ನಾನು ಹಿಂಗೇ ಹೇಳ್ಬೇಕಾಗುತ್ತೆ ಅವ್ರು ಹಂಗೆ ಹೇಳಿದ್ರೆ.. ಕರೆಕ್ಟಾಗಿ ಬಂದ್ರೆ ನಾನೂ ಕರೆಕ್ಟ್ ಆಗಿರ್ತೀನಿ, ಹಾಗೆ ಬಂದ್ರೆ ನಾನೂ ಹಾಗೇ.. ನನ್ ದುಡ್ಡು, ನಾನು ಟ್ಯಾಕ್ಸ್ ಕಟ್ತೀನಿ, ರೋಡ್‌ಗೆ ಹಾಕ್ತೀನಿ ಬೇಕಾದ್ರೆ.. ಇವ್ರಿಗೇನು ಅದನ್ನೆಲ್ಲಾ ಕಟ್ಕೊಂಡು? ಅವ್ರ ಮನೆ ಹತ್ರ ಹೋಗಿದೀನಾ ದುಡ್ಡು ಕೊಡಿ ಅಂತ?
ಕನ್ನಡದ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಅಮ್ಮ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಅವರು ಕೊತ್ತಲವಾಡಿ ಸಿನಿಮಾ ನಿರ್ಮಿಸಿ, ತೆರೆಗೆ ತಂದಿದ್ದು ಗೊತ್ತೇ ಇದೆ. ಚಿತ್ರವು ಈಗಲೂ ಹಲವಾರು ಕಡೆ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಅಮ್ಮನ ಈ ಸಿನಿಮಾವನ್ನು ಮಗ ಯಶ್ ನೋಡಿದ್ದಾರಾ? ಸೊಸೆ ರಾಧಿಕಾ ಪಂಡಿತ್ (Radhika Pandit) ನೋಡಿದ್ದಾರಾ? ಸೋಷಿಯಲ್ ಮೀಡಿಯಾ ನೆಗೆಟಿವ್ ಕಾಮೆಂಟ್‌ಗೆ ಏನ್ ಹೇಳಿದ್ರು? ಎಲ್ಲಾ ಇಲ್ಲಿದೆ ನೋಡಿ..
'ನನಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ನೆಗೆಟಿವ್ ಕಾಮೆಂಟ್ ಹಾಕಿದ್ರು, ನಾನು ನೋಡಿದೀನಿ ಅವೆಲ್ಲಾ.. ಹಂಗೆ.., ಹಿಂಗೆ, 2000 ಹಾಕ್ರಿ.. ಅದೂ ಇದೂ ಅಂತ.. ದಡ್ರಾ ನೀವು? 2000 ಕೋಟಿ ಬಂಡವಾಳ ಹಾಕ್ತೀನಿ ಸಿನಿಮಾಗೆ ಅಂತ ನಾನು ಹೇಳಿದ್ದು ಯಶ್‌ಗೆ.. ನಾನು ಅದಕ್ಕೇ ಈ ಸಿನಿಮಾನ ಚಿಕ್ಕ ಬಜೆಟ್‌ನಲ್ಲಿ ಮಾಡಿದೀನಿ, ದೊಡ್ಡ ಬಜೆಟ್ ಹಾಕಿಲ್ಲ ಅಂತ.. ಕಿವಿ ಕೇಳಿಸಲ್ವ ನಿಮ್ಗೆ? 2000 ಕೋಟಿ ಬಜೆಟ್ ಹಾಕಿ ಸಿನಿಮಾ ಮಾಡೋದು ನನ್ ಮಗ್ನಿಗೆ... ಈ ಮಾತನ್ನು ಎಲ್ಲಾ ಕಡೆ ಸ್ಪಷ್ಟವಾಗಿಯೇ ಹೇಳಿದೀನಿ.
ಈವಾಗ ಅಷ್ಟು ದುಡ್ಡು ಹಾಕಲ್ಲ, ನನ್ ಹತ್ರ ಅಷ್ಟು ದುಡ್ಡಿಲ್ಲ, ನಾನು ಆ ಲೆವಲ್‌ಗೆ ಥಿಂಕ್ ಮಾಡಿಲ್ಲ ಅಂತ ಹೇಳಿದೀನಿ.. ನನ್ ಮಾತನ್ನ ಸ್ವಲ್ಪ ಅರ್ಥ ಮಾಡ್ಕೊಂಡು ಹೇಳ್ಬೇಕು ಆಡಿಯನ್ಸ್.. ಅದ್ಯಾವ ರೀತಿಯಲ್ಲಿ ಅರ್ಥ ಮಾಡ್ಕೊಂಡು ಹೇಳಿದ್ರೋ ನಂಗೆ ಗೊತ್ತಿಲ್ಲ.. 2 ಕೋಟಿ ಹಾಕಿ ಮಾಡೋಕೂ ಬರುತ್ತೆ, 2000 ಕೋಟಿಹಾಕಿ ಮಾಡೋಕೂ ಬರುತ್ತೆ, ಅದನ್ನ ನಂಗೆ ಅವ್ರು ಹೇಳೋ ಅವಶ್ಯಕತೆ ಇಲ್ಲ. ನನ್ ದುಡ್ಡು, ನನ್ ಕಾಸು, ನಾನು ಕಳ್ಕೋತೀನಿ ಅಥವಾ ಇಟ್ಕೋತೀನಿ.. ಅವ್ರಿಗೇನಂತೆ ಅದನ್ನ ಕಟ್ಕೊಂಡು?
