ದಶಮಿಯಂದು ಕಲಶ ವಿಸರ್ಜನೆ ನಡೆಯುತ್ತದೆ. ಕಲಶದಲ್ಲಿ ಇಟ್ಟ ನೀರು, ತೆಂಗಿನಕಾಯಿ, ರಾಗಿ ಬೀಜದಲ್ಲಿ ಕೆಲ ಬದಲಾವಣೆ ಕಂಡ್ರೆ ನೀವು ಎಚ್ಚರಿಕೆ ವಹಿಸಬೇಕು. ಯಾವುದು ಶುಭ ಸಂಕೇತ, ಯಾವುದು ಅಶುಭ ಎಂಬುದು ಇಲ್ಲಿದೆ.
9 ದಿನಗಳ ನವರಾತ್ರಿ (Navratri) ಸಂಭ್ರಮ ಮುಗಿಯುತ್ತಿದೆ. ಅಕ್ಟೋಬರ್ 1 ಅಂದ್ರೆ ಇಂದು ಮಹಾನವಮಿ. ನಾಳೆ ಅಕ್ಟೋಬರ್ 2 ರಂದು ದಶಮಿ. ನಾಳೆ ಕಲಶ (Kalash) ವಿಸರ್ಜನೆ ನಡೆಯಲಿದೆ. ನವರಾತ್ರಿ ಮೊದಲ ದಿನ ಕಲಶ ಸ್ಥಾಪನೆ ಮಾಡಲಾಗುತ್ತದೆ. ಹಾಗೆಯೇ ಅಖಂಡ ಜ್ಯೋತಿಯನ್ನು ಬೆಳಗಿಸಲಾಗುತ್ತದೆ. ಕೆಲವರ ಮನೆಯಲ್ಲಿ ರಾಗಿ ಬೀಜವನ್ನು ಬಿತ್ತಲಾಗುತ್ತದೆ. ನವರಾತ್ರಿ ಕೊನೆ ದಿನ ಕಲಶ ವಿಸರ್ಜನೆ ನಡೆಯುತ್ತದೆ. ಕಲಶ ಸ್ಥಾಪನೆ ಮಾತ್ರವಲ್ಲ ಕಲಶ ವಿಸರ್ಜನೆ ಕೂಡ ಮಹತ್ವ ಪಡೆದಿದೆ. ಕಲಶದಲ್ಲಿರುವ ತೆಂಗಿನಕಾಯಿ, ರಾಗಿ ಮತ್ತು ಕಲಶಕ್ಕೆ ಹಾಕುವ ನೀರು, ನಾಣ್ಯ ಎಲ್ಲವೂ ಮಹತ್ವದ್ದಾಗಿದೆ. ತೆಂಗಿನ ಕಾಯಿ ಅಥವಾ ನೀರಿನಲ್ಲಿ ಆಗುವ ಬದಲಾವಣೆ ಶುಭ – ಅಶುಭದ ಸಂಕೇತವನ್ನು ನೀಡುತ್ತದೆ.
ಕಲಶ ನೀಡುತ್ತೆ ಶುಭ – ಅಶುಭ ಸಂಕೇತ :
ತೆಂಗಿನಕಾಯಿ (Coconut) ಒಡೆದ್ರೆ ಏನರ್ಥ : ಕಲಶದ ಮೇಲೆ ತೆಂಗಿನಕಾಯಿಯನ್ನು ಇಡಲಾಗುತ್ತದೆ. ದಶಮಿಯಂದು ಕಲಶ ತೆಗೆದು, ತೆಂಗಿನ ಕಾಯಿಯನ್ನು ಒಡೆದು, ದೇವಿಗೆ ಅರ್ಪಿಸಲಾಗುತ್ತದೆ. ಒಂದು ವೇಳೆ ತೆಂಗಿನಕಾಯಿ ಮೊದಲೇ ಬಿರುಕು ಬಿಟ್ಟಿದ್ದರೆ ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಪೂರ್ವಜರು ಅಸಮಾಧಾನಗೊಂಡಿದ್ದಾರೆಂದು ನಂಬಲಾಗುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸುತ್ತದೆ.
ದೇವರಗುಡ್ಡ ಕಾರ್ಣಿಕ 2025: 'ನಾಡು ಬಂಗಾರದ ಗಿಂಡಿಲೇ, ನಾಡು ಸಿರಿಯಾಗೀತಲೇ ಪರಾಕ್' ವಿಶ್ಲೇಷಣೆ ಇಲ್ಲಿದೆ!
ತೆಂಗಿನ ಕಾಯಿ ಹಾಳಾಗಿದ್ದರೆ ಏನರ್ಥ? : ಕಲಶದ ಮೇಲಿಟ್ಟ ತೆಂಗಿನಕಾಯಿ ಹಾಳಾಗಿದ್ದರೆ ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಕಾಯಿ ಹಾಳಾಗಿದ್ದರೆ ಅಥವಾ ಕೊಳೆತಿದ್ದರೆ ಅದನ್ನು ನೀರಿನಲ್ಲಿ ಮುಳಗಿಸಬೇಕು. ಇದ್ರಿಂದ ಎಲ್ಲ ಸಮಸ್ಯೆ ದೂರವಾಗುತ್ತದೆ.
ಒಣಗಿದ ತೆಂಗಿನಕಾಯಿ : ತೆಂಗಿನಕಾಯಿ ಒಣಗಿದ್ದರೆ ಅಥವಾ ಅದ್ರಲ್ಲಿ ಹೂವಾಗಿದ್ದರೆ ಅದು ಸಾಮಾನ್ಯ. ತೆಂಗಿನಕಾಯಿ ತಾಜಾ ಇದ್ದು, ನೀರು ಅದ್ರಲ್ಲಿದ್ದರೆ ಅದು ಶುಭ ಸಂಕೇತವಾಗಿದೆ. ತಾಯಿ ನಿಮ್ಮ ಪ್ರಾರ್ಥನೆಯನ್ನು ಕೇಳಿದ್ದಾಳೆ ಎಂದರ್ಥ. ನಿಮಗೆ ತಾಯಿಯ ಸಂಪೂರ್ಣ ಆಶೀರ್ವಾದ ಸಿಗಲಿದೆ ಎಂಬ ಸೂಚನೆಯಾಗಿದೆ.
ಮೊಳಕೆ ಬಂದ ರಾಗಿ : ಕಲಶ ಸ್ಥಾಪನೆ ವೇಳೆ ಬಿದ್ದಿರುವ ರಾಗಿ ಮೊಳಕೆ ಬಂದ್ರೆ ಅದನ್ನು ಶುಭ ಸಂಕೇತ ಎನ್ನಲಾಗುತ್ತದೆ. ರಾಗಿ ಮೊಳಕೆಯೊಡೆದು ಹಸಿರು ಹೊರ ಬರ್ತಿದ್ದರೆ ಅದು ಶುಭ ದಿನವನ್ನು ಸೂಚಿಸುತ್ತದೆ. ಮೊಳಕೆ ಅರ್ಥ ಹಸಿರು ಅಥವಾ ಅರ್ಥ ಹಳದಿಯಾಗಿದ್ದರೆ ಅದು ಮಿಶ್ರ ಫಲವನ್ನು ಸೂಚಿಸುತ್ತದೆ. ಅದೇ ಹಳದಿ ಶುಭ ಸಂಕೇತವಾಗಿದೆ. ರಾಗಿ ಮೊಳಕೆ ಕೊಳೆತಿದ್ದರೆ ಅಥವಾ ಒಣಗಿದ್ದರೆ ಇದು ಅಶುಭ ಸಂಕೇತವಾಗಿದೆ. ಇದು ಅಪಾಯದ ಸೂಚನೆಯಾಗಿದೆ.
ವಿಜಯದಶಮಿ ಶುಭ ಮುಹೂರ್ತ ಯಾವುದು? ಈ ದೇಗುಲಗಳ ಭೇಟಿ, ಮಂತ್ರ ಪಠಣೆಯಿಂದ ಸರ್ವ ಇಷ್ಟಾರ್ಥ ಸಿದ್ಧಿ
ಕಲಶದ ನೀರು : ಕಲಶದಲ್ಲಿರುವ ನೀರು ಬತ್ತಿ ಹೋಗಿದ್ದರೆ ಅದು ಆರ್ಥಿಕ ನಷ್ಟವನ್ನು ಸೂಚಿಸುತ್ತದೆ. ಕಲಶದಲ್ಲಿನ ನೀರು ಹಾಗೇ ಉಳಿದು ಹಾಳಾಗದಿದ್ದರೆ, ಅದು ಅಪಾರ ಸಂತೋಷ, ಸಮೃದ್ಧಿ, ಅದೃಷ್ಟ ಮತ್ತು ಉತ್ತಮ ಆರೋಗ್ಯದ ಸಂಕೇತವಾಗಿದೆ.
ನಷ್ಟ ತಪ್ಪಿಸಿ, ಶುಭ ಫಲಕ್ಕೆ ಏನು ಮಾಡಬೇಕು? : ನವರಾತ್ರಿ 9 ದಿನ, ದುರ್ಗೆಯನ್ನು ಅತ್ಯಂತ ಭಕ್ತಿಯಿಂದ ಪೂಜಿಸಿರುತ್ತೇವೆ. ಕೊನೆ ದಿನ ಕಲಶದಿಂದ ಅಶುಭ ಸೂಚನೆ ಸಿಕ್ಕಿದ್ರೆ ಭಯಪಡಬೇಕಾಗಿಲ್ಲ. ಒಂದ್ವೇಳೆ ಕಲಶ, ತೆಂಗಿನಕಾಯಿ, ನೀರು ನಿಮಗೆ ಅಶುಭ ಸಂಕೇತ ನೀಡಿದ್ರೆ ಭಯಪಡಬೇಕಾಗಿಲ್ಲ. ದೇವರ ಪ್ರಾರ್ಥನೆಯನ್ನು ಅತ್ಯಂತ ಭಕ್ತಿಯಿಂದ ಮಾಡಿದ್ರೆ ಶುಭ ಫಲ ಪ್ರಾಪ್ತಿಯಾಗಲಿದೆ. ಮಂತ್ರಗಳನ್ನು ಪಠಿಸಿ, ಸಕಾರಾತ್ಮಕ ಆಲೋಚನೆ ಮಾಡಬೇಕು.
