ಕನಸಿನಲ್ಲಿ ಸ್ಪಂದನಾ ಬಂದು... ಅಗಲಿದ ಪತ್ನಿಯ ನೆನೆದು ವಿಜಯ ರಾಘವೇಂದ್ರ ಹೇಳಿದ್ದೇನು?
ಪತ್ನಿ ಸ್ಪಂದನಾ ಅಗಲಿಕೆಯ ನಂತರದ ಜೀವನದ ಬಗ್ಗೆ ನಟ ವಿಜಯ್ ರಾಘವೇಂದ್ರ ಅವರ ಭಾವುಕ ಮಾತುಗಳು. ಪತ್ನಿಯ ನೆನಪುಗಳು, ಕನಸುಗಳು ಮತ್ತು ಮುಂದಿನ ಬದುಕಿನ ಬಗ್ಗೆ ಅವರ ಅನಿಸಿಕೆಗಳು.

ಪತ್ನಿ ಸ್ಪಂದನಾ ನೆನೆದ ವಿಜಯ ರಾಘವೇಂದ್ರ
ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಸಾವನ್ನಪ್ಪಿ ಎರಡು ವರ್ಷ ಕಳೆದೇ ಹೋಗಿದೆ. 2023 ರ ಕಳೆದ ಆಗಸ್ಟ್ ತಿಂಗಳಿನಲ್ಲಿ, ಸ್ಪಂದನಾ ಅವರು ತಮ್ಮ ಸ್ನೇಹಿತೆಯರೊಟ್ಟಿಗೆ ಬ್ಯಾಂಕಾಕ್ (Bangkok) ಹೋಗಿದ್ದಾಗ ಅವರಿಗೆ ಹೃದಯ ಸ್ತಂಭನವಾಗಿ ನಿಧನರಾಗಿದ್ದಾರೆ. ಈ ಅಕಾಲಿಕ ಸಾವು ಎಲ್ಲರಿಗೂ ಆಘಾತವನ್ನು ಉಂಟು ಮಾಡಿತ್ತು. ಇದು ಭಾರಿ ಮಟ್ಟದಲ್ಲಿ ಸುದ್ದಿಯೂ ಆಗಿತ್ತು. ಪತ್ನಿಯನ್ನು ಕಳೆದುಕೊಂಡಿರುವ ನಟ ವಿಜಯ ರಾಘವೇಂದ್ರ ಅವರು ಇಂದಿಗೂ, ಪತ್ನಿಯ ನೆನಪುಗಳನ್ನು ಮೆಲುಕು ಹಾಕುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಪತ್ನಿ ಜೊತೆಗಿನ ಸವಿ ನೆನಪುಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಅಗಲಿದ ಪತ್ನಿ ಬಗ್ಗೆ ವಿಜಯ ರಾಘವೇಂದ್ರ
ಇದೀಗ ಸುವರ್ಣ ನ್ಯೂಸ್ ಬೆಂಗಳೂರು ಬಜ್ ಪಾಡ್ಕಾಸ್ಟ್ನಲ್ಲಿ ನಟ ಅಗಲಿದ ಪತ್ನಿಯ ಬಗ್ಗೆ ಮಾತನಾಡಿದ್ದಾರೆ. ಸ್ಪಂದನಾ ಕನಸಿನಲ್ಲಿ, ಯಾವಾಗಲೂ ಬರುತ್ತಲೇ ಇರುತ್ತಾಳೆ. ಅದೇ ನಗು ಮುಖದಿಂದ ಅಲ್ಲಿಯೂ ಬರುತ್ತಾಳೆ. ಎಲ್ಲರಿಗೂ ಆಕೆ ಇಷ್ಟ ಆಗ್ತಿದ್ದದ್ದೇ ಆ ನಗುಮುಖದಿಂದಾಗಿ. ಅದೇ ರೀತಿ ಕನಸಿನಲ್ಲಿಯೂ ಬರುತ್ತಾಳೆ ಎಂದಿದ್ದಾರೆ.
