MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಪಾರ್ಟ್ನರ್ಸ್‌ಗೆ ರಾತ್ರೋರಾತ್ರಿ ಯಾರೂ ಚೀಟ್ ಮಾಡಲ್ಲ, ಹೀಗೆ ನಿಧಾನವಾಗಿ ಪ್ರಾರಂಭವಾಗುತ್ತೆ!

ಪಾರ್ಟ್ನರ್ಸ್‌ಗೆ ರಾತ್ರೋರಾತ್ರಿ ಯಾರೂ ಚೀಟ್ ಮಾಡಲ್ಲ, ಹೀಗೆ ನಿಧಾನವಾಗಿ ಪ್ರಾರಂಭವಾಗುತ್ತೆ!

ನೀವು ನಿಮ್ಮ ಸಂಗಾತಿಯೊಂದಿಗೆ ಒಂದೇ ಕೋಣೆಯಲ್ಲಿ ಇರಬಹುದು, ಆದರೆ ಅವರ ಮನಸ್ಸು ಮತ್ತು ಮೊಬೈಲ್ ಪರದೆಯು ಬೇರೆಯವರೊಂದಿಗೆ ಇರಬಹುದು.

2 Min read
Author : Ashwini HR
Published : Aug 12 2025, 05:14 PM IST
Share this Photo Gallery
  • FB
  • TW
  • Linkdin
  • Whatsapp
17
ಆ ಹಂತವನ್ನು ತಲುಪಲು ಏನಾಯ್ತು?
Image Credit : chatgpt

ಆ ಹಂತವನ್ನು ತಲುಪಲು ಏನಾಯ್ತು?

"ಮೋಸ ಮಾಡೋದು..." ಅನ್ನೋದೆ ಒಂದು ನೆಗೆಟಿವ್ ಪದ. ಇಂದಿನ ಕಾಲದಲ್ಲಿ ಗಂಡ ಹೆಂಡತಿಗೆ ಅಥವಾ ಹುಡುಗಿ ಹುಡುಗನಿಗೆ ಮೋಸ ಮಾಡುವುದು ತುಂಬಾ ಕಾಮನ್ ಆಗ್ತಿದೆ. ಆದರೆ ಅದರ ಬಗ್ಗೆ ಗಂಭೀರ ಚರ್ಚೆಗಳು ಬಹಳ ವಿರಳ. ಯಾರಾದರೂ ಮೋಸ ಮಾಡಿದಾಗ ಮಾತ್ರ ನಾವುಗಳು "ಅವ್ರ ಜೊತೆ ಒಡನಾಟ ಅಷ್ಟಕಷ್ಟೇ" ಅಥವಾ "ನಿಮ್ಮಿಂದಲೇ ಏನೋ ತಪ್ಪಾಗಿಬೋರ್ದು" ಎಂದು ಹೇಳುತ್ತೇವೆ. ಆದರೆ ಸಂಬಂಧ ಆ ಹಂತವನ್ನು ತಲುಪಲು ಏನಾಯ್ತು ಎಂಬುದನ್ನು ಯಾರೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ.

27
ಅಷ್ಟಕ್ಕೂ ಸಂಬಂಧಗಳಲ್ಲಿ ಮೋಸ ಹೆಚ್ಚುತ್ತಿರುವುದು ಏಕೆ?
Image Credit : freepik

ಅಷ್ಟಕ್ಕೂ ಸಂಬಂಧಗಳಲ್ಲಿ ಮೋಸ ಹೆಚ್ಚುತ್ತಿರುವುದು ಏಕೆ?

ಸಂಬಂಧದಲ್ಲಿ ಇದು ಮುಖ್ಯ
ಸಂಬಂಧಗಳು ಬಹಳ ಸೂಕ್ಷ್ಮ. ಯಾವುದೇ ಸಂಬಂಧದಲ್ಲಿ ನಂಬಿಕೆ, ಪಾರದರ್ಶಕತೆ ಮತ್ತು ಭಾವನಾತ್ಮಕತೆ, ಪ್ರಾಮಾಣಿಕತೆ ಇದ್ದರೆ ಮಾತ್ರ ದೀರ್ಘಕಾಲ ಉಳಿಯುತ್ತದೆ. ಇವುಗಳಲ್ಲಿ ಯಾವುದಾದರೂ ಒಂದಕ್ಕೂ ಏಟು ಬಿದ್ದರೂ ಸಂಬಂಧವು ಒಳಗಿನಿಂದ ಟೊಳ್ಳಾಗುತ್ತದೆ.

Related Articles

Related image1
Relationship: ಹೆಂಡ್ತಿ ಗಂಡನ ಬಗ್ಗೆ ಆಸಕ್ತಿ ಕಳೆದುಕೊಳ್ಳಲು ಮುಖ್ಯ ಕಾರಣಗಳಿವು
Related image2
ಇದೇ ರೀಸನ್‌ಗೆ ಮದ್ವೆಯಾಗಿ ವರ್ಷ ಕಳಿತ್ತಿದ್ದಂತೆ ದಂಪತಿ ನಡುವೆ ಆಕರ್ಷಣೆ ಕಡಿಮೆಯಾಗೋದು
37
ಚೀಟಿಂಗ್ ಗುರ್ತಿಸೋದು ಕಷ್ಟ
Image Credit : freepik

ಚೀಟಿಂಗ್ ಗುರ್ತಿಸೋದು ಕಷ್ಟ

ತಂತ್ರಜ್ಞಾನವು ಭಾವನಾತ್ಮಕ ಅಂತರವನ್ನು ಹೆಚ್ಚಿಸಿದೆ. ಹೌದು, ನೀವು ನಿಮ್ಮ ಸಂಗಾತಿಯೊಂದಿಗೆ ಒಂದೇ ಕೋಣೆಯಲ್ಲಿ ಇರಬಹುದು, ಆದರೆ ಅವರ ಮನಸ್ಸು ಮತ್ತು ಮೊಬೈಲ್ ಪರದೆಯು ಬೇರೆಯವರೊಂದಿಗೆ ಇರಬಹುದು. ಅಂತಹ ಸಮಯದಲ್ಲಿ ಮೋಸ ಮಾಡುತ್ತಿರುವುದನ್ನು ಗುರುತಿಸುವುದು ಕಷ್ಟಕರವಾಗುತ್ತದೆ.

47
ಗಮನ ಬೇರೆಡೆ ಸೆಳೆಯಲು ಪ್ರಯತ್ನ
Image Credit : chatgpt AIO

ಗಮನ ಬೇರೆಡೆ ಸೆಳೆಯಲು ಪ್ರಯತ್ನ

ಯಾರೇ ಆಗ್ಲಿ ಮೋಸ ಮಾಡಿ ಸಿಕ್ಕಿಬಿದ್ದಾಗ ಅಥವಾ ಮೋಸ ಮಾಡುವಾಗ ಒಪ್ಪಿಕೊಳ್ಳಲ್ಲ. ಬದಲಾಗಿ "ನನಗೆ ಒತ್ತಡವಿತ್ತು", "ನನಗೆ ಗಮನ ಬೇರೆಡೆ ಸೆಳೆಯಿತು" ಅಥವಾ "ನಾನು ನಿನ್ನನ್ನು ಮಾತ್ರ ಪ್ರೀತಿಸುತ್ತೇನೆ" ಎಂಬಂತಹ ನೆಪ ಹೇಳಲು ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ಸಂಗಾತಿ ತಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳಲು ಸಹ ಸಿದ್ಧರಿರುವುದಿಲ್ಲ. ಸಮರ್ಥಿಸಿಕೊಳ್ಳುತ್ತಾರೆ. ಪ್ರಾಮಾಣಿಕವಾಗಿ ಮಾತನಾಡುವುದಿಲ್ಲ.

57
ರಾತ್ರೋರಾತ್ರಿ ಸಂಭವಿಸಲ್ಲ
Image Credit : freepik

ರಾತ್ರೋರಾತ್ರಿ ಸಂಭವಿಸಲ್ಲ

ದ್ರೋಹವು ರಾತ್ರೋರಾತ್ರಿ ಸಂಭವಿಸುವುದಿಲ್ಲ. ಅದು ನಿಧಾನವಾಗಿ ಪ್ರಾರಂಭವಾಗುತ್ತದೆ. ಅವರು ತಮ್ಮ ಹೃದಯ, ಭಾವನೆ ಮತ್ತು ಸತ್ಯಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದಾಗ...ಅದು ಆ ಸಂಬಂಧದಿಂದ ದೂರವಿರುವ 'ಆರಂಭ'. ಒಂದು ವೇಳೆ ಇಬ್ಬರ ನಡುವೆ ನಿಜವಾದ ಸಂಬಂಧವಿದ್ದರೆ ಇಬ್ಬರೂ ಅದನ್ನು ಒಟ್ಟಿಗೆ ಕಾಪಾಡಿಕೊಳ್ಳಬೇಕು. ನಂಬಿಕೆಯನ್ನು ಕಾಪಾಡಿಕೊಳ್ಳುವುದು, ಭಾವನೆಗಳಿಗೆ ಬೆಲೆ ಕೊಡುವುದು ಮತ್ತು ಪರಸ್ಪರ ಪ್ರಾಮಾಣಿಕವಾಗಿರುವುದು ಬಲವಾದ ಸಂಬಂಧದ ಅಡಿಪಾಯವಾಗಿದೆ.

