- Home
- Entertainment
- Sandalwood
- ಚೊಚ್ಚಲ ಸೈಮಾ ಅವಾರ್ಡ್ ಗೆದ್ದ ಅಂಕಿತಾ ಅಮರ್… ಕನ್ನಡಕ್ಕೆ ಸಿಕ್ಕಳೊಬ್ಬ ಸಾಯಿ ಪಲ್ಲವಿ ಅಂತಿದ್ದಾರೆ ಜನ
ಚೊಚ್ಚಲ ಸೈಮಾ ಅವಾರ್ಡ್ ಗೆದ್ದ ಅಂಕಿತಾ ಅಮರ್… ಕನ್ನಡಕ್ಕೆ ಸಿಕ್ಕಳೊಬ್ಬ ಸಾಯಿ ಪಲ್ಲವಿ ಅಂತಿದ್ದಾರೆ ಜನ
ನಮ್ಮನೆ ಯುವರಾಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಅಂಕಿತಾ ಅಮರ್ ಇದೀಗ ಚೊಚ್ಚಲ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ನಟಿಯನ್ನು ನೋಡಿ ಜನ ಸಾಯಿ ಪಲ್ಲವಿ ಎನ್ನುತ್ತಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ನಮ್ಮನೆ ಯುವರಾಣಿ (Nammane Yuvarani) ಮೂಲಕ ಜನಪ್ರಿಯತೆ ಪಡೆದ ನಟಿ ಅಂಕಿತಾ ಅಮರ್. ಇಂದಿಗೂ ವೀಕ್ಷಕರು ಮೀರಾ ಹೆಸರನ್ನು ನೆನಪಿಟ್ಟುಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ, ಸೀರಿಯಲ್ ನಲ್ಲಿ ಅವರು ನಟಿಸಿದ್ದ ಅದ್ಭುತವಾದ ಪಾತ್ರ.
ನಮ್ಮನೆ ಯುವರಾಣಿ ಧಾರಾವಾಹಿ ಬಳಿಕ ಚಂದನವನಕ್ಕೆ ಎಂಟ್ರಿ ಕೊಟ್ಟ ಅಂಕಿತಾ ಅಮರ್ (Ankita Amar), ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ಅಂಕಿತಾ ನಟಿಸಿರುವ ಇಬ್ಬನಿ ತಬ್ಬಿದ ಇಳಿಯಲಿ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಈ ಸಿನಿಮಾಗಾಗಿ ಚೊಚ್ಚಲ ಸೈಮಾ ಅವಾರ್ಡ್ ಬಂದಿದೆ.
ರಕ್ಷಿತ್ ಶೆಟ್ಟಿ ನಿರ್ಮಾಣದ, ಚಂದ್ರಜಿತ್ ನಿರ್ದೇಶನದ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ರಿಲೀಸ್ ಆಗಿ ಭಾರಿ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಅಂಕಿತಾ ಅಮರ್ ನಾಯಕಿಯಾಗಿ ನಟಿಸಿದ್ದರು. ಇದೀಗ ಈ ವರ್ಷದ ಸೈಮಾ ಅವಾರ್ಡ್ (SIIMA Award 2025) ಕಾರ್ಯಕ್ರಮದಲ್ಲಿ ಚೊಚ್ಚಲ ಬೆಸ್ಟ್ ಡೆಬ್ಯೂಟ್ ನಾಯಕಿ ಪ್ರಶಸ್ತಿ ಗೆದ್ದಿದ್ದಾರೆ.