ಪತ್ನಿ ಸ್ಪಂದನಾರ ಕುರಿತು ನಟನ ಮಅತು
ಹಾಗೆ ನೋಡಿದ್ರೆ ನನ್ನನ್ನು ಈ ರೀತಿ ತಯಾರಿ ಮಾಡಿದವಳೆ ಆಕೆ. ಹೀಗೆ ತಯಾರು ಮಾಡಿ ಬಿಟ್ಟುಬಿಟ್ಟಳು. ಇದು ಜೀವನ, ಇದು ವಾಸ್ತವ ಎನ್ನುತ್ತಿದ್ದಳು. ಈಗ ಅದನ್ನೆಲ್ಲಾ ನೆನಪಿಸಿಕೊಂಡಾಗ ಹೌದಲ್ವಾ ಎನ್ನಿಸತ್ತೆ, ಚಿನ್ನ ನೀನೇ ಕರೆಕ್ಟು ಅನ್ನಿಸತ್ತೆ. ಈಗ ಮನೆಯಲ್ಲಿ ಎಲ್ಲವೂ ಖಾಲಿ ಖಾಲಿಯಾಗಿದೆ ಎಂದು ಭಾವುಕರಾಗಿದ್ದಾರೆ.
ಪತ್ನಿ ಸ್ಪಂದನಾರ ಸಂಬಂಧದ ಕುರಿತು ಮಾತು
ಈ ಹಿಂದೆ ವಿಜಯ ರಾಘವೇಂದ್ರ ಅವರು, ಆಗಿದ್ದು ಆಯ್ತು ಜೀವನದಲ್ಲಿ ಮುಂದಕ್ಕೆ ಹೋಗು ಎಂಬ ಒತ್ತಾಯ ಬರುತ್ತಿದೆ ಎನ್ನುತ್ತಲೇ ತಮ್ಮ ಮತ್ತು ಪತ್ನಿ ಸ್ಪಂದನಾರ ಸಂಬಂಧದ ಕುರಿತು ಮಾತನಾಡಿದ್ದರು. ನಿಮ್ಮಥ ಗಂಡನೇ ಇಲ್ಲ, ನೀವೊಬ್ಬ ಅದ್ಭುತ ಗಂಡ ಎಂದೆಲ್ಲಾ ನನ್ನನ್ನು ಹೊಗಳುತ್ತಾರೆ. ನೀವು ತುಂಬಾ ಸ್ಟ್ರಾಂಗ್ ಎನ್ನುತ್ತಾರೆ. ಅಸಲಿಗೆ ಅವೆಲ್ಲಾ ಸುಳ್ಳು. ನಾನು ಎಂಥವನು ಎಂದು ನನಗೆ ಚೆನ್ನಾಗಿ ಗೊತ್ತಿದೆ. ನಾನು ಒಳ್ಳೆಯ ಗಂಡ ಅಲ್ಲ, ಬದಲಿಗೆ ಸ್ಪಂದನಾ ಒಳ್ಳೆಯ ಪತ್ನಿ ಆಗಿದ್ದಳು. ನನ್ನ ವಿಚಾರದಲ್ಲಿ ಅವಳು ಎಷ್ಟು ಕಾಂಪ್ರಮೈಸ್ ಆಗಿದ್ದಳು ಎನ್ನುವ ಸತ್ಯ ನನಗೆ ಗೊತ್ತು ಎಂದು ಅಗಲಿದ ಪತ್ನಿಯನ್ನು ನೆನಪಿಸಿಕೊಂಡಿದ್ದರು.
