- Home
- Entertainment
- ನೆಟ್ಟಿಗರ ಕಮೆಂಟ್ಸ್ಗೆ ಮಣಿದ ನಿರ್ದೇಶಕರು? Brahmagantu ಫ್ಯಾನ್ಸ್ಗೆ ಕೊಟ್ಟೇ ಬಿಟ್ರು ಭರ್ಜರಿ ಗುಡ್ನ್ಯೂಸ್
ನೆಟ್ಟಿಗರ ಕಮೆಂಟ್ಸ್ಗೆ ಮಣಿದ ನಿರ್ದೇಶಕರು? Brahmagantu ಫ್ಯಾನ್ಸ್ಗೆ ಕೊಟ್ಟೇ ಬಿಟ್ರು ಭರ್ಜರಿ ಗುಡ್ನ್ಯೂಸ್
ಬ್ರಹ್ಮಗಂಟು ಧಾರಾವಾಹಿಯ ದೀಪಾಳ ನಿಜವಾದ ಮುಖವನ್ನು ನೋಡಲು ವೀಕ್ಷಕರು ಕಾತುರರಾಗಿದ್ದರು. ಕೊನೆಗೂ ನಿರ್ದೇಶಕರು ಅವರ ಆಸೆಯನ್ನು ಈಡೇರಿಸಿದ್ದಾರೆ. ದೀಪಾಳ ಮೇಕಪ್ ರಹಿತ ರೂಪ ಬಯಲಾಗಲಿದೆ.

ರಿಯಲ್ ಮುಖ ತೋರಿಸಲು ದುಂಬಾಲು
'ಪ್ಲೀಸ್ ದೀಪಾ, ನಿನ್ನ ರಿಯಲ್ ಮುದ್ದು ಮುಖ ತೋರಿಸು ಕಣೆ... ಹೀಗೆ ನೋಡಲು ಆಗಲ್ಲ'... 'ಡೈರೆಕ್ಟರ್ ಸಾಹೇಬ್ರೇ ಈ ವೇಷ ಯಾವಾಗ ಬದಲಿಸ್ತೀರಾ?', 'ಇವಳ ಒರಿಜಿನಲ್ ಮುಖ ತೋರಿಸಿಲ್ಲಾ ಅಂದ್ರೆ ಸೀರಿಯಲ್ ನೋಡೋದನ್ನೇ ಬಿಟ್ಬಿಡ್ತೀವಿ ಅಷ್ಟೇ ಎಂಬ ಧಮ್ಕಿ!...' ಹೀಗೆ ಪ್ರತಿನಿತ್ಯವೂ ನಟಿಯ ನಿಜವಾದ ಮುಖವನ್ನು ನೋಡಲು ಕಾತರದಿಂದ ವೀಕ್ಷಕರು ಕಾಯ್ತಿದ್ದರೆ ಅದು ಜೀ ಕನ್ನಡದ ಬ್ರಹ್ಮಗಂಟು ಸೀರಿಯಲ್ (Brahmagantu Serial) ನಾಯಕಿ ದೀಪಾಳದ್ದೇ.
ದಿಯಾ ಪಾಲಕ್ಕಲ್ ರಿಯಲ್ ರೂಪ
ಹೌದು. ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್... ಈ ವೇಷದಲ್ಲಿ ಕಾಣಿಸಿಕೊಳ್ತಿರೋ ದೀಪಾಳ ನಿಜವಾದ ಹೆಸರು ದಿಯಾ ಪಾಲಕ್ಕಲ್. ರಿಯಲ್ ಮುಖ ಮುದ್ದಾಗಿ ಇರೋದನ್ನು ನೋಡಿರುವ ವೀಕ್ಷಕರು, ಅದೇ ಮುಖವನ್ನೇ ತೋರಿಸಿ ಇನ್ನಾದರೂ ಎಂದು ನಿರ್ದೇಶಕರನ್ನು ದುಂಬಾಲು ಬೀಳುವುದನ್ನು ಕಮೆಂಟ್ಗಳಲ್ಲಿ ನೋಡಬಹುದಾಗಿದೆ. ಬಾಲಕಿಯಾಗಿ ಮನಸೆಳೆದಿದ್ದ ದಿಯಾ ಈಗ ನಾಯಕಿಯಾಗಿದ್ದಾರೆ.
ವೀಕ್ಷಕರ ಆಸೆ ಈಡೇರಿತು
ಕೊನೆಗೂ ಈ ಆಸೆಯನ್ನು ಈಡೇರಿಸಿಯೇ ಬಿಟ್ಟಿದ್ದಾರೆ ನಿರ್ದೇಶಕರು. ಬ್ರಹ್ಮಗಂಟು ಅಭಿಮಾನಿಗಳಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದ್ದಾರೆ. ದೀಪಾಳ ಅಸಲಿ ಮುಖ ಬಯಲಾಗುವ ಟೈಮ್ ಬಂದೇ ಬಿಟ್ಟಿದೆ. ಇದೀಗ ತಮ್ಮ ಉಡುಪಿನ ಬ್ರ್ಯಾಂಡ್ಗೆ ಮಾಡೆಲ್ ಆಗಿ ಚಿರು ಒಬ್ಬಳನ್ನು ಆಯ್ಕೆ ಮಾಡಿದ್ದ. ಆಕೆಯನ್ನು ತುಂಬಾ ಹೊಗಳುತ್ತಿದ್ದ. ಇದನ್ನು ನೋಡಿ ದೀಪಾ ಉರಿದುಕೊಳ್ಳುತ್ತಿದ್ದಳು. ಆದರೆ ಸಿಟ್ಟಿನಿಂದ ಆ ಮಾಡೆಲ್ ಮುಖವನ್ನು ನೋಡಿರಲಿಲ್ಲ.