ಈ ಸಂಭ್ರಮದಲ್ಲಿ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅವಾರ್ಡ್ ಫಂಕ್ಷನ್ ಫೋಟೊಗಳನ್ನು ಶೇರ್ ಮಾಡಿ, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅಮ್ಮ ಧರಿಸಿದ್ದ ಸೀರೆ, ತಂಗಿ ಆರಿಸಿದ ಬಿಂದುರೆ, ಅಪ್ಪ ಕೊಡಿಸಿದ ಕಾಡಿಗೆ, ಮಾಮಿ ಮುಡಿಸಿದ ಮಲ್ಲಿಗೆ, ತಾಯಿ ಚಾಮುಂಡಿ ಕೊಟ್ಟ ಬಳೆ ಗಾಜು , ತಾತನ ನೆನಪಿಗೆ ತೊಟ್ಟ ಹಳೆ ವಾಚು, ಅನಾಹಿತಾಳ ಆಸರೆ ಮನದಲಿ, ನಿಮ್ಮ ಪ್ರೀತಿಯ ಉಡುಗೋರೆ ಕೈಯಲಿ , ದುಬೈನಲ್ಲಿ ನೀವೆಲ್ರೂ ಇದ್ರಿ ನನ್ನ ಜೊತೆಯಲ್ಲಿ ಎಂದು ಬರೆದು ಅವಾರ್ಡ್ ಹಿಡಿದಿರುವ ಫೋಟೊ ಶೇರ್ ಮಾಡಿದ್ದಾರೆ.
ಜೊತೆಗೆ ನನ್ನ ಮೇಲೆ ನಂಬಿಕೆ ಇಟ್ಟ ಹಾಗೂ ನನಗೆ ವೋಟ್ ಮಾಡಿ, ನನ್ನ ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಾ, ನಿರ್ದೇಶಕರಿಗೂ, ನಿರ್ಮಾಪಕರಿಗೂ ಥ್ಯಾಂಕ್ಯೂ ಎಂದಿದ್ದರು. ಚೊಚ್ಚಲ ಪ್ರಶಸ್ತಿ ಪಡೆದಿರುವ ಸಂಭ್ರಮದಲ್ಲಿರುವ ನಟಿಗೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.
ಇನ್ನು ತಮ್ಮ ಸಿಂಪ್ಲಿಸಿಟಿಗೆ ಜನಪ್ರಿಯತೆ ಪಡೆದಿರುವ ಸಾಯಿ ಪಲ್ಲವಿ (Sai Pallavi) ಅವರಿಗೆ ಅಂಕಿತಾ ಅಮರ್ ಅವರನ್ನು ಹೋಲಿಕೆ ಮಾಡುತ್ತಿದ್ದಾರೆ. ಅಂಕಿತಾ ಅಮರ್ ಕೂಡ ತುಂಬಾ ಸಿಂಪಲ್ ಆಗಿದ್ದು, ಅವರು ಕಾರ್ಯಕ್ರಮಗಳಿಗೆ ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂಕಿತಾ ಅತ್ಯುತ್ತಮ ಡ್ಯಾನ್ಸ್ ಕೂಡ ಹೌದು, ಎಂಎಸ್ಸಿ ಬಯೋಕೆಮೆಸ್ಟ್ರಿ ಮಾಡಿದ್ದು, ಎಲ್ಲದರಲ್ಲೂ ಸಾಯಿ ಪಲ್ಲವಿಗೆ ಹೋಲಿಕೆಯಾಗೋದರಿಂದ ಜನ ಕನ್ನಡಕ್ಕೊಬ್ಬರು ಸಾಯಿ ಪಲ್ಲವಿ ಸಿಕ್ಕಿದ್ದಾರೆ ಎನ್ನುತ್ತಿದ್ದಾರೆ.
ಇನ್ನು ಕರಿಯರ್ ಬಗ್ಗೆ ಹೇಳೊದದರೆ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಬಳಿಕ ಅಂಕಿತಾ ಮತ್ತು ಶೈನ್ ಶೆಟ್ಟಿ ಅಭಿನಯದ ಜಸ್ಟ್ ಮ್ಯಾರೀಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಇದಲ್ಲದೇ ಮೈ ಹೀರೋ ಎನ್ನುವ ಸಿನಿಮಾದಲ್ಲೂ ಅಂಕಿತಾ ನಟಿಸಿದ್ದಾರೆ. ಪೃಥ್ವಿ ಅಂಬಾರ್ ಜೊತೆಗೆ ಅಬ ಜಬ ದಬ ಸಿನಿಮಾದಲ್ಲೂ ಗಾಯಕಿಯಾಗಿ ಅಂಕಿತಾ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಉಪೇಂದ್ರ (Upendra) ಜೊತೆ ಭಾರ್ಗವ ಸಿನಿಮಾದಲ್ಲೂ ಕೂಡ ಅಂಕಿತಾ ನಾಯಕಿಯಾಗಲಿದ್ದಾರೆ.