ವಿಜಯ ದೇವರಕೊಂಡ ಹೆಸರು ಹೇಳುತ್ತಿದ್ದಂತೆಯೇ ರಶ್ಮಿಕಾ ಮಂದಣ್ಣ ಈ ಪರಿ ನಾಚಿಕೊಂಡಿದ್ದು, ಕೊನೆಗೆ ಹೇಳಿದ್ದೇನು? 

ಟಾಲಿವುಡ್‌ನ ಮೋಸ್ಟ್‌ ರೊಮ್ಯಾಂಟಿಕ್‌ ಜೋಡಿಯಾಗಿ ಗುರುತಿಸಿಕೊಂಡಿರುವ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಹಲವು ವರ್ಷಗಳಿಂದ ಗಾಸಿಪ್​ ನಡೆಯುತ್ತಲೇ ಇದೆ. ಇವರಿಬ್ಬರೂ ಮದುವೆಯಾಗುತ್ತಾರೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳೂ ಸಿಕ್ಕಿವೆ. ಇವುಗಳ ನಡುವೆಯೇ, ಮೂರನೇ ಸಿನಿಮಾದಲ್ಲಿ ಮತ್ತೆ ಜೊತೆಯಾಗುತ್ತಿದ್ದಾರೆ. ಈಗಾಗಲೇ ಇವರಿಬ್ಬರು ತೆಲುಗಿನ ಗೀತ ಗೋವಿಂದಂ ಮತ್ತು ಡಿಯರ್‌ ಕಾಮ್ರೇಡ್‌ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಇದೀಗ 3ನೇ ಬಾರಿ ಮತ್ತೆ ತೆರೆಮೇಲೆ ಒಂದಾಗಲು ಸಜ್ಜಾಗಿದ್ದಾರೆ. ಈ ಜೋಡಿ, ಕೆಲ ದಿನಗಳ ಹಿಂದೆ ಒಟ್ಟಿಗೆ ಕೆಫೆಯಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ದೀಪಾವಳಿ ಹಬ್ಬವನ್ನು ರಶ್ಮಿಕಾ ಮಂದಣ್ಣ, ವಿಜಯ್ ಮನೆಯಲ್ಲಿ ಆಚರಿಸಿಕೊಂಡಿದ್ದರು.

ಪುಷ್ಪಾ 2 (Pushpa 2) ಪ್ರಮೋಷನ್ ವೇಳೆ ರಶ್ಮಿಕಾ ಮಂದಣ್ಣಗೆ, ಪ್ರೀತಿ ಬಗ್ಗೆ ಕೇಳಲಾಗಿತ್ತು. ಆಗ ಹೆಸರು ಹೇಳದೆ, ಎಲ್ಲರಿಗೂ ಈ ವಿಷ್ಯ ಗೊತ್ತಿದೆ ಎಂದಿದ್ದರು ರಶ್ಮಿಕಾ. ಪುಷ್ಪಾ 2 ಸಿನಿಮಾವನ್ನು ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆ ರಶ್ಮಿಕಾ ವೀಕ್ಷಣೆ ಮಾಡಿದ್ದರು. ಈ ಎಲ್ಲ ಘಟನೆ ರಶ್ಮಿಕಾ ಹಾಗೂ ವಿಜಯ್ ಲವ್ ಮಾಡ್ತಿದ್ದಾರೆ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿತ್ತು. ಆದ್ರೆ ಈಗ ರಶ್ಮಿಕಾ ಹಾಗೂ ವಿಜಯ್ ಫೋಟೋ, ಇಬ್ಬರು ಎಂಗೇಜ್ಮೆಂಟ್ (Engagement) ಮಾಡ್ಕೊಂಡಿದ್ದಾರಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಅಷ್ಟಕ್ಕೂ ವಿಜಯ್ ಹಾಗೂ ರಶ್ಮಿಕಾ ತಾವಿಬ್ಬರು ಪ್ರೀತಿ ಮಾಡ್ತಿರೋದಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಸಂದರ್ಶನವೊಂದರಲ್ಲಿ ವಿಜಯ್, ರಿಲೇಶನ್ಶಿಪ್ ನಲ್ಲಿ ಇರೋದಾಗಿ ಹೇಳಿದ್ದರು. ಸಹ ನಟಿ ಜೊತೆ ಸಂಬಂಧದಲ್ಲಿರುವ ಬಗ್ಗೆ ಹಾಗೂ ನಟಿಯರು ಮತ್ತು ಮದುವೆ ಬಗ್ಗೆ ಮಾತನಾಡಿದ್ದರು. ಆದ್ರೆ ಎಲ್ಲಿಯೂ ರಶ್ಮಿಕಾ ಹೆಸರನ್ನು ಬಾಯ್ಬಿಟ್ಟಿಲ್ಲ. ರಶ್ಮಿಕಾ ಕೂಡ, ವಿಜಯ್ ಪ್ರೀತಿ ಮಾಡ್ತಿರೋದಾಗಿ ಹೇಳಿಲ್ಲ. ಸದ್ಯ ವಿಜಯ್ ಹಾಗೂ ರಶ್ಮಿಕಾ, ಸಿನಿಮಾ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ. ಪುಷ್ಪಾ 2 ಸಕ್ಸಸ್ ಮಧ್ಯೆಯೇ ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.

