- Home
- Entertainment
- Cine World
- ದುಬಾರಿ ಮನೆ ಹೊಂದಿರುವ ದಕ್ಷಿಣ ಭಾರತದ ಟಾಪ್ 10 ನಟರು… ಕನ್ನಡ ನಟರು ಈ ಲಿಸ್ಟಲ್ಲೇ ಇಲ್ಲ
ದುಬಾರಿ ಮನೆ ಹೊಂದಿರುವ ದಕ್ಷಿಣ ಭಾರತದ ಟಾಪ್ 10 ನಟರು… ಕನ್ನಡ ನಟರು ಈ ಲಿಸ್ಟಲ್ಲೇ ಇಲ್ಲ
ದಕ್ಷಿಣ ಭಾರತದ ನಟರಲ್ಲಿ ಹಲವಾರು ನಟರು ದುಬಾರಿ ಮನೆಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಟಾಪ್ 10 ನಟರ ಲಿಸ್ಟ್ ಇಲ್ಲಿದೆ. ಇವುಗಳಲ್ಲಿ ಕನ್ನಡದ ಯಾವುದೇ ನಟನ ಹೆಸರೂ ಕೂಡ ಇಲ್ಲ. ತಮಿಳು, ತೆಲುಗಿಗೆ ಹೋಲಿಕೆ ಮಾಡಿದ್ರೆ ಕನ್ನಡ ನಟರ ಸಂಭಾವನೆ ಕಡಿಮೆ ಇತ್ತು.

ಧನುಷ್
ದಕ್ಷಿಣ ಭಾರತದಲ್ಲಿ ನಟರದಲ್ಲಿ ಅತ್ಯಂತ ದುಬಾರಿ ಮನೆ ಹೊಂದಿರುವ ನಟ ಅಂದ್ರೆ ಅದು ಧನುಷ್. ಇವರು ಬರೋಬ್ಬರಿ 150 ಕೋಟಿ ಮೌಲ್ಯದ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ.
ಅಲ್ಲು ಅರ್ಜುನ್
ಪುಷ್ಫಾ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೋಡಿ ಮಾಡುತ್ತಿರುವ ನಟ ಅಲ್ಲು ಅರ್ಜುನ್ ಅವರ ಹೈದರಾಬಾದ್ ಬಂಗಲೆ ಮೌಲ್ಯ ಸುಮಾರು 100 ಕೋಟಿಯಾಗಿದೆ.
ದಳಪತಿ ವಿಜಯ್
ತಮಿಳು ನಟ ಹಾಗೂ ಸದ್ಯ ರಾಜಕೀಯದಲ್ಲಿ ಗುರುತಿಸಿಕೊಳ್ಳುತ್ತಿರುವ ದಳಪತಿ ವಿಜಯ್ ಅವರ ಲಕ್ಸುರಿ ಬಂಗಲೆ ಬರೋಬ್ಬರಿ 80 ಕೋಟಿಯದ್ದಾಗಿದೆ.
ಪ್ರಭಾಸ್
ಬಾಹುಬಲಿ ಸಿನಿಮಾ ಮೂಲಕ ಪ್ರಪಂಚದ ಮೂಲೆ ಮೂಲೆಗೂ ಪರಿಚಿತರಾದ ನಟ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪ್ರಭಾಸ್ ವಾಸವಿರುವ ಮನೆಯ ಮೌಲ್ಯ 60 ಕೋಟಿಯಾಗಿದೆ.
ಅಕ್ಕಿನೇನಿ ನಾಗಾರ್ಜುನ
ತೆಲುಗಿನ ಹಿರಿಯ ನಟ, ಇಂದಿಗೂ ತಮ್ಮ ನಟನೆ, ಸ್ಟೈಲ್ ಮೂಲಕ ಯುವ ಜನರ ಮನಸು ಕದಿಯುವ ತಾರೆ ಅಕ್ಕಿನೇನಿ ನಾಗಾರ್ಜುನ ಅವರು 42 ಕೋಟಿ ಮೌಲ್ಯದ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ.
ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಅವರು ವರ್ಷಕ್ಕೊಂದು ಸಿನಿಮಾ ಮಾಡಿಕೊಂಡು, ಆಧ್ಯಾತ್ಮಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸಿಂಪಲ್ ಆಗಿ ಬದುಕುವ ವ್ಯಕ್ತಿ. ಇವರ ಬಂಗಲೆ ಮೌಲ್ಯ 35 ಕೋಟಿ.
ರಾಮ್ ಚರಣ್
ಚಿರಂಜೀವಿ ಪುತ್ರ ರಾಮ್ ಚರಣ್ ಕೂಡ ಇಂದು ದೇಶವೇ ಮೆಚ್ಚಿಕೊಂಡಿರುವ ನಟರಲ್ಲಿ ಒಬ್ಬರಾಗಿದ್ದಾರೆ. ಇವರು ವಾಸಿಸುವ ಬಂಗಲೆಯ ಮೌಲ್ಯ 30 ಕೋಟಿಯಾಗಿದೆ.
ಪೃಥ್ವಿರಾಜ್ ಸುಕುಮಾರ್
ಮಲಯಾಲಂ ಚಿತ್ರರಂಗದಲ್ಲಿ ಕೇವಲ ಒಬ್ಬ ನಟ ದುಬಾರಿ ಮನೆಗಳನ್ನು ಹೊಂದಿರುವ ಟಾಪ್ 10 ನಟರ ಲಿಸ್ಟಲ್ಲಿ ಬಂದಿದ್ದಾರೆ. ಅದು ಪೃಥ್ವಿರಾಜ್ ಸುಕುಮಾರ್. ಇವರ ಮುಂಬೈ ಬಂಗಲೆ ಮೌಲ್ಯ 30 ಕೋಟಿ.
ಮಹೇಶ್ ಬಾಬು
ಎವರ್ ಗ್ರೀನ್ ಹ್ಯಾಂಡ್ಸಮ್ ನಟ ಮಹೇಶ್ ಬಾಬು ಅವರ ಬಂಗಲೆ ಬರೋಬ್ಬರಿ 28 ಕೋಟಿ ಮೌಲ್ಯದ್ದಾಗಿದೆ.
ಕಮಲ್ ಹಾಸನ್
ದುಬಾರಿ ಮನೆಗಳನ್ನು ಹೊಂದಿರುವ ಸ್ಟಾರ್ ಗಳ ಲಿಸ್ಟ್ ನಲ್ಲಿ ಟಾಪ್ 10ರಲ್ಲಿ ಇರುವ ನಟ ಕಮಲ್ ಹಾಸನ್. ಇವರು 19.5 ಕೋಟಿ ಮೌಲ್ಯದ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ.