Pitru Dosh : ನಿಮಗೆ ಪಿತೃ ದೋಷ ಕಾಡ್ತಿದೆ ಅನ್ನೋದನ್ನು ಹೇಗೆ ಪತ್ತೆ ಮಾಡೋದು? ಪಿತೃ ದೋಷ ಕಾಡ್ತಿದ್ದರೆ ಪರಿಹಾರ ಏನು? ಅಷ್ಟಕ್ಕೂ ಈ ಪಿತೃದೋಷ ಅಂದ್ರೇನು? ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ.
ದೇವರಂತೆ ಪೂರ್ವಜರ ಆಶೀರ್ವಾದ ನಮಗೆ ಬಹಳ ಮುಖ್ಯ. ಖುಷಿ ಹಾಗೂ ದುಃಖ ಎರಡೂ ಸಂದರ್ಭದಲ್ಲಿ ಪೂರ್ವಜರನ್ನು ನೆನಪಿಸಿಕೊಳ್ಳಲಾಗುತ್ತದೆ. ಪೂರ್ವಜರ ಪೂಜೆಗಾಗಿಯೇ ಪಿತೃಪಕ್ಷ ಮೀಸಲಿದೆ. ಪೂರ್ವಜರು ಆಶೀರ್ವಾದ ನೀಡಿದ್ರೆ ಯಶಸ್ಸು, ಕೋಪಿಸಿಕೊಂಡ್ರೆ ನಷ್ಟ ಎಂಬ ನಂಬಿಕೆ ಇದೆ. ಪಿತೃದೋಷ ನಿವಾರಣೆಗೆ ಪಿತೃಪಕ್ಷ (pitru paksha) ಅತ್ಯುತ್ತಮ. ಈ ಪಿತೃ ದೋಷ ಎಂದ್ರೇನು? ಅದಕ್ಕೆ ಪರಿಹಾರ ಏನು? ಮಾಹಿತಿ ಇಲ್ಲಿದೆ.
ಪಿತೃ ದೋಷ (Pitru Dosh) ಎಂದರೇನು? : ಪಿತೃ ದೋಷ ಒಬ್ಬ ವ್ಯಕ್ತಿ ಸೀಮಿತವಾದ ದೋಷವಲ್ಲ. ಇದು ಪೀಳಿಗೆಯಿಂದ ಪೀಳಿಗೆಗೆ ಬರುವಂತಹ ದೋಷ. ನಿಮ್ಮ ಪೂರ್ವಜರು ಮಾಡಿದ ತಪ್ಪುಗಳು ಈಗ ನಿಮಗೆ ಪಿತೃದೋಷವಾಗಿ ಕಾಡಬಹುದು. ನಂಬಿಕೆಗಳ ಪ್ರಕಾರ, ಪಿತೃ ದೋಷ ಏಳು ತಲೆಮಾರುಗಳವರೆಗೆ ಇರುತ್ತದೆ. ಪಿತೃ ದೋಷ ನಿವಾರಣೆ ಆಗುವವರೆಗೂ ಕುಟುಂಬದ ಸದಸ್ಯರು ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ ಎದುರಿಸುತ್ತಾರೆ. ಅದು ವೈಯಕ್ತಿಕವಾಗಿರಬಹುದು, ಆರ್ತಿಕವಾಗಿರಬಹುದು, ಆರೋಗ್ಯ ಅಥವಾ ಸಂಬಂಧಕ್ಕೆ ಸಂಬಂಧಿಸಿರಬಹುದು. ಇಲ್ಲಿಗಮನಿಸಬೇಕಾದ ವಿಷ್ಯ ಅಂದ್ರೆ ಕುಟುಂಬದ ಎಲ್ಲ ಸದಸ್ಯರೂ ಪಿತೃ ದೋಷಕ್ಕೆ ಒಳಪಡುವುದಿಲ್ಲ. ಇಬ್ಬರಿದ್ರೆ ಅದ್ರಲ್ಲಿ ಒಬ್ಬರಿಗೆ ಪಿತೃ ದೋಷ ಕಾಡಬಹುದು. ದೋಷ ನಿಮಗೇ ಕಾಡಲು ಕಾರಣ ಇದೆ. ಇಲ್ಲಿ ಪಿತೃಗಳ ದೋಷದ ಜೊತೆ ನಿಮ್ಮ ಕರ್ಮ ಫಲ ಸಂಬಂಧ ಹೊಂದಿದೆ. ಹಿಂದಿನ ಜನ್ಮ ಕರ್ಮಫಲದಿಣದ ನಿಮಗೆ ಪಿತೃ ದೋಷ ಕಾಡುವ ಸಾಧ್ಯತೆ ಇರುತ್ತದೆ.
ಈ ದೇಗುಲದಲ್ಲಿ ಪಿತೃ ಪಕ್ಷದಲ್ಲಿ ಜನ ಬದುಕಿರುವಾಗಲೇ ತಮ್ಮ ಪಿಂಡ ದಾನ ಮಾಡ್ತಾರೆ
ಪಿತೃ ದೋಷದ ಸಂಕೇತ : ನಿಮಗೆ ಪಿತೃ ದೋಷವಿದೆ ಎಂಬುದನ್ನು ಕೆಲ ಸಂಕೇತಗಳ ಮೂಲಕ ನೀವು ಪತ್ತೆ ಮಾಡ್ಬಹುದು.
• ಕುಟುಂಬ – ಸಂಬಂಧದಲ್ಲಿ ಸಮಸ್ಯೆ : ಪಿತೃದೋಷಕ್ಕೆ ಒಳಗಾಗಿರುವ ವ್ಯಕ್ತಿಯ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಕಾಡುತ್ತದೆ. ಕುಟುಂಬ, ದಾಂಪತ್ಯ ಇಲ್ಲವೆ ಸಂಬಂಧಿಕರ ಮಧ್ಯೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ.
• ಆರ್ಥಿಕ ಸಂಕಷ್ಟ : ಪಿತೃದೋಷಕ್ಕೆ ಒಳಗಾಗಿರುವ ವ್ಯಕ್ತಿ ಅನಿರೀಕ್ಷಿತ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಾನೆ. ವೃತ್ತಿಯಲ್ಲಿ ಸಾಕಷ್ಟು ಸಮಸ್ಯೆ ಎದುರಾಗ್ತಿರುತ್ತದೆ.
• ಆರೋಗ್ಯದಲ್ಲಿ ಏರುಪೇರು : ಪಿತೃದೋಷದಿಂದ ಕುಟುಂಬದಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ವಿವರಿಸಲಾಗದ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು.
• ಮಾನಸಿಕ ಒತ್ತಡ – ಆತಂಕ : ನಿರಂತರ ಒತ್ತಡ, ಆತಂಕ ನಿಮ್ಮನ್ನು ಕಾಡ್ತಿದ್ದು, ನಿಭಾಯಿಸಲಾಗದ ಹೊರೆಯ ಅನುಭವ ನಿರಂತರವಾಗಿ ನಿಮ್ಮನ್ನು ಕಾಡ್ತಿದ್ದರೆ ಪಿತೃದೋಷವಿದೆ ಎಂದರ್ಥ.
• ಮದುವೆ – ಮಗು ವಿಳಂಬ : ಜ್ಯೋತಿಷ್ಯ ಶಾಸ್ತ್ರದಲ್ಲಿ ಮದುವೆ ವಿಳಂಬ, ಸಂತಾನದಲ್ಲಿ ವಿಳಂಬವಾದ್ರೆ ಅದಕ್ಕೆ ಪಿತೃದೋಷ ಕಾರಣ ಎನ್ನಲಾಗುತ್ತದೆ.
