- Home
- Entertainment
- Cine World
- ಇನ್‌ಸ್ಟಾ ಲೈವ್‌ನಲ್ಲಿ Rashmika Mandanna ಪ್ರತ್ಯಕ್ಷ: ಪ್ರೀತಿಯ ವಿಷ್ಯ ಹೇಳುತ್ತಲೇ ಚಮಕ್ ಕೊಟ್ಟ ನಟಿ
ಇನ್‌ಸ್ಟಾ ಲೈವ್‌ನಲ್ಲಿ Rashmika Mandanna ಪ್ರತ್ಯಕ್ಷ: ಪ್ರೀತಿಯ ವಿಷ್ಯ ಹೇಳುತ್ತಲೇ ಚಮಕ್ ಕೊಟ್ಟ ನಟಿ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮೂರನೇ ಬಾರಿಗೆ ತೆರೆ ಮೇಲೆ ಒಂದಾಗುತ್ತಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ, ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಕುತೂಹಲ ಮೂಡಿಸಿದ್ದು, ಇದು ಅವರ ಮದುವೆಯ ಸುದ್ದಿಯೇ ಅಥವಾ ಸಿನಿಮಾವೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಕಾಮ್ರೇಡ್ ಚಿತ್ರಗಳಲ್ಲಿ ಒಂದಾದ ಸ್ಟಾರ್ ಜೋಡಿ
ಟಾಲಿವುಡ್‌ನ ಮೋಸ್ಟ್ ರೊಮ್ಯಾಂಟಿಕ್ ಜೋಡಿಯಾಗಿ ಗುರುತಿಸಿಕೊಂಡಿರುವ ವಿಜಯ್ ದೇವರಕೊಂಡ (Vijay Devarakonda) ಹಾಗೂ ರಶ್ಮಿಕಾ ಮಂದಣ್ಣ ನಡುವೆ ಹಲವು ವರ್ಷಗಳಿಂದ ಗಾಸಿಪ್ ನಡೆಯುತ್ತಲೇ ಇದೆ. ಇವರಿಬ್ಬರೂ ಮದುವೆಯಾಗುತ್ತಾರೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳೂ ಸಿಕ್ಕಿವೆ. ಇವುಗಳ ನಡುವೆಯೇ, ಮೂರನೇ ಸಿನಿಮಾದಲ್ಲಿ ಮತ್ತೆ ಜೊತೆಯಾಗುತ್ತಿದ್ದಾರೆ. ಈಗಾಗಲೇ ಇವರಿಬ್ಬರು ತೆಲುಗಿನ ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಇದೀಗ 3ನೇ ಬಾರಿ ಮತ್ತೆ ತೆರೆಮೇಲೆ ಒಂದಾಗಿದ್ದಾರೆ.
ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ನಟಿ
ಇದರ ನಡುವೆಯೇ ರಶ್ಮಿಕಾ ಮಂದಣ್ಣ (Rashmika Mandanna) ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಚಮಕ್ ಕೊಟ್ಟಿದ್ದಾರೆ. ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅವರು ತಮ್ಮ ಅಭಿಮಾನಿಗಳನ್ನು ತುಂಬಾ ಪ್ರೀತಿಸುವುದಾಗಿ ಹೇಳಿಕೊಂಡಿದ್ದು, ಈ ದಿನಕ್ಕಾಗಿಯೇ ಕಾಯುತ್ತಿದ್ದೆ, ಆ ದಿನ ಬಂದಿದೆ, ತುಂಬಾ ಎಕ್ಸೈಟ್ ಆಗುತ್ತಿದ್ದೇನೆ ಎನ್ನುವ ಮೂಲಕ, ನಟಿ ಸೀಕ್ರೇಟ್ ಆಗಿ ಏನೋ ಒಂದು ವಿಷಯದ ಬಗ್ಗೆ ಮಾತನಾಡಿದ್ದಾರೆ.
ವಿಷಯ ಹೇಳದ ರಶ್ಮಿಕಾ
ರಶ್ಮಿಕಾ ಯಾವ ವಿಷಯದ ಬಗ್ಗೆ ಎಂದು ಹೇಳಲಿಲ್ಲ. ಅವರು ಹೇಳುವುದನ್ನು ನೋಡಿದರೆ ಅದು ಅವರ ಮುಂಬರುವ ಚಿತ್ರದ ಬಗ್ಗೆ ಎಂದು ತಿಳಿಯಬಹುದು. ಈ ಪ್ರಾಜೆಕ್ಟ್ ಬರುವ ಬಗ್ಗೆ ನಾನು ತುಂಬಾ ಉತ್ಸುಕಳಾಗಿದ್ದೇನೆ. ನಿಮ್ಮ ಪ್ರೀತಿ ಹೀಗೆಯೇ ಇರಲಿ, ಅದೇನೆಂದು ನಾನು ಹೇಳುವುದಿಲ್ಲ ಎಂದು ಎಲ್ಲರಿಗೂ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ಇವರ ಮಾತನ್ನು ಕೇಳಿ ಹಲವರು ನಟಿಗೆ ವಿಷ್ ಮಾಡಿದರೆ, ಮತ್ತೆ ಕೆಲವರು ಇದು ಮದುವೆ ಪ್ರಾಜೆಕ್ಟಾ ಎಂದು ತಮಾಷೆ ಮಾಡಿದ್ದಾರೆ.
ಪ್ರೀತಿ ಬಗ್ಗೆ ರಶ್ಮಿಕಾಗೆ ಪ್ರಶ್ನೆ
ಅಷ್ಟಕ್ಕೂ, ಪುಷ್ಪಾ 2 (Pushpa 2) ಪ್ರಮೋಷನ್ ವೇಳೆ ರಶ್ಮಿಕಾ ಮಂದಣ್ಣಗೆ, ಪ್ರೀತಿ ಬಗ್ಗೆ ಕೇಳಲಾಗಿತ್ತು. ಆಗ ಹೆಸರು ಹೇಳದೆ, ಎಲ್ಲರಿಗೂ ಈ ವಿಷ್ಯ ಗೊತ್ತಿದೆ ಎಂದಿದ್ದರು ರಶ್ಮಿಕಾ. ಪುಷ್ಪಾ 2 ಸಿನಿಮಾವನ್ನು ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆ ರಶ್ಮಿಕಾ ವೀಕ್ಷಣೆ ಮಾಡಿದ್ದರು.
ರಶ್ಮಿಕಾ-ವಿಜಯ್ ನಡುವೆ ಏನಿದು?
ಈ ಎಲ್ಲ ಘಟನೆ ರಶ್ಮಿಕಾ ಹಾಗೂ ವಿಜಯ್ ಲವ್ ಮಾಡ್ತಿದ್ದಾರೆ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿತ್ತು. ಆದ್ರೆ ಈಗ ರಶ್ಮಿಕಾ ಹಾಗೂ ವಿಜಯ್ ಫೋಟೋ, ಇಬ್ಬರು ಎಂಗೇಜ್ಮೆಂಟ್ (Engagement) ಮಾಡ್ಕೊಂಡಿದ್ದಾರಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ಮೆಂಟ್
ಅಷ್ಟಕ್ಕೂ, 29 ವರ್ಷದ ಈ ಚೆಲುವೆ ಡೇಟಿಂಗ್, ಮದ್ವೆ ವಿಷಯದಲ್ಲಿಯೂ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಕನ್ನಡದ ನಟಿ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ಆಗಿರುವ ಫೋಟೋಗಳು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬಹುತೇಕರಿಗೆ ತಿಳಿದಿರುವಂತೆ ಇವರಿಬ್ಬರೂ ಮದುವೆಯಾಗುವ ಸಿದ್ಧತೆ ನಡೆಸಿದ್ದರು. ಆದರೆ ಅದು ಮುರಿದು ಬಿದ್ದಿತ್ತು.
ಹೋದಲ್ಲೆಲ್ಲಾ ಪ್ರಶ್ನೆ
ಈಗಲೂ ಇಬ್ಬರೂ ಸಿಂಗಲ್ ಆಗಿದ್ದಾರೆ. 'ಕಿರಿಟ್ ಪಾರ್ಟಿ’ ಸಿನಿಮಾ ವೇಳೆ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ರಶ್ಮಿಕಾ ಮಂದಣ್ಣ ಎಂಗೇಜ್ ಆಗಿದ್ದರು. ಆದರೆ ಕೆಲವೇ ತಿಂಗಳಲ್ಲಿ ಸಂಬಂಧ ಅಲ್ಲಿಗೇ ಮುಗಿಯಿತು. ಅವರಿವರ ಜೊತೆ ಆಗಾಗ್ಗೆ ಹೆಸರು ಕೇಳಿಬರುತ್ತಿದ್ದರೂ ಈ ವಿಷಯದಲ್ಲಿ ರಶ್ಮಿಕಾ ಹೆಸರು ಹೆಚ್ಚಾಗಿ ಥಳಕು ಹಾಕಿಕೊಂಡಿದ್ದು ವಿಜಯ್ ದೇವರಕೊಂಡ ಜೊತೆ. ಇದಾದ ಬಳಿಕ ಇವರ ಮದುವೆಯ ಕುರಿತು ಹೋದಲ್ಲೆಲ್ಲಾ ಪ್ರಶ್ನೆಗಳು ಎದುರಾಗುತ್ತಿರುತ್ತವೆ.