- Home
- Entertainment
- Cine World
- 65 ದಾಟಿದರೂ ಚಿರಯುವತಿ ಸಲ್ಮಾನ್ ಖಾನ್ ಮಾಜಿ ಗೆಳತಿ : ಸಂಗೀತಾ ಬಿಜಲಾನಿ ಮುದ್ದಾದ ಫೋಟೋಗಳು
65 ದಾಟಿದರೂ ಚಿರಯುವತಿ ಸಲ್ಮಾನ್ ಖಾನ್ ಮಾಜಿ ಗೆಳತಿ : ಸಂಗೀತಾ ಬಿಜಲಾನಿ ಮುದ್ದಾದ ಫೋಟೋಗಳು
ಬಾಲಿವುಡ್ ನಟಿ ಸಂಗೀತಾ ಬಿಜಲಾನಿ 65 ದಾಟಿದರೂ ತಮ್ಮ ಸೌಂದರ್ಯದಿಂದ ಇಂದಿಗೂ ಗಮನ ಸೆಳೆಯುತ್ತಾರೆ. ಸಲ್ಮಾನ್ ಖಾನ್ ಅವರ ಮಾಜಿ ಪ್ರೇಯಸಿಯಾಗಿದ್ದ ಅವರು 80-90ರ ದಶಕದಲ್ಲಿ ತಮ್ಮ ಸ್ಟೈಲ್ ಹಾಗೂ ನಟನೆಯಿಂದ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ಕೆಲ ಸುಂದರ ಫೋಟೋಗಳು ಇಲ್ಲಿವೆ ನೋಡಿ…

ಸಂಗೀತಾ ಬಿಜಲಾನಿ ಮಾಸದ ಸೌಂದರ್ಯ
ಸಿನಿಮಾರಂಗದಲ್ಲಿರುವ ಬಹುತೇಕ ತಾರೆಯರಿಗೆ ವಯಸ್ಸೇ ಆಗುವುದಿಲ್ಲ, 60 ದಾಟಿದರು ಅವರು ಚಿರ ಯುವಕ ಯುವತಿಯರಂತೆ ಮಿಂಚುತ್ತಲೇ ಇರುತ್ತಾರೆ. ವಯಸ್ಸು ಅವರಿಗೆ ಕೇವಲ ನಂಬರ್ ಅಷ್ಟೇಗೆ 60 ದಾಟಿದರೂ ಈಗಿನ ತಾರೆಯರಿಗೆ ಸ್ಪರ್ಧೆ ನೀಡುವಂತಿದೆ ಅವರ ಸೌಂದರ್ಯ ಅಂತಹ ಎವರ್‌ಗ್ರೀನ್ ಬ್ಯೂಟಿಗಳಲ್ಲಿ ಒಬ್ಬರು ಬಾಲಿವುಡ್ ನಟಿ ಸಂಗೀತಾ ಬಿಜಲಾನಿ. ಇಂದಿನ ಯುವ ತಾರೆಯರು ಕೂಡ ಅವರ ಮುಂದೆ ನಿಂತರೆ ತುಸು ಡಲ್ ಎನಿಸುತ್ತಾರೆ ಅಂತಹ ಸೌಂದರ್ಯ ಸಂಗೀತಾ ಬಿಜಲಾನಿಯದ್ದು.
ಅಜರುದ್ದೀನ್ ಮಾಜಿ ಪತ್ನಿ ಸಂಗೀತಾ ಬಿಜಲಾನಿ
ಸಲ್ಮಾನ್ ಖಾನ್ ಅವರ ಮಾಜಿ ಗರ್ಲ್‌ಫ್ರೆಂಡ್ ಆಗಿದ್ದರೂ ಸಂಗೀತಾ ಬಿಜಲಾನಿ ಮದುವೆಯಾಗಿದ್ದು, ಕ್ರಿಕೆಟರ್ ಮೊಹಮ್ಮದ್ ಅಜರುದ್ದೀನ್ ಅವರನ್ನು 1996ರಲ್ಲಿ ಮದುವೆಯಾದ ಸಂಗೀತಾ ಬಿಜಲಾನಿ ಹಾಗೂ ಮೊಹಮ್ಮದ್ ಅಜರುದ್ದೀನ್ 16 ವರ್ಷಗಳ ದಾಂಪತ್ಯದ ನಂತರ 2010ರಲ್ಲಿ ಪರಸ್ಪರ ದೂರಾದರು. ಎವರ್‌ಗ್ರೀನ್ ಬ್ಯೂಟಿ ಸಂಗೀತಾ ಬಿಜಲಾನಿ ಅವರ ಹತ್ತು ಸೊಗಸಾದ ಫೋಟೋಗಳು ಇಲ್ಲಿವೆ ನೋಡಿ.
65 ದಾಟಿದರು ಮಾಸದ ಸೌಂದರ್ಯ
ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಸಂಗೀತಾ ಬಿಜಲಾನಿ ತಮ್ಮ ಯೌವನದಲ್ಲಿ ಬಹಳ ಸುಂದರವಾಗಿದ್ದರು, ಈಗಲೂ ಅವರ ಸೌಂದರ್ಯದಲ್ಲಿ ಏನೂ ಮಸುಕಾಗಿಲ್ಲ, 65 ದಾಟಿದರು ಸಂಗೀತಾ ಬಿಜಲಾನಿ ಇನ್ನೂ ಚಿರ ಯುವತಿ.
