ಹಬ್ಬದ ಸಂಭ್ರಮದಲ್ಲಿ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ Xiaomi,ಶೇ.60ರಷ್ಟು ಉಳಿತಾಯ
ಹಬ್ಬದ ಸಂಭ್ರಮದಲ್ಲಿ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ Xiaomi,ಶೇ.60ರಷ್ಟು ಉಳಿತಾಯ, ಶಓಮಿ ಫೋನ್, ಸ್ಮಾರ್ಟ್ ಟಿವಿ ಸೇರಿದಂತೆ ಎಲ್ಲಾ ಉತ್ಪನ್ನಗಳು ಭಾರಿ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಿದೆ.

ಹಬ್ಬದ ಆಫರ್
ಶೇ.60ರಷ್ಟು ಉಳಿತಾಯ
ಹಬ್ಬದ ಸೀಸನ್ ಆರಂಭಗೊಂಡಿದೆ.ನವರಾತ್ರಿ, ದೀಪಾವಳಿ ಆಫರ್‌ಗಳು ಶುರುವಾಗಿದೆ. ಇದೀಗ ಶಓಮಿ ಇಂಡಿಯಾ ದೀಪಾವಳಿ ಹಬ್ಬದ ಆಫರ್ ಘೋಷಿಸಿದೆ. ಸ್ಮಾರ್ಟ್‌ಫೋನ್, ಟಿವಿ, ಪವರ್ ಬ್ಯಾಂಕ್, ಸೇರಿದಂತೆ ಎಲ್ಲಾ ಉತ್ಪನ್ನಗಳ ಮೇಲೆ ಭಾರಿ ಡಿಸ್ಕೌಂಟ್ ನೀಡಿದೆ. ಅಪ್ ಗ್ರೇಡ್, ಉಡುಗೊರೆ, ಮನೆಗೆ ಸ್ಮಾರ್ಟರ್ ಲಿವಿಂಗ್ ತರಲು ಪರಿಪೂರ್ಣ ಅವಕಾಶವಿದೆ ಎಂದು ಶಓಮಿ ಹೇಳಿದೆ. ಶೇ.60ರವರೆಗೆ ಉಳಿತಾಯ ಮಾಡಬಹುದು. ಮಾರಾಟವು ಸೆಪ್ಟೆಂಬರ್ 22, 2025ರಂದು ಎಂಐ.ಕಾಂ, ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಶಓಮಿಯ ರೀಟೇಲ್ ಪಾಲುದಾರರಲ್ಲಿ ದೇಶಾದ್ಯಂತ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ.
ಆಫರ್ ಬೆಲೆ
ಶಓಮಿ ಸ್ಮಾರ್ಟ್‌ಫೋನ್
ರೆಡ್ಮಿ ನೋಟ್ 14 ಪ್ರೊ+ 34,999(MRP ಬೆಲೆ) 24,999 (ಆಫರ್ ಬೆಲೆ) 10,000(ಉಳಿತಾಯ)
ರೆಡ್ಮಿ ನೋಟ್ 14 ಪ್ರೊ 5ಜಿ 28,999(MRP ಬೆಲೆ) 20,999 (ಆಫರ್ ಬೆಲೆ) 8,000(ಉಳಿತಾಯ)
ರೆಡ್ಮಿ ನೋಟ್ 14 21,999(MRP ಬೆಲೆ) 15,499 6,500 (ಆಫರ್ ಬೆಲೆ)(ಉಳಿತಾಯ)
ರೆಡ್ಮಿ ನೋಟ್ 14 ಎಸ್.ಇ. 19,999(MRP ಬೆಲೆ) 12,999 (ಆಫರ್ ಬೆಲೆ) 7,000 (ಉಳಿತಾಯ)
ರೆಡ್ಮಿ 15 16,999(MRP ಬೆಲೆ) 14,999 (ಆಫರ್ ಬೆಲೆ) 2,000 (ಉಳಿತಾಯ)
