- Home
- Entertainment
- Amruthadhaare Serial: ಶಕುಂತಲಾಗೆ ಕಪಾಳಮೋಕ್ಷ ಮಾಡೇ ಬಿಟ್ಟಳು ಭೂಮಿಕಾ! ಸೊಸೆ ಏಟಿಗೆ ಅತ್ತೆ ಗಡಗಡ
Amruthadhaare Serial: ಶಕುಂತಲಾಗೆ ಕಪಾಳಮೋಕ್ಷ ಮಾಡೇ ಬಿಟ್ಟಳು ಭೂಮಿಕಾ! ಸೊಸೆ ಏಟಿಗೆ ಅತ್ತೆ ಗಡಗಡ
ಗಂಡನ ಬಗ್ಗೆ ಶಕುಂತಲಾ ಆಡಿದ ಮಾತಿಗೆ ಭೂಮಿಕಾ ಸಿಟ್ಟು ಸ್ಫೋಟಗೊಂಡಿದ್ದು, ಅತ್ತೆಯ ಕೆನ್ನೆಗೆ ಕಪಾಳಮೋಕ್ಷ ಮಾಡಿದ್ದಾಳೆ. ಸೊಸೆ ಏಟಿಗೆ ಅತ್ತೆ ಗಡಗಡ ನಡುಗಿದ ಶಕುಂತಲಾಳ ಮುಂದಿನ ನಡೆ ಏನು?

ಅತ್ತೆಗೆ ಭೂಮಿಕಾ ಕಪಾಳಮೋಕ್ಷ
ಇಲ್ಲಿಯವರೆಗೆ ಎಲ್ಲವನ್ನೂ ಸಹಿಸಿಕೊಂಡಾಗಿದೆ. ಅತ್ತೆ ಶಕುಂತಲಾ ಎಂದ ಕುತಂತ್ರಿ ಎಂದು ಗೊತ್ತಿದ್ದರೂ ಭೂಮಿಕಾಗೆ ಏನೂ ಮಾಡಲು ಆಗದ ಸ್ಥಿತಿ. ಏಕೆಂದರೆ ಸಾಕಿರೊ ಅಮ್ಮನನ್ನು ಅಷ್ಟು ನಂಬಿದ್ದಾನೆ ಗೌತಮ್. ಆದರೆ ಇದಾಗಲೇ ಶಕುಂತಲಾಳ ಬಣ್ಣ ಬಯಲಾಗಿದೆ. ಆದರೆ, ಅವಳಿಗೆ ಅವಳದ್ದೇ ಭಾಷೆಯಲ್ಲಿ ಭೂಮಿಕಾಗೆ ಹೇಳಬೇಕಿದೆ. ಮಗುವನ್ನು ಸಾಯಿಸಲು ಬಂದಿರೋ ವಿಷ್ಯ ತಿಳಿಯುತ್ತಲೇ ಅವಳು ಕೆಂಡಾಮಂಡಲ ಆಗಿದ್ದಾಳೆ. ಆದರೆ ಇದೀಗ ಶಕುಂತಲಾ ಇನ್ನೂ ಒಂದು ಹಂತ ಮುಂದಕ್ಕೆ ಹೋಗಿದ್ದಾಳೆ.
ಗೌತಮ್ ಬಗ್ಗೆ ಮಾತನಾಡಿದ ಶಕುಂತಲಾ
ನಿನ್ನ ಗಂಡ ಗೌತಮ್ ನಾನು ಸಾಕಿರೋ ನಾಯಿ, ಅವನಿಗೆ ನನ್ನ ವಿಷ್ಯ ನೀನು ಏನೇ ಹೇಳಿದ್ರೂ ನಂಬಲ್ಲ ಎಂದಿದ್ದಾಳೆ. ಗಂಡನ ಬಗ್ಗೆ ಈ ರೀತಿಯ ಮಾತು ಕೇಳಿ ಕೆಂಡಾಮಂಡಲವಾದ ಭೂಮಿಕಾ, ಅತ್ತೆಯ ಕೆನ್ನೆಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ಶಕುಂತಲಾ ಗಡಗಡ ನಡುಗಿ ಹೋಗಿದ್ದಾಳೆ. ತಿರುಗೇಟು ನೀಡಿದೋ ಭೂಮಿಕಾ, ಈಗ ಹೋಗಿ ನಿಮ್ಮ ಮಗನಿಗೆ ನಿನ್ನ ಹೆಂಡತಿ ನನಗೆ ಹೊಡೆದಳು ಎಂದು ಹೋಗಿ ಹೇಳಿ, ನಿಮ್ಮ ಮಾತನ್ನು ನಂಬ್ತಾರಾ ನೋಡಿ ಎಂದಿದ್ದಾಳೆ. ಅಡಕತ್ತರಿಯಲ್ಲಿ ಸಿಲುಕಿದ ಅನುಭವವಾಗಿದೆ ಶಕುಂತಲಾಗೆ.
