- Home
- Life
- Relationship
- "ಸ್ನೇಹಿತೆಯರು ಗೆಳೆಯರ ಬಗ್ಗೇನೇ ಮಾತಾಡ್ತಾರೆ, ನಾನೇನ್ ಮಾಡ್ಲಿ": ಪ್ರೇಮಾನಂದ ಮಹಾರಾಜ್ ಕೊಟ್ಟ ಉತ್ತರ ವೈರಲ್
"ಸ್ನೇಹಿತೆಯರು ಗೆಳೆಯರ ಬಗ್ಗೇನೇ ಮಾತಾಡ್ತಾರೆ, ನಾನೇನ್ ಮಾಡ್ಲಿ": ಪ್ರೇಮಾನಂದ ಮಹಾರಾಜ್ ಕೊಟ್ಟ ಉತ್ತರ ವೈರಲ್
ಈ ಪ್ರಶ್ನೆಗೆ ಸಂತರು ನೀಡಿದ ಉತ್ತರವು ಆ ಹುಡುಗಿಗೆ ಮಾತ್ರವಲ್ಲದೆ, ಎಲ್ಲಾ ಯುವಕರಿಗೂ ತುಂಬಾ ಉಪಯುಕ್ತವಾಗಿದೆ. ಬನ್ನಿ, ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ವೃದ್ಧರು ಮಾತ್ರವಲ್ಲದೆ, ಯುವಕರು ಸಹ ತಮ್ಮ ಸಮಸ್ಯೆಗಳೊಂದಿಗೆ ವೃಂದಾವನದ ಸಂತ ಪ್ರೇಮಾನಂದ ಮಹಾರಾಜರ ಬಳಿಗೆ ಬರುತ್ತಾರೆ. ಇಲ್ಲಿ ಅವರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವುದಲ್ಲದೆ, ತಮ್ಮ ಜೀವನ ಸುಧಾರಣೆಗೆ ಮಹಾರಾಜರಿಂದ ಮಾರ್ಗದರ್ಶನವನ್ನೂ ಪಡೆಯುತ್ತಾರೆ. ಹೀಗೆ ಇತ್ತೀಚೆಗೆ ಒರ್ವ ಯುವತಿ ಸಂತರ ಬಳಿ ತೆರಳಿದ್ದಾಳೆ.
ಅಲ್ಲಿ ಆಕೆ ಕೇಳಿದ ಪ್ರಶ್ನೆ ಹೀಗಿತ್ತು "ತನ್ನ ಕಾಲೇಜಿನಲ್ಲಿ ಹುಡುಗಿಯರು ದಿನವಿಡೀ ಹುಡುಗರು ಮತ್ತು ಅವರ ಗೆಳೆಯರ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಇದೇ ಕಾರಣಕ್ಕಾಗಿ ಆಕೆ ತನ್ನ ಸ್ನೇಹಿತರೊಂದಿಗೆ ಮಾತನಾಡಲು ಇಷ್ಟಪಡಲ್ಲ ಎಂದು ಹೇಳಿದಳು. ಅಂದಹಾಗೆ ಈ ಪ್ರಶ್ನೆಗೆ ಸಂತರು ನೀಡಿದ ಉತ್ತರವು ಆ ಹುಡುಗಿಗೆ ಮಾತ್ರವಲ್ಲದೆ, ಎಲ್ಲಾ ಯುವಕರಿಗೂ ತುಂಬಾ ಉಪಯುಕ್ತವಾಗಿದೆ. ಬನ್ನಿ, ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ವಿಡಿಯೋದಲ್ಲಿ, ಒಬ್ಬ ಹುಡುಗಿ ಸಂತ ಪ್ರೇಮಾನಂದ ಮಹಾರಾಜ್‌ಗೆ "ತಾನು ಕೆಲವು ದಿನಗಳ ಹಿಂದೆಯಷ್ಟೇ ಕಾಲೇಜಿಗೆ ಹೋಗಲು ಪ್ರಾರಂಭಿಸಿದ್ದೇನೆ. ಇಲ್ಲಿ ತನ್ನ ಸಹಪಾಠಿಗಳೊಂದಿಗೆ ಮಾತನಾಡುವಾಗಲೆಲ್ಲಾ ಅವರು ಯಾವಾಗಲೂ ಹುಡುಗರು ಮತ್ತು ಅವರ ಗೆಳೆಯರ ಬಗ್ಗೆ ಮಾತನಾಡುತ್ತಾರೆ. ಈ ಕಾರಣದಿಂದಾಗಿ ನಾನು ಅವರೊಂದಿಗೆ ಮಾತನಾಡಲು ಇಷ್ಟಪಡುವುದಿಲ್ಲ. ಒಂದು ವೇಳೆ ತನ್ನ ಸಹಪಾಠಿಗಳೊಂದಿಗೆ ಮಾತನಾಡದಿದ್ದರೆ ಜನರು ತನ್ನನ್ನು ದುರಹಂಕಾರಿ ಎಂದು ಕರೆಯುತ್ತಾರೆ" ಎಂದು ಆ ಹುಡುಗಿ ಹೇಳುತ್ತಾಳೆ.
