59ರ ಹರೆಯದಲ್ಲೂ ಫಿಟ್ ಆಗಿರುವ ಅಕ್ಷಯ್ ಕುಮಾರ್… ಫಿಟ್ನೆಸ್ ಸೀಕ್ರೆಟ್ ನೀವೂ ಫಾಲೋ ಮಾಡಿ
ಫಿಟ್ನೆಸ್ ಫ್ರೀಕ್ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ತಮ್ಮ 58 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ಅವರು ತಮ್ಮ ಅಭಿಮಾನಿಗಳಿಗೆ ಕೆಲವು ವಿಷಯಗಳನ್ನು ಹೇಳಿದ್ದರು, ಅದರಲ್ಲಿ ತಮ್ಮ ಫಿಟ್ನೆಸ್ ಸೀಕ್ರೆಟ್ ಸಹ ರಿವೀಲ್ ಮಾಡಿದ್ದಾರೆ.

ನಿಮ್ಮ ದೇಹಕ್ಕೆ ಸಮಯ ನೀಡುವುದು ಮುಖ್ಯ
ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ (Akshay Kumar) ತಮ್ಮ ಫಿಟ್ನೆಸ್ ಬಗ್ಗೆ ತುಂಬಾ ಜಾಗೃತರು. ಏನೇ ಆದರೂ, ಅವರು ತಮ್ಮ ದಿನಚರಿಯನ್ನು ತಪ್ಪಿಸಿಕೊಳ್ಳುವುದಿಲ್ಲ. ದಿನದ 24 ಗಂಟೆಗಳಲ್ಲಿ ಸ್ವಲ್ಪ ಸಮಯವಾದರೂ ನಮ್ಮ ದೇಹಕ್ಕೆ ನೀಡಲು ಸಾಧ್ಯವಾಗದಿದ್ದರೆ, ಏನು ಪ್ರಯೋಜನ ಎಂದು ಅಕ್ಷಯ್ ಎನ್ನುತ್ತಾರೆ..
ಉನ್ನತ ಮಟ್ಟದ ಶಕ್ತಿ
ಜೀವನದಲ್ಲಿ ಯಾವುದೇ ಶಾರ್ಟ್‌ಕಟ್ ಇಲ್ಲ ಎಂದು ಅಕ್ಷಯ್ ಹೇಳುತ್ತಾರೆ. ನಿಯಮಿತ ವ್ಯಾಯಾಮ, ಆಹಾರ ಯೋಜನೆ (food planning), ಯೋಗದಿಂದಾಗಿ, ಅಕ್ಷಯ್ ಕುಮಾರ್ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಅವರ ದಿನಚರಿ
ಅಕ್ಷಯ್ ಬೆಳಿಗ್ಗೆ 5 ಗಂಟೆಗೆ ಎದ್ದೇಳುತ್ತಾರೆ, ಸಂಜೆ 6.30 ಕ್ಕೆ ಊಟ ಮಾಡುತ್ತಾರೆ. ನಾವು ಸಂಜೆಯೇ ಊಟ ಮಾಡಬೇಕು ಎಂದು ನಟ ಹೇಳುತ್ತಾರೆ. ನಾವು ಅದನ್ನು ಬೇಗ ಮಾಡಿದರೆ ಒಳ್ಳೆಯದು. ಏಕೆಂದರೆ ನಾವು ಮಲಗಿರುವಾಗ, ನಮ್ಮ ದೇಹದ ಎಲ್ಲಾ ಭಾಗಗಳು ಕೆಲಸ ಮಾಡುತ್ತವೆ.
ಹೊಟ್ಟೆಯ ಬಗ್ಗೆ ಕಾಳಜಿ ವಹಿಸುವುದು ಮುಖ್ಯ
ಎಲ್ಲಾ ರೋಗಗಳು ಹೊಟ್ಟೆಯಿಂದ ಪ್ರಾರಂಭವಾಗುತ್ತವೆ ಹಾಗಾಗಿ ಅದರಲ್ಲಿ ಆಹಾರವನ್ನು ಬೇಕಾಬಿಟ್ಟಿ ತುಂಬಿಸುವುದು ತಪ್ಪು ಎನ್ನುತ್ತಾರೆ ಅಕ್ಷಯ್ ಕುಮಾರ್. ನೀವು ಸಾಮಾನ್ಯವಾಗಿ ಮತ್ತು ಸರಿಯಾದ ಪ್ರಮಾಣದಲ್ಲಿ ಸಮಯಕ್ಕೆ ತಿಂದರೆ, ರೋಗಗಳು ಬರುವ ಸಾಧ್ಯತೆಗಳು ಕಡಿಮೆಯಾಗುತ್ತವೆ.
ಸೋಮವಾರ ಉಪವಾಸ
ಅಕ್ಷಯ್ ಕುಮಾರ್ ಸೋಮವಾರ ಉಪವಾಸ (Monday Fasting) ಮಾಡುತ್ತಾರೆ. ನಂತರ ಅವರು ಮಂಗಳವಾರ ಬೆಳಿಗ್ಗೆ ತನಕ ಏನನ್ನೂ ತಿನ್ನುವುದಿಲ್ಲ. ಇದರಿಂದಾಗಿ, ಅವರು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಶಾಂತವಾಗಿರುತ್ತಾರೆ.
ಅವರು ತಮ್ಮದೇ ಆದ ಸ್ಟಂಟ್‌ಗಳನ್ನು ಮಾಡುತ್ತಾರೆ
ಬಾಲಿವುಡ್‌ಗೆ ಬರುವ ಮೊದಲೇ ಅಕ್ಷಯ್ ಕುಮಾರ್ ಸಮರ ಕಲೆಗಳಲ್ಲಿ ಪರಿಣಿತರಾಗಿದ್ದರು. ಅವರಿಗೆ ಬಾಲ್ಯದಿಂದಲೂ ಫಿಟ್ ಆಗಿ ಉಳಿಯುವ ಅಭ್ಯಾಸವಿದೆ. ಅವರು ಇನ್ನೂ ತಮ್ಮದೇ ಆದ ಸ್ಟಂಟ್‌ಗಳನ್ನು ಮಾಡುತ್ತಾರೆ.
ವೈಟ್ ಲಿಫ್ಟ್ ಮಾಡೋದಿಲ್ಲ
ಅಕ್ಷಯ್ ಕುಮಾರ್ ವೈಟ್ ಲಿಫ್ಟ್ (weight lift) ಮಾಡೋದಿಲ್ಲ. ಅವರು ಇತರ ಎಲ್ಲಾ ವ್ಯಾಯಾಮಗಳನ್ನು ಮಾಡುತ್ತಾರೆ. ಸ್ವಿಮ್ಮಿಂಗ್, ರನ್ನಿಂಗ್, ಯೋಗ ಮತ್ತು ಸ್ಪಾರಿಂಗ್ ಎಲ್ಲವನ್ನೂ ಮಾಡುತ್ತಾರೆ.
ಮದ್ಯಪಾನದಿಂದ ದೂರವಿರುತ್ತಾರೆ
ಅಕ್ಷಯ್ ಕುಮಾರ್ ಮದ್ಯಪಾನ, ಸಿಗರೇಟ್ ಮತ್ತು ಲೇಟ್ ನೈಟ್ ಪಾರ್ಟಿಗಳಂತಹ (Late night party) ಅಭ್ಯಾಸಗಳಿಂದ ದೂರವಿರುತ್ತಾರೆ. ಇದು ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಅನ್ನೋದು ಅವರ ನಂಬಿಕೆ. ಇದಲ್ಲದೆ, ನಟನಿಗೆ ಚಹಾ ಮತ್ತು ಕಾಫಿ ಕುಡಿಯುವುದು ಅಭ್ಯಾಸ ಕೂಡ ಇಲ್ಲ.