- Home
- Entertainment
- Amruthadhaare Serial: ಸ್ನೇಹಿತೆ ಮನೆಯಲ್ಲಿ ಗೌತಮ್ ಮಿಸ್ಸಿಂಗ್ ಮಗಳು? ಕೊನೆಗೂ ಸಿಕ್ಕೇ ಬಿಟ್ಟಳು ಪುತ್ರಿ- ರೋಚಕ ಟ್ವಿಸ್ಟ್!
Amruthadhaare Serial: ಸ್ನೇಹಿತೆ ಮನೆಯಲ್ಲಿ ಗೌತಮ್ ಮಿಸ್ಸಿಂಗ್ ಮಗಳು? ಕೊನೆಗೂ ಸಿಕ್ಕೇ ಬಿಟ್ಟಳು ಪುತ್ರಿ- ರೋಚಕ ಟ್ವಿಸ್ಟ್!
ಕೊನೆಗೂ ಗೌತಮ್ ಮತ್ತು ಭೂಮಿಕಾ ಕಾಣೆಯಾದ ಮಗು ಎಲ್ಲಿದೆ ಎಂದು ತಿಳಿದಿದೆ. ಇದನ್ನು ನೋಡಿ ವೀಕ್ಷಕರಿಗೆ ಸಕತ್ ಖುಷಿಯಾಗುತ್ತಿದೆ. ರೋಚಕ ಟ್ವಿಸ್ಟ್ ಪಡೆದುಕೊಂಡಿದೆ ಸೀರಿಯಲ್

ಗೌತಮ್ ಚಡಪಡಿಕೆ- ಇಲ್ಲೇ ಇದೆ ಮಗು
ಅಮೃತಧಾರೆ ಸೀರಿಯಲ್ನಲ್ಲಿ ಈಗ ಬಹು ರೋಚಕ ಟ್ವಿಸ್ಟ್ ಸಿಕ್ಕಿದೆ. ಗೌತಮ್ ತನಗೆ ಮಗಳು ಹುಟ್ಟಿರುವುದನ್ನು ಭೂಮಿಕಾಗೆ ಹೇಳಲೂ ಆಗದೇ, ಬಿಡಲೂ ಆಗದ ಸ್ಥಿತಿಯಲ್ಲಿ ಇದ್ದಾನೆ. ಅನಾಥಾಶ್ರಮದಲ್ಲಿ ಹೆಣ್ಣುಮಗುವನ್ನು ನೋಡಿ ಅದನ್ನು ತನ್ನದೇ ಎಂದು ತಿಳಿದುಕೊಂಡು ಇನ್ನೇನು ಎಲ್ಲವನ್ನೂ ಭೂಮಿಕಾಗೆ ಹೇಳಿಯೇ ಬಿಡೋಣ ಎಂದುಕೊಂಡಿದ್ದ. ಮಗಳನ್ನು ಮನೆಗೆ ಕರೆತಂದು ಎಲ್ಲ ಸತ್ಯವನ್ನೂ ಹೇಳಿ ಭೂಮಿಕಾಳ ಸಂತೋಷವನ್ನು ಇಮ್ಮಡಿ ಮಾಡೋಣ ಎಂದುಕೊಂಡಿದ್ದ.
ಅಲ್ಲಿ ಆಗಿದ್ದೇ ಬೇರೆ
ಆದರೆ ಆಗಿದ್ದೇ ಬೇರೆ. ಡಿಎನ್ಎ ಮ್ಯಾಚ್ ಆಗಲಿಲ್ಲ ಎನ್ನುವ ಕಾರಣಕ್ಕೆ, ಆ ಮಗು ಗೌತಮ್ದು ಅಲ್ಲ ಎಂದು ತಿಳಿಯಿತು. ಇದರಿಂದ ಆತನಿಗೆ ಆದ ನೋವನ್ನು ಬೇರೆ ಹೇಳಬೇಕಾಗಿಲ್ಲ. ಇದರ ಹೊರತಾಗಿಯೂ ಗೌತಮ್ ಮಗಳನ್ನು ಹುಡುಕುವ ತವಕದಲ್ಲಿ ಇದ್ದಾನೆ.
ಕಾವೇರಿ ಪಾತ್ರದ ಎಂಟ್ರಿ
ಆದರೆ, ಅದೇ ಇನ್ನೊಂದೆಡೆ, ಸೀರಿಯಲ್ಗೆ ಹೊಸ ಎಂಟ್ರಿ ಆಗಿದೆ. ಅದು ಕಾವೇರಿ ಎನ್ನುವ ಕ್ಯಾರೆಕ್ಟರ್. ಈ ಪಾತ್ರವನ್ನು ಗೀತಾ ಭಾರತಿ ಭಟ್ ಮಾಡುತ್ತಿದ್ದಾರೆ. ಭೂಮಿಕಾ ಮನೆಯಲ್ಲಿ ಕನಕಾಭಿಷೇಕದ ಫಂಕ್ಷನ್ ನಡೆಯುತ್ತಿರುವ ಸಂದರ್ಭದಲ್ಲಿ ಆಕೆಯ ಎಂಟ್ರಿ ಆಗಿದೆ. ಭೂಮಿಕಾ ಹೊರಕ್ಕೆ ಬಂದು ಸ್ನೇಹಿತೆಯನ್ನು ಸ್ವಾಗತಿಸಿದ್ದಾಳೆ.
