- Home
- Life
- Health
- ನುಗ್ಗೆ ಸೊಪ್ಪಿನ ಪುಡಿಯನ್ನ ಒಂದು ಲೋಟ ಬಿಸಿ ನೀರಿನಲ್ಲಿ ಬೆರೆಸಿ ಕುಡಿದ್ರೆ ಲೆಕ್ಕವಿಲ್ಲದಷ್ಟು ಪ್ರಯೋಜನ!
ನುಗ್ಗೆ ಸೊಪ್ಪಿನ ಪುಡಿಯನ್ನ ಒಂದು ಲೋಟ ಬಿಸಿ ನೀರಿನಲ್ಲಿ ಬೆರೆಸಿ ಕುಡಿದ್ರೆ ಲೆಕ್ಕವಿಲ್ಲದಷ್ಟು ಪ್ರಯೋಜನ!
ನುಗ್ಗೆಕಾಯಿ ಒಳ್ಳೆಯ ಆರೋಗ್ಯಕರ ಆಹಾರ. ಇದರಿಂದ ನಾವು ಅನೇಕ ಪ್ರಯೋಜನಗಳನ್ನು ಪಡೆಯುತ್ತೇವೆ. ಅದರಲ್ಲೂ ನುಗ್ಗೆ ಸೊಪ್ಪಿನ ಪುಡಿಯನ್ನ ಒಂದು ಲೋಟ ಬಿಸಿ ನೀರಿನಲ್ಲಿ ಬೆರೆಸಿ ಕುಡಿದರೆ ನೀವು ಅನೇಕ ಲಾಭಗಳನ್ನು ಪಡೆಯುತ್ತೀರಿ.

ನುಗ್ಗೆ ಸೊಪ್ಪು ಕೇವಲ ಒಂದು ಸೊಪ್ಪಲ್ಲ.. ಪೋಷಕಾಂಶಗಳ ಭಂಡಾರ ಅಂತಾನೆ ಹೇಳಬೇಕು. ಯಾಕಂದ್ರೆ ಇದನ್ನು ಉಪಯೋಗಿಸಿ ನಾವು ಅನೇಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಸೇವಿಸುವುದರಿಂದ ನಾವು ಆರೋಗ್ಯವಾಗಿಯೂ ಇರುತ್ತೇವೆ. ಸುಂದರವಾಗಿಯೂ ಕಾಣುತ್ತೇವೆ. ನೀವು ಈ ನುಗ್ಗೆ ಸೊಪ್ಪಿನ ಪುಡಿಯನ್ನ ಪ್ರತಿದಿನ ಒಂದು ಲೋಟ ಬಿಸಿ ನೀರಿನಲ್ಲಿ ಬೆರೆಸಿ ಕುಡಿದರೆ ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಕೆಲವು ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಅವು ಯಾವುವು ಅಂತ ಈಗ ತಿಳಿದುಕೊಳ್ಳೋಣ ಬನ್ನಿ.
