ಪ್ರಧಾನಿ ಮೋದಿ ಆಹಾರಪ್ರಿಯ… ಅವರ ಫೇವರಿಟ್ ತಿನಿಸುಗಳನ್ನು ತಿಂದ್ರೆ ನೀವೂ ಫಿಟ್ ಆಗಿರಬಹುದು
ಭಾರತದ ಪ್ರಧಾನಿ ಮೋದಿ ಆಹಾರಪ್ರಿಯರು. ಅವರು ಪೌಷ್ಟಿಕಾಂಶ ಮತ್ತು ನಾರಿನಂಶದಿಂದ ಸಮೃದ್ಧವಾಗಿರುವ ಆಹಾರ ಹೆಚ್ಚಾಗಿ ಸೇವಿಸುತ್ತಾರೆ. ಮೋದಿಯವರು ತಿನ್ನುವ ಸೂಪರ್‌ಫುಡ್‌ಗಳ, ಫೇವರಿಟ್ ತಿನಿಸುಗಳ ಪಟ್ಟಿ ಇಲ್ಲಿದೆ. ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸಲು ಜನ ಈ ಆಹಾರ ಸೇವಿಸಬೇಕು ಎಂದು ಅವರು ಸೂಚಿಸುತ್ತಾರೆ.

ಪ್ರಧಾನಿ ಮೋದಿ
ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶಿಸ್ತುಬದ್ಧ ಜೀವನ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಅಭಿಪ್ರಾಯದಲ್ಲಿ, ಆಕಾರವನ್ನು ಕಾಪಾಡಿಕೊಳ್ಳುವ ರಹಸ್ಯವೆಂದರೆ ಸಾಂಪ್ರದಾಯಿಕ ಮತ್ತು ಪೌಷ್ಟಿಕ ಆಹಾರ ಸೇವಿಸುವುದು. ವಿಟಮಿನ್ ಅಂಶ, ಜೀರ್ಣಕ್ರಿಯೆಯ ಸುಲಭವಾಗಿರುವ ಮತ್ತು ಸಾಮಾನ್ಯ ಆರೋಗ್ಯ ಪ್ರಯೋಜನಗಳಿಂದಾಗಿ, ಪ್ರಧಾನಿ ಮೋದಿ ಭಾರತೀಯ ಸೂಪರ್‌ಫುಡ್‌ಗಳನ್ನು ಸೇವಿಸಬೇಕೆಂದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಾರೆ.
ಮೋದಿ ಸೂಪರ್ ಫುಡ್ ಗಳು
ನರೇಂದ್ರ ಮೋದಿ ಅವರು ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವ ಮತ್ತು ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಬಲಿಷ್ಟ ದೇಶದ ನಿರ್ಮಾಣಕ್ಕಾಗಿ ಈ ಸೂಪರ್‌ಫುಡ್‌ಗಳನ್ನು (superfood) ಸೇವಿಸಬೇಕೆಂದು ಸಲಹೆ ನೀಡಿದ್ದಾರೆ.
ಮಖಾನಾ
ಪ್ರಧಾನಿ ಮೋದಿ 365 ದಿನಗಳಲ್ಲಿ 300 ದಿನಗಳವರೆಗೆ ಮಖಾನಾ ತಿನ್ನುತ್ತಾರೆ. ಮಖಾನಾ ಕಡಿಮೆ ಕ್ಯಾಲೋರಿಗಳು ಮತ್ತು ಪ್ರೋಟೀನ್, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿದ್ದು, ಇದು ಹೃದಯದ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೆ (weight cntrol) ಉತ್ತಮ ತಿಂಡಿಯಾಗಿದೆ. ಇದರ ಉರಿಯೂತ ನಿವಾರಕ ಗುಣಗಳು ದೀರ್ಘಕಾಲದ ಕಾಯಿಲೆಗಳು ಮತ್ತು ವಯಸ್ಸಾಗುವಿಕೆಯ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡುತ್ತವೆ.
ಮಿಲೆಟ್ಸ್
ರಾಗಿ, ಜೋಳ ಮತ್ತು ಬಾಜ್ರಾಗಳು ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಅವು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ (blood sugar control) ಸಹಾಯ ಮಾಡುವುದರಿಂದ, ಜೀರ್ಣಕ್ರಿಯೆಯನ್ನು ಹೆಚ್ಚಿಸುವುದರಿಂದ ಮತ್ತು ದೀರ್ಘಕಾಲೀನ ಶಕ್ತಿಯನ್ನು ನೀಡುವುದರಿಂದ ಅವು ಸಮತೋಲಿತ ಆಹಾರದ ಅತ್ಯಗತ್ಯ ಅಂಶವಾಗಿದೆ.
ಖಿಚಡಿ
ಅಕ್ಕಿ, ಬೇಳೆ ಮತ್ತು ಮಸಾಲೆಗಳ ಮಿಶ್ರಣದಿಂದ ಪೌಷ್ಟಿಕವಾಗಿರುವ ಖಿಚಡಿಯನ್ನು ಮೋದಿ ಇಷ್ಟಪಡುತ್ತಾರೆ. ಅದರ ಸಮೃದ್ಧ ಪ್ರೋಟೀನ್, ಫೈಬರ್ ಮತ್ತು ಪ್ರಮುಖ ಪೋಷಕಾಂಶಗಳಿಂದಾಗಿ, ಇದು ಆರೋಗ್ಯಕರ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸಲು ಉತ್ತಮವಾಗಿದೆ.