ರೆಡ್ಮಿ ಎ4 5ಜಿ 10,999(MRP ಬೆಲೆ) 7,499 (ಆಫರ್ ಬೆಲೆ) 3,500(ಉಳಿತಾಯ)
ರೆಡ್ಮಿ 14ಸಿ 12999(MRP ಬೆಲೆ) 8,999 (ಆಫರ್ ಬೆಲೆ) 4000(ಉಳಿತಾಯ)
ಶಓಮಿ ಐಪ್ಯಾಡ್
ಆಫರ್ ಬೆಲೆ
ಟ್ಯಾಬ್ಲೆಟ್ ಗಳು ಶಓಮಿ ಐಪ್ಯಾಡ್ 7 34,999(MRP ಬೆಲೆ) 22,999 (ಆಫರ್ ಬೆಲೆ) 12,000 (ಉಳಿತಾಯ)
ಶಓಮಿ ಪ್ಯಾಡ್ ಪ್ರೊ 24,999(MRP ಬೆಲೆ) 16,9998,000 (ಆಫರ್ ಬೆಲೆ)
ರೆಡ್ಮಿ ಪ್ಯಾಡ್ 2 16,999(MRP ಬೆಲೆ) 11,999(ಆಫರ್ ಬೆಲೆ) 5,000(ಉಳಿತಾಯ)
ರೆಡ್ಮಿ ಪ್ಯಾಡ್ 2 ಎಸ್.ಇ.4ಜಿ 16,999(MRP ಬೆಲೆ) 7,999(ಆಫರ್ ಬೆಲೆ) 9,000 (ಉಳಿತಾಯ)
ಬ್ಯಾಂಕ್ ಆಫರ್
ಡಿಸ್ಕೌಂಟ್ ಜೊತೆಗೆ ಬ್ಯಾಂಕ್ ಆಫರ್
ರಿಯಾಯಿತಿಗಳ ಆಚೆಗೆ ಗ್ರಾಹಕರು ಆಯ್ದ ಬ್ಯಾಂಕ್ ಕೊಡುಗೆಗಳು ಮತ್ತು ಇಎಂಐ ವಹಿವಾಟುಗಳ ಮೇಲೆ ಹೆಚ್ಚುವರಿ ₹5,000 ರಿಯಾಯಿತಿ ಪಡೆಯಬಹುದು. ಹಲವು ವಿಭಾಗಗಳಲ್ಲಿ ನೋ ಕಾಸ್ಟ್ ಇಎಂಐ ಮತ್ತು ಶೂನ್ಯ ಡೌನ್ ಪೇಮೆಂಟ್ ಆಯ್ಕೆಗಳೊಂದಿಗೆ ಈಗ ಸ್ಮಾರ್ಟರ್ ತಂತ್ರಜ್ಞಾನಕ್ಕೆ ಅಪ್ ಗ್ರೇಡ್ ಆಗುವುದು ಹಿಂದೆಂದಿಗಿಂತ ಸುಲಭ.
ಫೋನ್ ವಿಶೇಷತೆ ಏನು
ರೆಡ್ಮಿ ಫೋನ್
ರೆಡ್ಮಿ ನೋಟ್ 14 ಪ್ರೊ+5ಜಿ: ಸುಧಾರಿತ 200ಎಂಪಿ ಎಐ-ಪವರ್ಡ್ ಕ್ಯಾಮರಾ, ಪ್ರೊ+ ಪ್ರತಿ ಹಬ್ಬದ ಚಿತ್ರೀಕರಣವನ್ನೂ ಆಕರ್ಷಕವಾಗಿಸುತ್ತದೆ.
• ರೆಡ್ಮಿ 15: ತನ್ನ ಬೃಹತ್ 7000ಎಂಎಎಚ್ ಬ್ಯಾಟರಿಯೊಂದಿಗೆ ಇದು ಇಡೀ ದಿನದ ಬಳಕೆಗೆ ನಿರ್ಮಿಸಲಾಗಿದ್ದು ಪ್ರಯಾಣಿಸುವವರು ಅಥವಾ ಚಲನೆಯಲ್ಲಿ ಸಂಭ್ರಮಿಸುವವರಿಗೆ ಸೂಕ್ತವಾಗಿದೆ.
• ರೆಡ್ಮಿ 14ಸಿ 5ಜಿ: ರೆಡ್ಮಿ 14ಸಿ 5ಜಿಯು ಆಕರ್ಷಕ ವಿನ್ಯಾಸ ಮತ್ತು ವಿಶ್ವಾಸಾರ್ಹ ಪ್ರತಿನಿತ್ಯದ ಕಾರ್ಯಕ್ಷಮತೆ ನೀಡುತ್ತದೆ, ಇದರಿಂದ ಇದು ವೇಗ ಮತ್ತು ರಾಜಿಯಿಲ್ಲದೆ ಮೌಲ್ಯ ನೀಡುವ ಯುವ ವೃತ್ತಿಪರರಿಗೆ ಮತ್ತು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮೊದಲ 5ಜಿ ಸ್ಮಾರ್ಟ್ ಫೋನ್ ಆಗಿದೆ.