ಕಾವೇರಿಗೆ ಸಹಾಯ
ಆಗ ಕಾವೇರಿ ತನಗೆ ಇರುವ ಸಮಸ್ಯೆಯನ್ನು ಹೇಳಿಕೊಂಡು ಒಂದು ಕೆಲಸ ಕೊಡುವಂತೆ ಕೋರಿಕೊಂಡಿದ್ದಾಳೆ. ಅದಕ್ಕೆ ಭೂಮಿಕಾ ಒಪ್ಪಿಕೊಂಡಿದ್ದಾಳೆ. ಕೊನೆಗೆ, ತಾನು ಮನೆಗೆ ಹೋಗಬೇಕು. ಮಗು ಒಂದೇ ಇದೆ ಎಂದಾಗ ಭೂಮಿಕಾ ಒಹೊ ನಿನಗೆ ಮಕ್ಕಳಾಯಿತಾ ಎಂದಾಗ ಆಕೆ ಹೌದು. ಆದರೆ ಅದು ನಾನು ಹೆತ್ತ ಮಗುವಲ್ಲ, ದತ್ತು ಪಡೆದಿರುವುದು ಎಂದಿದ್ದಾಳೆ.
ಭೂಮಿಕಾ ಮತ್ತು ಗೌತಮ್ ಮಗಳೇ ಈಕೆ
ಅಲ್ಲಿಗೆ ಅದು ಭೂಮಿಕಾ ಮತ್ತು ಗೌತಮ್ ಮಗಳೇ ಎನ್ನುವಲ್ಲಿ ಸಂದೇಹವೇ ಇಲ್ಲ. ಆ ಮಗುವಿನ ಜೊತೆ ಸಹಜವಾಗಿ ಭೂಮಿಕಾ ಪ್ರೀತಿ ಹೆಚ್ಚುತ್ತದೆ. ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದು ಆ ಮಗುವನ್ನು ಕಾವೇರಿ ಭೂಮಿಕಾ ಮನೆಯಲ್ಲಿಯೇ ಬಿಟ್ಟು ಹೋಗುವ ಸಾಧ್ಯತೆ ಇದೆ.
ಭೂಮಿಕಾ ಬಳಿಯೇ ಬೆಳೆಯುವ ಮಗು
ಆಗ ಮಗುವನ್ನು ಭೂಮಿಕಾ ಮತ್ತು ಗೌತಮ್ ತಮ್ಮ ಮಗಳಂತೆಯೇ ನೋಡಿಕೊಳ್ಳುತ್ತಾರೆ. ಅಲ್ಲಿಗೆ ಗೌತಮ್ಗೆ ಇದು ತನ್ನದೇ ಮಗಳು ಎಂದು ಸದ್ಯ ತಿಳಿಯದಿದ್ದರೂ, ಮಗಳನ್ನು ಪ್ರೀತಿಸುವ ಅವಕಾಶ ಸಿಗುತ್ತದೆ. ಮಗುವಿಗೂ ನಿಜವಾದ ಅಮ್ಮನ ಪ್ರೀತಿ ಸಿಗುತ್ತದೆ.
ಸೀರಿಯಲ್ಗೆ ರೋಚಕ ಟ್ವಿಸ್ಟ್
ಈ ರೀತಿಯಾಗಿ ಸೀರಿಯಲ್ಗೆ ಟ್ವಿಸ್ಟ್ ನೀಡುವ ಸಾಧ್ಯತೆ ಇದೆ. ಇದಾಗಲೇ ಆ ಮಗು ಇವರದ್ದೇ ಎಂದು ಪ್ರೊಮೋ ನೋಡಿದ ವೀಕ್ಷಕರು ಭವಿಷ್ಯ ನುಡಿದಾಗಿದೆ. ಹೇಗಾದ್ರೂ ಸರಿ, ಗೌತಮ್ಗೆ ಮಗು ಸಿಕ್ಕಿತಲ್ಲ ಎನ್ನುವುದೇ ನೆಟ್ಟಿಗರಿಗೆ ಖುಷಿಯ ವಿಷಯ. ಆದರೂ ಅದು ಅವರಿಗೆ ಬೇಗ ತಿಳಿಯಲಿ ಎನ್ನುವ ಆಸೆ. ಒಟ್ಟಿನಲ್ಲಿ ಸೀರಿಯಲ್ ಇನ್ನೂ ಕೆಲ ವರ್ಷ ಎಳೆದುಕೊಂಡು ಹೋಗುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.