ದರ್ಶನ್ಗೆ ಬೆನ್ನಿನ ಎಲ್1-ಎಲ್5 ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ಕಳೆದ 9 ವರ್ಷದಿಂದ ಬೆನ್ನು ನೋವಿನಿಂದ ಬಳಲುತ್ತಿದ್ದರು ನಟ ದರ್ಶನ್. ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆದಕೊಳ್ಳುತ್ತಿದ್ದರು ಎನ್ನಲಾಗಿದೆ. ಬೆನ್ನು ನೋವಿನ ಕಾರಣ ಹೇಳಿಯೇ ಬೇಲ್ ಪಡೆದು ಹೊರ ಬಂದಿದ್ದರು ನಟ ದರ್ಶನ್..
ಕನ್ನಡದ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeepa) ಅವರು 'ದಿ ಡೆವಿಲ್' ಸಿನಿಮಾ ಶೂಟಿಂಗ್‌ನಲ್ಲಿ ಬೆನ್ನು ನೋವಿನಿಂದ ಬಹಳಷ್ಟು ಸಮಯ ಬಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶೂಟಿಂಗ್ ಸೆಟ್‌ನಲ್ಲಿನ ವಿಡಿಯೋವೊಂದು ಇದೀಗ ಹೊರಬಂದಿದ್ದು, ಅದೀಗ ಸಾಕಷ್ಟು ವೈರಲ್ ಅಗುತ್ತಿದೆ. ಬೆನ್ನು ನೋವು ತಾಳಲಾರದೆ ನೆಲ ಹಿಡಿದು ಕೂತುಕೊಂಡಿದ್ದ ದರ್ಶನ್ ವಿಡಿಯೋ ಇದೀಗ ಬಹಿರಂಗವಾಗಿದೆ. ಅಲ್ಲಿಗೆ, ನಟ ದರ್ಶನ್ ಅವರು ಬೆನ್ನುನೋವಿನ ಕಾರಣ ನೀಡಿ ಬೇಲ್ ಪಡೆದುಕೊಂಡಿದ್ದು ಸುಳ್ಳಲ್ಲ, ಸತ್ಯ ಸಂಗತಿ ಎನ್ನಲಾಗುತ್ತಿದೆ.
ಜೈಲಿಂದ ಬೇಲ್ ಪಡೆದು ದಿ ಡೆವಿಲ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ನಟ ದರ್ಶನ್!
ಹೌದು, ಜೈಲಿಂದ ಬೇಲ್ ಪಡೆದು ದಿ ಡೆವಿಲ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ನಟ ದರ್ಶನ್ ಅವರು ಸಾಕಷ್ಟು ವೇಳೆ ತೀವ್ರ ನೋವಿನಿಂದ ನರಳಿದ್ದರು. ಶೂಟಿಂಗ್ ಸೆಟ್‌ನಲ್ಲೇ, ಅಲ್ಲೇ ಮಲಗಿ ನೋವು ತಡೆದುಕೊಂಡು ಸಾಕಷ್ಟು ಸಮಯದ ಬಳಿಕ ನಟ ದರ್ಶನ್ ಮತ್ತೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಮತ್ತೆ ಜೈಲಿಗೆ ಮರಳಬೇಕಾಗಬಹುದು ಎಂಬ ಬಗ್ಗೆ ಅರಿವಿದ್ದ ನಟ ದರ್ಶನ್ ಅವರು, ಬೇಲ್ ಪಡೆದುಕೊಂಡ ಅಷ್ಟೇ ಸಮಯದಲ್ಲಿ ದಿ ಡೆವಿಲ್ ಶೂಟಿಂಗ್ ಮುಗಿಸಿಕೊಡುವ ಬಗ್ಗೆ ಪ್ಲಾನ್ ಮಾಡಿದ್ದರು, ತಮ್ಮಿಂದ ನಿರ್ಮಾಒಕರು ಹಾಗೂ ಇಡೀ ಸಿನಿಮಾತಂಡಕ್ಕೆ ತೊಂದರೆ ಆಗಬಾರದು ಎಂಬ ಆಶಯವನ್ನು ನಟ ದರ್ಶನ್ ಹೊಂದಿದ್ದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡಿದ್ದಾರೆ ನಟ ದರ್ಶನ್!
ಅದಕ್ಕೆ ಬದ್ಧರಾಗಿ ಶೂಟಿಂಗ್ ಮುಗಿಸಿಕೊಟ್ಟಿದ್ದರು ದರ್ಶನ್. ಆ ಬಳಿಕ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡಿದ್ದಾರೆ ನಟ ದರ್ಶನ್. 'ದಿ ಡೆವಿಲ್' ಶೂಟಿಂಗ್‌ನಲ್ಲಿ ನಟ ದರ್ಶನ್ ಬೆನ್ನು ನೋವಿನ ನರಳಿದ ವೀಡಿಯೋ ಇದೀಗ ವೈರಲ್ ಆಗಿದ್ದು, 'ನಟ ದರ್ಶನ್ ಬೆನ್ನು ನೋವು ಒಂದು ನಾಟಕ' ಎಂದಿದ್ದ ಹಲವಾರು ಮಾತಿನ ಬಗ್ಗೆ ಯೋಚಿಸುವಂತೆ ಮಾಡಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಆ ಚಿತ್ರದ ಚಿತ್ರೀಕರಣ ಮಾಡುವಾಗ ನಟ ದರ್ಶನ್ ಅವರಿಗೆ ತೀವ್ರತರವಾದ ಬೆನ್ನು ನೋವು ಕಾಣಿಸಿಕೊಂಡಿತ್ತು.
ದರ್ಶನ್ಗೆ ಬೆನ್ನಿನ ಎಲ್1-ಎಲ್5 ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ಕಳೆದ 9 ವರ್ಷದಿಂದ ಬೆನ್ನು ನೋವಿನಿಂದ ಬಳಲುತ್ತಿದ್ದರು ನಟ ದರ್ಶನ್. ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆದಕೊಳ್ಳುತ್ತಿದ್ದರು ಎನ್ನಲಾಗಿದೆ. ಬೆನ್ನು ನೋವಿನ ಕಾರಣ ಹೇಳಿಯೇ ಬೇಲ್ ಪಡೆದು ಹೊರ ಬಂದಿದ್ದರು ನಟ ದರ್ಶನ್ ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು.