ಈ ಪ್ರಶ್ನೆಗೆ ಉತ್ತರಿಸಿದ ಸಂತ ಪ್ರೇಮಾನಂದ ಮಹಾರಾಜ್ , ಜನರು ನಿಮ್ಮನ್ನು ಮೂರ್ಖ, ದುರಹಂಕಾರಿ ಅಥವಾ ಅಡಗೂಲಜ್ಜಿ ಎಂದು ಕರೆದರೂ ಪರವಾಗಿಲ್ಲ, ನಿಮ್ಮೊಂದಿಗೆ ಕೊಳಕಾಗಿ ಮಾತನಾಡುವ, ನಿಮ್ಮಲ್ಲಿ ತಪ್ಪು ಮೌಲ್ಯಗಳನ್ನು ತುಂಬುವ ಅಥವಾ ನಿಮ್ಮನ್ನು ತಪ್ಪು ದಾರಿಗೆ ಕೊಂಡೊಯ್ಯಲು ಪ್ರಯತ್ನಿಸುವವರೊಂದಿಗೆ ನೀವು ಮಾತನಾಡಬಾರದು. ಸ್ನೇಹಿತ ಎಂದರೆ ನಿಮ್ಮನ್ನು ಸರಿಯಾದ ಹಾದಿಯಲ್ಲಿ ಕರೆದೊಯ್ಯುವವನು ಎಂದು ಸಂತರು ಹುಡುಗಿಗೆ ವಿವರಿಸುತ್ತಾರೆ. ನೀವು ಅಧ್ಯಯನ ಮಾಡುತ್ತಿರುವಾಗ ಮತ್ತು ನಿಮ್ಮ ಜೀವನದಲ್ಲಿ ಯಾವುದೇ ಸ್ಥಾನ ಅಥವಾ ಪ್ರಗತಿಯನ್ನು ತಲುಪದಿರುವವರೆಗೆ ಮನರಂಜನೆಯಲ್ಲಿ ತೊಡಗಿಸಿಕೊಳ್ಳಬೇಡಿ.
ತಪ್ಪು ಸಂಬಂಧವು ನಿಮ್ಮ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದರೆ ನೀವು ಅಧ್ಯಯನದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ಹೆತ್ತವರ ಆದೇಶಗಳನ್ನು ಪಾಲಿಸಬೇಕೆಂದು ನಿಮಗೆ ಅನಿಸುವುದಿಲ್ಲ ಎಂದು ಸಂತರು ಹೇಳುತ್ತಾರೆ. ಕ್ರಮೇಣ ನೀವು ಕೆಟ್ಟ ನಡವಳಿಕೆ ಮತ್ತು ತಪ್ಪು ಅಭ್ಯಾಸಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಪ್ರೇಮಾನಂದ ಮಹಾರಾಜ್ ವಿದ್ಯಾರ್ಥಿಗೆ ಹೇಳುವುದೇನೆಂದರೆ, ನೀವು ಗೆಳೆಯನನ್ನು ಮಾಡಿಕೊಂಡಾಗ ಅಥವಾ ತಪ್ಪು ಆಲೋಚನೆಗಳಿಗೆ ಬಿದ್ದಾಗ , ಪರಸ್ಪರರ ಆಲೋಚನೆಗಳ ಪ್ರಭಾವವು ನಿಮ್ಮ ಆಲೋಚನೆಯ ಮೇಲೆ ಪರಿಣಾಮ ಬೀರುತ್ತದೆ. ಅದು ಕಾಮದಿಂದಾಗಲಿ ಅಥವಾ ಲೈಂಗಿಕತೆಯ ಒತ್ತಡದಿಂದಾಗಲಿ. ನಂತರ ಈ ಒತ್ತಡವು ಕ್ರಮೇಣ ನಿಮ್ಮನ್ನು ವ್ಯಸನಿಯನ್ನಾಗಿ ಮಾಡುತ್ತದೆ ಮತ್ತು ನಂತರ ವ್ಯಸನವು ನಿಮ್ಮನ್ನು ಅವನತಿಯತ್ತ ಕೊಂಡೊಯ್ಯುತ್ತದೆ. ಆದ್ದರಿಂದ ಇದನ್ನು ನೆನಪಿನಲ್ಲಿಡಿ.