MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss Kannada 12: ಮನೆ ಮಂದಿಗೂ ಇಷ್ಟವಿಲ್ಲ, ವೀಕ್ಷಕರಿಗೂ ಬೇಸರ; ಯಾಕ್ ಹಿಂಗಾಯ್ತು?

Bigg Boss Kannada 12: ಮನೆ ಮಂದಿಗೂ ಇಷ್ಟವಿಲ್ಲ, ವೀಕ್ಷಕರಿಗೂ ಬೇಸರ; ಯಾಕ್ ಹಿಂಗಾಯ್ತು?

ಬಿಗ್‌ಬಾಸ್ ಕನ್ನಡ ಸೀಸನ್ 12ರ ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ನೀಡಿದ ವಿಶೇಷ ಅಧಿಕಾರಗಳು ಮತ್ತು ಅವರೇ ಕ್ಯಾಪ್ಟನ್ ಆಗುತ್ತಿರುವುದು ಇತರೆ ಸ್ಪರ್ಧಿಗಳು ಹಾಗೂ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

2 Min read
Author : Mahmad Rafik
Published : Oct 24 2025, 11:29 AM IST
Share this Photo Gallery
  • FB
  • TW
  • Linkdin
  • Whatsapp
15
ಬಿಗ್‌ಬಾಸ್ ಕನ್ನಡ ಸೀಸನ್ 12
Image Credit : Colors Kannada

ಬಿಗ್‌ಬಾಸ್ ಕನ್ನಡ ಸೀಸನ್ 12

ಬಿಗ್‌ಬಾಸ್ ಕನ್ನಡ ಸೀಸನ್ 12ರ ಮೂರನೇ ವಾರದ ಮುಕ್ತಾಯಕ್ಕೆ ಐವರು ಸ್ಪರ್ಧಿಗಳು ಹೊರಗೆ ಹೋದ್ರೆ, ಮೂವರು ವೈಲ್ಡ್‌ಕಾರ್ಡ್ ಎಂಟ್ರಿಯಾಗಿ ಬಂದಿದ್ದಾರೆ. ನಾಲ್ಕನೇ ವಾರಕ್ಕೆ ಬಿಗ್‌ಬಾಸ್ ಮನೆಗೆ ಮೊದಲ ಕ್ಯಾಪ್ಟನ್ ಸಿಗಲಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ಗೆ ರಘು ಮತ್ತು ರಿಷಾ ಆಯ್ಕೆಯಾಗಿದ್ದಾರೆ. ಇಬ್ಬರ ಆಟದ ಪ್ರೋಮೋ ಬಿಡುಗಡೆಯಾಗಿದ್ದು, ವೀಕ್ಷಕರು ಬೇಸರದಿಂದ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

25
ಕ್ಯಾಪ್ಟನ್ಸಿ ಟಾಸ್ಕ್‌
Image Credit : Colors Kannada

ಕ್ಯಾಪ್ಟನ್ಸಿ ಟಾಸ್ಕ್‌

ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ಬಿಗ್‌ಬಾಸ್ ಮೂರು ತಂಡಗಳನ್ನಾಗಿ ಮಾಡಿ ವೈಲ್ಡ್ ಕಾರ್ಡ್ ಸ್ಪರ್ಧಿಗಳನ್ನೇ ನಾಯಕರನ್ನಾಗಿ ಮಾಡಿದ್ದಾರೆ. ಒಂದು ಹಂತದ ಆಟದ ನಂತರ ಮೂರು ತಂಡದ ನಾಯಕರಾದ ರಘು, ರಿಷಾ ಮತ್ತು ಸೂರಜ್ ಮೂವರಿಗೆ ವಿಶೇಷ ಪವರ್ ಹೊಂದಿರುವ ನಾಣ್ಯ ನೀಡುತ್ತಾರೆ. ರಘು ಮತ್ತು ರಿಷಾ ವಿಶೇಷ ಪವರ್ ಹೊಂದಿರುವ ನಾಣ್ಯ ಪಡೆದು ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಆರ್ಹತೆ ಪಡೆದುಕೊಂಡಿದ್ದರು. ತಂಡದ ಜೊತೆ ಹೋದ ಸೂರಜ್ ಕ್ಯಾಪ್ಟನ್ಸಿ ಆಟದಿಂದ ಹೊರಗೆ ಬಿದ್ದಿದ್ದಾರೆ.

