ಸೆಕ್ಸ್ ಲೈಫ್ ಸಖತ್ತಾಗಿರಲು ಪಾಲಿಸಿ ಈ '3S' ಸೂತ್ರ, ದುಶ್ಚಟದಿಂದ ದೂರವಾಗಿ
ಪುರುಷರು ತಮ್ಮ ಲೈಂಗಿಕ ಯೋಗಕ್ಷೇಮದ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸುತ್ತಾರೆ. ಆದರೆ ಅವರ ಕೆಲವು ಕೊಳಕು ಅಭ್ಯಾಸಗಳಿಂದಾಗಿ, ಲೈಂಗಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿಯೇ ಅನೇಕರ ಜೀವನ ಹಾಳಾಗುತ್ತೆ. ಇದು ಹಾಳಾಗದೇ ಇರಬೇಕು ಅಂದ್ರೆ ನೀವು '3S' ಸೂತ್ರವನ್ನು ಅನುಸರಿಸಬೇಕು. ಲೈಂಗಿಕ ಜೀವನದ '3S' ಸೂತ್ರವನ್ನು ನಾವು ಇಲ್ಲಿ ತಿಳಿಸುತ್ತೇವೆ. '3S' ಸೂತ್ರವನ್ನು ಪುರುಷರು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಎಂದು ಲೈಂಗಿಕ ತಜ್ಞರು ಹೇಳುತ್ತಾರೆ. ಹಾಗಿದ್ರೆ ಮಾತ್ರ ಸೆಕ್ಸ್ ಲೈಫ್ ಎಂಜಾಯ್ ಮಾಡಲು ಸಾಧ್ಯವಾಗುತ್ತೆ.
3S ಸೂತ್ರ ಎಂದರೇನು?
ಈಗ ನಾವು '3S' ಸೂತ್ರದ ಬಗ್ಗೆ ತಿಳಿಯೋಣ. ಅಷ್ಟಕ್ಕೂ, ಇದು ಏನು. ಈ ಬಗ್ಗೆ ತುಂಬಾ ಯೋಚ್ನೆ ಮಾಡ್ಬೇಡಿ. ನಾವೇನು ಗಣಿತದ ಸೂತ್ರದ ಬಗ್ಗೆ ಹೇಳ್ತಿಲ್ಲ. ಬದಲಾಗಿ, ಲೈಂಗಿಕ ಜೀವನದ (sex life) ದೌರ್ಬಲ್ಯಕ್ಕೆ ಕಾರಣವಾಗುವ ಮೂರು ವಿಷಯಗಳು ಇಲ್ಲಿವೆ. ಈ '3S' ಪುರುಷರ ಜೀವನದಲ್ಲಿ ಇತ್ತೀಚಿನ ದಿನಗಳಲ್ಲಿ ಏರುತ್ತಲೇ ಇದೆ. ಇದರಿಂದಾಗಿಯೇ ಸೆಕ್ಸ್ ಲೈಫ್ಗೆ ತಡೆ ಉಂಟಾಗುತ್ತೆ.
ಜೀವನವನ್ನು ಉತ್ತಮಗೊಳಿಸಲು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಲೈಂಗಿಕ ನಿಯಮಗಳ '3S' ಸೂತ್ರದ ಬಗ್ಗೆ ನಾವು ಇಲ್ಲಿ ತಿಳಿಸುತ್ತೇವೆ ಕೇಳಿ. ಇವುಗಳನ್ನು ನೀವು ಅರ್ಥ ಮಾಡಿಕೊಂಡರೆ ಹಾಸಿಗೆಯಲ್ಲಿ ಸಂಗಾತಿಯೊಂದಿಗೆ ಉತ್ತಮ ಕ್ಷಣವನ್ನು ಕಳೆಯಲು ಸಾಧ್ಯವಾಗುತ್ತದೆ.
ಸೆಕ್ಸ್ ಲೈಫ್ ನ ಶತ್ರು '3S'
ದತ್ತಾಂಶದ ಪ್ರಕಾರ, ವಿಶ್ವದಾದ್ಯಂತ ಸಂಭವಿಸುವ ಎಲ್ಲಾ ರೋಗಗಳಲ್ಲಿ 8.9% ಈ ವಸ್ತುಗಳ ಸೇವನೆಯಿಂದ ಮಾತ್ರ ಉಂಟಾಗುತ್ತವೆ. 4.1% ತಂಬಾಕು ಮತ್ತು 4.0% ಆಲ್ಕೋಹಾಲ್ (alcohol) ಅನ್ನು ಒಳಗೊಂಡಿದೆ. ಜೊತೆಗೆ ಒತ್ತಡ ಕೂಡ ಕಾರಣವಾಗಿದೆ.
ಸಿಗರೇಟು ಮತ್ತು ಲೈಂಗಿಕ ಜೀವನ
ಸಿಗರೇಟುಗಳು ಲೈಂಗಿಕ ಜೀವನವನ್ನು ಹೊಗೆಯಷ್ಟೇ ದುರ್ಬಲಗೊಳಿಸುತ್ತವೆ. ಲೈಂಗಿಕತೆಯು ಪುರುಷರಿಗೆ ತಿಳಿಯದ ರೀತಿಯಲ್ಲಿ ಕುಗ್ಗುತ್ತಲೇ ಹೋಗುತ್ತದೆ. ಅಲ್ಲದೇ ಇದು ದೇಹದಿಂದ ಶಕ್ತಿಯನ್ನು ಕಣ್ಮರೆಯಾಗುವಂತೆ ಮಾಡುತ್ತದೆ. ಅದಕ್ಕಾಗಿಯೇ ಲೈಂಗಿಕ ತಜ್ಞರು (sex expert) ಸಿಗರೇಟುಗಳಿಂದ ದೂರವಿರಲು ಸಲಹೆ ನೀಡುತ್ತಾರೆ.
