ದಯವಿಟ್ಟು ನಮ್ಮಂತ ಬಡ ಕಲಾವಿದರಿಗೆ ಈ ರೀತಿ ಮಾಡಬೇಡಿ. ನೀವು ಯಾರ ಮಾತು ಕೇಳಿ ಬದಲಾದಿರೋ ಗೊತ್ತಿಲ್ಲ. ನಾವು ಬಡ ಕುಟುಂಬದಿಂದ ಬಂದವರು, ಅಣ್ಣಾ ನಮಗೂ ಕನಸಿರುತ್ತದೆ ಎಂದು ವಿಡಿಯೋ ಮೂಲಕ ನಟ ಶಬರೀಶ್ ಶೆಟ್ಟಿ ತಮ್ಮ ನೋವು ಹೇಳಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಯುವನಟ, ಕ್ರಿಕೆಟ್ ಪ್ರೇಮಿ ಹಾಗೂ ಕೆಸಿಸಿ ಆಟಗಾರ ಶಬರೀಶ್ ಶೆಟ್ಟಿ (Shabareesh Shetty) ಅವರು ವಿಡಿಯೋ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ. 'ನಾನು ಸತ್ತರೆ ನಂದ ಕಿಶೋರ್ ಹಾಗೂ ಸಾ ರಾ ಗೋವಿಂದು ಕಾರಣ' ಎಂದು ಯುವ ನಟ ಶಬರೀಶ್ ಶೆಟ್ಟಿ ಹೇಳಿದ್ದಾರೆ. ವಿಡಿಯೋ ಮೂಲಕ ಈ ಬಗ್ಗೆ ಮೆಸಝ್ ಬಿಟ್ಟಿರುವ ಶಬರೀಶ್ ಶೆಟ್ಟಿಯವರು ಕನ್ನಡದ ನಿರ್ದೇಶಕ ನಂದಕಿಶೋರ್ ಬಗ್ಗೆ ವಂಚನೆ ಆರೋಪ ಮಾಡಿದ್ದಾರೆ.
ನಿರ್ದೇಶಕ ನಂದ ಕಿಶೋರ್ ಮೇಲೆ ವಂಚನೆ ಆರೋಪ!
ಯುವ ನಟ ಶಬರೀಶ್ ಶೆಟ್ಟಿಯವರು 'ನನಗೆ ನಿರ್ದೇಶಕ ನಂದ ಕಿಶೋರ್ (Nanda Kishore) ರೂ. 22 ಲಕ್ಷ ವಂಚನೆ ಮಾಡಿದ್ದಾರೆ' ಎಂದು ಆರೋಪ ಮಾಡಿದ್ದಾರೆ. ನಾನು ಈಗಾಗಲೇ ಈ ಬಗ್ಗೆ ಸಾರಾ ಗೋವಿಂದು (Sara Govindu) ಅವರಿಗೆ ಹೇಳಿಕೊಂಡಿದ್ದೆ. ಅವರು ನನೆಗ ನಂದ ಕಿಶೋರ್ ಅವರಿಂದ ಹಣ ವಾಪಸ್ ಕೊಡಿಸುವ ಭರವಸೆ ನೀಡಿದ್ದರು. ಆದರೆ ಅವರ ಮಾತಿನಂತೆ, ಇನ್ನೂ ನಿರ್ದೇಶಕ ನಂದಕಿಶೋರ್ ಹಣ ವಾಪಾಸ್ ನೀಡಿಲ್ಲ. ಸಮಸ್ಯೆ ಬಗೆಹರಿಸಿ ಹಣ ವಾಪಾಸ್ ಕೊಡಿಸುವೆ ಎಂದು ಸಾ ರಾ ಗೋವಿಂದು ಅವರು ನನಗೆ ಭರವಸೆ ಕೊಟ್ಟಿದ್ದರು. ಆದರೆ ಆ ಮಾತು ಇನ್ನೂ ಈಡೇರಿಲ್ಲ'
ನಾನು ಪೊಲೀಸ್ ಸ್ಟೇಷನ್ಗೆ ದೂರು ಕೊಡಲು ಸಜ್ಜಾಗಿದ್ದೆ. ಸಾರಾ ಗೋವಿಂದ್ ನನ್ನ ಹೋರಾಟದ ಹಾದಿಯನ್ನ ತಪ್ಪಿಸಿದ್ದಾರೆ!
ನನ್ನ ಹೋರಾಟದ ಸಮಯದಲ್ಲಿ ಸಾರಾ ಗೋವಿಂದು ಅವರು ನನಗೆ ಕಾಲ್ ಮಾಡಿದ್ದರು. ಎರಡು ತಿಂಗಳು ಸಮಯ ಕೊಡು, ನಿನಗೆ ಅಮೌಂಟ್ ವಾಪಸ್ ಕೊಡಿಸ್ತೀನಿ. ಸದ್ಯಕ್ಕೆ ಪೊಲೀಸ್ ದೂರು ಕೊಡಬೇಡ ಅಂತ ಹೇಳಿದ್ದರು. ನಾನು ಅವರ ಮೇಲಿನ ಗೌರವಕ್ಕೆ ಪೊಲೀಸ್ ದೂರು ನೀಡಿರಲಿಲ್ಲ. ಅದರೆ ಈಗ ನಾನು ಕಾಲ್ ಮಾಡಿದರೆ ಏನ್ ಮಾಡಿಕೊಳ್ಳುತ್ತೀಯೋ ಮಾಡು ಅಂತಿದ್ದಾರೆ' ಎಂದಿದ್ದಾರೆ ಯುವನಟ ಶಬರೀಶ್ ಶೆಟ್ಟಿ.
