ಸಂಗೀತಾ ಬಿಜ್ಲಾನಿ, ಸಲ್ಮಾನ್ ಜೊತೆಗಿನ ಬ್ರೇಕ್‌ಅಪ್‌ಗೆ ಮಾಜಿ ಪ್ರಿಯಕರನ ನಿಯಂತ್ರಣವೇ ಕಾರಣ ಎಂದಿದ್ದಾರೆ. ಉಡುಗೆ ತೊಡುಗೆಯ ಮೇಲಿನ ನಿರ್ಬಂಧಗಳನ್ನು ಸಹಿಸದೆ ಸಂಬಂಧ ಮುರಿದುಕೊಂಡೆ ಎಂದು ಇಂಡಿಯನ್ ಐಡಲ್‌ನಲ್ಲಿ ಹೇಳಿದ್ದಾರೆ. ಮದುವೆ ಕಾರ್ಡ್ ಸಿದ್ಧವಾಗಿದ್ದ ಸುದ್ದಿಯನ್ನು ಸುಳ್ಳಲ್ಲ ಎಂದೂ ಖಚಿತಪಡಿಸಿದ್ದಾರೆ. ಸಲ್ಮಾನ್ ಹೆಸರು ಹೇಳದಿದ್ದರೂ ಮಾತಿನ ಧ್ವನಿ ಸ್ಪಷ್ಟವಾಗಿತ್ತು.
90 ರ ದಶಕದ ಬಾಲಿವುಡ್ ಟಾಪ್ ನಟಿಯರಲ್ಲಿ ಸಂಗೀತಾ ಬಿಜಲಾನಿ (Bollywood top actress Sangeeta Bijlani) ಒಬ್ಬರು. ಸಿನಿಮಾಗಿಂತ ನಟ ಸಲ್ಮಾನ್ ಖಾನ್ (actor Salman Khan) ಜೊತೆಗಿನ ಸಂಬಂಧಕ್ಕೆ ಹೆಚ್ಚು ಸುದ್ದಿ ಮಾಡಿದ ನಟಿಯರಲ್ಲಿ ಸಂಗೀತಾ ಮೊದಲ ಸ್ಥಾನದಲ್ಲಿದ್ದಾರೆ. ದೀರ್ಘಕಾಲ ಸಂಗೀತಾ ಬಿಜಲಾನಿ ಮತ್ತು ಸಲ್ಮಾನ್ ಖಾನ್ ಪ್ರೀತಿಯಲ್ಲಿದ್ದರು. ಇಬ್ಬರು ಮದ್ವೆ ಆಗ್ತಾರೆ ಎನ್ನುವ ಸುದ್ದಿ ಬಲವಾಗಿತ್ತು. ಆದ್ರೆ ಬ್ರೇಕ್ಅಪ್ (breakup) ಮಾಡ್ಕೊಂಡು ಇಬ್ಬರೂ ಬೇರೆಯಾದ್ರು. ಬಾಲಿವುಡ್ ಜೋಡಿ ಬೇರೆ ಆಗಿದ್ದು ಏಕೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಇತ್ತೀಚೆಗೆ ಸಂಗೀತಾ ಬಿಜಲಾನಿ ಇಂಡಿಯನ್ ಐಡಲ್ 15 ರಲ್ಲಿ ಕಾಣಿಸಿಕೊಂಡಿದ್ರು. ಈ ವೇಳೆ ಸಲ್ಮಾನ್ ಜೊತೆ ಪ್ರೀತಿ ಸಂಬಂಧ ಏಕೆ ಮುರಿದುಬಿತ್ತು ಎಂಬುದಕ್ಕೆ ಉತ್ತರ ನೀಡಿದ್ದಾರೆ. ನನ್ನ ಮಾಜಿಗಳಿದ್ರಲ್ಲ ಅವರು ನನ್ನನ್ನು ಅವರ ಕಂಟ್ರೋಲ್ ಗೆ ತೆಗೆದುಕೊಂಡಿದ್ದರು. ಈ ಬಟ್ಟೆ ಧರಿಸಬಾರದು, ಬಟ್ಟೆ ತುಂಬಾ ಚಿಕ್ಕದಿರಬಾರದು, ಅದು ಉದ್ದವಾಗಿರಬೇಕು ಎಂದೆಲ್ಲ ನಿಯಮ ಇತ್ತು. ಆದ್ರೆ ನನ್ನಿಂದ ಅದು ಸಾಧ್ಯವಿರಲಿಲ್ಲ. ಆರಂಭದಲ್ಲಿ ನಾನು ಅದನ್ನು ಧರಿಸುವ ಪ್ರಯತ್ನ ಮಾಡಿದ್ದೆ. ಮೊದಲು ನನಗೆ ಭಯ, ನಾಚಿಕೆ ಎಲ್ಲ ಇತ್ತು. ತುಂಬಾ ಯೋಚನೆ ಮಾಡ್ತಿದ್ದೆ. ಆದ್ರೆ ಈಗ ನಾನು ಯಾರಿಗೂ ಹೆದರುವುದಿಲ್ಲ ಎಂದಿದ್ದಾರೆ. ಆದ್ರೆ ಸಂಗೀತಾ ಬಿಜ್ಲಾನಿ ಎಲ್ಲಿಯೂ ಸಲ್ಮಾನ್ ಖಾನ್ ಹೆಸರು ತೆಗೆದುಕೊಂಡಿಲ್ಲ. ಈ ವೇಳೆ ವಿಶಾಲ್ ದಾದ್ಲಾನಿ, ಮಾಜಿಗಳ ಹೆಸರು ಹೇಳುವಂತೆ ಸಂಗೀತಾರನ್ನು ಕೇಳಿದ್ದಾರೆ. ಆದ್ರೆ ಸಂಗೀತಾ ಹೆಸರು ಹೇಳಲು ನಿರಾಕರಿಸಿದ್ರು.
