ಪ್ರಧಾನಿ ಮೋದಿ ರಾಜಕೀಯ ಸನ್ಯಾಸ ಸ್ವೀಕರಿಸಲಿದ್ದಾರೆ ಮತ್ತು ಮುಂದಿನ ಪ್ರಧಾನಿ ಯಾರಾಗಲಿದ್ದಾರೆ, 19 ಮುಸ್ಲಿಂ ರಾಷ್ಟ್ರಗಳು ಭಾರತದ ಮೇಲೆ ದಾಳಿ ಮಾಡಿದಾಗ ಏನಾಗುತ್ತೆ? ಜ್ಯೋತಿಷಿ ಸಂಜೀವ್ ಮಲಿಕ್ ಭವಿಷ್ಯ ನುಡಿದಿದ್ದಾರೆ.
ಇನ್ನೇನು ಎರಡೇ ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modis Birthday) 75ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಕೇವಲ ಹನ್ನೊಂದು ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು 11ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿಸಿರುವ, ಇನ್ನು ಕೆಲವೇ ವರ್ಷಗಳಲ್ಲಿ 3ನೇ ಸ್ಥಾನಕ್ಕೆ ಏರಿಸಿರುವ ಖ್ಯಾತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಆರ್ಟಿಕಲರ್ 370 (Article 370) ತೆಗೆಯುವ ಮೂಲಕ ಜಮ್ಮು ಕಾಶ್ಮೀರದ ಜನರಿಗೆ ಭದ್ರತೆ, ತ್ರಿವಳಿ ತಲಾಖ್ ನಿಷೇಧ ಸೇರಿದಂತೆ ಆತ್ಮನಿರ್ಭರ ಭಾರತದಿಂದ ಹಿಡಿದು ಆಪರೇಷನ್ ಸಿಂದೂರ್ (Operation Sindoor)ವರೆಗೆ ಅವರ ನೇತೃತ್ವದ ಸರ್ಕಾರ ಕೈಗೊಂಡಿರುವ ಹಲವು ಯೋಜನೆಗಳನ್ನು ಇಡೀ ವಿಶ್ವವೇ ನಿಬ್ಬೆರಗಾಗುವಂತೆ ನೋಡಿದ್ದು ಇದೆ. ಅದರಲ್ಲಿಯೂ ಪಾಕಿಸ್ತಾನದ ಬೆಂಬಲದಿಂದ ಭಾರತವನ್ನು ಸರ್ವನಾಶ ಮಾಡಲು ಅದೆಷ್ಟೋ ದಶಕಗಳವರೆಗೆ ಯಶಸ್ವಿಯಾಗಿದ್ದ ಭಯೋತ್ಪಾದಕರನ್ನು ಬುಡ ಸಹಿತ ಕಿತ್ತುಹಾಕುವ ನಿಟ್ಟಿನಲ್ಲಿ ಇದಾಗಲೇ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದೇ ಕಾರಣಕ್ಕೆ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ಸ್ಥಿತಿ ಏನಾಗಿದೆ ಎನ್ನುವುದು ಗೊತ್ತೇ ಇದೆ. 2047ರ ವೇಳೆಗೆ ಭಾರತದ ಅಭಿವೃದ್ಧಿ ಶೀಲ ದೇಶ (ವಿಕಸಿತ ಭಾರತ) ಮಾಡುವ ಗುರಿ ನರೇಂದ್ರ ಮೋದಿಯವರದ್ದಾಗಿದೆ.
ರಾಜಕೀಯ ಸನ್ಯಾಸ? (PM Modi Political Monasticism)
ಇದರ ನಡುವೆಯೇ, ಖ್ಯಾತ ಜ್ಯೋತಿಷಿ ಸಂಜೀವ್ ಮಲಿಕ್ (Sanjiv Malik) ಅವರು ಶಾಕಿಂಗ್ ಎನ್ನುವಂಥ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಸೂಪರ್ಟಾಕ್ ಕ್ಲಿಪ್ಸ್ನಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಇದಾಗಲೇ ಭಾರತದ ಆರ್ಥಿಕತೆ ಅತಿವೇಗದಲ್ಲಿಯೇ ಸಾಗುತ್ತಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೊಂದೆರಡು ವರ್ಷಗಳಲ್ಲಿಯೇ ರಾಜಕೀಯ ಸನ್ಯಾಸತ್ವ ಸ್ವೀಕರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ! 2026-2027ರ ಆಸುಪಾಸಿನಲ್ಲಿಯೇ ಈ ಘಟನೆ ಸಂಭವಿಸಬಹುದಾಗಿದೆ. ಹಾಗೆಂದು ಸರ್ಕಾರ ಬಿದ್ದು ಹೋಗುತ್ತದೆ ಅಂತಲ್ಲ. ಇದೊಂದು ರೀತಿಯಲ್ಲಿ ತಮ್ಮ ಉತ್ತರಾಧಿಕಾರವನ್ನು ಬೇರೆಯವರಿಗೆ ಬಿಟ್ಟುಕೊಡುವುದು ಆಗಿದೆ ಎಂದು ಜ್ಯೋತಿಷಿ ಸಂಜೀವ್ ಮಲಿಕ್ ನುಡಿದಿದ್ದಾರೆ.