67
ಅಗತ್ಯವಿದ್ದರೆ ಮಾತ್ರ ದೂರವಾಗಿ
Image Credit : freepik

ಅಗತ್ಯವಿದ್ದರೆ ಮಾತ್ರ ದೂರವಾಗಿ

ನೀವು ಇನ್ನು ಮುಂದೆ ನಿಮ್ಮ ಸಂಗಾತಿಯೊಂದಿಗೆ ಬದುಕಲು ಬಯಸುವುದಿಲ್ಲ ಅಥವಾ ಈ ಸಂಬಂಧವು ನಿಮಗೆ ಸಂತೋಷವನ್ನು ನೀಡುವುದಿಲ್ಲ ಎಂದು ಭಾವಿಸಿದರೆ ಮುಕ್ತವಾಗಿ ಮಾತನಾಡಬಹುದು. ಅಗತ್ಯವಿದ್ದರೆ ಮಾತ್ರ ನೀವು ಬೇರ್ಪಡಬಹುದು. ಆದರೆ ಯಾರೊಬ್ಬರ ನಂಬಿಕೆಯನ್ನು ಮುರಿಯುವುದು, ಭಾವನೆಗಳೊಂದಿಗೆ ಆಟವಾಡುವುದು ಮತ್ತು ಗಡಿಗಳನ್ನು ದಾಟುವುದು ಯಾವುದೇ ಸಂದರ್ಭದಲ್ಲೂ ಸರಿಯಲ್ಲ.

77
ನೀವೇ ನಿರ್ಧರಿಸಿ
Image Credit : social media

ನೀವೇ ನಿರ್ಧರಿಸಿ

ನಿಮ್ಮ ಸಂಬಂಧವು ಬ್ರೇಕಪ್ ಹಂತದಲ್ಲಿದ್ದರೆ ಕೂತು ಚರ್ಚಿಸಬಹುದು. ಸಂಬಂಧವನ್ನು ಉಳಿಸಿಕೊಳ್ಳಲು ಪ್ರಾಮಾಣಿಕತೆಯಿಂದ ನಡೆದುಕೊಳ್ಳಿ. ನೀವು ಯಾವ ದಿಕ್ಕಿನಲ್ಲಿ ಹೋಗಬೇಕೆಂದು ನೀವೇ ನಿರ್ಧರಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಸಂಬಂಧಗಳು
ಜೀವನಶೈಲಿ

Latest Videos
Recommended Stories
Recommended image1
Relationship Cheating: ಹಳೆಯ ಅಫೇರ್, ಅಬಾರ್ಷನ್ ಸತ್ಯ ಬಾಯ್ಬಿಟ್ಟಿದ್ದ ಗಂಡ ಅದಕ್ಕೂ ಮಿಗಿಲಾದ ಡೇಂಜರಸ್ ಸತ್ಯ ಮುಚ್ಚಿಟ್ಟಿದ್ದ!
Recommended image2
ವಿಜಯ್​ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್​ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್​ ಹೇಳಿದ್ರು? ವಿಡಿಯೋ ವೈರಲ್​
Recommended image3
ಬೆಡ್‌ರೂಮ್‌ನಲ್ಲಿ ನಾಚಿಕೆ ಹೋಗುವ ಕೆಲಸ ಮಾಡಿದ ಪತ್ನಿ; ಕಣ್ಣಾರೆ ಕಂಡು ಪ್ರಜ್ಞೆ ತಪ್ಪಿದ ಗಂಡ! Viral Video
Related Stories
Recommended image1
Relationship: ಹೆಂಡ್ತಿ ಗಂಡನ ಬಗ್ಗೆ ಆಸಕ್ತಿ ಕಳೆದುಕೊಳ್ಳಲು ಮುಖ್ಯ ಕಾರಣಗಳಿವು
Recommended image2
ಇದೇ ರೀಸನ್‌ಗೆ ಮದ್ವೆಯಾಗಿ ವರ್ಷ ಕಳಿತ್ತಿದ್ದಂತೆ ದಂಪತಿ ನಡುವೆ ಆಕರ್ಷಣೆ ಕಡಿಮೆಯಾಗೋದು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved