ಬೆಂಗಳೂರು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಕಾಂತಾರ-1 ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಗ್ರಾಂಡ್ ಆಗಿರುವುದಷ್ಟೇ ಅಲ್ಲ, ನಮ್ಮ ಭಾರತದ ಸಾಂಸ್ಕ್ರತಿಕ ಪರಂಪರೆಯನ್ನು ಜಗತ್ತಿನ ಹಲವು ಭಾಗಗಳಿಗೆ ಪರಿಚಯಿಸುವ ಕೆಲಸವನ್ನೂ ಈ ಕಾಂತಾರ ಸಿನಿಮಾದ ಮೂಲಕ ರಿಷಬ್ ಶೆಟ್ಟಿಯವರು ಮಾಡುತ್ತಿದ್ದಾರೆ.

ಯಶ್, ಪ್ರಶಾಂತ್ ನೀಲ್ ರ್ಹಗೂ ಹೊಂಬಾಳೆ ಸಂಸ್ಥೆ ಬಗ್ಗೆ ರಿಷಬ್ ಮಾತು!

ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ (Rishab Shetty) ಗ್ಲೋಬಲ್ ಸಿನಿಮಾ 'ಕಾಂತಾರ ಚಾಪ್ಟರ್ 1' ಜಗತ್ತಿನ ತುಂಬಾ ಮಾಯಾಜಾಲ ಸೃಷ್ಟಸಿದೆ. ಜಗತ್ತಿನ ಹಲವು ಕಡೆಗಳಲ್ಲಿ ಭಾರೀ ಅಬ್ಬರಿಸುತ್ತಿದೆ. ವಿಶ್ವದಾದ್ಯಂತ 7000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಾವಿರಾರು ಪ್ರದರ್ಶನಗಳನ್ನು ಕಾಣುತ್ತಿದೆ ಕಾಂತಾರ-1. ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾದ ಬಳಿಕ ರಿಷಿಬ್ ಶೆಟ್ಟಿಯವರು ತಮ್ಮ ಸಿನಿಮಾ ಜರ್ನಿ ಹಾಗೂ ಪ್ರಮುಖವಾಗಿ ಈ ಕಾಂತಾರ- 1 (Kantara Chapter 1) ಮೂಡಿಬಂದಿರುವ ಬಗ್ಗೆ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಈ ವೇಳೆ ರಾಕಿಂಗ್‌ ಸ್ಟಾರ್ ಯಶ್ ಬಗ್ಗೆ ಅವರ ಅಭಿಪ್ರಾಯ ಕೇಳಿ ಪ್ರಶ್ನೆ ಮಾಡಲಾಗಿದೆ. ಅದಕ್ಕೆ ರಿಷಬ್ ಶೆಟ್ಟಿ ಅದೇನು ಉತ್ತರ ಕೊಟ್ಟಿದ್ದಾರೆ ನೋಡಿ..

ಯಶ್, ಪ್ರಶಾಂತ್ ನೀಲ್ ಸರ್, ವಿಜಯ್ ಸರ್, ಕಾರ್ತಿಕ್ ಸರ್, ಹೊಂಬಾಳೆ ಫಿಲಂಸ್, ಹೀಗೆ ಎಲ್ರೂ ಕೂಡ ಆಪ್ತರೇ.. ಅವ್ರೆಲ್ಲಾ ಕನ್ನಡದ ಈ ಜನರೇಶನ್ನಿನ ಜನರಿಗೆ ಕನ್ನಡದ ಒಂದು ಸಿನಿಮಾ ದೊಡ್ಡದಾದ ಒಂದು ಕನಸು ಕಟ್ಟಿಕೊಂಡು, ಅವ್ರೆಲ್ಲಾ ಒಟ್ಟಾಗಿ ಹೋಗಿರೋದು ಇದ್ಯಲ್ಲ, ಅದು ನಾವೆಲ್ಲಾ ದೇಶದ ತುಂಬಾ ನಮ್ಮ ಕನಸುಗಳನ್ನು ಕಟ್ಟಿಕೊಂಡು ಓಡಾಡಬಹುದು ಅಂತ ತೋರಿಸಿಕೊಟ್ಟಿದ್ದಾರೆ ಎನ್ನಬಹುದು. ಅಂದ್ರೆ, ಈ ಜನರೇಶನ್ನಿಗೆ, ನಮಗೆಲ್ಲಾ ಈ ದಾರಿಯಲ್ಲಿ ನೀವು ಹೋಗಬಹುದು ನೋಡಿ ಅಂತ ತೋರಿಸಿಕೊಟ್ಟಿದ್ದಾರೆ ಎನ್ನಬಹುದು. ಬಹುಶಃ ಆದು ಆಗಿರಲಿಲ್ಲ ಅಂದ್ರೆ ಕಾಂತಾರ ಕೂಡ ಇಷ್ಟು ಬೇಗ ಇಡೀ ದೇಶ ಹಾಗೂ ಜಾಗತಿಕ ಮಟ್ಟಕ್ಕೆ ಹೋಗೋ ಧೈರ್ಯ ಮಾಡುತ್ತಿರಲಿಲ್ಲವೇನೋ!

ಮೋಸ್ಟ್ಲೀ ಸೆಟಲೈಟ್ ಹಾಗೂ ಒಟಿಟಿಗೆ ಡಬ್ ಮಾಡಿ ಕೊಡ್ತಾ ಇದ್ವಿ!

ಹೊಂಬಾಳೆ ಮೂಲಕ, ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯುವ ಪ್ರಯತ್ನ ಆಗಿರದಿದ್ರೆ ಬಹುಶಃ ನಮ್ಮ ಕಾಂತಾರ ಸಿನಿಮಾ ಕೂಡ ಕನ್ನಡದಲ್ಲಷ್ಟೇ ಹೋಗ್ತಿತ್ತು. ಮೋಸ್ಟ್ಲೀ ಸೆಟಲೈಟ್ ಹಾಗೂ ಒಟಿಟಿಗೆ ಡಬ್ ಮಾಡಿ ಕೊಡ್ತಾ ಇದ್ವಿ. ಥಿಯೇಟರ್‌ಗಳಿಗೇ ಡೈರೆಕ್ಟ್ ಆಗಿ ಕನ್ನಡ ಸಿನಿಮಾದವರೂ ಕೂಡ ಹೋಗಬಹುದು ಅನ್ನೋದಕ್ಕೆ ಹೊಂಬಾಳೆ ಸಂಸ್ಥೆ ಒಂದು ಪ್ರಯೋಗ ಮಾಡಿ ಯಶಸ್ವಿ ಆಯ್ತು. ಅದ್ರಲ್ಲಿ ಯಶ್ ಅವ್ರು, ಪ್ರಶಾಂತ್ ನೀಲ್ ಅವರು ಹಾಗೂ ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಹಾಗೂ ಕಾರ್ತಿಕ್ ಗೌಡ ಅವರ ಕೊಡುಗೆ ಬಹಳಷ್ಟಿದೆ ಅಂದಿದ್ದಾರೆ 'ಕಾಂತಾರ ಚಾಪ್ಟರ್ 1' ಸಿನಿಮಾ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು.

ಒಂದು ಕಡೆ ರಿಷಬ್ ಶೆಟ್ಟಿಯವರ ಸಿನಿಮಾ ಪ್ರಪಂಚದಾದ್ಯಂತ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿದ್ದು, 2ನೇ ದಿನದ ಅಂತ್ಯದ ಹೊತ್ತಿಗೇ 100 ಕೋಟಿ ಕ್ಲಬ್ ಸೇರಿ ಮುನ್ನುಗ್ಗುತ್ತಿದೆ. ಕನ್ನಡ ಸಿನಿಮಾವೊಂದು ಈ ಪರಿ ಸಕ್ಸಸ್ ಕಾಣುತ್ತಿರೋದು ತುಂಬಾ ಅಪರೂಪದ ಸಮಯವಿದು ಎನ್ನಬಹುದು. ಬೆಂಗಳೂರು ಸೇರಿದಂತೆ ಪ್ರದರ್ಶನ ಕಾಣುತ್ತಿರುವ ಎಲ್ಲಾ ಕಡೆಗಳಲ್ಲಿ ಕಾಂತಾರ-1 ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಗ್ರಾಂಡ್ ಆಗಿರುವುದಷ್ಟೇ ಅಲ್ಲ, ನಮ್ಮ ಭಾರತದ ಸಾಂಸ್ಕ್ರತಿಕ ಪರಂಪರೆಯನ್ನು ಜಗತ್ತಿನ ಹಲವು ಭಾಗಗಳಿಗೆ ಪರಿಚಯಿಸುವ ಕೆಲಸವನ್ನೂ ಈ ಕಾಂತಾರ ಸಿನಿಮಾದ ಮೂಲಕ ರಿಷಬ್ ಶೆಟ್ಟಿಯವರು ಮಾಡುತ್ತಿದ್ದಾರೆ.

ರಿಷಬ್ ಶೆಟ್ಟಿ ಫುಲ್ ಮಿಂಚಿಂಗ್!

ಅಂದಹಾಗೆ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಗ್ಗೆ ಹೆಚ್ಚು ಹೇಳಲೇಬೇಕಿಲ್ಲ. ಅವರೇ ಈ 'ಕಾಂತಾರ ಚಾಪ್ಟರ್ -1' ರ ರೂವಾರಿ. ಅವರೇ ಇಡೀ ಸಿನಿಮಾದ ಹೈಲೈಟ್ ಹಾಗೂ ಈ ಸಿನಿಮಾ ಆಗೋದಕ್ಕೆ ಕಾರಣ. ಜೊತೆಗೆ, ನಾಯಕಿ ರುಕ್ಮಿಣಿ ವಸಂತ್ ಸೇರಿದಂತೆ ಇಡೀ ಚಿತ್ರತಂಡದ ಪರಿಶ್ರಮ ಈ ಚಿತ್ರದಲ್ಲಿದೆ. ಹೀಗೆ ಹಲವರ ಪ್ರತಿಭೆ ಹಾಗೂ ಪರಿಶ್ರಮ ಮೇಳೈಸಿದ್ದ ಟೀಮ್ ವರ್ಕ್ ಮೂಲಕ ಇಂದು ಕಾಂತಾರ ಸಿನಿಮಾ ಯಶಸ್ವೀ ಪ್ರದರ್ಶನಗಳನ್ನು ಕಾಣುತ್ತಿದೆ.