'ಬುದ್ದಿವಂತ' ಖ್ಯಾತ ನಟ-ನಿರ್ದೇಶಕ ಉಪೇಂದ್ರಹೆಂಡತಿ ಪ್ರಿಯಾಂಕಾ ಅವರಿಗೇ ಯಾಮಾರಿಸಿ ಖದೀಮರು ಅವರ ಮೊಬೈಲ್ ಹ್ಯಾಕ್ ಮಾಡಿದ್ದು ಗೊತ್ತೇ ಇದೆ. ಬುದ್ದಿವಂತನ ಪತ್ನಿಗೇ ಹೀಗೆ ಮಾಡಿಬಿಟ್ರಲ್ಲಾ ಅಂತ ಕೆಲವರು ಬೇಸರಿಸಿಕೊಂಡಿದ್ದರು. ಇನ್ನೂ ಕೆಲವರು ಉಪೇಂದ್ರ ಫ್ಯಾಮಿಲಿಯನ್ನು ಸಾಕಷ್ಟು ಟ್ರೋಲ್ ಮಾಡಿದ್ದರು.
ಬುದ್ದಿವಂತನ ಪತ್ನಿಗೇ ಹೀಗೆ ಮಾಡಿಬಿಟ್ರಲ್ಲಾ!
ಕನ್ನಡದ ರಿಯಲ್ ಸ್ಟಾರ್ 'ಬುದ್ದಿವಂತ' ಖ್ಯಾತ ನಟ-ನಿರ್ದೇಶಕ ಉಪೇಂದ್ರ (Real Star Upendra) ಹೆಂಡತಿ ಪ್ರಿಯಾಂಕಾ ಉಪೇಂದ್ರ ಅವರಿಗೇ (Priyanka Upendra) ಯಾಮಾರಿಸಿ ಖದೀಮರು ಅವರ ಮೊಬೈಲ್ ಹ್ಯಾಕ್ ಮಾಡಿದ್ದು ಗೊತ್ತೇ ಇದೆ. ಬುದ್ದಿವಂತನ ಪತ್ನಿಗೇ ಹೀಗೆ ಮಾಡಿಬಿಟ್ರಲ್ಲಾ, ಎಂಥ ಕೇಡುಗಾಲ ಬಂದುಬಿಡ್ತಲ್ಲ ಅಂತ ಕೆಲವರು ಬೇಸರಿಸಿಕೊಂಡಿದ್ದರು. ಆದರೆ ಇನ್ನೂ ಕೆಲವರು ನಟ ಉಪೇಂದ್ರ ಫ್ಯಾಮಿಲಿಯನ್ನು ಈ ಕಾರಣಕ್ಕೆ ಸಾಕಷ್ಟು ಟ್ರೋಲ್ ಮಾಡಿದ್ದೂ ಆಗಿದೆ. ಗಂಡ-ಹೆಂಡತಿ ಹಾಗೂ ಮಗ ಮೋಸ ಹೋಗಿರುವ ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕಳ್ಳರು ಯಾರು ಎಂದು ಗೊತ್ತಾಗಿದೆ.
ಹೌದು, ನಟಿ ಹಾಗೂ ಉಪೇಂದ್ರ ಪತ್ನಿ ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಮಾಡಿ ಆ ಮೂಲಕ ಲಕ್ಷಗಟ್ಟಲೇ ಹಣ ಪೀಕಿದ್ದ ಖದೀಮರ ಪತ್ತೆ ಆಗಿದೆ. ಬಿಹಾರ್ ಮೂಲದ ಸೈಬರ್ ಕಳ್ಳರು ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿ ಆ ಮೂಲಕ ಅವರದೇ ನಂಬರ್‌ಗೆ ಆಪ್ತರಿಂದ ಹಣ ಹಾಕಿಸಿಕೊಂಡು ಒಟ್ಟೂ 1.65 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ. ಆ ಸೈಬರ್ ಕಳ್ಳರ ಪತ್ತೆ ಆಗಿದೆ.
ಆ ಹಣವನ್ನು ನಳಂದ ಬ್ಯಾಂಕ್ ನ ಬ್ರಾಂಚ್ ಒಂದರ ಖಾತೆಯೊಂದಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ!
