ಸೌಂದರ್ಯವನ್ನು ಹೆಚ್ಚಿಸಲು ತೆಂಗಿನಕಾಯಿ ಒಂದು ಅದ್ಭುತವಾದ ಮನೆಮದ್ದು. ಕೂದಲು ಮತ್ತು ಚರ್ಮದ ಆರೈಕೆಗೆ ತೆಂಗಿನಕಾಯಿ ಹಾಲು ಮತ್ತು ಎಣ್ಣೆಯನ್ನು ಬಳಸುವುದರಿಂದ ಹಲವಾರು ಪ್ರಯೋಜನಗಳಿವೆ.
ಪ್ರತಿಯೊಬ್ಬ ಮಹಿಳೆಗೂ ತಾನು ಸುಂದರವಾಗಿ ಕಾಣಬೇಕೆಂಬ ಆಸೆ ಸಹಜ . ಸೌಂದರ್ಯ(Beauty) ಕೆಲವರಲ್ಲಿ ದೈವದತ್ತವಾಗಿ ಒಲಿದಿರುತ್ತದೆ. ಅಂತವರು ಸರಳವಾಗಿದ್ದರೂ ಮುಖದ ಅಂದ ಚೆಂದ ಆಕರ್ಷಿಸುವಂತಿರುತ್ತದೆ. ಇನ್ನೂ ಕೆಲವರು ಬ್ಯೂಟಿ ಪಾರ್ಲರ್ ಗಳಲ್ಲಿ ಹಣ ತೆತ್ತು ಹಲವು ವಿಧದ ಸೌಂದರ್ಯ ವಿಧಾನಗಳ ಮೊರೆ ಹೋಗುವುದು ಸಹಜ. ಆದರೆ ನೆನಪಿಡಿ ಸ್ವಲ್ಪ ಮನೆಯಲ್ಲಿಯೇ ಸಮಯ ಮಾಡಿಕೊಂಡು ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ ಚರ್ಮದ ಆರೈಕೆ ಮಾಡಿಕೊಂಡರೆ ಹೊಳೆಯುವ ಮುಖದ ಕಾಂತಿಯನ್ನು ಪಡೆಯಬಹುದು. ಹಾಗೆ ಕಡಿಮೆ ಖರ್ಚಿನಲ್ಲಿ ಮಾಡಿಕೊಳ್ಳಬಹುದಾದಂತಹ ಕೆಲವೊಂದು ಟಿಪ್ಸ್ ಇಲ್ಲಿವೆ.
ಇಂಗು ತೆಂಗು ಇದ್ದರೆ ಎಂತಹ ಪೆಂಗನಾದರೂ ಅಡುಗೆ ಮಾಡುತ್ತಾನೆ ಎನ್ನುವ ಗಾದೆಯೊಂದಿಗೆ ನಮ್ಮ ದಕ್ಷಿಣ ಭಾರತದವರಲ್ಲಿ ತೆಂಗಿನಕಾಯಿ(Coconut ) ಬಳಸದೆ ಅಡುಗೆಯೇ ಮಾಡುವುದಿಲ್ಲ. ಆದರೆ ತೆಂಗು ಅಡುಗೆಗೆ ಮಾತ್ರ ಅಲ್ಲ ನಮ್ಮ ಸೌಂದರ್ಯಕ್ಕೂ(Beauty) ಬಹಳ ಒಳ್ಳೆಯದು ಅದರಲ್ಲೂ ನಮ್ಮ ಕೂದಲು ಮತ್ತು ಚರ್ಮದ ಆರೋಗ್ಯಕಂತು ಹೇಳಿ ಮಾಡಿಸಿದ ಸಾಧನ ಎನ್ನಬಹುದು. ಇದನ್ನು ನಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಹೇಗೆ ಬಳಸಬಹುದೆಂದು ತಿಳಿದುಕೊಳ್ಳೋಣ.
ಒಣಗಿರೋ ,ಒಣಗಿದಂತಿರುವ ನಿರ್ಜೀವ ಮತ್ತು ಬಲಹೀನವಾಗಿರುವ ಕೂದಲಿಗೆ ಪೋಷಕಾಂಶಗಳು ಲಭಿಸಿ ಚೆನ್ನಾಗಿ ಬೆಳೆಯಬೇಕೆಂದರೆ ತೆಂಗಿನಕಾಯಿ ರುಬ್ಬಿ ಹಾಲು ಹಿಂಡಿಕೊಳ್ಳಿ, ಈ ಹಾಲಿನ ಸಮ ಪ್ರಮಾಣದಷ್ಟು ಕೊಬ್ಬರಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಹೊಂದಿಕೊಳ್ಳುವಂತೆ ಕಲಕಿ. ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಮೃದುವಾಗಿ ಮಸಾಜ್ ಮಾಡಿ ಅರ್ಧ ಗಂಟೆ ಬಿಟ್ಟುಬಿಡಿ ನಂತರ ಒಂದು ದಪ್ಪ ಟವೆಲನ್ನು ಬಿಸಿ ನೀರಿನಲ್ಲಿ ಅದ್ದಿ ನೀರೆಲ್ಲವನ್ನು ಹಿಂಡಿ ಟವಲ್ ಅನ್ನು ಕೂದಲಿಗೆ(Hairs) ಕಟ್ಟಿಕೊಳ್ಳಿ ತಲೆಯ ಕೂದಲು ಬುಡದಿಂದ ಹಿಡಿದು ನೆತ್ತಯವರೆಗೆಗೂ ಒಳ್ಳೆಯ ಪೋಷಕಾಂಶಗಳು ಕೂದಲಿಗೆ ದೊರೆತು ಚೆನ್ನಾಗಿ ಬೆಳೆಯುತ್ತದೆ.ಇದನ್ನ ಬಳಸುವಿದರಿಂದ ನೋಡಲು ರೇಷ್ಯಮೆಯಂತಿರುತ್ತದೆ ಕೂದಲು.