Related Articles

Related image1
ಬಿಗ್‌ಬಾಸ್ ಮನೆಯಲ್ಲಿ ನಾಟಕೀಯ ಬೆಳವಣಿಗೆ; ಹೊಡೆದಾಟ, ಬಡಿದಾಟ; ಸ್ಪರ್ಧಿ ಆಸ್ಪತ್ರೆಗೆ ಶಿಫ್ಟ್
Related image2
ವಿನಯ್-ಸಂಗೀತಾಗೆ ಆಟ, ನಮ್ರತಾಗೆ ಪ್ರಾಣ ಸಂಕಟ; ಬಿಗ್‌ಬಾಸ್ ಸೀಸನ್ 10ರ ಈ ದೃಶ್ಯ ನೆನಪಿದೆಯಾ?
35
ವೈಲ್ಡ್ ಕಾರ್ಡ್ ಸ್ಪರ್ಧಿಗಳು
Image Credit : Colors Kannada

ವೈಲ್ಡ್ ಕಾರ್ಡ್ ಸ್ಪರ್ಧಿಗಳು

ಈ ವಾರ ಎಂಟ್ರಿ ಪಡೆದಿರುವ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಆದೇಶದಂತೆಯೇ ಸೇವ್ ಆಗಿದ್ದರು. ಇದೀಗ ಮೂವರಲ್ಲಿಯೇ ಒಬ್ಬರು ಮೊದಲ ಕ್ಯಾಪ್ಟನ್ ಆಗುತ್ತಿರೋದಕ್ಕೆ ಇತರೆ ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಈ ವಾರ ಸಾಲು ಸಾಲು ವಿಶೇಷ ಅಧಿಕಾರಗಳನ್ನು ನೀಡಿದ್ದಕ್ಕೆ ವೀಕ್ಷಕರು ಸಹ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

45
ವೀಕ್ಷಕರ ಅಭಿಪ್ರಾಯ ಏನು?
Image Credit : Colors Kannada

ವೀಕ್ಷಕರ ಅಭಿಪ್ರಾಯ ಏನು?

ಇಂದು ಬಿಡುಗಡೆಯಾಗಿರುವ ಪ್ರೋಮೋಗೆ ವೀಕ್ಷಕರು ಕಮೆಂಟ್ ರೂಪದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮೂರು ವಾರಗಳಿಂದ ಮನೆಯಲ್ಲಿರೋ ಸ್ಪರ್ಧಿಗಳ ಪೈಕಿ ಒಬ್ಬರು ಕ್ಯಾಪ್ಟನ್ ಆಗಬೇಕಿತ್ತು. ಒಂದಾದ ನಂತರ ಒಂದರಂತೆ ವಿಶೇಷ ಅಧಿಕಾರಗಳನ್ನು ನೀಡುವ ಮೂಲಕ ವೈಲ್ಡ್ ಕಾರ್ಡ್ ಸ್ಪರ್ಧಿಗಳನ್ನು ಕ್ಯಾಪ್ಟನ್ ಮಾಡಲಾಯಿತೆಯೇ ವಿನಃ ಟಾಸ್ಕ್‌ನಿಂದಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್‌ ಮನೆಯಲ್ಲಿ ನಾಮಿನೇಷನ್ ಜ್ವಾಲೆ: ರಕ್ಷಿತಾ -ರಾಶಿಕಾ ನಡುವೆ ಮಹಾ ಕಾಳಗ!