ದಯವಿಟ್ಟು ನಮ್ಮಂತ ಬಡ ಕಲಾವಿದರಿಗೆ ಈ ರೀತಿ ಮಾಡಬೇಡಿ!
ಅಣ್ಣಾ, ದಯವಿಟ್ಟು ನಮ್ಮಂತ ಬಡ ಕಲಾವಿದರಿಗೆ ಈ ರೀತಿ ಮಾಡಬೇಡಿ. ನೀವು ಯಾರ ಮಾತು ಕೇಳಿ ಬದಲಾದಿರೋ ಗೊತ್ತಿಲ್ಲ. ನಾವು ಬಡ ಕುಟುಂಬದಿಂದ ಬಂದವರು, ಅಣ್ಣಾ ನಮಗೂ ಕನಸಿರುತ್ತದೆ ಎಂದು ವಿಡಿಯೋ ಮೂಲಕ ನಟ ಶಬರೀಶ್ ಶೆಟ್ಟಿ ತಮ್ಮ ನೋವು ಹೇಳಿಕೊಂಡಿದ್ದಾರೆ. ಮುಂದೆ ಈ ವಿಷಯ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
'2016 ರಲ್ಲಿ ನನಗೆ ನಂದ ಕಿಶೋರ್ ಜಿಮ್ ನಲ್ಲಿ ಪರಿ ಚಯವಾದ್ರು.. ನಾನು ನಂದ ಕಿಶೋರ್ ಅವ್ರಿಗೆ ಚಿನ್ನ ಅಡವಿಟ್ಟು 22 ಲಕ್ಷ ಕೊಟ್ಟಿದ್ದೀನಿ.. 9 ವರ್ಷಗಳಿಂದ ನನಗೆ ನಂದ ಕಿಶೋರ್ ಹಣವನ್ನು ನೀಡಿಲ್ಲ.. ಹಣ ಕೇಳಿದ್ರೆ ನಂದ ಕಿಶೋರ್ ನನಗೆ ಧಮ್ಕಿ ಹಾಕ್ತಾರೆ.. ನಾನು ಹಣ ಕೇಳಿದಾಗೆಲ್ಲ ಸುದೀಪ್ ಸರ್ ಹೆಸರೇಳಿ ಯಾಮಾರಿಸ್ತಿದ್ರು.. ಸಿನಿಮಾದಲ್ಲಿ ಅವಕಾಶ ಕೊಡ್ತಿನಿ ಅಂತ ಹೇಳಿ ನನಗೆ ಮೋಸ ಮಾಡಿದ್ದಾರೆ..
ಇತ್ತ ನನಗೆ ನನ್ನ ಹಣವು ಕೊಟ್ಟಿಲ್ಲ, ಸಿನಿಮಾದಲ್ಲಿ ಅವಕಾಶವನ್ನು ಕೊಡಲಿಲ್ಲ.. ನಾನು ಸಿಸಿಎಲ್ ನಲ್ಲಿ ಆಡವು ಕನಸು ಕಟ್ಟಿಕೊಂಡಿದ್ದೆ, ಕೆಸಿಸಿ ಟೂರ್ನಿಯಲ್ಲಿ ನಾನು ಎರಡು ಸೀಸನ್ ಆಡಿದ್ದೇನೆ. ಹಣ ಕೇಳಿದ್ರೆ ನಿನ್ನ ಕೆಸಿಸಿಯಿಂದ ಹೊರ ಹಾಕ್ತಿನಿ ಅಂತ ಬೆದರಿಕೆ ಹಾಕ್ತಿದ್ರು.. ನಾನು ಸುದೀಪ್ ಸರ್ ಜೊತೆ ಕ್ರಿಕೆಟ್ ಆಡುವ ಆಸೆಯಿಂದ ಸುಮ್ಮನಾಗ್ತಿದ್ದೆ.. ಈಗ ನನ್ನ 'ರಾಮಧೂತ' ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಸಿನಿಮಾ ರಿಲೀಸ್ ಮಾಡಲು ನನ್ನ ಬಳಿ ಹಣ ಇಲ್ಲ.. ನನ್ನ ಹಣ ವಾಪಸ್ ಕೊಡಿ ಅಂದ್ರೆ ಏನ್ ಮಾಡ್ಕೊತ್ಯೋ ಮಾಡ್ಕೋ ಅಂತಾರೆ..!
ಕಷ್ಟ ಅಂತ ಕೇಳಿದಾಗ ಒಡವೆ ಅಡವಿಟ್ಟು 22 ಲಕ್ಷ ಕೊಟ್ಟಿದ್ದೇನೆ. 9 ವರ್ಷಗಳಿಂದ ನನಗೆ ನಂದ ಕಿಶೋರ್ ಹಣವನ್ನು ನೀಡಿಲ್ಲ,ಕೇಳಿದ್ರೆ ಧಮ್ಕಿ ಹಾಕುತ್ತಾರೆ. ಹಣ ವಾಪಸ್ಸು ಕೊಡಬಾರದು ಅನ್ನೋದು ಅವರ ಉದ್ದೇಶ. ಏನೂ ಮಾಡ್ತೀಯೋ ಮಾಡ್ಕೋ ಅಂತ ಧಮ್ಕಿ ಹಾಕಿದ್ದಾರೆ..' ಎಂದು ಈ ಮೊದಲು ಒಮ್ಮೆ ವಿಡಿಯೋ ಮೂಲಕ ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದರು ಶಬರೀಶ್ ಶೆಟ್ಟಿ!