• ರೆಡ್ಮಿ ಎ45ಜಿ: ಮುಂದಿನ ತಲೆಮಾರಿನ ಕನೆಕ್ಟಿವಿಟಿಯನ್ನು ಪ್ರತಿಯೊಬ್ಬರ ಕೈಗಳಿಗೂ ತರುವ ಇದು ಭಾರತವು 5ಜಿ ಯುಗಕ್ಕೆ ಚಲಿಸುತ್ತಿದ್ದಂತೆ ನಿಮ್ಮನ್ನು ಸಂಪರ್ಕದಲ್ಲಿರುವಂತೆ ಮಾಡುತ್ತದೆ.
ಕೆಲಸ ಮತ್ತು ಆಟಕ್ಕೆ ಅತ್ಯುತ್ತಮ ಟ್ಯಾಬ್ಲೆಟ್ ಡೀಲ್ ಗಳು
ಹಬ್ಬದ ಬಿಡುವುಗಳು ಮನರಂಜನೆಯ ವೀಕ್ಷಣೆಗೆ ಪರಿಪೂರ್ಣ ಸಮಯವಾಗಿದ್ದು ಶಓಮಿಯ ಟ್ಯಾಬ್ಲೆಟ್ ಗಳು ಉತ್ಪಾದಕತೆ ಮತ್ತು ಮನರಂಜನೆಯನ್ನು ಸುಂದರವಾಗಿ ಸಮತೋಲನಗೊಳಿಸುತ್ತವೆ.
ಹಬ್ಬಕ್ಕೆ ಮನೆಗೆ ತನ್ನಿ ಟಿವಿ
ದೀಪಾವಳಿಗೆ ಅತ್ಯುತ್ತಮ ಸ್ಮಾರ್ಟ್ ಟಿ.ವಿ. ಡೀಲ್ ಗಳು
ದೀಪಾವಳಿಯ ಸಂಜೆಗಳು ಎಂದರೆ ಕುಟುಂಬದ ಮನರಂಜನೆಯಾಗಿವೆ ಮತ್ತು ಶಓಮಿಯ ಕ್ಯೂ.ಎಲ್.ಇ.ಡಿ. ಟಿ.ವಿ. ಶ್ರೇಣಿಯು ಪ್ರತಿ ಲಿವಿಂಗ್ ರೂಂ ಅನ್ನು ಹೋಮ್ ಥಿಯೇಟರ್ ಆಗಿಸುತ್ತದೆ.
• ಶಓಮಿ ಸಿನಿಮ್ಯಾಜಿಕ್ಯೂ.ಎಲ್.ಇ.ಡಿ.ಸೀರೀಸ್: ಸಿನಿಮಾ ಪ್ರಿಯರಿಗೆ ವಿನ್ಯಾಸಗೊಳಿಸಲಾದ ಇದು 4ಕೆ ಶ್ರೇಷ್ಠತೆಯನ್ನು ಡಾಲ್ಬಿ ವಿಷನ್ ಮತ್ತು ಹಬ್ಬದ ಮನಸ್ಥಿತಿಗೆ ಹೊಂದುವ ತಲ್ಲೀನಗೊಳಿಸುವ ಆಡಿಯೊದೊಂದಿಗೆ ನೀಡುತ್ತದೆ.
• ಶಓಮಿ ಫೆಂಟಾಸ್ಟಿಕ್ಯೂ.ಎಲ್.ಇ.ಡಿ. ಸೀರೀಸ್: ಅತ್ಯಂತ ಶ್ರೀಮಂತ ಬಣ್ಣಗಳು ಮತ್ತು ಅಮೆಜಾನ್ ಫೈರ್ ಟಿ.ವಿ.ಯ ಅಂತರ್ಬೋಧೆಯ ಸ್ಮಾರ್ಟ್ ಇಂಟರ್ಫೇಸ್ ಮೂಲಕ ಇದು ಕೊನೆಯಿರದ ಮನರಂಜನೆ ನೀಡುತ್ತದೆ.
ಹಬ್ಬದ ಉಳಿತಾಯಗಳೊಂದಿಗೆ ನಿಮ್ಮ ಸ್ಮಾರ್ಟ್ ಜೀವನಶೈಲಿ ಪೂರ್ಣಗೊಳಿಸಿ
ಫೋನ್ ಗಳ ಆಚೆಗೆ, ಟ್ಯಾಬ್ಲೆಟ್ ಗಳು ಮತ್ತು ಟಿ.ವಿ.ಗಳೊಂದಿಗೆ ಶಓಮಿ ಇಂಡಿಯಾದ ಉತ್ಪನ್ನಗಳನ್ನು ಜೀವನವನ್ನು ಸ್ಮಾರ್ಟರ್, ಹೆಲ್ದಿಯರ್ ಮತ್ತು ಹೆಚ್ಚು ಸಂಪರ್ಕಿತವಾಗಿರಿಸಲು ವಿನ್ಯಾಸಗೊಳಿಸಲಾಗಿದೆ.