55
 ರಿಷಾ ಮತ್ತು ರಘು ಕ್ಯಾಪ್ಟನ್ಸಿ ಟಾಸ್ಕ್
Image Credit : Colors Kannada

ರಿಷಾ ಮತ್ತು ರಘು ಕ್ಯಾಪ್ಟನ್ಸಿ ಟಾಸ್ಕ್

ಅಂತಿಮವಾಗಿ ರಿಷಾ ಮತ್ತು ರಘು ಕ್ಯಾಪ್ಟನ್ಸಿ ಟಾಸ್ಕ್ ಆಡಿದ್ದಾರೆ. ಕತ್ತಲೆ ಮನೆಯಲ್ಲಿರುವ ತಮ್ಮ ಹೆಸರಿನ ಅಕ್ಷರಗಳನ್ನು ಹುಡುಕಿ ಸರಿಯಾಗಿ ಜೋಡಿಸುವ ಮೊದಲ ಸ್ಪರ್ಧಿ ಸೀಸನ್ 12ರ ಫಸ್ಟ್ ಕ್ಯಾಪ್ಟನ್ ಆಗಲಿದ್ದಾರೆ. ಸೂರಜ್ ಎಲ್ಲರ ಮೆಚ್ಚುಗೆ ಪಡೆದುಕೊಂಡರೂ ತಂತ್ರಗಾರಿಕೆಯಲ್ಲಿ ಎಡವಿದಂತೆ ಕಾಣಿಸುತ್ತಿದೆ. ರಿಷಾ ಮತ್ತು ರಘು ಇರ್ವರಲ್ಲಿ ಯಾರು ಕ್ಯಾಪ್ಟನ್ ಅಗ್ತಾರೆ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಇದನ್ನೂ ಓದಿ: BBK 12: ಎಲ್ಲರ ಮನಸ್ಸನ್ನ ಗೆದ್ದಬಿಟ್ಟಾರಿ ಸೂರಜ್; ಇಬ್ಬರ ಸ್ವಾರ್ಥಕ್ಕೆ ಮನೆಯಲ್ಲಿ ಮಹಾ ಕೋಲಾಹಲ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ರಿಯಾಲಿಟಿ ಶೋ
ಕಲರ್ಸ್ ಕನ್ನಡ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಅಣ್ಣಯ್ಯ ಸೀರಿಯಲ್ ಪಾರುಗೆ ರಿಯಲ್‌ನಲ್ಲಿ ಬ್ರೇಕಪ್ ಆಗೋಯ್ತಾ? ಯಾರ್ ಜೊತೆ, ಏನ್ ಕಥೆ!
Recommended image2
ಪ್ರೀತಮ್‌ನಲ್ಲಿ 'ಕಾಳಿದಾಸ'ನನ್ನು ಕಂಡ ಶಿವಣ್ಣ: ಅಪ್ಪಾಜಿನೇ ಅಂದ್ಕೊಂಡು 7 ವರ್ಷದ ಬಾಲಕನ ಕಾಲಿಗೆ ಮುತ್ತಿಟ್ಟ ಹ್ಯಾಟ್ರಿಕ್ ಹೀರೋ!
Recommended image3
37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್
Related Stories
Recommended image1
ಬಿಗ್‌ಬಾಸ್ ಮನೆಯಲ್ಲಿ ನಾಟಕೀಯ ಬೆಳವಣಿಗೆ; ಹೊಡೆದಾಟ, ಬಡಿದಾಟ; ಸ್ಪರ್ಧಿ ಆಸ್ಪತ್ರೆಗೆ ಶಿಫ್ಟ್
Recommended image2
ವಿನಯ್-ಸಂಗೀತಾಗೆ ಆಟ, ನಮ್ರತಾಗೆ ಪ್ರಾಣ ಸಂಕಟ; ಬಿಗ್‌ಬಾಸ್ ಸೀಸನ್ 10ರ ಈ ದೃಶ್ಯ ನೆನಪಿದೆಯಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved