ಈ ಸೀಕ್ರೆಟ್ ಡ್ರಿಂಕ್ಸ್ ಕುಡಿದೇ 42ರಲ್ಲೂ 22ರ ಯುವತಿಯಂತೆ ಮಿಂಚುತ್ತಾರೆ ಕತ್ರಿನಾ ಕೈಫ್
ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್‌ಗೆ 42 ವರ್ಷ ವಯಸ್ಸಾಗಿದೆ, ಆದರೆ ಈ ವಯಸ್ಸಿನಲ್ಲೂ ಅವರು 22 ರ ಯುವತಿಯಂತೆ ಕಾಣಲು ಕಾರಣ ಅವರು ಕುಡಿಯುವಂತಹ ಆ ಒಂದು ಪಾನೀಯ. ಇಲ್ಲಿದೆ ನೋಡಿ ಕತ್ರಿನಾ ಕೈಫ್ ಬ್ಯೂಟಿ ಸೀಕ್ರೆಟ್. ನೀವೂ ಟ್ರೈ ಮಾಡಬಹುದು.

ಕತ್ರಿನಾ ಕೈಫ್ ಯೌವ್ವನದ ರಹಸ್ಯ
ಕತ್ರಿನಾ ಕೈಫ್ (Katrina Kaif) ಲಕ್ಷಾಂತರ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. 42ರ ವರ್ಷ ವಯಸ್ಸಿನಲ್ಲೂ ಅವರ ಸ್ಕಿನ್ ತುಂಬಾಹೊಳೆಯುತ್ತಿದ್ದು, ಇನ್ನೂ 22ರ ಹುಡುಗಿಯಂತೆ ಕಾಣುತ್ತಾರೆ. ಅವರ ಸೌಂದರ್ಯದ ರಹಸ್ಯ ಕೇವಲ ದುಬಾರಿ ಸೌಂದರ್ಯ ಉತ್ಪನ್ನಗಳಲ್ಲ, ಒಂದು ಡ್ರಿಂಕ್ಸ್ ಕೂಡ ಆಗಿದೆ. ಕತ್ರಿನಾ ತನ್ನ ಮುಖಕ್ಕೆ ಯಂಗ್ ಲುಕ್ ನೀಡಲು ಕುಡಿಯುವ ಆ ಡ್ರಿಂಕ್ಸ್ ಯಾವುದು ನೋಡೋಣ.
ಕತ್ರಿನಾ ಕೈಫ್ ಹೆಲ್ತಿ ಡ್ರಿಂಕ್
ಕತ್ರಿನಾ ಕೈಫ್ ಬೆಳಗ್ಗೆ ಎದ್ದ ತಕ್ಷಣ ಪ್ರತಿದಿನ ನಿರಿನ ಜೊತೆ ಶುಂಠಿ ಅಥವಾ ನಿಂಬೆ ಮತ್ತು ಲಿಕ್ವಿಡ್ ಪ್ರೋಬಯಾಟಿಕ್ ಸೇವಿಸುತ್ತಾರೆ, ಇದರ ಜೊತೆಗೆ ಆವಕಾಡೊ ಸ್ಮೂಥಿ, ಬೆರ್ರಿ ಸ್ಮೂಥಿ ಮತ್ತು ಬೂದಿ ಸೋರೆಕಾಯಿ, ಸೆಲರಿ ಮತ್ತು ಸೌತೆಕಾಯಿಯಂತಹ ವಿವಿಧ ತರಕಾರಿ ಜ್ಯೂಸ್ ಗಳನ್ನು ಸಹ ಸೇವಿಸುತ್ತಾರೆ. ಇವುಗಳಲ್ಲಿ ಯಾವುದೇ ಒಂದು ಡ್ರಿಂಕ್ ಆಯ್ಕೆ ಮಾಡಿ ನೀವು ಸೇವಿಸಬಹುದು. ಆ ಮೂಲಕ ತ್ವಚೆಯನ್ನು ಯಂಗ್ ಆಗಿ ಇಟ್ಟುಕೊಳ್ಳಬಹುದು.
ಹೆಲ್ತಿ ಡ್ರಿಂಕ್ಸ್ ನೊಂದಿಗೆ ದಿನ ಆರಂಭ
ಸೌಂದರ್ಯವು ಕೇವಲ ಹೊರಗಿನಿಂದ ಬರುವುದಿಲ್ಲ; ನಿಮ್ಮ ದೇಹವನ್ನು ಒಳಗಿನಿಂದ ಆರೋಗ್ಯವಾಗಿಡುವುದು ಸಹ ಮುಖ್ಯ ಎನ್ನುತ್ತಾರೆ ಕತ್ರಿನಾ ಕೈಫ್. ಆದ್ದರಿಂದ, ಅವರು ಬೆಳಿಗ್ಗೆ ಮಾಡುವ ಮೊದಲ ಕೆಲಸವೆಂದರೆ ಹೆಲ್ತಿ ಡ್ರಿಂಕ್ಸ್ (Healthy drinks) ಕುಡಿಯುವುದು. ಈ ಪಾನೀಯವು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುವುದಲ್ಲದೆ, ದಿನವಿಡೀ ನಿಮ್ಮ ಮುಖವನ್ನು ತಾಜಾ ಮತ್ತು ಕಾಂತಿಯುತವಾಗಿಡುತ್ತದೆ.
ಹೊಳೆಯುವ ಚರ್ಮಕ್ಕೆ ಹೈಡ್ರೇಶನ್ ಅತ್ಯಗತ್ಯ
42 ನೇ ವಯಸ್ಸಿನಲ್ಲಿಯೂ ಸಹ, ಕತ್ರಿನಾ ಚರ್ಮವು ಸುಕ್ಕುಗಳಿಂದ ಮುಕ್ತವಾಗಿರಲು ಮುಖ್ಯ ಕಾರಣವೆಂದರೆ ಹೈಡ್ರೇಟ್ ಆಗಿರುವುದು. ಅದರಲ್ಲೂ ಬೆಳಗ್ಗೆ ಕುಡಿಯುವ ಪಾನೀಯವು ಅವರ ಚರ್ಮವನ್ನು ಡೀಪ್ ಆಗಿ ಹೈಡ್ರೇಟ್ (hydration) ಮಾಡುತ್ತದೆ, ಜೊತೆಗೆ ತ್ವಚೆಯನ್ನು ದೃಢವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
ದೇಹವನ್ನು ನಿರ್ವಿಷಗೊಳಿಸುತ್ತೆ
ಈ ಬೆಳಗಿನ ಪಾನೀಯವು ಕತ್ರಿನಾ ಅವರ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅವರ ದೇಹವನ್ನು ಶುದ್ಧೀಕರಿಸಿದಾಗ, ಅದರ ಪರಿಣಾಮಗಳು ಅವರ ಮುಖದ ಮೇಲೆ ನೇರವಾಗಿ ಗೋಚರಿಸುತ್ತವೆ. ಅದಕ್ಕಾಗಿಯೇ ಅವರ ಚರ್ಮವು ನೈಸರ್ಗಿಕವಾಗಿ ಹೊಳೆಯುತ್ತದೆ ಮತ್ತು ಯಂಗ್ ಆಗಿದೆ.
ಎನರ್ಜಿ ನೀಡುತ್ತೆ
ಈ ಡ್ರಿಂಕ್ಸ್ ಸೌಂದರ್ಯಕ್ಕೆ ಮಾತ್ರವಲ್ಲದೆ ಶಕ್ತಿಗೂ ಪ್ರಯೋಜನಕಾರಿಯಾಗಿದೆ. ಬೆಳಿಗ್ಗೆ ಇದನ್ನು ಕುಡಿಯುವುದರಿಂದ ಕತ್ರಿನಾ ತನ್ನ ದಿನವನ್ನು ಸಕ್ರಿಯ ಮತ್ತು ಉಲ್ಲಾಸದಿಂದ ಪ್ರಾರಂಭಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನಟಿ ಶೂಟಿಂಗ್‌ನಲ್ಲಿರಲಿ ಅಥವಾ ಜಿಮ್‌ನಲ್ಲಿರಲಿ ಯಾವಾಗಲೂ ಫ್ರೆಶ್ ಆಗಿ, ಎನರ್ಜಿಟಿಕ್ (energitic) ಆಗಿರುತ್ತಾರೆ.
ಸರಳವಾದರೂ ಪರಿಣಾಮಕಾರಿಯಾದ ದಿನಚರಿ
ಚರ್ಮದ ಆರೈಕೆ ಮತ್ತು ಆರೋಗ್ಯಕ್ಕೆ ಸರಳ ದಿನಚರಿ ಅತ್ಯಗತ್ಯ ಎನ್ನುವ ನಂಬಿಕೆ ಕತ್ರಿನಾರದ್ದು. ಅವರ ಹೆಲ್ತಿ ಡ್ರಿಂಕ್ಸ್ ಇದರ ಒಂದು ಭಾಗವಾಗಿದೆ. ಈ ಸಣ್ಣ ಬದಲಾವಣೆಯು ಅವರ ಸೌಂದರ್ಯವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದುವೇ ಕತ್ರಿನಾ ಬ್ಯೂಟಿ ಸೀಕ್ರೆಟ್.