ಪಿತೃದೋಷದಿಂದ ಬಿಡುಗಡೆ ಹೇಗೆ? : ಗರುಡ ಪುರಾಣದ ಪ್ರಕಾರ, ಕುಟುಂಬದ ಮುಖ್ಯಸ್ಥರು ಯಾವುದೇ ಪ್ರಾಣಿ, ಹಾವು ಅಥವಾ ಅಸಹಾಯಕ ಮನುಷ್ಯನನ್ನು ಕೊಂದರೆ ಅಥವಾ ಹಿಂಸಿಸಿದ್ರೆ ಆ ವ್ಯಕ್ತಿ ಪಿತೃ ದೋಷದಿಂದ ಬಳಲುತ್ತಾನೆ. ಅದಕ್ಕೆ ಆತ ಪರಿಹಾರ ಕಂಡುಕೊಳ್ಳದೆ ಹೋದಲ್ಲಿ ಅದು ಅವನ ಮಕ್ಕಳು, ಮೊಮ್ಮಕ್ಕಳನ್ನು ಕಾಡುತ್ತದೆ. ಇದಲ್ಲದೆ, ಜಾತಕದ ಎರಡನೇ, ಎಂಟನೇ ಮತ್ತು ಹತ್ತನೇ ಮನೆಯಲ್ಲಿ ಕೇತು ಅಥವಾ ರಾಹು ಸೂರ್ಯನೊಂದಿಗೆ ಇದ್ದರೆ, ಪಿತೃ ದೋಷ ಉಂಟಾಗುತ್ತದೆ.
ಪಿತೃಪಕ್ಷದಲ್ಲಿ ಕೂದಲು-ಉಗುರು ಕತ್ತರಿಸೋದ್ರಿಂದ ನಿಮ್ಮನ್ನು ಸುತ್ತುತ್ತೆ ಪಾಪ… ಇದು ನಿಜಾನ
• ಪಿತೃಪಕ್ಷದಲ್ಲಿ ಪಿತೃ ದೋಷ ನಿವಾರಣೆ ಮಾಡಿಕೊಳ್ಳಬಹುದು.
• ತರ್ಪಣ ಮತ್ತು ಶ್ರಾದ್ಧ ಕರ್ಮ : ಪೂರ್ವಜರಿಗೆ ನೀರು, ಎಳ್ಳನ್ನು ಅರ್ಪಿಸುವುದರಿಂದ ದೋಷ ನಿವಾರಣೆಯಾಗುತ್ತದೆ. ಪಿಂಡದಾನ ಕೂಡ ಮಾಡಬಹುದು.
• ದಾನ ಮತ್ತು ಲೋಕೋಪಕಾರ : ಬಡವರಿಗೆ ದಾನ ನೀಡುವುದು, ಹಸುಗಳಿಗೆ ಆಹಾರ ನೀಡುವುದು ಅಥವಾ ಬಟ್ಟೆ ಮತ್ತು ಧಾನ್ಯಗಳನ್ನು ದಾನ ಮಾಡುವುದರಿಂದ ಪಿತೃ ದೋಷ ಪರಿಹಾರವಾಗುತ್ತದೆ.
• ದೀಪ ಬೆಳಗುವುದು : ಪಿತೃ ಪಕ್ಷದಲ್ಲಿ ದೇವಸ್ಥಾನಕ್ಕೆ ಹೋಗಿ ದಿಪ ಬೆಳಗುವುದ್ರಿಂದ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಅಲ್ದೆ ಮನೆಯ ದಕ್ಷಿಣ ಮೂಲೆಯಲ್ಲಿ ದೀಪ ಬೆಳಗಿಸುವುದರಿಂದ ಪಿತೃ ದೋಷದಿಂದ ಪರಿಹಾರ ಸಿಗುತ್ತದೆ.
• ಮಂತ್ರ ಪಠಣ : ಪಿತೃ ಮಂತ್ರ ಅಥವಾ "ಓಂ ನಮಃ ಶಿವಾಯ" ಮಂತ್ರವನ್ನು ಪಠಿಸುವುದರಿಂದ ಶಾಂತಿ ಮತ್ತು ಸಕಾರಾತ್ಮಕತೆ ಸಿಗುತ್ತದೆ.
• ಉಪವಾಸ -ಪವಿತ್ರ ಸ್ಥಳಗಳಿಗೆ ಭೇಟಿ : ಪಿತೃ ಪಕ್ಷ ಅಥವಾ ಅಮವಾಸ್ಯೆಯ ಸಮಯದಲ್ಲಿ ಉಪವಾಸ ಮಾಡುವುದರಿಂದ ದೋಷ ಕಡಿಮೆಯಾಗುತ್ತದೆ. ಹರಿದ್ವಾರ ಮತ್ತು ವಾರಣಾಸಿಯಂತಹ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿ ಪಿಂಡದಾನ ಮಾಡುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ.
