PM Narendra modi@72: ಪ್ರಧಾನಿಯವರ ಫಿಟ್ ನೆಸ್ ರಹಸ್ಯ ಈ 5 ದೇಸಿ ಆಹಾರದಲ್ಲಿ ಅಡಗಿದೆ!
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಪ್ರಬಲ ಪ್ರಧಾನ ಮಂತ್ರಿಗಳಲ್ಲಿ ಒಬ್ಬರು. ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17 ರಂದು ತಮ್ಮ 71ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವರ್ಷಗಳು 70 ಆದರೂ, ಇಂದಿಗೂ 18 ಗಂಟೆಗಳ ಕಾಲ ಕೆಲಸ ಮಾಡಿದರೂ ಮತ್ತು ಗಂಭೀರ ವಿಷಯಗಳಲ್ಲಿ ನಿರತರಾಗಿದ್ದರೂ ತನ್ನನ್ನು ತಾನು ಸಕ್ರಿಯವಾಗಿ ಮತ್ತು ಸದೃಢವಾಗಿರಿಸಿಕೊಳ್ಳಲು ಅವರು ಏನು ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕಾ? ಹಲವಾರು ಸಂದರ್ಭಗಳಲ್ಲಿ, ಸ್ವತಃ ಪ್ರಧಾನಿ ಮೋದಿ ಅವರು ಸಾರ್ವಜನಿಕರೊಂದಿಗೆ ಮಾತನಾಡುವಾಗ ತಮ್ಮ ದಿನಚರಿ, ಫಿಟ್ನೆಸ್ ಮಂತ್ರವನ್ನು ಹಂಚಿಕೊಂಡಿದ್ದಾರೆ. ಆದರೆ ಇಂದು ನಾವು ಅವರ ಆಹಾರದ ಬಗ್ಗೆ ನಿಮಗೆ ಹೇಳುತ್ತಿದ್ದೇವೆ, ಇವುಗಳನ್ನು ತಿಳಿದುಕೊಂಡು ನೀವು ಸಹ ಫಿಟ್ ಆಗಿರಿ.
ಸಾಮಾನ್ಯ ಜೀವನವನ್ನು ನಡೆಸುವ ರಾಜಕಾರಣಿಗಳಲ್ಲಿ ಪ್ರಧಾನಿ ಮೋದಿ ಸಹ ಒಬ್ಬರು ಎಂದು ಪರಿಗಣಿಸಲಾಗಿದೆ ಅನ್ನೋದು ಬಹುತೇಕ ಎಲ್ಲರಿಗೂ ತಿಳಿದಿದೆ. ಮೋದಿಯವರು ಫಿಟ್ ಆಗಿರೋದು ಹೇಗೆ ಅನ್ನೋ ಪ್ರಶ್ನೆ ನಿಮ್ಮಲ್ಲೂ ಇದ್ದರೆ, ಇಲ್ಲಿದೆ ಕೇಳಿ ನಿಮಗೆ ಬೇಕಾದ ವರದಿ. ಪ್ರಧಾನಿ ಮೋದಿಯವರು(Modi) ತಮ್ಮನ್ನು ತಾವು ಆರೋಗ್ಯ ಮತ್ತು ಶಕ್ತಿಯುತವಾಗಿರಿಸಿಕೊಳ್ಳಲು ಅತ್ಯಂತ ಕಟ್ಟುನಿಟ್ಟಾದ ಸರಳ ಆಹಾರ ಕ್ರಮ ಅನುಸರಿಸುತ್ತಾರೆ. ಇದರೊಂದಿಗೆ, ಪ್ರಧಾನಿ ಮೋದಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳಿಗಾಗಿ ಯೋಗ ಮತ್ತು ಉಪವಾಸವನ್ನು ಸಹ ಮಾಡುತ್ತಾರೆ.
ನುಗ್ಗೆ ಪರಾಠಾ(Moringa parota)
ಫಿಟ್ ಇಂಡಿಯಾ ಆಂದೋಲನದ ಸಮಯದಲ್ಲಿ, ಪ್ರಧಾನಿ ಮೋದಿ ಅವರು ವಾರಕ್ಕೆ ಒಂದು ಅಥವಾ ಎರಡು ಬಾರಿ ನುಗ್ಗೆ ಪರಾಠಾಗಳನ್ನು ಸೇವಿಸುತ್ತಾರೆ ಎಂದು ಹೇಳಿದ್ದರು. ಆಯುರ್ವೇದದಲ್ಲಿ, ನುಗ್ಗೆಕಾಯಿಯನ್ನು 300 ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ನುಗ್ಗೆ ಸೊಪ್ಪು, ಬೀಜಗಳಿಂದ ಹಿಡಿದು ಎಲ್ಲಾ ಭಾಗಗಳಲ್ಲಿ ಔಷಧೀಯ ಗುಣಗಳು ಕಂಡುಬರುತ್ತವೆ.