ನುಗ್ಗೆ ಸೊಪ್ಪಿನ ಪರೋಟ (ಮೊರಿಂಗಾ)
ಹಲವಾರು ಬಾರಿ ಪ್ರಧಾನಿ ಮೋದಿ ಅವರು ಮೊರಿಂಗಾ ಎಲೆಗಳ ಅಥವಾ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳನ್ನು ಎತ್ತಿ ತೋರಿಸಿದ್ದಾರೆ. ಹೆಚ್ಚಿನ ವಿಟಮಿನ್ ಸಿ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಕ್ಕೆ ಹೆಸರುವಾಸಿಯಾದ ಈ ಎಲೆಗಳು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಮೂಳೆಯ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಹಾಗಾಗಿ ಮೋದಿ ಮೊರಿಂಗಾ ಪರೋಟವನ್ನು (moringa leaves paratha) ಸವಿಯಲು ಇಷ್ಟಪಡುತ್ತಾರೆ.
ಕಪ್ಪು ಅಕ್ಕಿ
ಪ್ರಧಾನಿ ಮೋದಿ ಕಪ್ಪು ಅಕ್ಕಿಯನ್ನು ಸಹ ಹೆಚ್ಚಾಗಿ ಸೇವಿಸುತ್ತಾರೆ. ಈಶಾನ್ಯ ಭಾರತದ ಈ ಅಕ್ಕಿಯಲ್ಲಿ ಕಬ್ಬಿಣ, ನಾರು ಮತ್ತು ಉತ್ಕರ್ಷಣ ನಿರೋಧಕ ಹೆಚ್ಚಾಗಿದೆ. ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ಜೀರ್ಣಕ್ರಿಯೆ ಮತ್ತು ಹೃದಯದ ಆರೋಗ್ಯಕ್ಕೆ (heart health) ಸಹಾಯ ಮಾಡುತ್ತದೆ.
ದಾಲ್ ಜೊತೆ ಭಾಕ್ರಿ
ಗುಜರಾತ್ ಭೇಟಿಯ ಸಮಯದಲ್ಲಿ, ಮೋದಿ ಅವರು ದಾಲ್ ಮತ್ತು ಧಾನ್ಯಗಳಿಂದ ತಯಾರಿಸಿದ ಭಾಕ್ರಿ ತಮಗೆ ತುಂಬಾನೆ ಇಷ್ಟ ಎಂದಿದ್ದರು. . ಭಾಕ್ರಿಯಲ್ಲಿ ಹೆಚ್ಚಿನ ಫೈಬರ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಿರುವುದರಿಂದ ಇದು ದೀರ್ಘಕಾಲೀನ ಶಕ್ತಿಯನ್ನು ನೀಡುತ್ತದೆ.
ಸೀಸನಲ್ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳು
ಉತ್ತಮ ಆರೋಗ್ಯಕ್ಕಾಗಿ, ಪ್ರಧಾನಿ ಮೋದಿ ಅವರು ಧಾನ್ಯಗಳು ಮತ್ತು ಸೀಸನಲ್ ಉತ್ಪನ್ನಗಳನ್ನು (seasonal foods) ತಿನ್ನುವುದು ಉತ್ತಮ ಎಂದು ಹಲವು ಬಾರಿ ಹೇಳಿದ್ದಾರೆ. ಸೀಸನಲ್ ಹಣ್ಣುಗಳು ಮತ್ತು ತರಕಾರಿಗಳು ನೈಸರ್ಗಿಕವಾಗಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಗಳಿಂದ ತುಂಬಿರುತ್ತೆ. ಇವು ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಧೋಕ್ಲಾ
ಗುಜರಾತ್‌ನಲ್ಲಿ ಜನಪ್ರಿಯ ತಿಂಡಿಯಾದ ಧೋಕ್ಲಾ, ಪ್ರಧಾನಿ ಮೋದಿಯವರಿಗೆ ಅಚ್ಚುಮೆಚ್ಚಿನ ತಿಂಡಿ. ಹುದುಗಿಸಿದ ಕಡಲೆ ಹಿಟ್ಟಿನಿಂದ ತಯಾರಿಸಲಾದ ಧೋಕ್ಲಾ, ಪ್ರೋಟೀನ್ ಮತ್ತು ಪ್ರೋಬಯಾಟಿಕ್‌ಗಳಲ್ಲಿ ಅಧಿಕವಾಗಿದ್ದು, ಇದು ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಶ್ರೀಖಂಡ್
ಸಾಂಪ್ರದಾಯಿಕ ಗುಜರಾತಿ ಸಿಹಿ ತಿನಿಸು ಶ್ರೀಖಂಡವನ್ನು ಪ್ರಧಾನಿ ಮೋದಿ ಇಷ್ಟಪಡುತ್ತಾರೆ. ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಪ್ರೋಬಯಾಟಿಕ್‌ಗಳಲ್ಲಿ ಅಧಿಕವಾಗಿರುವ ಶ್ರೀಖಂಡ್ ಜೀರ್ಣಕ್ರಿಯೆ (digestion), ಮೂಳೆ ಬಲ ಮತ್ತು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಆದರೆ ಮಿತವಾಗಿ ಸೇವಿಸಬೇಕೆಂದು ಹೇಳುತ್ತಾರೆ.