- Home
- Entertainment
- Cine World
- 'ಹೊಂದಿಕೊಳ್ಳೋದಕ್ಕೆ ಇಲ್ಲ, ಇನ್ನಷ್ಟು ಬೆಳೆಯೋದಕ್ಕೆ': ಸ್ಕಿನ್‌ಫಿಟ್ ಜೀನ್ಸ್‌ನಲ್ಲಿ ಮಿಂಚಿದ ಜ್ಯೋತಿ ರೈ!
'ಹೊಂದಿಕೊಳ್ಳೋದಕ್ಕೆ ಇಲ್ಲ, ಇನ್ನಷ್ಟು ಬೆಳೆಯೋದಕ್ಕೆ': ಸ್ಕಿನ್‌ಫಿಟ್ ಜೀನ್ಸ್‌ನಲ್ಲಿ ಮಿಂಚಿದ ಜ್ಯೋತಿ ರೈ!
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಜ್ಯೋತಿ ರೈ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಸ್ಕಿನ್‌ಫಿಟ್ ಜೀನ್ಸ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ಕಿರುತೆರೆ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟ ಜ್ಯೋತಿ ರೈ ಇದೀಗ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಸ್ಪೆಷಲ್ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದ್ದ ನಟಿ ಜ್ಯೋತಿ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಸೀರಿಯಲ್ ಜೊತೆಗೆ ನಟಿ ಜ್ಯೋತಿ ರೈ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಜ್ಯೋತಿ ರೈ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಸ್ಕಿನ್‌ಫಿಟ್ ಜೀನ್ಸ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹೌದು! ಬ್ಯೂಟಿಫುಲ್ ಫೋಟೋಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚುವ ಚೆಲುವೆ ಜ್ಯೋತಿ ರೈ. ಇದೀಗ ಹೊಸ ಫೋಟೋಗಳನ್ನ ಅಪ್‌ಲೋಡ್ ಮಾಡಿದ್ದು, ಪಡ್ಡೆಗಳ ಹೃದಯಕ್ಕೆ ಕೊಳ್ಳಿ ಇಟ್ಟಿದ್ದಾರೆ.
ಸ್ಕಿನ್‌ಫಿಟ್ ಜೀನ್ಸ್ ಧರಿಸಿರುವ ಸಿಂಪಲ್ ಫೋಟೋಶೂಟ್‌ನಲ್ಲಿ ಜ್ಯೋತಿ ರೈ ಮಿಂಚಿದ್ದು, ಅವರು ಹಾಕಿರುವ ಕ್ಯಾಪ್ಷನ್ ಮಾತ್ರ ಬಹಳ ವಿಶೇಷವಾಗಿದೆ. ಜೊತೆಗೆ ಕಾಮೆಂಟ್ಸ್ ಸೆಕ್ಷನ್ ಆಫ್ ಮಾಡಿದ್ದಾರೆ.
'ಹೊಂದಿಕೊಳ್ಳೋದಕ್ಕೆ ಇಲ್ಲಿ ಇಲ್ಲ.. ಇನ್ನಷ್ಟು ಬೆಳೆಯೋದಕ್ಕೆ' ಎಂದು ಜ್ಯೋತಿ ರೈ ಕ್ಯಾಪ್ಷನ್ ಹಾಕಿದ್ದಾರೆ, ಸದ್ಯ ಅವರ ಫೋಟೋಗಿಂತ ಕ್ಯಾಪ್ಷನ್ ಭಾರಿ ಚರ್ಚೆಯಾಗುತ್ತಿದ್ದು, ಫೋಟೋಸ್ ವೈರಲ್ ಆಗುತ್ತಿದೆ.
ಸದ್ಯ ಜ್ಯೋತಿ ರೈ ಅನುರಾಗ ಸಂಗಮ, ಜೋಗುಳ, ಗೆಜ್ಜೆಪೂಜೆ, ಲವಲವಿಕೆ, ಕನ್ಯಾದಾನ, ಗೆಜ್ಜೆಪೂಜೆ, ಪ್ರೇರಣಾ, ಕಿನ್ನರಿ, ಮೂರು ಗಂಟು, ಕಸ್ತೂರಿ ನಿವಾಸ ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯ ಮೂಲಕ ಕನ್ನಡಿಗರ ಹೃದಯವನ್ನೂ ಗೆದ್ದವರು.
ಇನ್ನು ಕನ್ನಡದಿಂದ ಅಂತರವನ್ನು ಕಾಪಾಡಿಕೊಂಡು ತೆಲುಗು ಕಿರುತೆರೆ ಮತ್ತು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಇವರು ತೆಲುಗು ನಿರ್ದೇಶಕ ಸುಕು ಪೂರ್ವಜ್ ಅವರ ಜೊತೆ ಮದುವೆಯಾಗಿ ಅಲ್ಲಿಯೇ ಬದುಕು ರೂಪಿಸಿಕೊಂಡಿದ್ದಾರೆ.