ನುಗ್ಗೆ ಸೇವನೆಯು ರೋಗನಿರೋಧಕ ಶಕ್ತಿಯನ್ನು(Immunity power) ಹೆಚ್ಚಿಸುತ್ತೆ. ಕ್ಯಾಲ್ಸಿಯಂ ಸಮೃದ್ಧವಾಗಿರೋದರಿಂದ, ನುಗ್ಗೆಕಾಯಿಯ ಬಳಕೆ, ಸಂಧಿವಾತಕ್ಕೆ ತುಂಬಾ ಪ್ರಯೋಜನಕಾರಿ. ಬೇಗ ಜೀರ್ಣವಾಗೋದರಿಂದ, ಲಿವರ್ ಅನ್ನು ಆರೋಗ್ಯಕರವಾಗಿಡುವಲ್ಲಿಯೂ ಇದು ತುಂಬಾ ಪರಿಣಾಮಕಾರಿ. ಹೊಟ್ಟೆ ನೋವು, ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆಯಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.
ವಾರದಲ್ಲಿ 3 ದಿನ ವಾಘರೇಲಿ ಖಿಚಡಿ(Vaghareli Khichdi)
ದೇಶದ ಪ್ರಧಾನ ಮಂತ್ರಿಯ ಫಿಟ್ ನೆಸ್ ನ ರಹಸ್ಯವು ದುಬಾರಿ ಆಹಾರವಲ್ಲ ಆದರೆ ಗುಜರಾತಿ ಶೈಲಿಯಲ್ಲಿ ತಯಾರಿಸಿದ ಕಿಚಡಿ. ಇದನ್ನು ವಾಘರೇಲಿ ಖಿಚಡಿ ಎಂದೂ ಕರೆಯುತ್ತಾರೆ. ಇದು ಮಸಾಲೆಯುಕ್ತವಾಗಿದೆ. ಆದರೆ ಪ್ರಧಾನಿ ಮೋದಿ ಇದನ್ನು ಕಡಿಮೆ ಮಸಾಲೆಗಳೊಂದಿಗೆ ತಿನ್ನಲು ಬಯಸುತ್ತಾರೆ. ಇದನ್ನು ನೀರು, ಅರಿಶಿನ ಪುಡಿ ಮತ್ತು ಉಪ್ಪಿನೊಂದಿಗೆ ಅಕ್ಕಿ ಮತ್ತು ಹೆಸರು ಬೇಳೆಯೊಂದಿಗೆ ಬೇಯಿಸಲಾಗುತ್ತೆ. ನಂತರ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ ಲವಂಗ, ಕರಿಬೇವಿನ ಎಲೆ ಮತ್ತು ಕೊತ್ತಂಬರಿ ಪುಡಿಯನ್ನು ಸೇರಿಸಿ ಒಗ್ಗರಣೆ ಕೊಡಲಾಗುತ್ತೆ. ಪ್ರಧಾನಿ ಮೋದಿ ವಾರದಲ್ಲಿ ಕನಿಷ್ಠ 3 ದಿನ ವಾಘರೇಲಿ ಖಿಚಡಿ ಸೇವಿಸುತ್ತಾರೆ.
ಖಿಚಡಿ(Kichdi) ವಿಟಮಿನ್ ಬಿ, ಪೊಟ್ಯಾಸಿಯಮ್, ರಂಜಕ, ಫೋಲಿಕ್ ಆಮ್ಲ, ಮ್ಯಾಂಗನೀಸ್ ಮತ್ತು ಎಲ್ಲಾ ಅಗತ್ಯ ಅಮೈನೋ ಆಮ್ಲಗಳಿಂದ ಸಮೃದ್ಧವಾಗಿದೆ. ಇದನ್ನು ಅರಿಶಿನದಂತಹ ಮಸಾಲೆಗಳಿಂದ ತಯಾರಿಸಲಾಗುತ್ತೆ, ಆದುದರಿಂದ ಕಿಚಡಿ ಉರಿಯೂತ ಶಮನಕಾರಿ ಪ್ರಯೋಜನಗಳನ್ನು ನೀಡುತ್ತೆ. ಇದಲ್ಲದೆ, ಈ ಕಿಚಡಿ ಉಸಿರಾಟದ ಸಮಸ್ಯೆ, ಅಲರ್ಜಿ, ಸಂಧಿವಾತ, ಮಧುಮೇಹ ಗಾಯಗಳು ಇತ್ಯಾದಿಗಳಿಗೆ ಚಿಕಿತ್ಸೆ ನೀಡಲು ಸಹ ಪ್ರಯೋಜನಕಾರಿ.