ಇದನ್ನೂ ಓದಿ: PM Modi Birthday: ನರೇಂದ್ರ ಮೋದಿಗೆ 2026 ಶುಭವಾ – ಅಶುಭವಾ? ಏನು ಹೇಳುತ್ತೆ ಅವರ ಜಾತಕ?
ಮುಂದಿನ ಪ್ರಧಾನಿ ಯೋಗಿ:
ಇದೇ ವೇಳೆ ನರೇಂದ್ರ ಮೋದಿ ಅವರ ಉತ್ತರಾಧಿಕಾರಿಯಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ (Yogi Adityanatha) ಅವರು ಪ್ರಧಾನಿಯಾಗಿ ಅಧಿಕಾರಕ್ಕೆ ಬರಲಿದ್ದಾರೆ. ಲವಶೇಷದ ಆಸೆ, ಲೋಭ, ಸ್ವಾರ್ಥವಿಲ್ಲದ ಮನುಷ್ಯ ಇವರು. ತಮ್ಮ ಜೀವನವನ್ನು ದೇಶಕ್ಕಾಗಿ ಮೀಸಲು ಇಡುವ, ದೃಢ ಸಂಕಲ್ಪದೊಂದಿಗೆ ದೇಶವನ್ನು ಮುನ್ನಡೆಸಬಲ್ಲ ಛಾತಿ ಇರುವ ವ್ಯಕ್ತಿಯೆಂದರೆ ಅದು ಯೋಗಿ ಆದಿತ್ಯನಾಥ ಅವರು ಎಂದಿದ್ದಾರೆ ಸಂಜೀವ್ ಮಲಿಕ್.
19 ಮುಸ್ಲಿಂ ರಾಷ್ಟ್ರಗಳ ಆಕ್ರಮಣ
ಇದೇ ವೇಳೆ ಶಾಕಿಂಗ್ ಎನ್ನುವಂಥ ವಿಷಯವನ್ನೂ ಅವರು ಪ್ರಸ್ತಾಪಿಸಿದ್ದಾರೆ. ಇದಾಗಲೇ ಭವಿಷ್ಯ ಮಾಲಿಕಾ (Bhavishya Malika)ದಲ್ಲಿ 19 ಮುಸ್ಲಿಂ ರಾಷ್ಟ್ರಗಳು ಭಾರತದ ಮೇಲೆ ಆಕ್ರಮಣ ಮಾಡಲು ಬರುತ್ತದೆ. ಅದರಲ್ಲಿ ಚೀನಾ ಕೂಡ ಸೇರಿದೆ ಎಂದಿದೆ. ಅದರಂತೆಯೇ ಸಂಭವಿಸಲಿದ್ದು, ಆ ಸಮಯದಲ್ಲಿ ಯೋಗಿ ಆದಿತ್ಯನಾಥ ಅವರೇ ಪ್ರಧಾನಿಯಾಗಿರಲಿದ್ದಾರೆ. ಆದರೆ, ಆ 19 ರಾಷ್ಟ್ರಗಳಿಂದಲೂ ಭಾರತವನ್ನು ಅಲ್ಲಾಡಿಸಲು ಸಾಧ್ಯವಾಗುವುದಿಲ್ಲ. ಅಂಥದ್ದೊಂದು ವಿಶೇಷ ಪವರ್ ಯೋಗಿ ಆದಿತ್ಯನಾಥ ಅವರಲ್ಲಿ ಇದೆ. ಭಾರತ ಸೇಫ್ ಆಗಿ ಉಳಿಯಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: We want Modi... ನೇಪಾಳದಲ್ಲಿ ಯುವಕರ ಘೋಷಣೆ- ಓಲಿ ಬೇಡ ನಮಗೂ ಮೋದಿ ಬೇಕೆಂದ ವಿಡಿಯೋ ವೈರಲ್
ಆಪರೇಷನ್ ಸಿಂದೂರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೋರಿರುವ ಸಾಹಸ, ಸ್ಥಳೀಯ ಶಸ್ತ್ರಾಸ್ತ್ರಗಳನ್ನೇ ಬಳಸಿ ಪಾಕಿಸ್ತಾನದ ಉಗ್ರರನ್ನು ಮಟ್ಟ ಹಾಕಿರುವ ಸ್ಥಿತಿಯನ್ನು ಇಡೀ ವಿಶ್ವವೇ ಬೆರಗುಗಣ್ಣುಗಳಿಂದ ನೋಡಿದೆ. ಅದೇ ಶಕ್ತಿ, ಯುಕ್ತಿಯನ್ನು ಯೋಗಿ ಆದಿತ್ಯನಾಥ ಅವರೂ ಮುಂದುವರೆಸಿಕೊಂಡು ಹೋಗಲಿದ್ದಾರೆ. ಅವರ ಆಧ್ಯಾತ್ಮಿಕ ಶಕ್ತಿ ಅತ್ಯಂತ ಬಲಶಾಲಿಯಾಗಿದೆ. ಯಾವ ದೇಶಕ್ಕೂ ಭಾರತವನ್ನು ಟಚ್ ಮಾಡಲು ಆಗುವುದಿಲ್ಲ ಎಂದಿದ್ದಾರೆ.