ಮಾಡೆಲ್ ಮುಖ ರಿವೀಲ್
ಕೊನೆಗೆ ಆ ಮಾಡೆಲ್ ಮುಖ ರಿವೀಲ್ ಮಾಡಲಾಗಿದೆ. ಅದನ್ನು ನೋಡಿದ ಮೇಲೂ ದೀಪಾಗೆ ಅದು ತನ್ನದೇ ಫೋಟೋ ಎಂದು ತಿಳಿಯಲಿಲ್ಲ. ಏಕೆಂದ್ರೆ ಅಲ್ಲಿ ಇದ್ದುದು ಬದಲಾದ ದೀಪಾ ಫೋಟೋ. ಕೊನೆಗೆ ಅರ್ಚನಾ ಇದು ನೀವೇ ಎಂದು ಹೇಳಿದಾಗ ದೀಪಾಗೆ ಶಾಕ್ ಆಗಿದೆ. ಅಲ್ಲಿಗೆ ಮಾಡೆಲ್ ಆಗಿ ದೀಪಾ ಕಾಣಿಸಿಕೊಳ್ಳಲಿದ್ದು, ಸೀರಿಯಲ್ನಲ್ಲಿ ಮೇಕಪ್ ಮಾಡಿದಂತೆ ಮಾಡಿ ಆಕೆಯನ್ನು ತೋರಿಸಿದರೂ, ಅದು ದೀಪಾ ಅಂದ್ರೆ ದಿಯಾ ಅವರ ಅಸಲಿ ಮುಖವಾಗಿರುತ್ತದೆ!
ಪ್ರೊಮೋದಿಂದ ಫುಲ್ ಖುಷ್
ಇದರ ಪ್ರೊಮೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಷ್ಟಕ್ಕೂ, ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರದ್ದೂ ಇದೇ ಕಥೆ.
ಬಾಹ್ಯ ಸೌಂದರ್ಯ ನಿಜವಲ್ಲ
ಯುವತಿಯ ಬಾಹ್ಯ ಸೌಂದರ್ಯಕ್ಕೆ ಮನಸೋತು ಹುಡುಗರು ಅವರ ಹಿಂದೆ ಬಿದ್ದರೆ, ಹುಡುಗ ಸೌಂದರ್ಯದ ಜೊತೆಗೆ ಅವರಲ್ಲಿರುವ ಐಷಾರಾಮಿ ಸೌಲಭ್ಯ ನೋಡಿ ಹುಡುಗಿಯರೇ ಹುಡುಗರ ಹಿಂದೆ ಬಿದ್ದು ನರಕವನ್ನು ನೋಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ. ಒಂದಿಷ್ಟು ವರ್ಷಗಳಲ್ಲಿ ಕೊನೆಯಾಗುವ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ಬದುಕುವ ಮನಸ್ಥಿತಿಯವರೇ ಬಹಳಷ್ಟು ಮಂದಿ ಇದ್ದಾರೆ. ಅದಕ್ಕಾಗಿಯೇ ಆಂತರಿಕ ಸೌಂದರ್ಯ ಗೌಣವಾಗಿಬಿಡುತ್ತದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಬ್ರಹ್ಮಗಂಟು ಸೀರಿಯಲ್.
ಆಂತರಿಕ ಸೌಂದರ್ಯವೇ ಮೇಲು
ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮೇಲು ಎನ್ನುವ ಕ್ಯಾರೆಕ್ಟರ್ ನಾಯಕಿ ದೀಪಾಳದ್ದು. ಇದೇ ರೂಪವನ್ನು ಇಟ್ಟುಕೊಂಡೇ ಆಕೆ ಎಲ್ಲರ ಮನಸ್ಸನ್ನು ಕದ್ದಿದ್ದಾಳೆ, ಗೆದ್ದಿದ್ದಾಳೆ. ಅವಳ ಆಂತರಿಕ ಸೌಂದರ್ಯ ಇಲ್ಲಿ ಗೆದ್ದಿದೆ. ಬಾಹ್ಯ ಸೌಂದರ್ಯ ಕಾಣಿಸುವ ನಿಟ್ಟಿನಲ್ಲಿ ಗಂಡ ಚಿರು ಯೋಚನೆ ಮಾಡುತ್ತಿದ್ದಾನೆ. ಇದೀಗ ನಟಿ ಅಸಲಿ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.