ಒಳ್ಳೆ ಸ್ಕ್ರಿಪ್ಟ್ ಬಂದರೆ ಪ್ರಭಾಸ್ ಜೊತೆ ನಟಿಸಲು ರೆಡಿ: ಅನುಷ್ಕಾ ಶೆಟ್ಟಿ
ಪ್ರಭಾಸ್ ಜೊತೆಗೆ ನಟಿಸಲು ನನಗೆ ಬಹಳ ಖುಷಿ. ಮತ್ತೆ ಅವರ ಜೊತೆ ತೆರೆ ಹಂಚಿಕೊಳ್ಳುವ ದಿನಕ್ಕಾಗಿ ನಾನೂ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ ಅನುಷ್ಕಾ ಶೆಟ್ಟಿ.

‘ಬಾಹುಬಲಿ’ ಚಿತ್ರದ ಯಶಸ್ವಿ ಜೋಡಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಅವರನ್ನು ಮತ್ತೆ ಯಾವಾಗ ಜೊತೆಯಾಗಿ ತೆರೆ ಮೇಲೆ ನೋಡೋದು ಎಂಬ ಪ್ರಶ್ನೆಗೆ ಅನುಷ್ಕಾ ಉತ್ತರ ನೀಡಿದ್ದಾರೆ.
ಒಳ್ಳೆ ಸ್ಕ್ರಿಪ್ಟ್ ಬಂದರೆ ಮತ್ತೆ ತೆರೆ ಮೇಲೆ ಪ್ರಭಾಸ್ ಜೊತೆಯಾಗಿ ಕಾಣಿಸಿಕೊಳ್ಳಲು ಸಿದ್ಧ ಎಂದಿದ್ದಾರೆ. ಈ ಬಗ್ಗೆ ಅವರು, ಪ್ರಭಾಸ್ ಜೊತೆಗೆ ನಟಿಸಲು ನನಗೆ ಬಹಳ ಖುಷಿ. ಮತ್ತೆ ಅವರ ಜೊತೆ ತೆರೆ ಹಂಚಿಕೊಳ್ಳುವ ದಿನಕ್ಕಾಗಿ ನಾನೂ ಎದುರು ನೋಡುತ್ತಿದ್ದೇನೆ.
ಬಾಹುಬಲಿಯಂಥಾ ಸಿನಿಮಾದ ಬಳಿಕ ಮತ್ತೆ ನಾವಿಬ್ಬರೂ ಒಟ್ಟಿಗೆ ನಟಿಸಬೇಕೆಂದರೆ ಆ ಸಿನಿಮಾ ಭಿನ್ನವಾಗಿ, ವಿಶೇಷವಾಗಿರಬೇಕು. ಅಂಥಾ ಸ್ಕ್ಟಿಪ್ಟ್ ಬಂದರೆ ನಾನಂತೂ ನಟಿಸಲು ರೆಡಿ ಎಂದಿದ್ದಾರೆ.
ನಾನು ಈಗಲೂ ಬಾಹುಬಲಿ ತಂಡದ ಜೊತೆಗೆ ಸಂಪರ್ಕದಲ್ಲಿದ್ದೇನೆ. ಇತ್ತೀಚೆಗೆ ಬಾಹುಬಲಿ 10ನೇ ವರ್ಷದ ವಾರ್ಷಿಕೋತ್ಸವ ಪಾರ್ಟಿಯಲ್ಲಿ ಭಾಗವಹಿಸಲು ಆಗಲಿಲ್ಲ.
ಆದರೆ ಬಾಹುಬಲಿ ಸಿನಿಮಾದ ಬಗ್ಗೆ ಪ್ರತ್ಯೇಕ ಡಾಕ್ಯುಮೆಂಟರಿ ತಯಾರಾಗುತ್ತಿದ್ದು ಆ ಡಾಕ್ಯುಮೆಂಟರಿ ಶೂಟಿಂಗ್ನಲ್ಲಿ ನಾನು ಸಹ ಭಾಗವಹಿಸಿದ್ದೀನಿ ಎಂದಿದ್ದಾರೆ ನಟಿ ಅನುಷ್ಕಾ ಶೆಟ್ಟಿ. ಸದ್ಯ ಅವರ ನಟನೆಯ ‘ಘಾಟಿ’ ಸಿನಿಮಾ ಸೆಪ್ಟೆಂಬರ್ 5ರಂದು ತೆರೆಗೆ ಬರಲಿದೆ.
ಇನ್ನು ಅನುಷ್ಕಾ ಹಾಗೂ ಪ್ರಭಾಸ್ ಒಟ್ಟು ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಿರ್ಚಿ, ಬಿಲ್ಲ, ಬಾಹುಬಲಿ 1, ಬಾಹುಬಲಿ 2 ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ್ದು ಎಲ್ಲ ಸಿನಿಮಾಗಳು ಸಹ ಸೂಪರ್ ಹಿಟ್ ಆಗಿವೆ.