ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ, ಶೋಭಿ ಮಾಸ್ಟರ್ ಬೃತ್ಯ ಸಂಯೋಜನೆಯಲ್ಲಿ ಆ ಹಾಡು ಮೂಡಿ ಬಂದಿದೆ ಎಂಬ ವಿವರಣೆ ದೊರಕಿದೆ. ಕಿಚ್ಚ ಸುದೀಪ್ ಅವರ ಕೈನಲ್ಲಿ 3-4 ಸಿನಿಮಾ ಪ್ರಾಜೆಕ್ಟ್ ಇದೆ. 'ಬಿಲ್ಲ ರಂಗ ಭಾಷಾ, ಕಿಚ್ಚ 47 ಹಾಗೂ ಕಿಂಗ್ ಕಿಚ್ಚ ಇವೆಲ್ಲಾ ಶೂಟಿಂಗ್ ಹಂತದಲ್ಲಿವೆ.
ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿ ಇದೀಗ ಗಮನ ಸೆಳೆದಿದ್ದಾರೆ. ಅದರಲ್ಲಿ ಅವರು ಹೊಸದೊಂದು ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. 'ಲಿರಿಕಲ್ ಸಾಂಗ್ ಒಂದು ಆದಷ್ಟು ಬೇಗ ಬಿಡುಗಡೆ ಆಗುತ್ತಿದೆ. ಅಜನೀಶ್ ಲೋಕನಾಥ್ ಅವರಿಂದ ಸೃಷ್ಟಿಯಾಗಿರುವ ಇದು ಒಂದು ಬ್ರಿಲಿಯಂಟ್ ಕಂಪೋಸಿಶನ್. ಜತೆಗೆ, ಇದನ್ನು ಶೋಭಿ ಮಾಸ್ಟರ್ ಅವರು ಅತ್ಯತ್ತಮವಾಗಿ ಕೊರಿಯಾಗ್ರಫಿ ಮಾಡಿದ್ದಾರೆ' ಎಂದು ನಟ ಕಿಚ್ಚ ಸುದೀಪ್ ಅವರು ಬರೆದುಕೊಂಡಿದ್ದಾರೆ.
ಹಾಗಿದ್ದರೆ ಕಿಚ್ಚ ಸುದೀಪ್ ಹೇಳಿದ್ದು ಯಾವ ಸಿನಿಮಾದ ಯಾವ ಹಾಡಿನ ಬಗ್ಗೆ? ಈ ಬಗ್ಗೆ ನಿಖರವಾಗಿ ಉತ್ತರ ಇನ್ನಷ್ಟೇ ದೊರಕಬೇಕಿದೆ. ಆದರೆ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ, ಶೋಭಿ ಮಾಸ್ಟರ್ ಬೃತ್ಯ ಸಂಯೋಜನೆಯಲ್ಲಿ ಆ ಹಾಡು ಮೂಡಿ ಬಂದಿದೆ ಎಂಬ ವಿವರಣೆ ದೊರಕಿದೆ. ಕಿಚ್ಚ ಸುದೀಪ್ ಅವರ ಕೈನಲ್ಲಿ 3-4 ಸಿನಿಮಾ ಪ್ರಾಜೆಕ್ಟ್ ಇದೆ. 'ಬಿಲ್ಲ ರಂಗ ಭಾಷಾ, ಕಿಚ್ಚ 47 ಹಾಗೂ ಕಿಂಗ್ ಕಿಚ್ಚ ಇವೆಲ್ಲಾ ಶೂಟಿಂಗ್ ಹಂತದಲ್ಲಿವೆ. ಜೊತೆಗೆ, ನಿರ್ದೇಶಕ ಚೇರನ್ ಅವರೊಂದಿಗೆ ಒಂದು ಸಿನಿಮಾಗೆ ಕೂಡ ಕಿಚ್ಚ ಸುದೀಪ್ ಅವರು ಸಹಿ ಮಾಡಿದ್ದಾರೆ.
ನಟ ಕಿಚ್ಚ ಸುದೀಪ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಲಿರಿಕಲ್ ಸಾಂಗ್ ಲಾಂಚ್ ಬಗ್ಗೆ ಸುದ್ದಿ ಕೊಟ್ಟಿದ್ದಾರೆ!
ಇದೀಗ ನಟ ಕಿಚ್ಚ ಸುದೀಪ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಲಿರಿಕಲ್ ಸಾಂಗ್ ಲಾಂಚ್ ಬಗ್ಗೆ ಸುದ್ದಿ ಕೊಟ್ಟಿರುವುದು ಅವರ ಅಭಿಮಾನಿಗಳಿಗೆ ಪುಳಕ ಉಂಟು ಮಾಡಿದೆ. ಅದು ಯಾವಾಗ ಬಿಡುಗಡೆ ಆಗಲಿದೆ, ಎಂಥಹ ಹಾಡು ಎನ್ನುವುದು ಬಿಡುಗಡೆ ಬಳಿಕ ತಿಳಿಯಲಿದ್ದು, ಸದ್ಯಕ್ಕೆ ಕುತೂಹಲ ಕ್ರಿಯೇಟ್ ಮಾಡಿದೆ. ಸದ್ಯಕ್ಕೆ ನಟ ಸುದೀಪ್ ಅವರು ಧ್ರುವ ಸರ್ಜಾ ನಟನೆ, ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾದಲ್ಲಿ ಸ್ಪೆಷಲ್ ರೋಲ್ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಸೆಪ್ಟೆಂಬರ್ 18 ರಂದು ನಟ, ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಅವರ ಹುಟ್ಟುಹಬ್ಬಕ್ಕೆ ವಿಶೇಷ ಕೆಲಸ!
ಜೊತೆಗೆ, ನಾಡಿದ್ದು ಅಂದರೆ ಸೆಪ್ಟೆಂಬರ್ 18 ರಂದು ನಟ, ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಅವರ ಹುಟ್ಟುಹಬ್ಬಕ್ಕೆ ವಿಶೇಷ ಕೆಲಸವೊಂದನ್ನು ಮಾಡಲು ಸಜ್ಜಾಗಿದ್ದಾರೆ. ನಟ ವಿಷ್ಣುವರ್ಧನ್ ಅವರಿಗೆ ಬೆಂಗಳೂರಿನಲ್ಲಿ ಒಂದು ಸ್ಮಾರಕ ನಿರ್ಮಾಣ ಮಾಡಲು ನಟ ಕಿಚ್ಚ ಸುದೀಪ್ ಜಾಗ ಖರೀದಿ ಮಾಡಿದ್ದು, ಆ ಬಗ್ಗೆ ಸಂಪೂರ್ಣ ಗಮನಹರಿಸಿದ್ದಾರೆ. ಬಹುಶಃ, ಇದೇ ತಿಂಗಳು ಸೆಪ್ಟೆಂಬರ್ 18ರಂದು ನಟ ಕಿಚ್ಚ ಸುದೀಪ್ ಅವರು ತಮ್ಮ ಗುರು ಸಮಾನರಾದ ನಟ ವಿಷ್ಣುವರ್ಧನ್ ಅವರಿಗೆ 'ಸ್ಮಾರಕದ ಬ್ಲೂ ಪ್ರಿಂಟ್' ಸೇರಿದಂತೆ ವಿಶೇಷ ಗೌರವಾರ್ಥ ಸ್ಪೆಷಲ್ ಘೋಷಣೆ' ಮಾಡಲಿದ್ದಾರೆ.