ಹ್ಯಾಕರ್‌ಗಳು ಮೊದಲಿಗೆ ಆ ಹಣವನ್ನು 4 ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಬಳಿಕ ಆ ಹಣವನ್ನು ನಳಂದ ಬ್ಯಾಂಕ್ ನ ಬ್ರಾಂಚ್ ಒಂದರ ಖಾತೆಯೊಂದಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಸೈಬರ್ ಪೊಲೀಸರ ತನಿಖೆಯಿಂದ ಈ ಎಲ್ಲಾ ಬ್ಯಾಂಕ್ ಖಾತೆಗಳ ಮಾಹಿತಿಗಳನ್ನು ಕಲೆಹಾಕಲಾಗಿದೆ. ಕಳ್ಳರ ಬ್ಯಾಂಕ್ ಖಾತೆಗಳ ವಿವರಗಳೊಂದಿಗೆ ಪೊಲೀಸರು ಇದೀಗ ಬಿಹಾರಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾರೆ. ಡಿಸಿಪಿ ಅಕ್ಷಯ್ ಮಚೀಂದ್ರ ಅವರು ನೀಡಿರುವ ಮಾಹಿತಿ ಅನ್ವಯ, ಬಿಹಾರಕ್ಕೆ ತೆರಳಲು ವಿಶೇಷ ತನಿಖಾ ತಂಡ ರಚಿಸಲಾಗಿದೆ. ಇನ್ನೇನು ಸದ್ಯದಲ್ಲೇ ಈ ಕಾರ್ಯ ಯಶಸ್ವಿಯಾಗಿ ನಡೆಯಲಿದೆ.
ನಟಿ ಪ್ರಿಯಾಂಕಾ ಅವರ ಮೂಲಕ ನಂಬರ್‌ನ ಸಂಖ್ಯೆಗಳನ್ನು ಡಯಲ್ ಮಾಡಿಸಿರುವ ಹ್ಯಾಕರ್‌ಗಳು!
ನಟಿ ಪ್ರಿಯಾಂಕಾ ಅವರ ಮೂಲಕ ನಂಬರ್‌ನ ಸಂಖ್ಯೆಗಳನ್ನು ಡಯಲ್ ಮಾಡಿಸಿರುವ ಹ್ಯಾಕರ್‌ಗಳು ಬಳಿಕ ಪ್ರಿಯಾಂಕಾ ಮೊಬೈಲ್ ಕಂಟ್ರೋಲ್ ತೆಗೆದುಕೊಂಡಿದ್ದಾರೆ. ಬಳಿಕ, ಪ್ರಿಯಾಂಕಾ ಅವರ ಪುತ್ರ ಹಾಗೂ ಸಂಬಂಧಿಗೆ ಪ್ರಿಯಾಂಕಾ ಅವರ ನಂಬರ್ ಬಳಿಸಿ ಹಣ ಹಾಕುವಂತೆ ಮೆಸೇಜ್ ಮಾಡಿದ್ದಾರೆ. ಅದಕ್ಕೊಂದು ಬ್ಯಾಂಕ್ ಖಾತೆಯ ವಿವರ ನೀಡಿದ್ದಾರೆ. ಅದರಂತೆ ಪುತ್ರ ಆಯುಷ್ ಹಾಗೂ ಆಪ್ತರು ಹಣ ಹಾಕಿದ್ದು, ಒಟ್ಟೂ ಮೊತ್ತ ರೂ. 1.65 ಲಕ್ಷ ಆ ಮೂಲಕ ಹ್ಯಾಕರ್ಸ್ ಪಾಲಾಗಿದೆ.
ಹ್ಯಾಕರ್‌ಗಳು ಇದೇ ರೀತಿಯ ಪ್ಯಾಟರ್ನ್ ಬಳಿಸಿ, ಆಂದ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲೂ ತಮ್ಮ ಹ್ಯಾಕಿಂಗ್ ಬಲೆ ಬೀಸಿದ್ದಾರೆ. ಈ ಸಂಗತಿ ಪೊಲೀಸ್ ತನಿಖೆಯಿಂದ ಬಯಲಾಗಿದೆ. ಸದ್ಯ ಈ ಎಲ್ಲಾ ಕೃತ್ಯಗಳ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಪೊಲೀಸರು ಬಂದಿಸಲಿದ್ದಾರೆ. ಈ ಮೂಲಕ ಪ್ರಿಯಾಂಕಾ ಮಗ ಹಾಗೂ ಆಪ್ತರು ಕಳೆದಕೊಂಡಿರುವ ಹಣ ಶೀಘ್ರದಲ್ಲೇ ವಾಪಸ್ ಬರುವ ನಿರೀಕ್ಷೆ ಇದೆ.
