ಮನೆಯಲ್ಲಿ ನಾನಾ ಸಮಸ್ಯೆಗಳು ಬೆಂಬಿಡದೆ ಕಾಡ್ತಿರುತ್ವೆ. ಅದಕ್ಕೆ ಕಾರಣ ಏನು ಎಂಬುದು ನಮಗೆ ಗೊತ್ತಿರೋದಿಲ್ಲ. ಅನೇಕ ಬಾರಿ ಬರೀ ನಿಮ್ಮ ಮನೆ ಒಳಗೆ ಮಾತ್ರ ಅಲ್ಲ ಹೊರಗೆ ಇರೋ ಹಸಿರು ಗಿಡಗಳೂ ಸಮಸ್ಯೆ ತರಬಹುದು.
ಬೆಳಿಗ್ಗೆ ಎದ್ದ ತಕ್ಷಣ ಮನೆ ಮುಂದಿರುವ ಹಸಿರು ಗಿಡಗಳನ್ನು ನೋಡಿದ್ರೆ ಮನಸ್ಸಿಗೆ ನೆಮ್ಮದಿ. ಮನೆ ಮುಂದೆ ಒಂದಿಷ್ಟು ಗಿಡಗಳಿರ್ಬೇಕು, ಮನೆ ವಾತಾವರಣ ಶುದ್ಧವಾಗುವ ಜೊತೆಗೆ ಸಕಾರಾತ್ಮಕ ಶಕ್ತಿ (Positive energy) ಮನೆಯಲ್ಲಿ ನೆಲೆಸಿರುತ್ತೆ ಎನ್ನುವ ನಂಬಿಕೆ ಇದೆ. ಬಹುತೇಕ ಎಲ್ಲರ ಮನೆ ಮುಂದೆ ತುಳಸಿ ಗಿಡ ಇದ್ದೇ ಇರುತ್ತೆ. ತುಳಸಿ, ಪುದೀನಾ ಗಿಡಗಳು ವಾತಾವರಣವನ್ನು ಶುದ್ಧಗೊಳಿಸುವ ಜೊತೆಗೆ ಮನೆಗೆ ಅದೃಷ್ಟವನ್ನು ತರುತ್ತವೆ. ಮನೆ ಮುಂದೆ ಹೆಚ್ಚು ಜಾಗ ಇರೋರು, ಬೇರೆ ಬೇರೆ ಹೂ, ಹಣ್ಣಿನ ಗಿಡಗಳನ್ನು ಬೆಳೆಸ್ತಾರೆ. ಕೆಲವೊಂದು ಹೂ, ಹಣ್ಣಿನ ಗಿಡಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಬದಲು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮನೆಯ ವಾತಾವಣವನ್ನು ಹಾಳು ಮಾಡುತ್ತೆ. ಮನೆ, ಕುಟುಂಬಸ್ಥರಲ್ಲಿ ನಾನಾ ಸಮಸ್ಯೆಗಳನ್ನು ಹುಟ್ಟುಹಾಕುತ್ತೆ. ನಿಮ್ಮ ಮನೆ ಮುಂದೆ ಅಂಥ ಗಿಡವಿದ್ರೆ ಸ್ವಲ್ಪ ಜಾಗೃತೆವಹಿಸಿ.
ಮನೆ ಮುಂದೆ ಈ ಗಿಡ ಇರದಂತೆ ನೋಡಿಕೊಳ್ಳಿ :
• ಹತ್ತಿ : ಮನೆ ಮುಂದೆ ಹತ್ತಿ ಗಿಡವನ್ನು ಬೆಳೆಸಬೇಡಿ. ಇದು ದುರಾದೃಷ್ಟದ ಸಂಕೇತ. ಹತ್ತಿ ಗಿಡ ಹೂ ಬಿಟ್ಟಾಗ ನೋಡೋಕೆ ಚೆಂದ. ಬಿಳಿ ಬಿಳಿ ಹೂ ಮನಸ್ಸು ಕದಿಯುತ್ತೆ. ಮನೆ ಮುಂದಿನ ಸೌಂದರ್ಯ ಹೆಚ್ಚಿಸುತ್ತೆ ಎನ್ನುವ ಕಾರಣಕ್ಕೆ ಕೆಲವರು ಮನೆ ಮುಂದೆ ಹತ್ತಿ ಗಿಡವನ್ನು ಬೆಳೆಸ್ತಾರೆ. ನಿಮ್ಮ ಮನೆ ಮುಂದೆಯೂ ಹತ್ತಿ ಗಿಡವಿದ್ರೆ ಎಚ್ಚೆತ್ತುಕೊಳ್ಳಿ. ಅಲಂಕಾರಿಕ ಗಿಡವಾದ್ರೂ ಅದು ಅಶುಭ ಸಂಕೇತವಾಗಿದೆ. ಇವುಗಳಲ್ಲಿ ಧೂಳು, ಕೊಳಕು ಸುಲಭವಾಗಿ ಸಂಗ್ರಹವಾಗುತ್ತೆ. ಕುಟುಂಬದಲ್ಲಿ ಆರ್ಥಿಕ ನಷ್ಟ, ಬಡತನಕ್ಕೆ ಇದು ಕಾರಣವಾಗುತ್ತದೆ.