ಸೀರಿಯಲ್ ರೋಚಕ ಹಂತ
ಈ ಮೂಲಕ ಸದ್ಯ ಸೀರಿಯಲ್ ರೋಚಕ ಹಂತ ತಲುಪಿದೆ. ಅಷ್ಟಕ್ಕೂ ಭಾಗ್ಯಮ್ಮನಿಂದ ಶಕುಂತಲಾ ವಿಷ್ಯ ಭೂಮಿಕಾಗೆ ತಿಳಿದಿದೆ. ಭಾಗ್ಯಮ್ಮ ಶಕುಂತಲಾ ವಿಷಯವನ್ನು ಚಿತ್ರ ಬಿಡಿಸುವ ಮೂಲಕ ತೋರಿಸಿದ್ದಾಳೆ. ಮಗುವಿಗೆ ಶಕುಂತಲಾ ತೊಂದರೆ ಮಾಡುತ್ತಿದ್ದಾಳೆ ಎನ್ನುವುದು ಭೂಮಿಕಾಗೆ ಈಗ ತಿಳಿದಿದೆ. ಭಾಗ್ಯಳಿಗೆ ವಿಷಯ ತಿಳಿಯುತ್ತಿದ್ದಂತೆಯೇ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯಕ್ಕೆ ಭೂಮಿಕಾ ತಡೆ ಒಡ್ಡಿದ್ದಳು. ಶಕುಂತಲಾ ಮಾತನ್ನು ಗೌತಮ್ ನಂಬಿಬಿಟ್ಟಿದ್ದ. ಆದರೆ ಅದನ್ನು ಭೂಮಿಕಾ ನಂಬದೇ ಭಾಗ್ಯಮ್ಮ ಪರವಾಗಿ ನಿಂತಿದ್ದಳು.
ಕುಂತಲಾ ಗುಟ್ಟನ್ನು ರಟ್ಟು
ಕೊನೆಗೆ ಏನೋ ಎಡವಟ್ಟಾಗುತ್ತಿದೆ ಎಂದು ತಿಳಿಯುತ್ತಲೇ ಅವಳನ್ನು ತನ್ನ ತವರಿಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಚಿತ್ರಬಿಡಿಸುವ ಮೂಲಕ ಭಾಗ್ಯ ಶಕುಂತಲಾ ಗುಟ್ಟನ್ನು ರಟ್ಟು ಮಾಡಿದ್ದಾಳೆ. ಅದನ್ನು ಹೋಗಿ ಭೂಮಿಕಾ ಶಕುಂತಲಾಗೆ ಹೇಳಿದ್ದಾಳೆ. ಮೊದಲಿಗೆ ಇದನ್ನು ಶಕುಂತಲಾ ಒಪ್ಪದಿದ್ದರೂ ಕೊನೆಗೆ ಹೌದು ನಾನೇ ಎಲ್ಲಾ ಮಾಡ್ತಿರೋದು, ನಿನ್ನಿಂದ ಏನೂ ಮಾಡಲು ಆಗಲ್ಲ ಎಂದಿದ್ದಾಳೆ.