ಸಿಗರೇಟುಗಳು ಮತ್ತು ಲೈಂಗಿಕತೆಯ ಬಗ್ಗೆ ಸಂಶೋಧನೆ
ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ಸಂಶೋಧನಾ ವರದಿಯಲ್ಲಿ ಇದು ಸ್ಪಷ್ಟವಾಗಿದೆ. ಪ್ರೊಫೆಸರ್ ಸೋಫಿಯಾ ಚೆನ್ ನೇತೃತ್ವದಲ್ಲಿ ನಡೆದ ಮೂರು ವರ್ಷಗಳ ಅಧ್ಯಯನವು ಸಿಗರೇಟಿನ ಚಟವನ್ನು ತೊಡೆದುಹಾಕಿದ ಆರು ತಿಂಗಳೊಳಗೆ ಲೈಂಗಿಕ ಸಮಸ್ಯೆಗಳು (sex problem) ಸಹ ವೇಗವಾಗಿ ಸುಧಾರಿಸುತ್ತಿವೆ ಎಂದು ತಿಳಿದು ಬಂದಿದೆ. ವಿಶೇಷವಾಗಿ ಲೈಂಗಿಕ ಪ್ರಚೋದನೆಯ ಸಮಸ್ಯೆಯಿಂದ ನರಳುತ್ತಿದ್ದ ಪುರುಷರು ಸ್ಮೋಕಿಂಗ್ ತ್ಯಜಿಸಿದ ಕೂಡಲೇ ಆರೋಗ್ಯವಂತರಾದರು.
ಸಾರಾಯಿ ಮತ್ತು ಲೈಂಗಿಕ ಜೀವನ
ಮದ್ಯಪಾನವು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಅನೇಕ ಜನರು ಕೇಳಿದ್ದಾರೆ. ಆದರೆ ಈ ಬಗ್ಗೆ, ಡಾ. ಅರ್ಜುನ್ ರಾಜ್, ಆಲ್ಕೋಹಾಲ್ ಲೈಂಗಿಕ ಜೀವನವನ್ನು ಹಾಳುಮಾಡಲು ಕೆಲಸ ಮಾಡುತ್ತದೆ ಎಂದು ಹೇಳುತ್ತಾರೆ. ಆರಂಭದಲ್ಲಿ ಇದು ಪರಿಣಾಮವನ್ನು ತೋರಿಸುವುದಿಲ್ಲವಾದರೂ, ನಂತರ, ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ, ಲೈಂಗಿಕ ಶಕ್ತಿಗಾಗಿ ಆಲ್ಕೋಹಾಲ್ ಅನ್ನು ತಪ್ಪಿಸಬೇಕು.
ಪ್ರತಿದಿನ ಆಲ್ಕೋಹಾಲ್ ಕುಡಿಯುವುದರಿಂದ ದೇಹದ ಅನೇಕ ಪ್ರಮುಖ ಭಾಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆಲ್ಕೋಹಾಲ್ ನಿಂದಾಗಿ, ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಕಡಿಮೆ ಟೆಸ್ಟೋಸ್ಟೆರಾನ್ (Low testosterone)ಮಟ್ಟ ಅಂದ್ರೆ ನಿಮ್ಮ ಲೈಂಗಿಕ ಜೀವನವು ವೀಕ್ ಆಗ್ತಿದೆ ಎಂದರ್ಥ. ಆಲ್ಕೋಹಾಲ್ ವೃಷಣಗಳ ಜೀವಕೋಶಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಇದರಿಂದಾಗಿ ಇರೆಕ್ಟಿಫೈಲ್ ಡಿಸ್ ಫಂಕ್ಷನ್ ಸಮಸ್ಯೆ ಉಂಟಾಗಬಹುದು.
ಸ್ಟ್ರೆಸ್/ ಒತ್ತಡ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತೆ
ಉತ್ತಮ ಲೈಂಗಿಕ ಜೀವನಕ್ಕೆ ದೈಹಿಕ ಆರೋಗ್ಯ ಎಷ್ಟು ಅವಶ್ಯಕವೋ, ನೀವು ಮಾನಸಿಕವಾಗಿ ಹೆಚ್ಚು ಆರೋಗ್ಯಕರವಾಗಿರಬೇಕು. ನೀವು ಮಾನಸಿಕವಾಗಿ ಅಸ್ವಸ್ಥರಾಗಿದ್ದರೆ, ಅದು ನಿಮ್ಮ ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಒತ್ತಡವು ಮನಸ್ಥಿತಿ ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುತ್ತೆ.
ಮೂಡ್ ಸ್ವಿಂಗ್ಸ್ (Mood swings)
ಹಾರ್ಮೋನುಗಳ ಅಸಮತೋಲನ (Hormones Disbalance)
ಒಂಟಿತನದ ಭಾವನೆ (Feeling Lonely)
ಇದೆಲ್ಲಕ್ಕೂ ಒತ್ತಡವೇ ಕಾರಣವಿರಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಲೈಂಗಿಕ ಜೀವನವನ್ನು ಎಂಜಾಯ್ ಮಾಡಲು ಸಾಧ್ಯವಿಲ್ಲ. ಈ ಸಮಯದಲ್ಲಿ ನೀವು ಏಕಾಂಗಿಯಾಗಿರಲು ಇಷ್ಟಪಡುತ್ತೀರಿ. ಆದ್ದರಿಂದ ನಿಮ್ಮನ್ನು ಒತ್ತಡದಿಂದ ದೂರವಿರಿಸಲು ಪ್ರಯತ್ನಿಸಿ.