Solar Eclipse 2025 : ಸೆಪ್ಟೆಂಬರ್ 21 ರಂದು ಕನ್ಯಾ ರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಗ್ರಹಣದ ವೇಳೆ  ಮಾಡುವ ಕೆಲವೊಂದು ತಪ್ಪುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಯಾವೆಲ್ಲ ತಪ್ಪು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.  

ಸೆಪ್ಟೆಂಬರ್ 21 ರಂದು ಸೂರ್ಯಗ್ರಹಣ (Solar eclipse)ಕ್ಕೆ ಇಡೀ ಜಗತ್ತು ಸಾಕ್ಷಿಯಾಗಲಿದೆ. ಈ ಬಾರಿ ಗ್ರಹಣ ಕನ್ಯಾ ರಾಶಿಯಲ್ಲಿ ಸಂಭವಿಸಲಿದೆ. ಖಗೋಳಶಾಸ್ತ್ರದ ದೃಷ್ಟಿಯಿಂದ ಇದು ಅಪರೂಪದ ದೃಶ್ಯವಾದ್ರೂ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಇದು ಆಳವಾದ ಅರ್ಥ ಮತ್ತು ಮಹತ್ವವನ್ನು ಹೊಂದಿದೆ. ಸಂಪ್ರದಾಯದ ಪ್ರಕಾರ, ಗ್ರಹಣ ಕಾಲವನ್ನು ಶಾಂತಿ, ತಾಳ್ಮೆ, ಆತ್ಮಪರಿಶೀಲನೆಗೆ ಉತ್ತಮ ಸಮಯವೆಂದು ನಂಬಲಾಗುತ್ತದೆ. ತಜ್ಞರ ಪ್ರಕಾರ, ಈ ಸೂರ್ಯಗ್ರಹಣದ ವೇಳೆ ಕೆಲ ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡ್ಬಾರದು.

ಸೂರ್ಯಗ್ರಹಣದ ವೇಳೆ ಈ ತಪ್ಪುಗಳನ್ನು ಮಾಡ್ಬೇಡಿ :

ಕ್ರಿಸ್ಟಲ್ ಚಾರ್ಜ್ ಮಾಡುವುದು ಅಥವಾ ಮ್ಯಾನಿಫೆಸ್ಟೇಶನ್ ಮಾಡುವುದು : ಅನೇಕರು ಗ್ರಹಶಕ್ತಿಯನ್ನು ಬಳಸಿಕೊಳ್ಳುವ ಪ್ರಯತ್ನ ಮಾಡ್ತಾರೆ. ಗ್ರಹಣ ಶಕ್ತಿಯನ್ನು ಬಳಸಿಕೊಂಡು ಕ್ರಿಸ್ಟಲ್ಗಳನ್ನು ಚಾರ್ಜ್ ಮಾಡ್ತಾರೆ. ತಮ್ಮ ಬಯಕೆ ಈಡೇರಿಸಿಕೊಳ್ಳಲು ಮ್ಯಾನಿಫೆಸ್ಟೇಶನ್ ಮಾಡುವ ಅಭ್ಯಾಸ ಹೊಂದಿರ್ತಾರೆ. ಆದ್ರೆ ಗ್ರಹಣದ ಶಕ್ತಿ ಸ್ಥಿರವಾಗಿರದ ಕಾರಣ ಇದು ಗೊಂದಲ ಹೆಚ್ಚಿಸ್ಬಹುದು. ಹಾಗಾಗಿ ಈ ಟೈಂನಲ್ಲಿ ಕ್ರಿಸ್ಟಲ್ ಚಾರ್ಜ್ ಮಾಡುವ ಪ್ರಯತ್ನಕ್ಕೆ ಕೈ ಹಾಕಬೇಡಿ. ಇದ್ರ ಬದಲು ನೀವು ಧ್ಯಾನ, ಪ್ರಾಣಾಯಾಮ, ಮೌನವಾಗಿ ಕುಳಿತುಕೊಳ್ಳುವ ಪ್ರಯತ್ನ ಮಾಡಿ.

ಗರುಡ ಪುರಾಣ : ಪರ ಸ್ತ್ರೀ ಮೇಲೆ ಕಣ್ಣು ಹಾಕೋರು ಮುಂದಿನ ಜನ್ಮದಲ್ಲಿ ಈ ಪ್ರಾಣಿಯಾಗಿ ಹುಟ್ತಾರೆ!

ತುರ್ತು ನಿರ್ಧಾರ ತೆಗೆದುಕೊಳ್ಳಬೇಡಿ : ಗ್ರಹಣ ಸಮಯದಲ್ಲಿ ಭಾವನೆಗಳು ತೀವ್ರವಾಗುತ್ತವೆ. ನಿಮ್ಮ ಮನಸ್ಸಿನಲ್ಲಿ ಅಡಗಿದ್ದ ವಿಚಾರಗಳು ಹೊರಗೆ ಬರುವ ಸಾಧ್ಯತೆ ಹೆಚ್ಚು. ಇಂಥ ಸ್ಥಿತಿಯಲ್ಲಿ ನೀವು ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಂಡ್ರೆ ಇದ್ರಿಂದ ಸಮಸ್ಯೆ ಹೆಚ್ಚಾಗ್ಬಹುದು. ಪ್ರಮುಖ ಒಪ್ಪಂದಗಳು, ಹೊಸ ಕೆಲಸಗಳು ಸೇರಿದಂತೆ ಯಾವುದೇ ನಿರ್ಧಾರವನ್ನು ಈ ಸಮಯದಲ್ಲಿ ತೆಗೆದುಕೊಳ್ಳುವ ಬದಲು ಮುಂದೂಡಿ.