ನುಗ್ಗೆ ಸೊಪ್ಪಿನ ಪುಡಿಯಿಂದಾಗುವ ಪ್ರಯೋಜನಗಳು
ತೂಕ ಇಳಿಕೆ
ನೀವು ಕೂಡ ಅಧಿಕ ತೂಕದಿಂದ ಬಳಲುತ್ತಿದ್ದರೆ ನಿಮಗೆ ಈ ನುಗ್ಗೆ ಸೊಪ್ಪಿನ ಪುಡಿ ಚೆನ್ನಾಗಿ ಉಪಯೋಗಕ್ಕೆ ಬರುತ್ತದೆ. ಈ ನುಗ್ಗೆ ಸೊಪ್ಪಿನ ಪುಡಿಯಲ್ಲಿ ನಾರಿನಂಶ ಹೇರಳವಾಗಿರುತ್ತದೆ. ಇದು ನಿಮ್ಮ ಹೊಟ್ಟೆಯನ್ನು ಹೆಚ್ಚು ಹೊತ್ತು ತುಂಬಿರುವಂತೆ ಮಾಡುತ್ತದೆ. ಇದರಿಂದ ನಿಮಗೆ ಬೇಗ ಹಸಿವು ಆಗುವುದಿಲ್ಲ. ಹಾಗೆಯೇ ಪದೇ ಪದೇ ತಿನ್ನುವುದನ್ನು ತಪ್ಪಿಸುತ್ತದೆ. ಈ ನುಗ್ಗೆ ಸೊಪ್ಪಿನ ಪುಡಿ ನಿಮ್ಮ ಜೀರ್ಣಕ್ರಿಯೆಯನ್ನು ಕೂಡ ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಶರೀರದಲ್ಲಿ ಸಂಗ್ರಹವಾಗಿರುವ ಕೊಬ್ಬು ಕರಗುತ್ತದೆ. ಈ ರೀತಿ ನೀವು ನುಗ್ಗೆ ಸೊಪ್ಪಿನ ಪುಡಿಯಿಂದ ತೂಕ ಇಳಿಸಿಕೊಳ್ಳಬಹುದು.
ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ
ನುಗ್ಗೆ ಸೊಪ್ಪಿನ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ನಿಮ್ಮ ಕೂದಲು ಮತ್ತು ಚರ್ಮಕ್ಕೂ ಒಳ್ಳೆಯದು. ನಿಮ್ಮ ಕೂದಲು ಉದುರುತ್ತಿದ್ದರೆ, ನಿಮ್ಮ ಚರ್ಮ ಒಣಗಿದ್ದರೆ ಇದು ನಿಮಗೆ ಚೆನ್ನಾಗಿ ಉಪಯೋಗಕ್ಕೆ ಬರುತ್ತದೆ. ಹೌದು, ನುಗ್ಗೆ ಸೊಪ್ಪಿನ ಪುಡಿಯಲ್ಲಿ ವಿಟಮಿನ್ ಎ, ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇವೆಲ್ಲವೂ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಯೌವನಯುತವಾಗಿರಿಸುತ್ತವೆ. ಅಲ್ಲದೆ ನಿಮ್ಮ ಕೂದಲು ದಟ್ಟವಾಗುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ. ಈ ಪುಡಿಯನ್ನು ಪ್ರತಿದಿನ ಸೇವಿಸಿದರೆ ಒಳಗಿನಿಂದ ನಿಮ್ಮ ಸೌಂದರ್ಯ ಹೆಚ್ಚುತ್ತದೆ.
ಎಲುಬುಗಳು ಬಲವಾಗಿರುತ್ತವೆ
ವಯಸ್ಸಾದಂತೆ ಎಲುಬುಗಳ ಬಲ ಕಡಿಮೆಯಾಗುವುದು ಸಾಮಾನ್ಯ. ಆದರೆ ನುಗ್ಗೆಪುಡಿ ಈ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನುಗ್ಗೆ ಸೊಪ್ಪಿನ ಪುಡಿಯಲ್ಲಿ ಎಲುಬುಗಳನ್ನು ಬಲಪಡಿಸುವ ಕ್ಯಾಲ್ಸಿಯಂ ಮತ್ತು ರಂಜಕಗಳು ಹೇರಳವಾಗಿವೆ. ಈ ಪುಡಿಯನ್ನು ಸೇವಿಸುವುದರಿಂದ ಎಲುಬುಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ನೀವು ಪಾರಾಗುತ್ತೀರಿ. ಈ ಪುಡಿಯನ್ನು ಪ್ರತಿದಿನ ಸೇವಿಸಿದರೆ ಕೀಲುಗಳ ಊತ ಮತ್ತು ನೋವಿನಿಂದ ಪರಿಹಾರ ಪಡೆಯುತ್ತೀರಿ.