ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 5 ನಟರು ಯಾರ್ಯಾರು?
ಕನ್ನಡ ಚಿತ್ರರಂಗದ ನಟ-ನಟಿಯರು ಈಗ ಕೇವಲ ಕನ್ನಡವರಾಗಿ ಉಳಿದಿಲ್ಲ. ದೇಶದ ವಿವಿಧ ಚಿತ್ರರಂಗದಲ್ಲೂ ಈ ಸ್ಟಾರ್ಸ್ ಸದ್ದು ಮಾಡುತ್ತಿದ್ದಾರೆ. ಹಾಗಾಗಿ ಇವರ ಸಂಭಾವನೆ ಕೂಡ ಹೆಚ್ಚಾಗಿದೆ. ಚಂದನವನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರು ಯಾರ್ಯಾರು ನೋಡೋಣ.

ಅತಿ ಹೆಚ್ಚು ಸಂಭಾವನೆ ಪಡೆಯುವ ನಟ
ಹಿಂದೆಲ್ಲಾ ಕನ್ನಡ ಚಿತ್ರರಂಗದ ನಟರು ಕೇವಲ ಕನ್ನಡಕ್ಕಷ್ಟೇ ಸೀಮಿತವಾಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ಚಂದನವನದ ತಾರೆಯರು ದೇಶದ ವಿವಿಧ ಚಿತ್ರರಂಗದಲ್ಲೂ ಸದ್ದು ಮಾಡುತ್ತಿದ್ದಾರೆ. ಹಾಗಾಗಿ ಅವರ ಸಂಭಾವನೇ ಇದೀಗ ತುಂಬಾನೆ ದೊಡ್ಡಮಟ್ಟದಲ್ಲಿ ಹೆಚ್ಚಾಗಿದೆ. ಇದೀಗ ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರು ಯಾರ್ಯಾರು ಅನ್ನೋದನ್ನು ನೋಡೋಣ.
ಯಶ್
ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸದ್ಯ ರಾಮಾಯಣದಲ್ಲೂ ರಾವಣನಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಕೂಡ ಭಾರಿ ಕುತೂಹಲ ಕೆರಳಿಸಿದೆ. ಎಲ್ಲಾ ದೊಡ್ಡ ಮಟ್ಟದ ಸಿನಿಮಾಗಳನ್ನು ಮಾಡುತ್ತಿರುವುದರಿಂದ ಸದ್ಯ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ಅಂದ್ರೆ ಅದು ಯಶ್. ಇವರು ಸದ್ಯ ಒಂದು ಸಿನಿಮಾಗೆ 60 ರಿಂದ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.
ದರ್ಶನ್ ತೂಗುದೀಪ
ದರ್ಶನ್ ತೂಗುದೀಪ ಅವರು ಮಾಡುವ ಸಿನಿಮಾಗಳ ಸಂಖ್ಯೆ ಕಡಿಮೆ ಇದ್ದರೂ ಅವರು ತೆಗೆದುಕೊಳ್ಳುವ ಸಂಭಾವನೆ ಮಾತ್ರ ಒಂದು ಸಿನಿಮಾಗೆ 20 ರಿಂದ 25 ಕೋಟಿಯಾಗಿದೆ. ದರ್ಶನ್ ಕೊನೆಯದಾಗಿ ಕಾಟೇರ ಸಿನಿಮಾದಲ್ಲಿ ನಟಿಸಿದ್ದರು, ಸದ್ಯ ಡೆವಿಲ್ ಸಿನಿಮಾದಲ್ಲಿ ನಟಿಸಿದ್ದು, ಬಿಡುಗಡೆಗೆ ಕಾಯುತ್ತಿದ್ದಾರೆ.
ಸುದೀಪ್
ಕಿಚ್ಚ ಸುದೀಪ್ ಕೂಡ ವರ್ಷಕ್ಕೆ ಒಂದರಂತೆ ಸಿನಿಮಾ ಮಾಡುತ್ತಿದ್ದಾರೆ. ಕಿಚ್ಚ ವಿಕ್ರಾಂತ್ ರೋಣ, ಕಬ್ಜಾ, ಮಾಕ್ಸ್ ಸಿನಿಮಾದಲ್ಲಿ ಕಳೆದ ಎರಡು ವರ್ಷದಲ್ಲಿ ನಟಿಸಿದ್ದರು. ಇದೀಗ ಮಾರ್ಕ್ ಮತ್ತು ಬಿಲ್ಲ ರಂಗ ಭಾಷಾ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಸದ್ಯ ಸುದೀಪ ಕೂಡ ಒಂದು ಸಿನಿಮಾಗೆ 20 ರಿಂದ 25ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.
ರಿಷಭ್ ಶೆಟ್ಟಿ
ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಭ್ ಶೆಟ್ಟಿ ಸಿನಿಮಾ ಸಂಭಾವನೆ ಸುಮಾರು 10 ರಿಂದ 15 ಕೋಟಿ ರೂಪಾಯಿ. ರಿಷಭ್ ಕಾಂತಾರ ಮುಂದಿನ ಭಾಗದಲ್ಲೂ ತಯಾರಿ ನಡೆಸುತ್ತಿದ್ದಾರೆ, ಇದರ ಜೊತೆಗೆ ತೆಲುಗಿನಲ್ಲಿ ಹನುಮಾನ್, ಹಿಂದಿಯಲ್ಲಿ ಛತ್ರಪತಿ ಶಿವಾಜಿ ಸಿನಿಮಾದಲ್ಲೂ ನಟಿಸುವ ಅವಕಾಶ ಸಿಕ್ಕಿದೆ.
ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ತಮ್ಮ ನಟನೆ, ನಿರ್ದೇಶನದಿಂದಲೇ ಜನಪ್ರಿಯತೆ ಪಡೆದವರು. ಕನ್ನಡದಲ್ಲಿ ಯುಐ ಸಿನಿಮಾದಲ್ಲಿ ನಟಿಸಿದ್ದು, ಶೀಘ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ರಾಜ್ ಬಿ ಶೆಟ್ಟಿ ಜೊತೆ ನಟಿಸಿರುವ 45 ಸಿನಿಮಾ ಬಿಡುಗಡೆಯಾಗಲಿದೆ. ಇತ್ತೀಚೆಗೆ ಕೂಲಿ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಕೂಡ ನಟಿಸಿದ್ದರು. ಉಪೇಂದ್ರ ಅವರು ಒಂದು ಸಿನಿಮಾಗೆ 10 ರಿಂದ 15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.