• ಚಲನೆಯಲ್ಲಿ ಶಕ್ತಿ: ಶಓಮಿ ಕಾಂಪ್ಯಾಕ್ಟ್ ಪವರ್ ಬ್ಯಾಂಕ್ 20ಕೆ ಮತ್ತು ರೆಡ್ಮಿ 4ಐ ಪವರ್ ಬ್ಯಾಂಕ್ ಗಳು ವೇಗದ ಚಾರ್ಜಿಂಗ್ ಮತ್ತು ದೀರ್ಘಬಾಳಿಕೆಯ ವಿನ್ಯಾಸ ನೀಡುವ ಮೂಲಕ ನಿಮ್ಮ ಸಂಭ್ರಮಾಚರಣೆಗಳು ತಡೆರಹಿತವಾಗುವಂತೆ ಮಾಡುತ್ತವೆ.
• ಸ್ಮಾರ್ಟ್ ಆಡಿಯೊ ಮತ್ತು ವೇರಬಲ್ಸ್: ರೆಡ್ಮಿ ಬಡ್ಸ್ 6 ತಲ್ಲೀನಗೊಳಿಸುವ ಶಬ್ದದಿಂದ ರೆಡ್ಮಿ ಬಡ್ಸ್ 5ಸಿಯ ನಾಯ್ಸ್ ಕ್ಯಾನ್ಸಲೇಷನ್ ವರೆಗೆ ಮತ್ತು ರೆಡ್ಮಿ ವಾಚ್ 5 ಲೈಟ್ ನ ಫಿಟ್ನೆಸ್ ಟ್ರ್ಯಾಕಿಂಗ್ ಅಥವಾ ತೆಳುವಾದ ರೆಡ್ಮಿ ವಾಚ್ ಮೂವ್ ವರೆಗೆ ಪ್ರತಿ ಜೀವನಶೈಲಿಗೂ ಒಂದು ನಿಮಗೆ ಲಭ್ಯವಿದೆ.
ಶಓಮಿ ಪ್ಯಾಡ್
• ಶಓಮಿ ಪ್ಯಾಡ್ 7:
ಶಓಮಿ ಪ್ಯಾಡ್ 7 ಎರಡು ವೇರಿಯೆಂಟ್ ಗಳಲ್ಲಿ ಲಭ್ಯವಿದ್ದು ನ್ಯಾನೊ ಟೆಕ್ಸ್ ಚರ್, ಡಿಸ್ಪ್ಲೇ ಮಾಡೆಲ್ ಇದು ದೀರ್ಘಾವಧಿ ಮನರಂಜನೆಪಡೆಯಲು ಹೊಳಪನ್ನು ಕಡಿಮೆ ಮಾಡುತ್ತದೆ ಮತ್ತು ಸ್ಟಾಂಡರ್ಡ್ ವೇರಿಯೆಂಟ್ ಮುಂಚೂಣಿಯ ವಿನ್ಯಾಸ ಮತ್ತು ಮೃದು ಕಾರ್ಯಕ್ಷಮತೆ ನೀಡುತ್ತದೆ.
• ರೆಡ್ಮಿ ಪ್ಯಾಡ್ 2: ತನ್ನ ವರ್ಗದಲ್ಲಿ ದೊಡ್ಡ ಬ್ಯಾಟರಿ ಹೊಂದಿರುವ ಇದು ಕುಟುಂಬಗಳಿಗೆ ಆನ್ಲೈನ್ ತರಗತಿಗಳು, ಗೇಮ್ಸ್ ಮತ್ತು ಕೊನೆಯಿರದ ಮನರಂಜನೆಗೆ ಶಕ್ತಿ ನೀಡುತ್ತದೆ.
• ರೆಡ್ಮಿ ಪ್ಯಾಡ್ ಎಸ್.ಇ. 4ಜಿ: ಆಕರ್ಷಕ, ವೈವಿಧ್ಯಮಯ ಮತ್ತು ಲಭ್ಯತೆ ಹೊಂದಿರುವ ಇದು ಉಡುಗೊರೆ ನೀಡಲು ಅಥವಾ ಸ್ವಂತಕ್ಕೆ ಬಳಕೆಗೆ ಪರಿಪೂರ್ಣವಾಗಿಸಿದೆ.