ಕೂದಲು ಉದುರುವ ಸಮಸ್ಯೆ ಇದ್ದಾಗ ತೆಂಗಿನಕಾಯಿ(Coconut ) ಹಾಲಿಗೆ ಅದರ ಎರಡರಷ್ಟು ನೀರನ್ನ ಸೇರಿಸಿ ಒಂದು ಚಮಚ ಕರ್ಪೂರವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿಕೊಂಡು ಚೆನ್ನಾಗಿ ಮೆಸೇಜ್ ಮಾಡಿ ಒಂದು ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡಿ ಕೂದಲು ಉದುರುವ ಸಮಸ್ಯೆ ತಗ್ಗುತ್ತದೆ. ಅಷ್ಟೇ ಅಲ್ಲ ನಿಮ್ಮ ಕೂದಲು ತುಂಬಾ ಸಿಕ್ಕಾಗುತ್ತಿದ್ದರೆ ಅದು ಕಡಿಮೆ ಆಗುತ್ತದೆ ಇದು ಕೂದಲಿಗೆ ಕಂಡಿಷನರಂತೆ ಕೆಲಸ ಮಾಡುತ್ತದೆ. ಇನ್ನು ತೆಂಗಿನ ಹಾಲು ತಲೆ ಕೂದಲ ಬುಡಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ ಅರ್ಧ ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡಿಕೊಳ್ಳಿ ಕೂದಲಿನ ಬುಡದಿಂದ ತುದಿಯವರೆಗೆ ಕೂದಲಿಗೆ ಬೇಕಾದ ಪೋಷಕಾಂಶಗಳು ದೊರೆಯುತ್ತದೆ ಕೂದಲಿನ ಬಡವು ಸದೃಢವಾಗಿ ಬೆಳೆಯುತ್ತದೆ
ಇನ್ನು ತೆಂಗಿನಕಾಯಿ(Coconut )ಹಾಲು ಆಂಟಿ ವೀಜಿಂಗ್ ಕೂಡ ಇದಕ್ಕೆ ಚರ್ಮವನ್ನು ಬಿಗಿಗೊಳಿಸುವ ಶಕ್ತಿ ಇದೆ, ಮುಖಕ್ಕೆ ಹಾಲು ಹಚ್ಚಿಕೊಳ್ಳಿ ಮುಖದಲ್ಲಿನ ಸುಕ್ಕುಗಳು ಕಡಿಮೆಯಾಗುತ್ತದೆ. ಚರ್ಮ ಕಾಂತಿಯುತವಾಗುತ್ತದೆ ಅಷ್ಟೇ ಅಲ್ಲದೆ ತೆಂಗಿನ ಕಾಯಿ ಹಾಲಿನಿಂದ ಮುಖಕ್ಕೆ ಹಚ್ಚಿದ ಮೇಕಪ್ ಅನ್ನು ಕೂಡ ತೆಗೆಯಬಹುದು.
ಇನ್ನು ಚರ್ಮ ಒಣಗುತ್ತಿದ್ದರೆರ, ನಿಸ್ತೇಷಣವಾಗಿದ್ದರೆ ಕೊಬ್ಬರಿ ಹಾಲು ಬಳಸಬಹುದು. ನೀವು ಸ್ನಾನ ಮಾಡುವ ನೀರಿನಲ್ಲಿ ಒಂದು ಹಿಡಿ ಗುಲಾಬಿ ದಳಗಳು ಕಾಲು ಕಪ್ ರೋಜ್ ವಾಟರ್ ಒಂದು ಕಪ್ ಕೊಬ್ಬರಿ ಹಾಲು ಹಾಕಿ ಆ ನೀರಿನಿಂದ ಸ್ನಾನ ಮಾಡಿದರೆ ಚರ್ಮ ಕಾಂತಿಯುಕ್ತವಾಗುತ್ತದೆ. ತೆಂಗಿನ ಹಾಲಿನಿಂದ ಕ್ಯಾಲ್ಸಿಯಂ ಕಬ್ಬಿಣ ವಿಟಮಿನ್ ಗಳು ಜಡ್ಡಿನ ಪದಾರ್ಥ ಇರುವುದರಿಂದ ಚರ್ಮವನ್ನು ನುಣುಪಾಗಿಯೂ ಕಾಂತಿಯುತವಾಗಿಯೂ ಮಾಡುತ್ತದೆ.