ಆರೋಗ್ಯ ಮತ್ತು ದಿನಚರಿ ನಿರ್ಲಕ್ಷ : ಗ್ರಹಣ ಕನ್ಯಾ ರಾಶಿಯಲ್ಲಿ ಸಂಭವಿಸ್ತಿರೋದ್ರಿಂದ ಇದು ಆರೋಗ್ಯ, ಶಿಸ್ತು ಮತ್ತು ನಿಯಮಗಳ ಸಂಕೇತವಾಗಿದೆ. ಈ ಸಮಯದಲ್ಲಿ ದೇಹದ ಆರೈಕೆ ನಿರ್ಲಕ್ಷಿಸುವುದು ಅಥವಾ ದಿನಚರಿಯನ್ನು ಬದಲಿಸುವುದು ಹಾನಿಕರ. ಆರೋಗ್ಯಕರ ಆಹಾರವನ್ನು ಸೇವನೆ ಮಾಡಿ. ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ. ಯೋಗಾಭ್ಯಾಸ ಮತ್ತು ನಿಯಮಿತ ಜೀವನಕ್ಕೆ ಆದ್ಯತೆ ನೀಡಿ.

ಬಲವಂತದ ಸಂಬಂಧ, ಒತ್ತಾಯ ಬೇಡ : ಗ್ರಹಣ ಶಕ್ತಿಯಿಂದ ಸಂಬಂಧಗಳಲ್ಲಿ ಒತ್ತಡ ಹೆಚ್ಚಾಗ್ಬಹುದು. ಇತರರನ್ನು ನೀವು ನಿಯಂತ್ರಿಸಲು ಮುಂದಾದ್ರೆ ಅದು ಕಲಹಕ್ಕೆ ಕಾರಣವಾಗ್ಬಹುದು. ಸಂಬಂಧದ ಮೇಲೆ ಬಲವಂತ ಬೇಡ. ಯಾವುದೇ ಒತ್ತಡ ಹೇರುವ ಪ್ರಯತ್ನ ನಡೆಸಬೇಡಿ. ಇರುವಂತೆ ಸಂಬಂಧವನ್ನು ಒಪ್ಪಿಕೊಳ್ಳುವ ಪ್ರಯತ್ನ ಮಾಡಿ.

ನವರಾತ್ರಿಯ ನಂತರ ಈ ಮೂರು ರಾಶಿಗೆ ಕಷ್ಟ, ಆರ್ಥಿಕ ನಷ್ಟ

ಆಧ್ಯಾತ್ಮಿಕದಿಂದ ದೂರ ಸರಿಯುವುದು : ಸೂರ್ಯಗ್ರಹಣ ಕೇವಲ ಸೂರ್ಯ ಮಸುಕಾಗುವುದಲ್ಲ. ಇದಕ್ಕೆ ಆಧ್ಯಾತ್ಮಿಕ ಮಹತ್ವ ಇದೆ. ನಿಮ್ಮಲ್ಲಿಯೇ ಇರುವ, ನಿಮಗೆ ಅಗತ್ಯವಿಲ್ಲ ಎಂಬುದನ್ನು ಕೈಬಿಡುವುದು. ನಿಮ್ಮ ಆಂತರಿಕ ವಿಕಾಸಕ್ಕೆ ಇದು ಮಹತ್ವದ ಸಮಯ. ನಿಮ್ಮನ್ನು ಯಾವ ನೋವು ಕಾಡ್ತಿದೆ, ನೀವು ಯಾವುದ್ರಿಂದ ದೂರ ಸರಿಯವ ಅಗತ್ಯವಿದೆ ಎಂಬುದನ್ನು ಮೊದಲು ಧ್ಯಾನ, ಡೈರಿ ಬರೆಯುವ ಮೂಲಕ ನಿರ್ಧಾರ ಮಾಡಲು ಇದು ಉತ್ತಮ.

ಸೂರ್ಯಗ್ರಹಣದ ಪರಿಣಾಮ : ಸೆಪ್ಟೆಂಬರ್ 21, 2025 ರಂದು ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ರೆ ಪ್ರಪಂಚದ ಸಾಮೂಹಿಕ ಶಕ್ತಿಯ ಮೇಲೆ ಪರಿಣಾಮ ಬೀರಲಿದೆ. ದಕ್ಷಿಣ ಪೆಸಿಫಿಕ್ ಪ್ರದೇಶ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ಹವಾಮಾನ ಅಸ್ಥಿರತೆ, ಸಮುದ್ರ ಪ್ರಕ್ಷುಬ್ಧತೆ ಮತ್ತು ರಾಜಕೀಯ ಘಟನೆಗಳ ಸಾಧ್ಯತೆ ಇದೆ. ಜಾಗತಿಕ ಷೇರು ಮಾರುಕಟ್ಟೆ ಮತ್ತು ವ್ಯಾಪಾರ ಜಗತ್ತಿನಲ್ಲಿ ಏರಿಳಿತಗಳು ಹೆಚ್ಚಾಗಬಹುದು. ಈ ಸೂರ್ಯಗ್ರಹಣದ ನೇರ ಪರಿಣಾಮ ಭಾರತದ ಮೇಲೆ ಕಡಿಮೆಯಾಗಿರುತ್ತದೆ, ಆದರೆ ಪರೋಕ್ಷವಾಗಿ ರಾಜಕೀಯ ವಿರೋಧಾಭಾಸಗಳು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಜಗಳ ಮತ್ತು ಆರ್ಥಿಕ ವಲಯದಲ್ಲಿ ಅಸಮತೋಲನ ಕಾಡಬಹುದು.