- Home
- News
- India News
- ದಸರಾ ಧಮಾಕಾ ಆಫರ್: 15 ಕೆಜಿ ಕುರಿ ಮಾಂಸ, ಬ್ಲೆಂಡರ್ ಪ್ರೈಡ್ ಬಾಟೆಲ್; ಮಹಿಳೆಯರಿಗೂ ಸಿಗುತ್ತೆ ಗಿಫ್ಟ್
ದಸರಾ ಧಮಾಕಾ ಆಫರ್: 15 ಕೆಜಿ ಕುರಿ ಮಾಂಸ, ಬ್ಲೆಂಡರ್ ಪ್ರೈಡ್ ಬಾಟೆಲ್; ಮಹಿಳೆಯರಿಗೂ ಸಿಗುತ್ತೆ ಗಿಫ್ಟ್
ಜಾನಿ ಚಿಕನ್ & ಮಟನ್ ಸೆಂಟರ್ ಮಾಲೀಕರು, ಕುಸಿದ ವ್ಯಾಪಾರವನ್ನು ಹೆಚ್ಚಿಸಲು ದಸರಾ ಹಬ್ಬದ ಪ್ರಯುಕ್ತ ವಿಶೇಷ ಲಕ್ಕಿ ಡ್ರಾ ಆಯೋಜಿಸಿದ್ದಾರೆ15 ಕೆಜಿ ಕುರಿ, ಮದ್ಯದ ಬಾಟಲಿ ಮತ್ತು ರೇಷ್ಮೆ ಸೀರೆಗಳಂತಹ ಅಚ್ಚರಿಯ ಬಹುಮಾನಗಳನ್ನು ಗೆಲ್ಲುವ ಅವಕಾಶ ಪಡೆದಿದ್ದಾರೆ.

ಗ್ರಾಹಕರಿಗೆ ವಿಶೇಷ ಆಫರ್
ಹಬ್ಬಗಳು ಬಂದ್ರೆ ವ್ಯಾಪಾರಿಗಳು ತಮ್ಮ ಗ್ರಾಹಕರಿಗೆ ವಿಶೇಷ ಆಫರ್ ನೀಡುತ್ತವೆ. ಇದೀಗ ದಸರಾ ಹಬ್ಬ ಸಮೀಪಿಸುತ್ತಿದ್ದು ಶಾಪಿಂಗ್ ಮಾಲ್‌ಗಳು ರಿಯಾಯಿತಿ ಮತ್ತು ಬಂಪರ್ ಆಫರ್ ನೀಡುತ್ತಿವೆ. ದೊಡ್ಡ ಶಾಪಿಂಗ್ ಮಾಲ್‌ಗಳು ಲಕ್ಕಿ ಡ್ರಾ ಹೆಸರಿನಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಇದೀಗ ತೆಲಂಗಾಣದ ಸೂರ್ಯಪೇಟೆಯ ವ್ಯಾಪಾರಿಯೊಬ್ಬರು ವಿಶೇಷ ಆಫರ್ ನೀಡಿದ್ದಾರೆ. ವ್ಯಾಪಾರಿಯ ವಿಶೇಷ ಲಕ್ಕಿ ಡ್ರಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಜಾನಿ ಚಿಕನ್ & ಮಟನ್ ಸೆಂಟರ್
ಸೂರ್ಯಪೇಟೆಯ ಕೃಷ್ಣ ಟಾಕೀಸ್ ಎದುರು ಜಾನಿ ಚಿಕನ್ & ಮಟನ್ ಸೆಂಟರ್ ಎಂಬ ಮಾಂಸದಂಗಡಿ ಇದೆ. ಈ ಅಂಗಡಿ ಮಾಲೀಕ ನಾಗರಾಜ್, ವ್ಯಾಪಾರ ಕುಸಿಯುತ್ತಿರುವ ಹಿನ್ನೆಲೆ ಆಫರ್ ನೀಡಿದೆ. ದಸರಾ ಹಬ್ಬದ ಅವಕಾಶವನ್ನು ಬಳಸಿಕೊಂಡು ವ್ಯವಹಾರ ಉತ್ತೇಜನ ನೀಡಲಯ ಲಕ್ಕಿ ಡ್ರಾ ವ್ಯವಸ್ಥೆಯನ್ನು ತಂದಿದ್ದಾರೆ. ಕಡಿಮೆ ಬೆಲೆಯಲ್ಲಿ ಗ್ರಾಹಕರು ಈ ಲಕ್ಕಿ ಡ್ರಾ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
150 ರೂಪಾಯಿ ಪಾವತಿಸಿ ಟೋಕನ್
ಜನರು ಕೇವಲ 150 ರೂಪಾಯಿ ಪಾವತಿಸಿ ಟೋಕನ್ ಪಡೆಯುವ ಮೂಲಕ ಜಾನಿ ಚಿಕನ್ & ಮಟನ್ ಸೆಂಟರ್ ಲಕ್ಕಿ ಡ್ರಾ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಾಳುಗಳಿಗೆ ಈ ಲಕ್ಕಿ ಡ್ರಾದಲ್ಲಿ ವಿಜೇತರಿಗೆ ಅಚ್ಚರಿಯ ಬಹುಮಾನಗಳು ಸಿಗಲಿವೆ. ಮೊದಲ ಬಹುಮಾನವಾಗಿ 15 ಕೆಜಿ ಕುರಿ, ಎರಡನೇ ಬಹುಮಾನವಾಗಿ ಬ್ಲೆಂಡರ್ಸ್ ಪ್ರೈಡ್‌ನ ಪೂರ್ಣ ಬಾಟಲ್ ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ರೇಷ್ಮೆ ಸೀರೆಗಳು ಸೇರಿವೆ.
ದಸರಾ ಹಬ್ಬದ ಪ್ರಯುಕ್ತ ವಿಶೇಷ ಲಕ್ಕಿ ಡ್ರಾ
ದಸರಾ ಹಬ್ಬದ ಪ್ರಯುಕ್ತ ವಿಶೇಷ ಲಕ್ಕಿ ಡ್ರಾ ಆಯೋಜಿಸಲಾಗಿದೆ. ಜನರ ಮುಂದೆಯೇ ಡ್ರಾ ಓಪನ್ ಮಾಡಿ, ವಿಜೇತರು ಯಾರು ಎಂದು ಘೋಷಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಗರಿಷ್ಠ 100 ಜನರಿಗೆ ಮಾತ್ರ ಭಾಗವಹಿಸಲು ಸಾಧ್ಯವಿದೆ. ಸ್ಥಳೀಯರು ಈಗಾಗಲೇ 150 ರೂಪಾಯಿ ನೀಡಿ ಟೋಕನ್ ಖರೀದಿಸಿದ್ದಾರೆ ಎಂದು ಮಾಂಸದಂಗಡಿ ಮಾಲೀಕ ನಾಗರಾಜ್ ಹೇಳುತ್ತಾರೆ.
ಇದನ್ನೂ ಓದಿ: ಒಂದೇ ತಿಂಗಳಲ್ಲಿ ಎರೆಡರಡು ಬಾರಿ ಬೆಂಕಿಯುಗುಳಿದ ದೇಶದ ಏಕೈಕ ಜೀವಂತ ಜ್ವಾಲಾಮುಖಿ: ವೀಡಿಯೋ
ಲಕ್ಕಿ ಡ್ರಾ ಸ್ಪರ್ಧೆ
ಲಕ್ಕಿ ಡ್ರಾ ಸ್ಪರ್ಧೆಗಳಲ್ಲಿ ಗಿಫ್ಟ್, ಸ್ಕೂಟರ್ ಮತ್ತು ಗೃಹೋಪಯೋಗಿ ವಸ್ತುಗಳನ್ನು ವಿಜೇತರಿಗೆ ನೀಡಲಾಗುತ್ತದೆ. ಆದರೆ ಕುರಿ, ಪೂರ್ಣ ಬಾಟಲಿ ವೈನ್‌ನಂತಹ ಉಡುಗೊರೆಗಳನ್ನು ನೀಡುವುದು ವಿಶೇಷ ಪ್ರಯತ್ನವಾಗಿದೆ. ಟೋಕನ್ ಖರೀದಿ ಮಾಡೋಕೆ ಬರುವ ಜನರು ಮಾಂಸವನ್ನು ಖರೀದಿಸುತ್ತಿದ್ದಾರೆ. ಈ ಮೂಲಕ ಗ್ರಾಹಕರನ್ನು ತಮ್ಮ ಮಾಂಸದಂಗಡಿಯತ್ತ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ಮಸೀದಿ ನಿರ್ಮಾಣ ಯೋಜನೆಗೆ ಸಿಗದ ಅನುಮತಿ; ಸರ್ಕಾರದಿಂದ ಸಿಗ್ತಿಲ್ಲ ಗ್ರೀನ್ ಸಿಗ್ನಲ್