ಕಾರ್ತಿಕ ಮಾಸ ಯಾವಾಗ ಪ್ರಾರಂಭ?, ಈ ಮಾಸದಲ್ಲಿ ಯಾವ ಕೆಲಸ ಮಾಡ್ಬೇಕು, ಏನು ಮಾಡ್ಬಾರ್ದು?
• ಗೋರಂಟಿ ಗಿಡ : ಗೋರಂಟಿ ಕೈ ಕೆಂಪು ಮಾಡೋದಲ್ದೆ ಕೂದಲಿನ ಸೌಂದರ್ಯಕ್ಕೆ ಅತ್ಯುತ್ತಮ ಎಂದೇ ನಂಬಲಾಗಿದೆ. ಹಾಗಾಗಿ ಅನೇಕರು ಮನೆ ಮುಂದೆ ಈ ಗೋರಂಟಿ ಗಿಡ ಬೆಳೆಸ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮನೆ ಮುಂದಿರುವ ಗೋರಂಟಿ ನಿಮ್ಮ ಕೈ ಕೆಂಪು ಮಾಡಿದ್ರೂ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಿಸುತ್ತೆ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಲು ಕಾರಣವಾಗುತ್ತೆ. ಇದನ್ನು ಎಂದಿಗೂ, ಯಾರಿಗೂ ಉಡುಗೊರೆಯಾಗಿ ನೀಡಬೇಡಿ.
• ಹುಣಸೆ ಮರ : ಹುಣಸೆ ಮರ ನಕಾರಾತ್ಮಕ ಶಕ್ತಿಯ ಸಂಕೇತವಾಗಿದೆ. ರಸ್ತೆ ಬದಿಗಳಲ್ಲಿ ಇದನ್ನು ಬೆಳೆಸಲಾಗುತ್ತದೆ. ದುಷ್ಟ ಶಕ್ತಿಗಳು ಇದ್ರಲ್ಲಿ ನೆಲೆ ನಿಲ್ಲುತ್ತವೆ ಎನ್ನುವ ನಂಬಿಕೆ ಇದೆ. ಮನೆ ಮುಂದೆ ಹುಣಸೆ ಗಿಡವನ್ನು ಬೆಳೆಸೋದು ಶುಭವಲ್ಲ.
• ಬಿಳಿ ಜಾಲಿ : ಮನೆ ಮುಂದೆ ಬಿಳಿ ಜಾಲಿ ಗಿಡವನ್ನು ಬೆಳೆಸೋದು ಕೂಡ ಸೂಕ್ತವಲ್ಲ. ಇದು ಔಷಧೀಯ ಗಿಡವಾಗಿದೆ, ಆದ್ರೆ ಮನೆಯಲ್ಲಿ ನೆಡಲು ಸೂಕ್ತವಲ್ಲ. ಈ ಸಸ್ಯವು ಮನೆಯಲ್ಲಿ ಅಥವಾ ಸುತ್ತಮುತ್ತ ಇದ್ರೆ ಕುಟುಂಬದಲ್ಲಿ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ವಾದ – ವಿವಾದ, ಜಗಳಗಳು ನಡೆಯುತ್ತಿರುತ್ತವೆ. ಮಾನಸಿಕ ಕಾಯಿಲೆಗೆ ಇದು ಕಾರಣವಾಗುತ್ತದೆ.
Kitchen Vastu Tips: ಈ ಆರು ವಸ್ತುಗಳನ್ನು ಅಡುಗೆ ಕೋಣೆಯಿಂದ ಹೊರಗಿಡಿ, ಇಲ್ಲಾಂದ್ರೆ ತಿಜೋರಿ ಆಗುತ್ತೆ ಖಾಲಿ
• ಒಣಗಿದ ಗಿಡ : ಮನೆ ಮುಂದೆ ಮೇಲಿನ ಗಿಡಗಳನ್ನು ಮಾತ್ರವಲ್ಲ ಒಣಗಿದ ಗಿಡಗಳನ್ನ ಕೂಡ ಇಡಬೇಡಿ. ಗಿಡ ನೀರಿಲ್ಲದೆ ಅಥವಾ ಬೇರೆ ಕಾರಣಕ್ಕೆ ಒಣಗಿದ್ದರೆ ಅದನ್ನು ತೆಗೆದುಹಾಕಿ. ಒಣಗಿದ ಅಥವಾ ಕೊಳೆತ ಗಿಡಗಳು, ಮನೆಗೆ ಸಕಾರಾತ್ಮಕ ಶಕ್ತಿ ಪ್ರವೇಶವನ್ನು ತಡೆಯುತ್ತವೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹೆಚ್ಚಳಕ್ಕೆ ಕಾರಣವಾಗುತ್ತವೆ. ಇದ್ರಿಂದ ಕುಟುಂಬಸ್ಥರು ದುಃಖ, ನೋವು, ನಾನಾ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ.