ಜೀವನದಲ್ಲಿ ಮೂವ್ ಆನ್ ಆಗು ಎಂದು ಒತ್ತಾಯ
ಜೀವನದಲ್ಲಿ ಮೂವ್ ಆನ್ ಆಗು ಎಂದು ಒತ್ತಾಯ ಮಾಡುತ್ತಾರೆ. ಆದರೆ ಜೀವನದಲ್ಲಿ ಮುಂದೆ ಹೋಗಲು ನಮ್ಮದು ಮರೆತು ಹೋಗುವ ಸಂಬಂಧವಲ್ಲ, ಬಿಟ್ಟು ಮುಂದಕ್ಕೆ ಹೋಗುವ ಸಮಯ ಇದಲ್ಲ ಎಂದು ನಟ ವಿಜಯ್ ರಾಘವೇಂದ್ರ ಹೇಳಿದ್ದಾರೆ. ಜೀವನದಲ್ಲಿ ಏನು ಬಂದರೂ ಅದನ್ನು ಎದುರಿಸುತ್ತೇನೆ. ಜೀವನದವನ್ನು ಪ್ರಶ್ನೆ ಮಾಡಲು ಹೋಗುವುದಿಲ್ಲ. ಪ್ರಶ್ನೆ ಮಾಡಿದ್ರೆ ಬೇಸರ, ಕಣ್ಣೀರು ಜಾಸ್ತಿ ಆಗುತ್ತದೆ. ಅದಕ್ಕಾಗಿಯೇ ಪ್ರಶ್ನೆ ಮಾಡುವುದನ್ನೇ ಬಿಟ್ಟುಬಿಟ್ಟಿದ್ದೇನೆ. ಜೀವನದಲ್ಲಿ ಅಕ್ಸಪ್ಟೆನ್ಸ್ ಇರಬೇಕು. ಅದನ್ನು ನಾನು ಮಾಡಿಕೊಂಡಿದ್ದೇನೆ. ಜೀವನ ಕೊಡುವ ಉತ್ತರ ಎಂದಿದ್ದರು.
ಜರ್ಜರಿವಾಗಿರೋ ಮನಸ್ಸು
ಒಂದು ಕ್ಷಣಕ್ಕೆ ಒಂದು ಹೆಜ್ಜೆ ಅನ್ನುವ ರೀತಿಯ ಜೀವನ ನನ್ನದು. ಬದುಕಿನಲ್ಲಿ ಹೀಗೆಯೇ ಆಗುತ್ತದೆ ಎನ್ನುವುದು ಯಾರಿಗೂ ತಿಳಿದಿರುವುದೇ ಇಲ್ಲ. ಆದರೆ ಒಮ್ಮೊಮ್ಮೆ ದಿಢೀರನೆ ಆಗುವ ಘಟನೆಗಳು ಮನಸ್ಸನ್ನು ಎಷ್ಟು ಜರ್ಜರಿತರನ್ನಾಗಿ ಮಾಡುತ್ತದೆಯೋ ಅಷ್ಟೇ ಜೀವನವನ್ನು ಗಟ್ಟಿ ಕೂಡ ಮಾಡುತ್ತದೆ. ನನ್ನ ಲೈಫ್ನಲ್ಲಿಯೂ ಹಾಗೆಯೇ ಆಗಿಬಿಟ್ಟತು.
ಸ್ಪಂದನಾ ಕುರಿತು ವಿಜಯ್ ರಾಘವೇಂದ್ರ ಭಾವುಕ
ಜೀವನ ಸರಿಯಾಗಿ ಹೋಗುತ್ತಿರುವ ಸಂದರ್ಭದಲ್ಲಿ ಒಂದೇ ಸಲಕ್ಕೆ ಭಗವಂತ ಶಾಕ್ ಕೊಟ್ಟು ಇಡೀ ಬದುಕನ್ನೇ ಅಲ್ಲಾಡಿಸಿಬಿಟ್ಟ. ಆದರೆ ಆ ಸಮಯದಲ್ಲಿ ನನ್ನ ಕುಟುಂಬ, ಸ್ನೇಹಿತರು, ಮೀಡಿಯಾಗಳು ಹಾಗೂ ಸಹೋದ್ಯೋಗಿಗಳು ನೀಡಿರುವ ಧೈರ್ಯವನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ ಎಂದು ಈ ಹಿಂದೆಯೂ ನಟ ಹೇಳಿದ್ದರು.