Bottle Cleaning: ಅದೆಷ್ಟೇ ಕೊಳಕಾದ್ರೂ ಬಾಟಲಿ ಫುಲ್ ಕ್ಲೀನ್ ಆಗುತ್ತೆ, ಒಂಚೂರು ವಾಸನೆ ಬರಲ್ಲ
How to Clean Plastic Bottles: ನಿಮ್ಮ ಬಾಟಲಿಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅದರಲ್ಲಿ ಕೊಳಕು, ಬ್ಯಾಕ್ಟೀರಿಯಾ, ವಾಸನೆ ಮತ್ತು ಹಳದಿ ಲೇಪನ ಸಂಗ್ರಹವಾಗಬಹುದು. ಇದು ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ.

ಆರೋಗ್ಯಕ್ಕೆ ಹಾನಿ
ಗುಣಮಟ್ಟದ ಪ್ಲಾಸ್ಟಿಕ್ ಬಾಟಲ್ಸ್ ಬಳಕೆ ಆರೋಗ್ಯಕ್ಕೆ ಹೆಚ್ಚು ಹಾನಿಯನ್ನುಂಟು ಮಾಡಲ್ಲ. ಹಗುರವಾಗಿ ಇರುತ್ತೆ. ಹಾಗಾಗಿ ಬಹುತೇಕರ ಮನೆಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಅಥವಾ ಕಚೇರಿಗೆ/ಅಂಗಡಿಗೆ ತೆರಳುವ ತಮ್ಮ ಕುಟುಂಬದ ಸದಸ್ಯರಿಗೆ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ತುಂಬಿಸಿ ಕಳುಹಿಸುವುದು ಸಾಮಾನ್ಯ. ಆದರೆ ನಿಮ್ಮ ಬಾಟಲಿಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅದರಲ್ಲಿ ಕೊಳಕು, ಬ್ಯಾಕ್ಟೀರಿಯಾ, ವಾಸನೆ ಮತ್ತು ಹಳದಿ ಲೇಪನ ಸಂಗ್ರಹವಾಗಬಹುದು. ಇದು ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ.
ವಾಸನೆ ಮತ್ತು ಕೊಳೆ ಇರಲ್ಲ
ಆದ್ದರಿಂದ ಮನೆಯಲ್ಲಿ ಬಾಟಲಿಯನ್ನು ಸುಲಭವಾಗಿ ಸ್ವಚ್ಛಗೊಳಿಸುವುದು ಹೇಗೆ? ಎಂಬುದರ ಕುರಿತು ನೀವು ಈ ಟಿಪ್ಸ್ ಫಾಲೋ ಮಾಡಬಹುದು. ಇದು ನಿಮ್ಮ ಬಾಟಲಿಯನ್ನ ಕ್ಲೀನ್ ಮಾಡುವುದು ಮಾತ್ರವಲ್ಲ, ಹೊಸದರಂತೆ ಹೊಳೆಯುವಂತೆ ಮಾಡುತ್ತದೆ. ಹಾಗೆಯೇ ಯಾವುದೇ ವಾಸನೆ ಮತ್ತು ಕೊಳೆಯನ್ನು ಸಹ ತೆಗೆದುಹಾಕುತ್ತದೆ.
ಮೊದಲು ಬ್ರಷ್ ಮಾಡಿ
ಮೊದಲು ಬ್ರಷ್ ಸಹಾಯದಿಂದ ಬಾಟಲಿಯ ಒಳಭಾಗವನ್ನು ಸ್ವಚ್ಛಗೊಳಿಸಿ. ಹೀಗೆ ಸ್ವಚ್ಛಗೊಳಿಸಲು ಸಾಫ್ಟ್ ಡಿಟರ್ಜೆಂಟ್ ಅಥವಾ ಸೋಪಿನ ಸಹಾಯದಿಂದ ಫೋಮ್ ಮಾಡಿ. ನಂತರ ಬ್ರಷ್ ನಿಂದ ಒಳಭಾಗವನ್ನು ಸ್ವಚ್ಛಗೊಳಿಸಿ.
ಬಾಟಲಿ ಸ್ವಚ್ಛ, ವಾಸನೆಯೂ ಇರಲ್ಲ
ಹಾಗೆಯೇ ನಿಮ್ಮ ಬಾಟಲಿಯನ್ನ ಹೊಸದರಂತೆ ಹೊಳೆಯುವಂತೆ ಮಾಡಲು ನೀವು ಉಪ್ಪು ಮತ್ತು ನಿಂಬೆಹಣ್ಣನ್ನು ಸಹ ಬಳಸಬಹುದು. ಬಾಟಲಿಗೆ 1-2 ಚಮಚ ಉಪ್ಪು ಸೇರಿಸಿ, ನಂತರ ಅರ್ಧ ನಿಂಬೆಹಣ್ಣನ್ನು ಹಿಂಡಿ, ಉಗುರು ಬೆಚ್ಚಗಿನ ನೀರನ್ನು ಸೇರಿಸಿ ಮತ್ತು ಅಲ್ಲಾಡಿಸಿ. ಇದು ಬಾಟಲಿಯನ್ನು ಸ್ವಚ್ಛಗೊಳಿಸುವುದಲ್ಲದೆ ಯಾವುದೇ ಬ್ಯಾಕ್ಟೀರಿಯಾ ಮತ್ತು ವಾಸನೆಯನ್ನು ತೆಗೆದುಹಾಕುತ್ತದೆ.
ಹೀಗೂ ಮಾಡಬಹುದು
ಬಾಟಲಿಯನ್ನು ಸ್ವಚ್ಛಗೊಳಿಸಲು 4 ಚಮಚ ವಿನೆಗರ್ ಮತ್ತು 1 ಚಮಚ ಅಡುಗೆ ಸೋಡಾವನ್ನು ಮಿಶ್ರಣ ಮಾಡಿ. ನಂತರ ಬೆಚ್ಚಗಿನ ನೀರನ್ನು ಸೇರಿಸಿ ಮತ್ತು ಬಾಟಲಿಯನ್ನು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಬಾಟಲಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ ಮತ್ತು ಬ್ಯಾಕ್ಟೀರಿಯಾ ಮತ್ತು ವಾಸನೆಯನ್ನು ತೆಗೆದುಹಾಕುತ್ತದೆ.
ಮುಚ್ಚಳ ಮತ್ತು ಸ್ಟ್ರಾ ಪ್ರತ್ಯೇಕವಾಗಿ ಸ್ವಚ್ಛಗೊಳಿಸಿ
ಬಾಟಲ್ ಮುಚ್ಚಳ ಮತ್ತು ಸ್ಟ್ರಾವನ್ನು ಸಹ ಪ್ರತ್ಯೇಕವಾಗಿ ಸ್ವಚ್ಛಗೊಳಿಸಿ. ಅವುಗಳ ಒಳಗೂ ಸಹ ಬ್ಯಾಕ್ಟೀರಿಯಾಗಳು ಸಂಗ್ರಹವಾಗಬಹುದು. ಇದಕ್ಕಾಗಿ ಬ್ರಷ್ ಮತ್ತು ಸಾಫ್ಟ್ ಡಿಟರ್ಜೆಂಟ್ ದ್ರಾವಣ ಮತ್ತು ನೀರನ್ನು ಬಳಸಿ.