ಅಸಲಿ ಆಟ ಶುರು
ಈಗ ಅಸಲಿ ಆಟ ಶುರುವಾಯ್ತು, ನೋಡೋಣ ಎಂದು ಶಕುಂತಲಾಗೆ ಭೂಮಿಕಾ ಚಾಲೆಂಜ್ ಹಾಕಿದ್ದಾಳೆ. ಇಲ್ಲಿಯವರೆಗೆ ಅತ್ತೆಯ ಮೇಲೆ ಇದ್ದ ಸಂದೇಹವೆಲ್ಲವೂ ನಿಜವಾಗಿದೆ. ಇದರಿಂದ ಇದೀಗ ಸೀರಿಯಲ್ನಲ್ಲಿ ಮತ್ತಷ್ಟು ರೋಚಕ ಟ್ವಿಸ್ಟ್ ಸಿಗಲಿದೆ.
ಇನ್ನೊಂದು ಮಗುವಿನ ಸತ್ಯ
ಆದರೆ ಇದರ ಮಧ್ಯೆಯೇ, ಶಕುಂತಲಾ ಎಲ್ಲಿ ಇನ್ನೊಂದು ಮಗುವಿನ ಸತ್ಯವನ್ನು ಬಾಯಿ ಬಿಡುತ್ತಾಳೋ ಎನ್ನುವ ಭಯ ವೀಕ್ಷಕರದ್ದು. ಶಕುಂತಲಾಗೆ ಅದು ದೊಡ್ಡ ಅಸ್ತ್ರವಾಗಿದೆ. ಅದನ್ನೇನಾದರೂ ಭೂಮಿಕಾ ಬಳಿ ಹೇಳಿದರೆ ದೊಡ್ಡ ಅವಾಂತರ ಆಗುವುದು ನಿಜವೇ. ಈ ವಿಷಯ ಏನಾದರೂ ಭೂಮಿಕಾಗೆ ಗೊತ್ತಾದರೆ, ಅವಳೂ ಕುಸಿದು ಹೋಗುತ್ತಾಳೆ. ಆ ಹಂತದಲ್ಲಿ ಶಕುಂತಲಾಗೆ ಜಯ ಆಗುವುದು ನಿಜ.
ಸೀರಿಯಲ್ಗೆ ಮತ್ತಷ್ಟು ರೋಚಕತೆ
ಆದರೆ, ಅದೇ ವೇಳೆ ಶಕುಂತಲಾನೇ ಈ ಕೆಲಸ ಮಾಡಿಸಿರುವುದು ಭಾಗ್ಯಮ್ಮನಿಗೆ ತಿಳಿದಿರುವುದರಿಂದ, ಸ್ವಲ್ಪ ಭಯ ಪಡುವ ಸಾಧ್ಯತೆಯೂ ಇದೆ. ಇದು ಗೌತಮ್ಗೆ ಶಕುಂತಲಾ ಕುತಂತ್ರ ಬಯಲಾಗಲು ಇರುವ ಕೊನೆಯ ಅಸ್ತ್ರ. ಹೀಗಾದರೆ ಗೌತಮ್ ಕೂಡ ತಿರುಗಿ ಬೀಳುತ್ತಾನೆ. ಆದ್ದರಿಂದ ಶಕುಂತಲಾ ಇದನ್ನು ಇಷ್ಟು ಬೇಗ ಹೇಳಲಾರಳು.
ಸೀರಿಯಲ್ಗೆ ಮತ್ತಷ್ಟು ರೋಚಕತೆ
ಆದರೂ, ಇದೀಗ ಸೀರಿಯಲ್ಗೆ ಮತ್ತಷ್ಟು ರೋಚಕತೆ ಸಿಕ್ಕಿದೆ. ಇದಾಗಲೇ ಬಹಳಷ್ಟು ವೀಕ್ಷಕರ ಮನಸ್ಸನ್ನು ಗೆದ್ದಿರೋ ಅಮೃತಧಾರೆ, ಇನ್ನಷ್ಟು ಟಿಆರ್ಪಿ ಗಳಿಸುವುದರಲ್ಲಿ ಸಂಶಯವೇ ಇಲ್ಲ ಎನ್ನುವುದು ನೆಟ್ಟಿಗರ ಅಭಿಮತ. ಅಷ್ಟಕ್ಕೂ ಇಂಥ ಅತ್ತೆ- ಸೊಸೆ ಚಾಲೆಂಜ್ಗಳು ಸಾಮಾನ್ಯವಾಗಿ ವೀಕ್ಷಕರಿಗೆ ಕುತೂಹಲ ಕೆರಳಿಸುವುದು ಇದ್ದೇ ಇದೆ.