1980 - 1990 ರ ದಶಕದಲ್ಲಿ ಮಿಂಚಿದ್ದ ನಟಿ
ಸಂಗೀತಾ ಬಿಜಲಾನಿ ತಮ್ಮ ಗ್ಲಾಮರಸ್ ಲುಕ್ ಮತ್ತು ಸ್ಟೈಲ್ ನಿಂದ ಎಲ್ಲರ ಗಮನ ಸೆಳೆದಿದವರು 1980 ಮತ್ತು 1990 ರ ದಶಕಗಳಲ್ಲಿ, ಅವರು ಬಾಲಿವುಡ್ ನ ಅತ್ಯಂತ ಸ್ಟೈಲಿಶ್ ಮತ್ತು ಸುಂದರ ನಟಿಯರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದರು.
ಸಲ್ಮಾನ್ ಖಾನ್ ಜೊತೆ ಲವ್
ಸಂಗೀತಾ ಬಿಜಲಾನಿ ಯಾವಾಗಲೂ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮತ್ತು ಸ್ಟೈಲ್‌ನ ಕಾರಣದಿಂದಲೇ ಎಲ್ಲರನ್ನು ಸೆಳೆಯುತ್ತಿದ್ದರು. 1980 ಮತ್ತು 1990 ರ ದಶಕಗಳಲ್ಲಿ ಬಾಲಿವುಡ್‌ನಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಜೋಡಿಗಳಲ್ಲಿ ಸಲ್ಮಾನ್ ಖಾನ್ ಮತ್ತು ಸಂಗೀತಾ ಬಿಜಲಾನಿ ಕೂಡ ಒಂದು.
ಸಿನಿಮಾದಲ್ಲಿ ಜೊತೆಯಾಗಿ ನಟಿಸಿಲ್ಲ
ಸಂಗೀತಾ ಬಿಜಲಾನಿ ಸಲ್ಮಾನ್ ಖಾನ್ ಜೊತೆ ಯಾವುದೇ ಸಿನಿಮಾದಲ್ಲಿ ನಟಿಸಿದೇ ಇದ್ದರೂ ಅವರ ಲವ್‌ಸ್ಟೋರಿ ಮಾತ್ರ ಸದಾ ಚರ್ಚೆಯಲ್ಲಿತ್ತು.
ಜೊತೆಯಾಗಿ ಮಾಡೆಲಿಂಗ್
ಆದರೆ ಇಬ್ಬರೂ ಒಟ್ಟಿಗೆ ಮಾಡೆಲಿಂಗ್ ಮಾಡಿದ್ದರು ಇವರ ಪ್ರಣಯ ಉತ್ತುಂಗದಲ್ಲಿದ್ದಾಗಲೇ ಮದುವೆ ಮಾತುಕತೆಗಳು ನಡೆದಿದ್ದವು. ಮದ್ವೆ ಕಾಗದವು ರೆಡಿಯಾಗಿತ್ತು. ಆದರೆ ಅದೇನಾಯ್ತು ಏನೋ ಇವರ ಸಂಬಂಧ ಇದ್ದಕ್ಕಿದ್ದಂತೆ ಅಂತ್ಯ ಕಂಡಿತು.
ಮಾಸದ ಸೌಂದರ್ಯ
ಆ ಸಮಯದಲ್ಲಿ, ಸಂಗೀತಾ ಬಿಜಲಾನಿ ತಮ್ಮ ಲುಕ್ ಹಾೂಗೂ ವ್ಯಕ್ತಿತ್ವದಿಂದಾಗಿ, ಸಲ್ಮಾನ್ ಜೊತೆ ಮಾತ್ರವಲ್ಲದೆ ಉದ್ಯಮದ ಅನೇಕ ತಾರೆಯರ ಜೊತೆಗೂ ಸುದ್ದಿಯಲ್ಲಿದ್ದರು. ಇಂದಿಗೂ ಸಹ, ಅವರ ಯೌವನದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಲೇ ಇವೆ. ಈ ಫೋಟೋಗಳಲ್ಲಿ ಅವರ ಸೌಂದರ್ಯ ಮತ್ತು ಗ್ಲಾಮರಸ್ ಶೈಲಿಯನ್ನು ನೋಡಿದರೆ, ಕಾಲವು ಅವರ ಮೇಲೆ ಪರಿಣಾಮ ಬೀರಿಲ್ಲ ಎಂಬುದು ಗೊತ್ತಾಗುತ್ತೆ.
ಸಂಗೀತಾ ಬಿಜಲಾನಿ ಸಿನಿಮಾ
ಸಂಗೀತಾ ಬಿಜಲಾನಿಯವರ ಮೊದಲ ಹಿಂದಿ ಚಿತ್ರ ಕ್ವಾಟಿಲ್ ಇದು 1988 ರಲ್ಲಿ ಬಿಡುಗಡೆಯಾಯಿತು. ಆದರೂ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟ ಸಿನಿಮಾ 1989 ರ ಚಲನಚಿತ್ರ ತ್ರಿದೇವ್
ಸಂಗೀತಾ ಬಿಜಲಾನಿ ಸಿನಿಮಾ
ಇದಲ್ಲದೇ ಸಂಗೀತಾ ಬಿಜಲಾನಿ ತ್ರಿನೇತ್ರ (1989), ಜುರ್ಮ್ (1990), ಮತ್ತು ಹಥಿಯಾರ್ (1989) ತ್ರಿದೇವ್ (1989), ಯುಗಂಧರ್ (1993), ಮತ್ತು ಇಜ್ಜತ್ (1991) ಮುಂತಾದ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದು ಈ ಸಿನಿಮಾಗಳು ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ.