳಸಿಗೆ ನೀರು ಅರ್ಪಿಸಿ ಏಕಾದಶಿಯಂದು ಅದರ ಎಲೆಗಳನ್ನು ಕೀಳುವ ಮೂಲಕ ಮುರಿಯಲಾಗುತ್ತದೆ.