ಪುರುಷರೇ ಎಚ್ಚರ! ವಯಾಗ್ರ ಮಾತ್ರೆ ಸೇವನೆಯಿಂದ ಸಾವು ಆಗುತ್ತಾ? ತಜ್ಞರು ಏನು ಹೇಳುತ್ತಾರೆ?
Men Health: ವಯಾಗ್ರ ಮಾತ್ರೆಗಳ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ. ಈ ಮಾತ್ರೆಗಳು ಹೃದಯಾಘಾತ, ಕಡಿಮೆ ರಕ್ತದೊತ್ತಡ, ವಾಕರಿಕೆ, ಮತ್ತು ತಲೆನೋವಿನಂತಹ ಗಂಭೀರ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು.

ಪುರುಷರ ಆರೋಗ್ಯ
ಕೆಲ ಪುರುಷರು ಕಾಮಾಸಕ್ತಿಗಾಗಿ ವಯಾಗ್ರ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಈ ಮಾತ್ರೆಗಳ ಸೇವನೆಯಿಂದ ಸಾವು ಬರುತ್ತಾ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುತ್ತದೆ. ಅತಿಯಾದ್ರೆ ಅಮೃತವೂ ವಿಷವಾಗುತ್ತೆ. ಈ ಮಾತ್ರೆಗಳ ಸೇವನೆ ದೀರ್ಘಾವಧಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಲೇಖನದಲ್ಲಿ ವಯಾಗ್ರ ಸೇವನೆಯ ಅಡ್ಡಪರಿಣಾಮಗಳೇನು ಎಂಬುದರ ಮಾಹಿತಿ ಇಲ್ಲಿದೆ
1.ಹೃದಯಾಘಾತ
ನಿರಂತರವಾಗಿ ವಯಾಗ್ರ ಮಾತ್ರೆಗಳನ್ನು ಸೇವಿಸುವ ಪುರುಷರಲ್ಲಿ ಹೃದಯಸಂಬಂಧಿ ಸಮಸ್ಯೆಗಳು ಕಂಡು ಬರುತ್ತವೆ. ಹೃದಯ ಸಂಬಂಧಿ ಸಮಸ್ಯೆ ಹೊಂದಿರುವ ಪುರುಷರು ಈ ಮಾತ್ರೆ ಸೇವಿಸದಂತೆ ಸಲಹೆ ನೀಡಲಾಗುತ್ತದೆ. ವಯಾಗ್ರ ಸೇವನೆಯಿಂದ ಹೃದಯಬಡಿತ ಹೆಚ್ಚಾಗಿ ಸಾವಿಗೆ ಕಾರಣವಾಗಬಹುದು.
2.ಲೋ ಬಿಪಿ
ವಯಾಗ್ರ ಯಾವಾಗ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆಯೂ ತಿಳಿದಿರಬೇಕು. ಮಾತ್ರೆ ಸೇವಿಸಿದ ಎರಡು ಗಂಟೆ ನಂತ್ರ ಅದು ಕೆಲಸ ಮಾಡಲು ಆರಂಭಿಸುತ್ತದೆ. ಆದ್ರೆ ಕೆಲವರು ಮಾತ್ರೆ ಸೇವಿಸಿದ ತಕ್ಷಣವೇ ಮೂಡ್‌ಗೆ ಹೋಗುತ್ತಾರೆ. ಮಾತ್ರೆ ಕೆಲಸ ಮಾಡ್ತಿಲ್ಲ ಎಂದು ಒಂದಾದ ನಂತರ ಮತ್ತೊಂದರಂತೆ ಮಾತ್ರೆ ಸೇವಿಸುತ್ತಾರೆ. ಹೈಡೋಸ್ ಆಗಿ ಲೋ ಬಿಪಿ ಉಂಟಾಗಿ ಸಾವು ಸಂಭವಿಸುತ್ತೆ ಎಂದು ವೈದ್ಯರು (Dr. Stone’s Mens clinic) ಹೇಳುತ್ತಾರೆ.
ಈ ರೀತಿಯ ಮಾತ್ರೆಗಳನ್ನು ಸೇವಿಸಿದ ಸಂದರ್ಭದಲ್ಲಿ ಲೋ ಬಿಪಿ (ಕಡಿಮೆ ರಕ್ತದೊತ್ತಡ) ಲಕ್ಷಣಗಳು ಕಂಡು ಬಂದ್ರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
3.ವಾಕರಿಕೆ
ನಿರಂತರ ಮಾತ್ರೆಗಳ ಸೇವನೆಯಿಂದ ವಾಕರಿಕೆ ಅಥವಾ ವಾಂತಿ ಬಂದಂತಹ ಫೀಲ್ ಆಗುತ್ತದೆ. ಈ ಸಮಸ್ಯೆ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮೆದಳು, ಅನ್ನನಾಳ ಸೇರಿದಂತೆ ಯಕೃತ್ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
4.ತಲೆನೋವು
ಕೆಲವು ಸಂದರ್ಭದಲ್ಲಿ ಮಾತ್ರೆಗಳ ಅಡ್ಡ ಪರಿಣಾಮದಿಂದ ದೀರ್ಘಕಾಲದ ತಲೆನೋವು ಕಾಣಿಸಿಕೊಳ್ಳುತ್ತದೆ. ಅತಿಯಾದ ಡೋಸ್‌ನಿಂದ ನಿಮಿರುವಿಕೆ ಸೇರಿದಂತೆ ಹೊಸ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಪದೇ ಪದೇ ದೀರ್ಘಕಾಲದ ತಲೆನೋವು ಕಾಣಿಸಿಕೊಳ್ಳುತ್ತಿದ್ರೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ.
ಇದನ್ನೂ ಓದಿ: ಪುರುಷರಲ್ಲಿ ಕಂಡುಬರುವ 4 ಲಕ್ಷಣಗಳು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ
5.ಇತರೆ ಅಡ್ಡಪರಿಣಾಮಗಳು
ವಯಾಗ್ರ ಸೇವನೆಯಿಂದ ದೃಷ್ಟಿ ಸಮಸ್ಯೆಯೂ ಉಂಟಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ. ಇದರ ಜೊತೆ ಕಿವಿ ಕೇಳುವಿಕೆ ಮಂದವಾಗಬಹುದು, ನಿಶ್ಯಕ್ತಿ, ಮಾನಸಿಕ ಖಿನ್ನತೆ, ಒತ್ತಡದಂತಹ ಸಮಸ್ಯೆಗಳಿಗೆ ಈ ಮಾತ್ರೆಗಳು ಕಾರಣವಾಗಬಹುದು. ಈ ಕಾರಣದಿಂದ ಯಾವುದೇ ಮಾತ್ರೆ ಅಥವಾ ಔಷಧಿ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಲಾಗುತ್ತದೆ.
ಇದನ್ನೂ ಓದಿ: ಪುರುಷರು ಮರೆತೂ ತಿನ್ನಬಾರದ ಆಹಾರಗಳು, ಇವುಗಳನ್ನು ಕಡ್ಡಾಯವಾಗಿ ಬಿಟ್ಟುಬಿಡಿ
Disclaimer
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