ನಾನು ಹಿಂಗೇ ಹೇಳ್ಬೇಕಾಗುತ್ತೆ ಅವ್ರು ಹಂಗೆ ಹೇಳಿದ್ರೆ.. ನಾನು ಹೀಗೇನೇ.. ಕರೆಕ್ಟಾಗಿ ಬಂದ್ರೆ ನಾನೂ ಕರೆಕ್ಟ್ ಆಗಿರ್ತೀನಿ, ಹಾಗೆ ಬಂದ್ರೆ ನಾನೂ ಹಾಗೇ.. ನನ್ ದುಡ್ಡು, ನಾನು ಟ್ಯಾಕ್ಸ್ ಕಟ್ತೀನಿ, ರೋಡ್‌ಗೆ ಹಾಕ್ತೀನಿ ಬೇಕಾದ್ರೆ.. ಇವ್ರಿಗೇನು ಅದನ್ನೆಲ್ಲಾ ಕಟ್ಕೊಂಡು? ನಾನೇನಾದ್ರೂ ಅವ್ರ ಮನೆ ಹತ್ರ ಹೋಗಿದೀನಾ ದುಡ್ಡು ಕೊಡಿ ಅಂತ? ಇಲ್ಲ ಅಲ್ವಾ?
ನನ್ ಸಿನಿಮಾ, ನಂಗೆ ಅನ್ನ ಕೊಟ್ಟ ಸಿನಿಮಾ, ನಾನು ಅದಕ್ಕೇ ಹಾಕೋದು, ಅದ್ರಲ್ಲೇ ಇರೋದು.. ಹೋಗುತ್ತೋ ಬರುತ್ತೋ ಅನ್ನೋ ಬಗ್ಗೆ ನಾನು ತಲೆ ಕೆಡಿಸ್ಕೊಳಲ್ಲ.. ಆದ್ರೆ ಬಂದೇ ಬರುತ್ತೆ, ನಂಗೆ ಹೋಪ್ಸ್ ಇದೆ.. ನನ್ ದುಡ್ಡು ಲಾಸ್ ಆಗಲ್ಲ. ನಮ್ಗೆ ದೇವ್ರು ಈ ಸಿನಿಮಾ ಫೀಲ್ಡ್‌ಗೆ ಬಂದಾಗ್ಲಿಂದನೂ ಕಟ್ಟವ್ನೆ, ಇವತ್ತೂ ಕೊಡ್ತಾ ಇದಾನೆ. ಇದನ್ನಂತೂ ಹೇಳಬಲ್ಲೆ ಈಗ ನಾನು..' ಎಂದಿದ್ದಾರೆ ಯಶ್ ಅಮ್ಮ ಪುಷ್ಪಾ ಅರುಣ್ ಕುಮಾರ್.
ಅಷ್ಟಕ್ಕೂ ಕಳ್ಕೊಂಡ್ರೆ ಏನ್ ಕಳ್ಕೋತೀವಿ? ಇಲ್ಲಿ ದುಡಿದಿದೀವಿ, ಇಲ್ಲಿ ಕಳ್ಕೋತೀವಿ.. ಅವ್ರಿಗೇನು ಕಷ್ಟ? ನಮ್ ಯಶ್ ಈ ಸಿನಿಮಾ ಬಗ್ಗೆ ಒಳ್ಳೇ ರೀವ್ಯೂ ಕೊಟ್ಟಿದಾನೆ, ರಾಧಿಕಾ ಪಂಡಿತ್ ಕೂಡ ಚೆನ್ನಾಗಿದೆ ಅಂದಿದಾರೆ. ನನ್ ಮಗಳೂ ಕೂಡ ಇಷ್ಟಪಟ್ಟಿದಾಳೆ. ಅವ್ರಿಗೆಲ್ಲಾ ಚೆನ್ನಾಗಿ ಗೊತ್ತು, ನಾನು ಒಮ್ಮೆ ಬಂದ್ಮೇಲೆ ಹಾಗೇ ವಾಪಸ್ ಹೋಗಲ್ಲ ಅಂತ ಅವ್ರಿಗೆಲ್ಲಾ ಗೊತ್ತು..' ಎಂದಿದ್ದಾರೆ ಕನ್ನಡದ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್ ಅಮ್ಮ ಪುಷ್ಪಾ ಅರುಣ್ ಕುಮಾರ್.