ಅರಿಶಿನದ(Turmeric) ನಿಯಮಿತ ಸೇವನೆ
ಪ್ರಧಾನಿ ಮೋದಿ ನಿಯಮಿತವಾಗಿ ಅರಿಶಿನ ಸೇವಿಸುತ್ತಾರೆ. ಫಿಟ್ ಇಂಡಿಯಾ ಆಂದೋಲನದ ಒಂದು ವರ್ಷ ಪೂರ್ಣಗೊಂಡ ನಂತರ ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆ ಮಾತನಾಡಿದ ಅವರು, ಪ್ರತಿದಿನ ಅರಿಶಿನವನ್ನು ತಿನ್ನುತ್ತೀರೋ ಇಲ್ಲವೋ ಎಂದು ಅವರ ತಾಯಿ ಯಾವಾಗಲೂ ಕೇಳುತ್ತಾರೆ ಎಂದು ಹೇಳಿದರು. ವಾಸ್ತವವಾಗಿ, ಅರಿಶಿನ ಆಯುರ್ವೇದದಲ್ಲಿ ಅತ್ಯಂತ ಪರಿಣಾಮಕಾರಿ ಔಷಧಿಗಳಲ್ಲಿ ಒಂದು ಪರಿಗಣಿಸಲಾಗಿದೆ.
ಎನ್ಸಿಬಿಐ ಪ್ರಕಾರ, ಅರಿಶಿನ ಮುಖ್ಯವಾಗಿ ಉರಿಯೂತ ಶಮನಕಾರಿ, ಉತ್ಕರ್ಷಣ ನಿರೋಧಕ, ಆಂಟಿಟ್ಯೂಮರ್, ನಂಜುನಿರೋಧಕ, ಆಂಟಿವೈರಲ್(Anti viral), ಕಾರ್ಡಿಯೋಪ್ರೊಟೆಕ್ಟೀವ್ (ಹೃದಯ-ಆರೋಗ್ಯ ಕಾಪಾಡುವ ಗುಣ), ಹೆಪಟೋಪ್ರೊಟೆಕ್ಟಿವ್ (ಪಿತ್ತಜನಕಾಂಗದ ಆರೋಗ್ಯ ಕಾಪಾಡುವ ಗುಣ) ಮತ್ತು ನೆಫ್ರೋಪ್ರೊಟೆಕ್ಟೀವ್ ಗುಣಲಕ್ಷಣಗಳನ್ನು ಹೊಂದಿದೆ.
ಪ್ರತಿದಿನ ಒಂದು ಬಟ್ಟಲು ಮೊಸರು(Curd)
ಪ್ರಧಾನಿ ಮೋದಿ ಪ್ರತಿದಿನ ಒಂದು ಬಟ್ಟಲು ಮೊಸರು ಸೇವಿಸುತ್ತಾರೆ. ಮೊಸರನ್ನು ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನೀವು ಪ್ರತಿದಿನ ಒಂದು ಬಟ್ಟಲು ಮೊಸರನ್ನು ಸೇವಿಸಿದರೆ, ಅನಾರೋಗ್ಯಕರ ತೂಕ, ದುರ್ಬಲ ರೋಗನಿರೋಧಕ ಶಕ್ತಿ, ದುರ್ಬಲ ಹಲ್ಲುಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳಂತಹ ಸಮಸ್ಯೆಗಳನ್ನು ತಪ್ಪಿಸಬಹುದು. ಮೊಸರಿನಲ್ಲಿ ಕಂಡುಬರುವ ಕ್ಯಾಲ್ಸಿಯಂ, ವಿಟಮಿನ್ ಬಿ -12, ವಿಟಮಿನ್ ಬಿ -2, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ಇದಕ್ಕೆ ಕಾರಣ.
ಹಿಮಾಚಲದ ಪರ್ವತ ಅಣಬೆಗಳು(Hill Mushroom)
ಹಿಮಾಚಲ ಪ್ರದೇಶದಲ್ಲಿ ಬೆಳೆದ ಪರ್ವತ ಅಣಬೆಗಳನ್ನು ಸೇವಿಸುತ್ತೇನೆ ಎಂದು ಪ್ರಧಾನಿ ಮೋದಿ ತಮ್ಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ಮೊರೆಲ್ ಮಶ್ರೂಮ್ ಎಂದು ಕರೆಯಲಾಗುತ್ತೆ. ಇದರಲ್ಲಿ ಸಾಕಷ್ಟು ವಿಟಮಿನ್ ಡಿ ಇದೆ. ಇದರೊಂದಿಗೆ, ಇದು ಪಿತ್ತಜನಕಾಂಗವನ್ನು ನಿರ್ವಿಷಗೊಳಿಸುತ್ತೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ, ಹೃದ್ರೋಗಗಳಿಂದ ರಕ್ಷಿಸುತ್ತೆ.