ಸದ್ದು ಸುದ್ದಿ ಇಲ್ಲದೆ ಬಹುಕಾಲದ ಗೆಳತಿಯೊಂದಿಗೆ ವಿವಾಹವಾದ ಬಹುಭಾಷಾ ಗಾಯಕ ಅರ್ಮಾನ್ ಮಲಿಕ್!
ಸಂಗೀತಾ, ಸಲ್ಲು ಹೆಸರು ಹೇಳಿಲ್ಲ ಎಂದ್ರೂ ಅವರ ಗುರಿ ಸಲ್ಮಾನ್ ಎಂಬುದು ಮಾತಿನಿಂದಲೇ ಸ್ಪಷ್ಟವಾಗುತ್ತದೆ. ಸಂಗೀತಾ ಬಿಜಲಾನಿ ಮತ್ತು ಸಲ್ಮಾನ್ ಖಾನ್ ನಡುವಿನ ಸಂಬಂಧ ಒಂದು ಕಾಲದಲ್ಲಿ ಬಹು ಸುದ್ದಿಯಲ್ಲಿತ್ತು. ಟಿವಿ ಜಾಹೀರಾತಿನ ಶೂಟಿಂಗ್ ವೇಳೆ ಇಬ್ಬರೂ ಭೇಟಿಯಾಗಿದ್ರು. 1986 ರಲ್ಲಿ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಇವರಿಬ್ಬರ ಪ್ರೀತಿ ಬಾಲಿವುಡ್‌ನಾದ್ಯಂತ ಚರ್ಚೆಯಾಗಿತ್ತು. ಸುಮಾರು ಒಂದು ದಶಕದ ಕಾಲ ಇವರಿಬ್ಬರು ಪ್ರೀತಿಸಿದ್ರು. ಸುದೀರ್ಘ ಸಂಬಂಧದ ನಂತರ ಇಬ್ಬರೂ ಮದುವೆಯಾಗುವ ನಿರ್ಣಯ ತೆಗೆದುಕೊಂಡಿದ್ದರು. ಮೇ 27 , 1994 ರಂದು ಮದುವೆ ನಡೆಯಬೇಕಿತ್ತು. ಮದುವೆ ಕಾರ್ಡ್ ಕೂಡ ಸಿದ್ಧವಾಗಿತ್ತು. ಆದರೆ ವರದಿಗಳ ಪ್ರಕಾರ, ಸಂಗೀತಾ, ಸೋಮಿ ಅಲಿ ಅವರ ಕೋಣೆಯಲ್ಲಿ ಸಲ್ಮಾನ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ್ದರು. ನಂತರ ಸಲ್ಮಾನ್ ಜೊತೆಗಿನ ಮದುವೆಯನ್ನು ಮುರಿದುಕೊಂಡಿದ್ದರು. ಈ ಬಗ್ಗೆ ಸಲ್ಮಾನ್ ಮತ್ತು ಸಂಗೀತಾ ಈವರೆಗೆ ಮಾತನಾಡಿಲ್ಲ. ಕಾರ್ಯಕ್ರಮದಲ್ಲಿ, ಮದುವೆ ಕಾರ್ಡ್ ಸಿದ್ಧವಾಗಿತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಂಗೀತಾ, ಇದು ವದಂತಿಯಲ್ಲ ಎಂದಿದ್ದಾರೆ. ಆದ್ರೆ ಸಂಗೀತಾ ಮತ್ತು ಸಲ್ಮಾನ್ ಮದುವೆ ಮುರಿದು ಬೀಳಲು ನಾನು ಕಾರಣ ಎಂದು ಈ ಹಿಂದೆ ಸೋಮಿ ಅಲಿ ಹೇಳಿದ್ದರು. ಸಂಗೀತಾ ಜೊತೆ ಮದುವೆ ಆಗಲು ಸಿದ್ಧವಾಗಿದ್ದ ಸಲ್ಮಾನ್ ನನ್ನ ಜೊತೆ ಡೇಟ್ ಮಾಡ್ತಿದ್ದರು ಎಂದು ಸೋಮಿ ಈ ಹಿಂದೆ ಹೇಳಿದ್ದರು.
2024ರ ಅತಿದೊಡ್ಡ ಫ್ಲಾಪ್ ಆಯ್ತು ಸಯ್ಯದ್ ಅಬ್ದುಲ್ ರಹೀಮ್ ಜೀವನಾಧರಿತ ಸಿನಿಮಾ; 250
ಸಲ್ಮಾನ್ ರಿಂದ ದೂರವಾದ ಸಂಗೀತಾ 1996 ರಲ್ಲಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರನ್ನು ಮದುವೆಯಾದ್ರು. ಆದ್ರೆ ಮದುವೆ ಬಹು ವರ್ಷ ನಡೆಯಲಿಲ್ಲ. 2019 ರಲ್ಲಿ ಇಬ್ಬರು ವಿಚ್ಛೇದನ ಪಡೆದ್ರು. ಸಲ್ಮಾನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ್ರೂ ಸಂಗೀತಾ ಹಾಗೂ ಸಲ್ಮಾನ್ ಮಧ್ಯೆ ಸ್ನೇಹ ಹಾಗೆ ಇದೆ. ಅನೇಕ ಕಾರ್ಯಕ್ರಮದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ತಾರೆ.