ಇದರ ನಡುವೆಯೇ ಇದೀಗ ನಟಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗಿದೆ. ಕೆಲವು ಟಾಲಿವುಡ್​ ಚಿತ್ರನಟರ ಹೆಸರು ಹೇಳಿ, ಅವರಿಂದ ನೀವು ಏನನ್ನು ತೆಗೆದುಕೊಳ್ಳಲು ಬಯಸುತ್ತೀರಿ ಎಂದು ಪ್ರಶ್ನಿಸಲಾಗಿದೆ. ನಾಗಾರ್ಜುನ ಅವರಿಂದ ಚಾರ್ಮ್​ ಎಂದು ರಶ್ಮಿಕಾ ಹೇಳಿದ್ದಾರೆ, ಪ್ರಭುದೇವ ಅವರ ಹೆಸರು ಹೇಳಿದಾಗ ಏನು ಹೇಳಿದರೂ ಅದಕ್ಕೆ ಸದಾ ಸಿದ್ಧ ಇರುವ ಅವರ ಗುಣ ಎಂದಿದ್ದಾರೆ. ಅಲ್ಲು ಅರ್ಜುನ್​ ಅವರ ಹೆಸರು ಹೇಳಿದಾಗ ಅವನ ನಟನೆ ಎಂದಿದ್ದಾರೆ. ಕೊನೆಗೆ ವಿಜಯ ದೇವರಕೊಂಡ ಹೆಸರು ಹೇಳಿದಾಗ ನಟಿ ನಾಚಿ ನೀರಾಗಿದ್ದಾರೆ. ಅರೆ ಕ್ಷಣ ಮೌನವಾಗಿ ಕೊನೆಗೆ ಎಲ್ಲವನ್ನೂ ಎಂದಿದ್ದಾರೆ!

ಅಷ್ಟಕ್ಕೂ, 29 ವರ್ಷದ ಈ ಚೆಲುವೆ ಡೇಟಿಂಗ್​, ಮದ್ವೆ ವಿಷಯದಲ್ಲಿಯೂ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಕನ್ನಡದ ನಟಿ ರಕ್ಷಿತ್​ ಶೆಟ್ಟಿ ಜೊತೆ ರಶ್ಮಿಕಾ ಮಂದಣ್ಣ ಎಂಗೇಜ್​ಮೆಂಟ್​ ಆಗಿರುವ ಫೋಟೋಗಳು ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬಹುತೇಕರಿಗೆ ತಿಳಿದಿರುವಂತೆ ಇವರಿಬ್ಬರೂ ಮದುವೆಯಾಗುವ ಸಿದ್ಧತೆ ನಡೆಸಿದ್ದರು. ಆದರೆ ಅದು ಮುರಿದು ಬಿದ್ದಿತ್ತು. ಈಗಲೂ ಇಬ್ಬರೂ ಸಿಂಗಲ್​ ಆಗಿದ್ದಾರೆ. 'ಕಿರಿಟ್ ಪಾರ್ಟಿ’ ಸಿನಿಮಾ ವೇಳೆ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ರಶ್ಮಿಕಾ ಮಂದಣ್ಣ ಎಂಗೇಜ್ ಆಗಿದ್ದರು. ಆದರೆ ಕೆಲವೇ ತಿಂಗಳಲ್ಲಿ ಸಂಬಂಧ ಅಲ್ಲಿಗೇ ಮುಗಿಯಿತು. ಅವರಿವರ ಜೊತೆ ಆಗಾಗ್ಗೆ ಹೆಸರು ಕೇಳಿಬರುತ್ತಿದ್ದರೂ ಈ ವಿಷಯದಲ್ಲಿ ರಶ್ಮಿಕಾ ಹೆಸರು ಹೆಚ್ಚಾಗಿ ಥಳಕು ಹಾಕಿಕೊಂಡಿದ್ದು ವಿಜಯ್ ದೇವರಕೊಂಡ ಜೊತೆ. ಇದಾದ ಬಳಿಕ ಇವರ ಮದುವೆಯ ಕುರಿತು ಹೋದಲ್ಲೆಲ್ಲಾ ಪ್ರಶ್ನೆಗಳು ಎದುರಾಗುತ್ತಿರುತ್ತವೆ.

View post on Instagram