ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಚಾಪ್ಟರ್ 1' ಸಿನಿಮಾ ಕ್ರೇಜ್ ಹಾಗೂ ಬಿಡುಗಡೆ ಕನ್ನಡ ಸಿನಿಮಾ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದೆ. ಮುಂದೇನು ಮ್ಯಾಜಿಕ್ ಸೃಷ್ಟಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. 

ಕರ್ನಾಟಕ ಒಂದರಲ್ಲೇ 410 ಸಿಂಗಲ್ ಸ್ಕ್ರೀನ್!

ಷಬ್ ಶೆಟ್ಟಿ (Rishab Shetty) ನಟನೆ-ನಿರ್ದೇಶನದ 'ಕಾಂತರಾ ಚಾಪ್ಟರ್ 1' ಸಿನಿಮಾದ (Kantara Chapter 1) ಡಿಮ್ಯಂಡ್ ಮುಗಿಲು ಮುಟ್ಟಿದೆ. ಹೌದು, ಕಾಂತಾರ ಸಿನಿಮಾಗೆ ಭಾರಿ ಡಿಮ್ಯಾಂಡ್ ಬಂದಿದ್ದು, ಕರ್ನಾಟಕ ಒಂದರಲ್ಲೇ 410 ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಕಾಂತಾರ ಪ್ರೀಕ್ವೆಲ್ ರಿಲೀಸ್ಆಗಲಿದೆ. ದಿನಕ್ಕೆ ಒಂದು ಥಿಯೇಟರ್​ನಲ್ಲಿ ನಾಲ್ಕು ಶೋ ಹಾಕಲಾಗಿದೆ. ಕರ್ನಾಟಕದಲ್ಲಿ ಒಟ್ಟು 80 'ಮಲ್ಟಿ ಫ್ಲೆಕ್ಸ್'ಗಳಿವೆ, ಅವುಗಳಲ್ಲಿ ಒಟ್ಟೂ ಅದರಲ್ಲಿ 400 ಸ್ಕ್ರೀನ್​ಇದೆ.

ರಿಷಬ್ ಶೆಟ್ಟಿಯ ಊರಾದ ಕರಾವಳಿ ಭಾಗದಲ್ಲೂ ಟಿಕೆಟ್ ರೇಟ್ ಜಾಸ್ತಿ!

ಮಲ್ಟಿ ಫ್ಲೆಕ್ಸ್​ನಲ್ಲೂ ಅತಿ ಹೆಚ್ಚು ಶೋಗಳನ್ನ ಕೊಡಲಾಗುತ್ತಿದೆ. ಟಿಕೆಟ್ ರೇಟ್​ನಲ್ಲೂ ದಾಖಲೆ ಬರೆದಿದೆ ಕಾಂತಾರ.. ಕಾಂತಾರದ ನಾರ್ಮಲ್ ಟಿಕೆಟ್ ರೇಟ್​ಬೆಲೆಯೇ ಬರೋಬ್ಬರಿ 350 ರೂಪಾಯಿ! ರಿಷಬ್ ಶೆಟ್ಟಿಯ ಊರಾದ ಕರಾವಳಿ ಭಾಗದಲ್ಲೂ ಟಿಕೆಟ್ ರೇಟ್ ಜಾಸ್ತಿ ಆಗಿದೆ. 300 ರಿಂದ 350 ರೂಪಾಯಿ ವರೆಗೆ ಟಿಕೆಟ್ ರೇಟ್ ಫಿಕ್ಸ್ ಆಗಿದೆ. ಮಲ್ಟಿಫ್ಲೆಕ್ಸ್​​ ನಲ್ಲಿ 340 ರೂಪಾಯಿ ಯಿಂದ 900 ರೂಪಾಯಿ ವರೆಗೂ ಟಿಕೆಟ್ ರೇಟ್ ಫಿಕ್ಸ್ ಆಗಿದ್ದು, ಸೆಪ್ಟೆಂಬರ್ 26ನೇ ತಾರೀಖಿನಿಂದ ಟಿಕೆಟ್ ಬುಕ್ಕಿಂಗ್ ಆರಂಭ ಆಗಿದೆ.

ವಿಶ್ವದಾದ್ಯಂತ 6 ಸಾವಿರ ಸ್ಕ್ರೀನ್​ಗಳಲ್ಲಿ ಶೋ ಕೊಡಲಾಗಿದೆ!

ಅಕ್ಟೋಬರ್ 9ನೇ ತಾರೀಖಿನ ವರೆಗೂ ಟಿಕೆಟ್ ಬುಕ್ಕಿಂಗ್ ಆಗ್ತಾ ಇದೆ. ವಿಶ್ವದಾದ್ಯಂತ 6 ಸಾವಿರ ಸ್ಕ್ರೀನ್​ಗಳಲ್ಲಿ ಶೋ ಕೊಡಲಾಗಿದೆ. 30 ದೇಶದಲ್ಲಿ 7 ಭಾಷೆಯಲ್ಲಿ ಈ ಕಾಂತಾರ ಪ್ರೀಕ್ವೆಲ್ ಸಿನಿಮಾ ತೆರೆಯ ಮೇಲೆ ರಾರಾಜಿಸಲಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಶೋ ಇದ್ದು, ಅದು ಬರೋಬ್ಬರಿ 1000 ಶೋ ಎನ್ನಲಾಗಿದೆ. ಪ್ರತಿ ಊರಲ್ಲಿ ಎಲ್ಲಾ ಥಿಯೇಟರ್‌ಗಳಲ್ಲೂ ಕಾಂತಾರ ಸಿನಿಮಾ ಪ್ರದರ್ಶನ ಇಡಲಾಗಿದೆ. ನಟ-ನಿರ್ದೇಶಕ,, ಕಾಂತಾರ ಸೃಷ್ಟಿಕರ್ತ ರಿಷಬ್ ಶೆಟ್ಟಿ ಊರಾದ ಕುಂದಾಪುರದಲ್ಲಿಯೇ 15 ಶೋ ಇದೆ, ಮಂಗಳೂರಿನಲ್ಲಿ 40 ಶೋ ಇದೆ. +

ಒಟ್ಟಿನಲ್ಲಿ, ಕಾಂತಾರ ಸಿನಿಮಾ ಕ್ರೇಜ್ ಹಾಗೂ ಬಿಡುಗಡೆ ಕನ್ನಡ ಸಿನಿಮಾ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದೆ. ಮುಂದೇನು ಮ್ಯಾಜಿಕ್ ಸೃಷ್ಟಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.