Rashmika Mandanna ಫಿಟ್ನೆಸ್ ರಹಸ್ಯ ಇದೇನಾ? ಒಂದು ದಿನದಲ್ಲಿ ಏನೆಲ್ಲಾ ತಿಂತಾರೆ ನೋಡಿ...
Rashmika Mandanna fitness: ತಮ್ಮ ಜೀವನಶೈಲಿಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ, ನಾನು ಈಗಷ್ಟೇ ಸಸ್ಯಾಹಾರಿಯಾಗಿದ್ದೇನೆ ಎಂದು ರಿವೀಲ್ ಮಾಡಿದ್ದಾರೆ.

ಸಂದರ್ಶನದಲ್ಲಿ ರಿವೀಲ್
Rashmika Mandanna Morning Routine: ನಟಿ ರಶ್ಮಿಕಾ ಮಂದಣ್ಣ ಸಸ್ಯಾಹಾರಿ ಆಹಾರವನ್ನು ಇಷ್ಟಪಡ್ತಾರೆ ಮತ್ತು ಒಂದು ಲೀಟರ್ ನೀರಿನಿಂದ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ ಎಂದು ನಿಮಗೆ ತಿಳಿದಿದೆಯೇ?. ಹೌದು. ಇದರ ಜೊತೆಗೆ ಅವರು ಆಪಲ್ ಸೈಡರ್ ವಿನೆಗರ್ ಅನ್ನು ಸಹ ತೆಗೆದುಕೊಳ್ತಾರೆ. ಇದು ಅವರ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಂದರ್ಶನವೊಂದರಲ್ಲಿ, ರಶ್ಮಿಕಾ ಮಂದಣ್ಣ ತಮ್ಮ ದೈನಂದಿನ ಆಹಾರಕ್ರಮ, ವ್ಯಾಯಾಮದ ದಿನಚರಿ ಮತ್ತು ಸೌಂದರ್ಯದ ದಿನಚರಿಯನ್ನು ಸಹ ರಿವೀಲ್ ಮಾಡಿದ್ದಾರೆ.
ಹೀಗಿದೆ ನೋಡಿ ರಶ್ಮಿಕಾ ಮಂದಣ್ಣ ಬೆಳಗಿನ ದಿನಚರಿ
ತಮ್ಮ ಬೆಳಗಿನ ಜೀವನಶೈಲಿಯ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ, "ನಾನು ಎದ್ದ ತಕ್ಷಣ ಬಹಳಷ್ಟು ನೀರು ಕುಡಿಯುತ್ತೇನೆ. ಬೆಳಗ್ಗೆ ಒಂದು ಲೀಟರ್ ನೀರು ಕುಡಿಯುತ್ತೇನೆ. ಆಹಾರ ತಜ್ಞರು ನನಗೆ ಆಪಲ್ ಸೈಡರ್ ವಿನೆಗರ್ ನೀಡಿದರು. ಅದನ್ನು ನಾನು ಬೆಳಗ್ಗೆ ನೀರು ಕುಡಿದ ನಂತರ ತೆಗೆದುಕೊಳ್ಳುತ್ತೇನೆ. ನಾನು ಈಗಷ್ಟೇ ಸಸ್ಯಾಹಾರಿಯಾಗಿದ್ದೇನೆ, ಆದರೆ ನಾನು ನನ್ನ ವ್ಯಾಯಾಮದ ನಂತರ ಮೊಟ್ಟೆಗಳನ್ನು ತಿನ್ನುತ್ತೇನೆ" ಎಂದು ತಿಳಿಸಿದ್ದಾರೆ.
ರಶ್ಮಿಕಾ ಒಂದು ದಿನದಲ್ಲಿ ಏನೆಲ್ಲಾ ತಿಂತಾರೆ?
ತಮ್ಮ ದೈನಂದಿನ ಆಹಾರದ ಬಗ್ಗೆಯೂ ಮಾತನಾಡಿರುವ ರಶ್ಮಿಕಾ, ನೆಚ್ಚಿನ ಉಪಹಾರ ಆವಕಾಡೊ ಟೋಸ್ಟ್ ಎಂದು ರಿವೀಲ್ ಮಾಡಿದ್ದಾರೆ. ಆದರೆ ಆಕೆಯ ಆಹಾರ ತಜ್ಞರು ಅದನ್ನು ತಿನ್ನಲು ಬಿಡುವುದಿಲ್ಲ. ಮಧ್ಯಾಹ್ನದ ಊಟಕ್ಕೆ ಹೆಚ್ಚಾಗಿ ದಕ್ಷಿಣ ಭಾರತೀಯ ಆಹಾರವನ್ನೇ ಇಷ್ಟಪಡ್ತಾರೆ. ಆದರೆ ಹೆಚ್ಚು ಅನ್ನವನ್ನು ತಿನ್ನುವುದಿಲ್ಲ. ಭೋಜನಕ್ಕೆ ಲಘು ಊಟ, ಸ್ನೇಹಿತರೊಂದಿಗೆ ಹೊರಗೆ ಹೋದರೆ ಮಾತ್ರ ನೆಮ್ಮದಿಯಾಗಿ ಊಟವನ್ನು ತಿಂತಾರೆ.
ವ್ಯಾಯಾಮ ದಿನಚರಿ ಹಂಚಿಕೊಂಡ ರಶ್ಮಿಕಾ
ಪ್ರತಿದಿನ ಸಿಹಿತಿಂಡಿಗಳನ್ನು ತಿನ್ನಲು ಹಂಬಲಿಸುತ್ತೇನೆ ಎಂದು ಹೇಳಿರುವ ರಶ್ಮಿಕಾ ಟೊಮೆಟೊ, ಆಲೂಗಡ್ಡೆ, ಸೌತೆಕಾಯಿ ಮತ್ತು ಬೆಲ್ ಪೆಪ್ಪರ್‌ನಂತಹ ಕೆಲವು ತರಕಾರಿಗಳಿಂದ ತನಗೆ ಅಲರ್ಜಿ ಇದೆ ಎಂದು ವಿವರಿಸಿದ್ದಾರೆ. ಸಿಹಿ ಆಲೂಗಡ್ಡೆ ಮಾತ್ರ ತುಂಬಾ ಇಷ್ಟವಂತೆ.
ಚರ್ಮದ ಆರೈಕೆ
ಹಗಲಿನಲ್ಲಿ ಯಾವಾಗ ವರ್ಕೌಟ್ ಮಾಡುತ್ತೀರಿ ಎಂದು ಕೇಳಿದಾಗ, ರಶ್ಮಿಕಾ ತನ್ನ ಶೂಟಿಂಗ್ ವೇಳಾಪಟ್ಟಿಯಿಂದಾಗಿ ಸಂಜೆ ವರ್ಕೌಟ್ ಮಾಡಲು ಇಷ್ಟಪಡುವುದಾಗಿ ಹೇಳಿದರು. ಅವರು ಪ್ರತಿದಿನ ವ್ಯಾಯಾಮ ಮಾಡ್ತಾರೆ. ಚರ್ಮದ ಆರೈಕೆಯ ಬಗ್ಗೆ ಹೇಳುವುದಾದರೆ, ಪ್ರತಿದಿನ ಬೆಳಗ್ಗೆ ಹೊರಗೆ ಹೋಗುವ ಮೊದಲು ಮುಖ ತೊಳೆದು ಮೊಯಿಶ್ಚರೈಸರ್ ಹಚ್ಚುತ್ತಾರೆ ಮತ್ತು ಯಾವಾಗಲೂ ಸನ್‌ಸ್ಕ್ರೀನ್ ಬಳಸುತ್ತಾರೆ.