ಮೂರಂತಸ್ತಿನ ಕಟ್ಟಡದಿಂದ ಹಾರಬೇಕೆನ್ನುವಾಗ ದೇವತೆಯಂತೆ ಬಂದು ವಿದ್ಯಾರ್ಥಿನಿ ಜೀವ ಉಳಿಸಿದ ಶಿಕ್ಷಕಿ
ಕೆಲವೊಮ್ಮೆ ಪವಾಡ ಸದೃಶದಂತೆ ಇಂತಹ ದುರಂತಗಳು ಸಂಭವಿಸುವುದು ತಪ್ಪುತ್ತವೆ. ಇದೀಗ ಅಂತಹುದೇ ಮ್ಯಾಜಿಕ್ ಮತ್ತೊಮ್ಮೆ ಸಂಭವಿಸಿದೆ.

ಇತ್ತೀಚಿನ ದಿನಗಳಲ್ಲಿ ದಿನ ಬೆಳಗಾದರೆ ಸಾಕು ಚಿಕ್ಕಪುಟ್ಟ ಸಮಸ್ಯೆಗೂ ವಿದ್ಯಾರ್ಥಿಗಳು ಆತ್ಮ*ಹ*ತ್ಯೆಗೆ ಯತ್ನಿಸುತ್ತಿರುವುದನ್ನ ನಾವೆಲ್ಲಾ ನೋಡುತ್ತಿದ್ದೇವೆ ಅಥವಾ ಕೇಳುತ್ತಿದ್ದೇವೆ. ಈ ಬಗ್ಗೆ ಅದೆಷ್ಟೇ ಜಾಗೃತಿ ಮೂಡಿಸಿದರೂ ಇಂತಹ ದುರಂತಗಳು ಸಂಭವಿಸುತ್ತಲೇ ಇವೆ.
ಕೆಲವೊಮ್ಮೆ ಪವಾಡ ಸದೃಶದಂತೆ ಇಂತಹ ದುರಂತಗಳು ಸಂಭವಿಸುವುದು ತಪ್ಪುತ್ತವೆ. ಇದೀಗ ಅಂತಹುದೇ ಮ್ಯಾಜಿಕ್ ಮತ್ತೊಮ್ಮೆ ಸಂಭವಿಸಿದ್ದು, ಆ ವಿದ್ಯಾರ್ಥಿನಿ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾಳೆ.
ಅಷ್ಟಕ್ಕೂ ಆಗಿದ್ದೇನು ಅಂತೀರಾ?. ಈ ಘಟನೆ ನಡೆದಿರುವುದು ಜೈಪುರದ ಮಹೇಶ್ ನಗರ ಪ್ರದೇಶದಲ್ಲಿ. ಇಲ್ಲಿ ನೀಟ್(NEET)ಗೆ ತಯಾರಿ ನಡೆಸುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ಕೋಚಿಂಗ್ ಸೆಂಟರ್‌ನ ಮೂರನೇ ಮಹಡಿಯಿಂದ ಹಾರಿ ಆತ್ಮ*ಹ*ತ್ಯೆ ಮಾಡಿಕೊಳ್ಳಬೇಕು ಎಂದು ಮುಂದಾಗಿದ್ದಾಳೆ.
ಆ ವಿದ್ಯಾರ್ಥಿನಿ ಪಿಜಿಯಲ್ಲಿ ಓದುತ್ತಿದ್ದು, ಮೂಲತಃ ರಾಜಸ್ಥಾನದ ಚುರುವಿನವಳು. ಘಟನೆ ನಡೆದ ಸಮಯದಲ್ಲಿ ವಿದ್ಯಾರ್ಥಿ ಛಾವಣಿಯ ಮೇಲೆ ನಿಂತಿರುವುದನ್ನು ನೋಡಿ ಅಲ್ಲೇ ಹಾದುಹೋಗುವ ಜನರು ಎಚ್ಚರಿಕೆ ನೀಡಿದ್ದಾರೆ.
ಜನರು ಎಚ್ಚರಿಕೆ ನೀಡಿದ ತಕ್ಷಣ, ಕೋಚಿಂಗ್ ಇನ್‌ಸ್ಟಿಟ್ಯೂಟ್ ಓರ್ವ ಶಿಕ್ಷಕಿ ತಕ್ಷಣ ಮೇಲೆ ಬಂದರು. ತಕ್ಷಣ ವಿದ್ಯಾರ್ಥಿನಿಯನ್ನು ಹಿಂದಿನಿಂದ ಹಿಡಿದು ಜಿಗಿಯದಂತೆ ತಡೆದರು. ಪೊಲೀಸರ ಪ್ರಕಾರ, ಆ ಸಮಯದಲ್ಲಿ ವಿದ್ಯಾರ್ಥಿನಿ ಸಾಕಷ್ಟು ವಿರೋಧಿಸುತ್ತಿದ್ದಳು. ಆದರೆ ಶಿಕ್ಷಕಿ ಬಿಟ್ಟುಕೊಡದೆ ಅವಳನ್ನು ಸುರಕ್ಷಿತವಾಗಿ ಕೆಳಗೆ ಎಳೆದರು.
ಪೊಲೀಸ್ ತನಿಖೆಯಲ್ಲಿ ವಿದ್ಯಾರ್ಥಿನಿ ಇತ್ತೀಚೆಗೆ ಕೆಲವು ಕೋಚಿಂಗ್ ಪರೀಕ್ಷೆಗಳನ್ನು ತಪ್ಪಿಸಿಕೊಂಡಿದ್ದಳು ಎಂದು ತಿಳಿದುಬಂದಿದೆ. ಶುಕ್ರವಾರ ಮಧ್ಯಾಹ್ನ ಆಕೆಯ ಕುಟುಂಬ ಸದಸ್ಯರು ಕೋಚಿಂಗ್ ಕೇಂದ್ರಕ್ಕೆ ತಲುಪಿ ಆಕೆಯ ಜೊತೆ ಅಧ್ಯಯನದ ಬಗ್ಗೆ ಮಾತನಾಡಿದರು.
ಈ ಸಂಭಾಷಣೆಯ ನಂತರ, ವಿದ್ಯಾರ್ಥಿನಿ ಬೇಸರಗೊಂಡು ನೇರವಾಗಿ ಟೆರೇಸ್‌ಗೆ ಹೋಗಿದ್ದಾಳೆ. ಆಕೆಗೆ ಕೌನ್ಸೆಲಿಂಗ್ ನೀಡಲಾಗಿದ್ದು, ಪರಿಸ್ಥಿತಿಯ ಬಗ್ಗೆ ಕುಟುಂಬಕ್ಕೂ ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.